ಮುಗಿಲ ತಾರೆ
ಚಲುವ ನೀರೆ
ಬಾನಬಯಲ
ಬೆಳಗು ತಾರೆ!
ಗಗನವೇರಿ
ಮುಗಿಲಗೇರಿ
ಧರೆಯ ಬೆಳಗಿ
ಮೆರೆಸು ತಾರೆ!
ಮುಗಿಲ ಬಿಂಬ
ರಜನಿರಂಗು
ಬಾಹ್ಯ ಬಾಳು
ತೋರು ತಾರೆ!
ಭುವಿಯ ಬಣ್ಣ
ಬೈಗು ಕಣ್ಣ
ಭಾವ ತೋರಿ
ಮಿನುಗು ತಾರೆ!
ಕಾಂತಿ ಕಿರಣ
ಬೆರೆಸಿ ಮರೆಸಿ
ಮನವ ತನುವ
ತಣಿಸು ತಾರೆ!
*****
ಕನ್ನಡ ನಲ್ಬರಹ ತಾಣ
ಮುಗಿಲ ತಾರೆ
ಚಲುವ ನೀರೆ
ಬಾನಬಯಲ
ಬೆಳಗು ತಾರೆ!
ಗಗನವೇರಿ
ಮುಗಿಲಗೇರಿ
ಧರೆಯ ಬೆಳಗಿ
ಮೆರೆಸು ತಾರೆ!
ಮುಗಿಲ ಬಿಂಬ
ರಜನಿರಂಗು
ಬಾಹ್ಯ ಬಾಳು
ತೋರು ತಾರೆ!
ಭುವಿಯ ಬಣ್ಣ
ಬೈಗು ಕಣ್ಣ
ಭಾವ ತೋರಿ
ಮಿನುಗು ತಾರೆ!
ಕಾಂತಿ ಕಿರಣ
ಬೆರೆಸಿ ಮರೆಸಿ
ಮನವ ತನುವ
ತಣಿಸು ತಾರೆ!
*****