
೧
ಇದು ಹೇಗೆ ಬಂದಿತೈ ಈ ಹೊಸ ವಿಷಾದ-
ಇದೆಯೆಂದು ತಿಳಿದಿರಲು ಗೆಳೆಯನ ಪ್ರಸಾದ?
೨
ಮಿಶ್ರಭಾವೋದ್ರೇಕತಾಪವೇಕೆ?
ಅಶ್ರುಜಲಧಾರಾಪ್ರಪಾತವೇಕೆ?
೩
ತಿಳಿದೊ ತಿಳಿಯದೆಯೊ ಏನಾಯಿತೋ ರೇಯಾ!
ಗೆಳೆಯ! ಗೆಳೆಯರ ಗೆಳೆಯ! ಬಿಡುವರೇ ಕೈಯಾ?
೪
ಜನ್ಮಾಂತರದ ಪುಣ್ಯ ತಾನಿದ್ದರಹುದು!
ಮನ್ಮನೀಷೆಯು ಒಂದು ದಿನ ಫಲಿಸಬಹುದು!
೫
ನಾಚಿಕೆಯ ತೊರೆದಂಗಲಾಚುವೆನು ಸದಯಾ!
ಯಾಚಿಸುವೆ ನೀಡಯ್ಯ ಯೋಚಿಸದೆ ಅಭಯಾ!
*****
















