ಪೋಲೀ ಕಿಟ್ಟೀ

ಪೋಲೀ ಕಿಟ್ಟೀ

Scarf(The story of a born scout)

ಪಾತ್ರಗಳು
ಒಬ್ಬ ‘ಪೋಲೀ’:
ಕಿಟ್ಟಿ

ಸ್ಕೌಟು ದಳದವರು:
ರಾಘು
ಶಾಮಿ
ಅಪ್ಪೂ
ವಾಸು
ಲಂಬು
ರಾಮು
ಮಗೂ

ಸ್ಕೌಟುಮಾಸ್ಟರ್:
ಕೃಷ್ಣಪ್ಪ

ಬೆಂಕಿ ಬಿದ್ದ ಮನೆಯವರು:
ಮನೆಯಾತ
ಮನೆಯಾಕೆ

Chief Scout, Gentleman in attendance, Police Inspector, Policeman, Other Scouts, a Doctor, a cyclist, an old ryot, a woman with a child, Mother of ಮಗೂ, a child in cradle -ಇತರರು

ದೃಶ್ಯ ೧

ಸ್ಥಳ-ಮುನಿಸಿಪಲ್ ಪಾರ್ಕಿನ ಒಂದು ಮೂಲೆ

[ಒಂದು ಬಾಯಿ ಹಾರ್ಮೋನಿಯಮ್ಮಿನಲ್ಲಿ “ಲೇರಾಮುದ್ದುಲ ಗುಮ್ಮಾ” ಊದುತ್ತಾ ಕಿಟ್ಟಿಯು ಪ್ರವೇಶಿಸುವನು. ತೆರೆಯ ಹಿಂದೆ ಒಂದು ಸ್ಕೌಟು ದಳದವರು “Sree Rama’s Strength in duty” ಎಂಬ ಹಾಡನ್ನು ಹಾಡುವುದು ಕೇಳುವುದು. ಕಿಟ್ಟಿಯು ಆ ಹಾಡನ್ನು ತನ್ನ ವಾದ್ಯದಲ್ಲಿ ಬಾರಿಸುತ್ತಾ ಕಲಿಯುವನು. ಸ್ಕೌಟುದಳದವರು ಪ್ರವೇಶಿಸುವರು.]

ರಾಘು : ಯಾರೋ ಅದು ನಮ್ಮ chorus ಬಾರ್‌ಸೋದು?

ಕಿಟ್ಟಿ : (ನಿಂತಿದ್ದ ಹಾಗೆಯೇ ) ನಾನು (ಆತ್ಮಗತಂ) ಏನಪ್ಪಾ ಇದ್‌ ತಕ್ರಾರು? (ಹಿಂದಕ್ಕೆ ತಿರುಗಿ…ಪ್ರಕಾಶ) ನಾನು (ಸ್ಕೌಟ್ ದಳವನ್ನು ಒಂದು ಕ್ಷಣನೋಡಿ…ಬಿರುಸಾಗಿ) ನಾನ್ ಕಣೋ!… (ಎರಡು ಹೆಜ್ಜೆ ಮುಂದಿಟ್ಟು) ನಿಮ್ಮಪ್ಪಾ ಕಾಣೋ!… (ರಾಘು ಸ್ವಲ್ಪ ಹೆದರಿ ಹಿಮ್ಮೆಟ್ಟುವನು. ಅವನ ದಳವೂ ಹಿಮ್ಮೆಟ್ಟುವುದು. ಕಿಟ್ಟಿಯು ಮತ್ತಷ್ಟು ಮುಂದುವರಿಯುವನು) ನಿಂ ತಾತನೋ! (ಅಂಗಿಯನ್ನು ಬಿಚ್ಚುತ್ತಾ) ನಿಮ್ ಮುತ್ತಾತನೋ!… (ತನ್ನ biceps ಕುಣಿಸುತ್ತಾ) ಮೈನೋಡಿ ಮಾತಾಡೋ ಮುರ್ ಗೈ!!

[ದಳದವರು ಒಂದು ಬಾರು ಹಿಮ್ಮೆಟ್ಟುವರು.]

ಮಗೂ: (ಪಕ್ಕದವನೊಡನೆ) ಮುರ್ ಗೈ ಅಂದ್ರೇನೋ ಅಪ್ಪೂ?

