ಕಾಳೆ, ಹರೆ, ಕೊಂಬುಗಳ ಏಳಿ, ಮೊಳಗಿ, ಏಳಿ, ನಾಡುಗಳ ಕುಳಗಳನು ಕೂಡಿಕೊಳ ಹೇಳಿ. ಬನ್ನಿರಣ್ಣ, ಬನ್ನಿರಣ್ಣ, ಅದೊ ಕೂಗು, ಕೇಳಿ. ಮನ್ನೆಯರ, ಬಂಟರಿರ, ಒದಗಿ, ಏಳಿ, ಏಳಿ. ಕಣಿವೆಗಳ, ಬೆಟ್ಟಗಳ ಗಡಿಯಿಂದ ಬನ್ನಿ. ಕಣೆ, ಬಿಲ್ಲು, ಕುಡುಗೋಲು, ಕೊಡಲಿಗಳ ತ...
ಅಧ್ಯಾಯ ಹನ್ನೆರಡು ಮಧ್ಯಾಹ್ನ ಸುಮಾರು ಮೂರನೆಯ ಝಾವದ ಕೊನೆಯಿರಬಹುದು. ದರ್ಬಾರು ಭಕ್ಷಿಯವರು ಆಚಾರ್ಯರನ್ನು ಕಾಣಲು ಬಂದಿದ್ದಾರೆ. ಆಚಾರ್ಯರಿಗೆ ಆದಿನ ಉಸವಾಸ. ಸಾಮಾನ್ಯವಾಗಿ ಆವರ ಶಿಷ್ಯರಲ್ಲದೆ ಇನ್ನು ಯಾರೂ ಆದಿನ ಅವರನ್ನು ನೋಡುವಂತಿಲ್ಲ. ಆದರಿಂದ...
ನಿಲ್ಲು ನಿಲ್ಲು ನಿಲ್ಲು ಓ ಮಾನವ ಎಲ್ಲಿಗೆ ನಿನ್ನೋಟ ಹೇಳಲಾಗದೆ! ಕ್ಷಣ ಹೊತ್ತು ಕಂಡ ಈ ತನುವಿಗೆ ಸದಾ ಅಮರವೆಂಬ ಭ್ರಮೆ ಎನ್ನುವುದೆ! ದುಕ್ಕ ಕಷ್ಟಗಳ ಇದು ಸಾಗರ ಆಸೆ ಕನ್ಸುಗಳೆಲ್ಲ ಇಲ್ಲಿ ಪಾಚಿ ಪಾಚಿ ಕೈಗೆ ನಿಲುಕಲಾಗದ ಗಗನಗೊಂಬೆ ಮತ್ತೇಕೆ ಅಂಗಲಾ...
ಬಾಳ ಪಯಣದಲಿ ಜೊತೆ ನಡೆದ ಹುಡುಗಿ ಕಳೆದುಹೋಗಿದ್ದಾಳೆ ಮಾಡಿದ ಮೋಡಿ ಮರೆತಿಲ್ಲ, ಕಾಡಿದ ರಾತ್ರಿಯ ತೆರೆ ಸರಿದಿಲ್ಲ ಕಾಡುಮೇಡ ಹಾದಿಯಲ್ಲಿ ಕಲ್ಲು-ಮುಳ್ಳುಗಳ ನರ್ತನ ನಿನ್ನ ನಗುವೆಂಬ ಹೂ ಅರಳೆ ಕಷ್ಟಗಳೆಲ್ಲಾ ಸುಖವೆಂಬ ಹೂರಣ ಭಾನು-ಭುವಿಯ ಮಿಲನಕ್ಕೆ ರ...
ಗರ್ಜಿಸು ಹೂಂಕರಿಸು ಘೀಳಿಡು ಕೇಕೆ ಹಾಕು ಗಹಗಹಿಸು ಹೇಷಾರವ ಮಾಡು ಕಿರುಚಾಡು ಕೆನೆ ಬೇಬೇ ಎನ್ನು ಏನು ಬೇಕಾದರೂ ಮಾಡು ಆದರೂ ಕೆಲವು ಸಲ ಮನುಷ್ಯ ಧ್ವನಿಯಲ್ಲಿ ಮಾತಾಡು ಇಲ್ಲದಿದ್ದರೆ ಮರೆತುಬಿಡುತ್ತೀ ಪೂರ್ತಿ ರಸ್ಪುಟಿನ್‌ನ ವಿಷ ಅವನ ಹಲ್ಲುಗಳಲ್ಲಿತ...
ಚೇತನ ಪ್ರತ್ಯೇಕ ಚಿದ್ಭೂತಿಯೇ, ನಲವೆ. ನಿನ್ನ ಹಸಿರಾರುವುದು ನುಡಿತೇರು ಹರಿಯೆ ಸೂಕ್ಷ್ಮ ನೀ, ದಿನಬಳಕೆ ನುಣ್ಣಮಾತಿದು ತೋರ ಅರಿದಿದಕೆ ನಲುಗಿಸದೆ ನಿನ್ನ ಹಿಡಿಯೆ. ಇದನರಿತೆ ಪೂರ್ಣಕಲಶಕೂರ್ಚಾ೦ಕುರಭೇರ ಮುದ್ರಾದಿ ತಂತ್ರಗಳ ಸಂಕೇತದಿ ಕಟ್ಟುವರ್ಥದ ಪ...
ಅರ್ಥವಾಗದ ಭಾಷೆಯ ದಪ್ಪದಪ್ಪ ಧರ್ಮಗ್ರಂಥಗಳ ಸುಮ್ಮನೆ ಒಟಗುಟ್ಟುವ ಅವನು ಏನೋ ಸಾಧಿಸಿದಂತೆ ಬೀಗುತ್ತಾನೆ ಸುಳ್ಳು ತೃಪ್ತಿಯ ಅಹಂಕಾರದ ಮೂಟೆಯ ಅಂತ್ಯ ಅದರಲ್ಲೇ ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ ದೊಡ್ಡ ದೊಡ್ಡ ಮಣ್ಣಹೆಂಟೆಗಳ ದೂರ ದೂರಕೆ ಉರುಳಿಸಿ ಸು...
ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ… ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮು...
ಅದರ ಅಪ್ಪ ಬಹಳ ದಪ್ಪ ಪುಸ್ತಕವನು ಬರೆಯಿತು ಅದನ್ನು ಏರಿ ಕೆಳಗೆ ಹಾರಿ ಅದರ ಕಾಲು ಮುರಿಯಿತು! *****...
ಬುರ್‍ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ ನಿನ್ನ ಸೂತ್ರ ನನ್ನಲ್ಯಾಕವ್ವ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...






