ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ಇಲ್ಲವೇ ಹಗಲುಗನಸು ಕಂಡುಂಡು...

ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು...

ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು ಕಾಯಿ ಹಣ್ಣು-ಹುಣ್ಣು ಹುಳು ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ ಕೂಗು ಕತ್ತಲು, ಕೊರಗು...

ಉನ್ಮುಖ

ಬಟ್ಟೆಗಳ ಕಳಚಿನಿಂತ ಭಂಗಿ ಕೆಳಗಡೆ ಹುಡುಕಿ ಕಾಣದುದು ಮೇಲಿದೆಯೇನೋ ಎಂದು ತದೇಕವಾಗಿ ಆಗಸದಲ್ಲಿ ಕೀಲಿಸಿ ಕಣ್ಣ ಬೆಳಕಿಗೆ ಮುಖಮಾಡಿ ಕೇಳದ ಧ್ವನಿಯೆಡೆಗೆ ಕಿವಿಮಾಡಿ ತುಡಿಯದ ಸ್ಪಂದನಕ್ಕೆದೆ ತುಡಿತವ ತೆರೆದಿಟ್ಟು ಗೆಜ್ಜೆ ತಾಳಲಯದಲ್ಲಿ ಏಕತಾರಿಯ ಏಕನಾದದಲ್ಲಿ...

ನನ್ನ ಮಕ್ಕಳು

ಇವರು ನಮ್ಮ ಮಕ್ಕಳು ನೋಡಿ ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ ಲಲ್ಲೆಗರೆವ ಮಕ್ಕಳು ಬರೀ ಕೈಹಿಡಿದರೆ ಸಾಲದು ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ ಕೆಲವು ಗುಲಾಬಿ, ಸೇಬುಗಳಂತೆ ಕಂಡವರ ಕಣ್ಣು ಸೆಳೆಯುತ್ತವೆ...

ಹಣ್ಣು

ರಮಿಸಿ ಕರೆದಾಗ ಆಯ್ತೊಮ್ಮೆ ಸಮಾಗಮ ನಲುಗಿದ ಹೂವಿನ ಕೆಳಗೇ ಉಸಿರಾಡಿತು ಕಾಯಿ ಉಪ್ಪು ಹುಳಿ ಖಾರ ಸಿಹಿಕಹಿ ಒಗರುಗಳಿಂದ ದಡ್ಡುಗಟ್ಟಿದ ನಾಲಗೆ ಉಲಿಯಿತು ಕಾವು ನೋವು ಹೇಗೆ ಹೇಗೋ ಋಣಧನಗಳ ಲೆಕ್ಕ ಸರಿತೂಗುತ್ತಿತ್ತು ಸುತ್ತಿದ...

ಸಫಲ

ನಿನ್ನ ನೂರಾರು ಹಸ್ತಗಳು ಭೂಮಿ ಎದೆಯ ತೂರಿ ತಬ್ಬಿದವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ಒಲುಮೆ ನೆಲವ ಮುದ್ದಿಸಿತು-ನೀನೆದ್ದ ಪ್ರೇಮದ ಮುದ್ದೆ ಮೇಲೂ ಕೆಳಗೂ ಓಡಾಡಿ ಅಂಟು-ಭದ್ರವಾಯಿತು ನಂಟು ಎಷ್ಟೋ ನೋವಿನ...

ರಸವಂತಿ

ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ, ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ, ಮಬ್ಬುಗತ್ತಲಲ್ಲಿ...

ಈ ಓಣಿಗಳು

ಹೇಗೆ ಸುಮ್ಮನಿರಲಿ ತಂದೇ! ಉಸಿರಾಡದೆ ಉಸಿರದೆ, ಮಾತಾಡದೆ ಆಡದೆ ಸಾವಿರಾರು ವರ್ಷಗಳು ಆಳುತ್ತಾ ಬಂದ ದೇವರುಗಳು ಕೋಟ್ಯಾವಧಿ ಮಂದಿಗಳ ಬಡವಾಗಿಸಿರುವುದ ಕಂಡು ಹೇಗೆ ಸುಮ್ಮನಿರಲಿ ತಂದೆ? ಈ ಓಣಿ ಗೂಡುಗಳಲ್ಲಿ ನೆಲಕಚ್ಚಿದೊಡಲುಗಳು, ಗಂಟಲು ಕಚ್ಚಿದ...

ಉಳಿಸಿರೋ

ಆಯ್ದು ತಿನ್ನುವ ಕೋಳಿಗಳ ಕಾಲು ಕುತ್ತಿಗೆಗಳು ಯಾವಾಗ ಮುರಿದಾವು ಎಂದು ಹೇಳಲಾಸಲ್ಲ ಯಾವ ಹಣ ರಣಹದ್ದುಗಳ ಬಾಯಿಗೆ ನಮ್ಮ ಹೀಚು ಹೂಮೊಗ್ಗುಗಳು ಸಿಕ್ಕಾವು ಹೇಳಲಾಸಲ್ಲ ರಕ್ಕಸ ಬೀದಿಗಳಲ್ಲಿ ಯಮಲೋಕದ ಬಾಗಿಲುಗಳ ಮುಂದೆ ಸುಳಿದಾಟ ಆರಡಿ...