ಪಕ್ಕದವನು : ಅದು ತುರಕ್‌ನಲ್ಲಿ ಕೋಳೀಗೆ ಹೆಸ್ರೋ!

ಮಗೂ: ಹಾಗಾದ್ರೆ “ಜಂಬದ್‌ಕೋಳೀ” ಂತಿಟ್ ಹೆಸ್ರು ಹ್ಯಾಗೆ ಗೊತ್ತೋ ಇವನ್ಗೆ?

ರಾಘು: (ಮಗುವಿನ ಕಡೆ ತಿರುಗಿ) ಹೇಳ್‌ಕೊಡೋ ನೀನು…treacherous fellow!… (ಗಟ್ಟಿಯಾಗಿ ಜೊತೆಯವರರೊಂದಿಗೆ) ಒದಿಯೋಣ್ರೋ ಇವನ್ನ!
[ಕಿಟ್ಟಿಯ ಕಡೆಗೆ ಮುಂದಕ್ಕೆ ಬರುವನು.]

ಕಿಟ್ಟಿ: (ಅವನನ್ನು ಹಿಂದಕ್ಕೆ ತಳ್ಳಿ ಅಪ್ಪುವನ್ನು ನೆಲಕ್ಕೆ ಕೆಡವಿಕೊಂಡು ಕೂಗುತ್ತಾ) ಘಸೀಟ್ರೇ ಇಸೆ !!

ಅಪ್ಪೂ: (ನಿರೋಧಿಸುವ ಸ್ವರದಲ್ಲಿ) ಯಾಕೋ?

ಕಿಟ್ಟಿ: ಯೇನ್‌! ಯಾಕೋ! ಲೋ! ಹಿರಣ್ಯ ಕಶಿಪೂಗ್ ಕೂಡ ಗೈರತ್ ಇರ್ಲಿಲ್ಲ ಕಣೋ! ನರಸಿಂಹ ಹೊಟ್ಟೆ ಬಗೆದಾಗ… ಯಾಕೋಂತ್ ಸವಾಲು ಹಾಕೋಕೆ! (ನೆಲಕ್ಕೆ ಅದುಮುತ್ತಾ) ಕದಲ್ ಬೇಡವೊ ಕೇಕ್ಡಿ ! (ಅವನ ಜೇಬುಗಳನ್ನು ಹುಡುಕುವನು.)

ಅಪ್ಪೂ: ಯೇನೋ ಇದು ನಿನ್ ಹಾಳು ಜಫ್ತಿ.

ಕಿಟ್ಟಿ: (ಅಪ್ಪೂವಿನ ಜೀಬಿನಲ್ಲಿದ್ದ ಸರಕನ್ನು ಬಾಯಿಗೆ ಹಾಕಿಕೊಳ್ಳುತ್ತಾ) My God! (ಆನಂದದಿಂದ) ಕಾರ್‍ದವ್ಲಕ್ಕಿ! (ಕೆಳಗೆ ಬಿದ್ದದ್ದವನೊಡನೆ ಸ್ಪಲ್ಪ ಅಸಹ್ಯದಿಂದ) ಏನ್ ಯಣ್ಣೇನೇನೋ?

ಅಪ್ಪೂ: ತುಪ್ಪಾ ಕಣೋ… (ಬಿಡಿಸಿಕೊಳ್ಳಲು ವ್ಯರ್ಥವಾಗಿ ಯತ್ನಿಸುತ್ತಾ)… ಬಿಡೋ!

ಕಿಟ್ಟಿ: Good! for the body! ಯಾರಂಗ್ಡೀದೋ?

ಅಪ್ಪೂ: ಅಲ್ಲ ಕಣೋ… ಮನೇಲಿ ಮಾಡಿದ್ದು… ನಮ್ಮಜ್ಜಿ! ಯಾಕೋ ನಿಂಗದೆಲ್ಲ?

ಕಿಟ್ಟಿ: ಅಜ್ಜಿ ಮಾಡಿದ್ದೋ!? ಏನ್ ರಮಾರಮೆ ದೋಸೆಗಳು ಮಾಡ್ಲಿ ಬಳೇಪೇಟೆಯೋರು… after all “ಅಜ್ಜಿಗಳ ಮುಂದೆ ಅಣ್ಣಯ್ಯಪ್ಪಗಳೇ!!”…ಲೋ! ನಿಮ್ಮ motto ಏನೋ?

ಅಪ್ಪೂ: (ಬಿಡಿಸಿಕೊಳ್ಳಲು ಯತ್ನಿಸುತ್ತ)…”Be preparedoo”. ಬಿಡೋ!

ಕಿಟ್ಟಿ: (ಅಪ್ಪೂವಿನ ಮುಖವನ್ನು ಹಿಡಿದು ತಿರುಗಿಸಿಕೊಂಡು) ಓಹೋ! ಈಗ ಗುರ್ತುಸಿಕ್ತು!… ನೀನು ರಾಮ್‌ರಾಯ್ರ ಮಗನಲ್ವೇನೋ? ಅಶ್ವತ್ಥ್ ಕಟ್ಟೆಮನೆ?… ದಿನಾ ರಾತ್ರಿ…ಏಳ್ಗಂಟೆ ಹೊತ್ತಿಗೆ ನಿಮ್ಮಪ್ನಿಗೆ ರೀಡಿಂಗ್ ರೂಮಿಂದ paper ತರ್ತೀಯಲ್ವೇನೋ…ಇನ್ಮೇಲೆ ದಿನವಹಿ…ಕಟ್ಟೆ ಹತ್ರ ನಾನೂ Be preparedoo ಆಗಿರ್ತೇನೆ…(ಅವನನ್ನು ಒದರಿ) ನೀನು… ನಾಲ್ಕು… ಹಿಡಿಕಾರ್ದವಲಕ್ಕಿ… ಜೋಬೀಲ್ ಹಾಕ್ಕೊಂಡು Be preparedoo ಗೊತ್ತೇ! ಹೂಂ! (ಆತ್ಮಗತಂ) ಇನ್ನೇನು?… (ಪ್ರಕಾಶ) ಹೂಂ… ಆ chorus ಇನ್ನೊಂದು ಸಲ ಕಿರ್ಲು… ಕಲ್ತುಕೊಂಡ್‌ಬಿಡೋಣ!

[ಅಪ್ಪೂ ಕಣ್ಣೀರನ್ನು ಸುರಿಸುತ್ತಾ. ಆ ಹಾಡನ್ನು ಕಿರಲುವನು. ಕಿಟ್ಟಿಯು ಅದನ್ನು ಕೊಂಚ ಕೊಂಚವಾಗಿ ಕಲಿಯುವನು.]
ರಾಗ: ಇಂಗ್ಲೀಷ್ ನೋಟು; ತಾಳ: ಏಕ
Sree Rama’s Strength in duty
ಸರಿ ಗಗ ಗಾ ರಿ ಸಾಸಾ
Sree Krishna’s love devotion
ಸ ಗಾಗ ಗರಿ ಗಪಾಮ
Give unto us the Pattern of
ಗ ರೀರಿ ರಿ ಸ ರೀರಿ ರಿ
India’s Perfection for e’er for e’er
ರೀ ರಿರಿ ಗಮಾಗ ರಿ ಸಾ ರಿ ಸಾ
In danger and distress
ರಿ ಗಾಗ ಗಾ ರಿಸಾ
There’s none to be compared
ರಿ ಗಾ ಮ ಗಾ ರಿಸಾ
With the lads of India’s Brilliant Star
ಗ ಮ ಪಾ ಪ ಪಾಪ ಪ ಮ ಗ ಮಾ
Th’lads of India’s Brilliant Star
ಪಾ ಪ ಪಾಪ ಮ ಗ ರಿ ನಿ
With their motto “Be Prepared”
ದ ದ ಪಾಮ ಗಾ ರಿ ಸಾ
ಕಿಟ್ಟಿ: (ಅಪ್ಪುವನ್ನು ಎತ್ತೊಗೆಯುತ್ತಾ) ಇನ್ ಹೆದರ್ದೆ ನಿಂಮ್ ಗೂಡು ಸೇರ್ಕೊಳ್ರೋ ಗುಗ್ಗುಗಳ್ರಾ!… ಇನ್ ನನ್ನಂಥ ಸಾಧುಗಳ್ನ ಸತಾಯಿಸ್ ಬೇಡ್ರೋ!

[ಹಾಡನ್ನು ಬಾರಿಸುತ್ತಾ ಹೊರಡುವನು.]

ರಾಘು: ಯೇನ್ cowardsರೋ! ಒಬ್ಬನ್ಗೆ ಹೆದರ್ಕೊಂಡು!?

ಮಗೂ: ನಾವೆಲ್ರೂ ಅವನ ಮೇಲೆಗರಿ ಬೀಳ್‌ಬೇಕೂನ್ತಿದ್ವು ಆದ್ರೆ ನೀನು ಹಿಂದೆ ಹಿಂದೆ ಜರಗ್ತಾ… ನಮ್ಮನ್ನೇ ಹಿಂದಕ್ಕೆ ದಬಾಯಿಸ್ತಾ back ಮಾಡುತಿದ್ರೆ ನಾವೇನು ಮಾಡೋದೋ?

ಅಪ್ಪೂ: ಲ್ರೋ! ಸಾಕ್ರೋಲ್ರೋ ನಿಂ ಸಾವಾಸ!!

ರಾಘು: ಒಳ್ಳೇ ರೋತಿ ಕಣೋ ನೀನು!… ಯಾಕೆ ಒದ್ದಾಡ್ತೀಯೋ?

ಅಪ್ಪೂ: ಯಾಕೆ!!?… ಕೈಕಾಲ್ ಮೈಯಲ್ಲಿ ಒಂದ್‌ ಎಮ್ಕೆ ಬಾಕಿ ಇಲ್ಲದೆ ಬಗ್ಗಿಸಿಬಿಟು ಹೋಗಿದಾನೆ-ಅವ್ನು! ನಾಚ್ಕೆ ಇಲ್ದೆ… ಅವನ್ಗೆ ಹೆದರ್ಕೊಂಡು… ಒಂದಿಷ್ಟು help ಕೊಡ್ದೆ… ಕಣ್‌ಕಣ್‌ಬಿಟ್ಟು ನಿಂತುಬಿಟ್ಟು ಈಗ ನನ್ ರೋತೀಂತ ಕೂಗಿ!… ಹೋಗ್ರೋ ಲ್ರೋ… ಹೆಣ್ಣಕ್ಸ್… Every one!… ಇನ್ನು ಅವ್ನು Be prepared ಬೇರೆ ಹೇಳಿ ಬಿಟ್‌ ಹೋಗಿದಾನೆ…. ದಿನ ಅರ್ಧಾಣೆ ಹಾಕಿ ಒಂದು ಕಾರ್ದವ್ಲಕ್ಕಿ ಫಂಡುಗಿಂಡು ಪಾಕ್ಡಾಮಾಡಿದ್ರೋ… ಬದ್ಕಿದ್ರಿ… ಇಲ್ದೆ‌ಇದ್ರೆ… ದೇವ್ರೇ ಗತಿ…

ಮಗೂ: ಯಾರೋ ಅವ್ನು?

ಅಪ್ಪೂ: ಕಿಟ್ಟೀನೋ ಅವನ ಹೆಸ್ರು! ಪೋಲೀ ಕಿಟ್ಟೀಂತ ನಂಕೇರೀಲೆಲ್ಲಾ famousoo. ತುರ್ಕರ್‌ ಜತೇಲ್ಲೆಲ್ಲಾ ಕುಸ್ತಿ ಮಾಡತಾನವ್ನು… ಕಸಾಬರ್ ಜತೇಲಿ… ಖಬೂತರ್!… ಅಂದ್ರೇನೇ? ಪಾರ್ವಾಳ್ದ ಹಕ್ಕಿ ಹಾರ್ಸೋ ಪಟಿಂಗ ಕಣೋ ಅವ್ನು!

ಮಗೂ: ಏನ್ fine bicepsಓ ಅವನ್ದು!

ರಾಘು: ಆಗ ನಮ್ಮೆಲ್ರಿಗೂ ಮೊಕ್ಕಾಮಾಡ್ಬಿಟ್ಟು ಹೋದದ್ದು ಮರತೆಬಿಟ್ಟು… ಈಗ ನಾಚ್ಕೆ ಇಲ್ದೆ Praise ಮಾಡ್ತಿರು ಅವನ್ನಾ! treacherous fellow!

ಮಗೂ: Praise ಏನೋ!…ಇದ್ದದ್ದು ಹೇಳ್ದೆ! ಈಗೇನು ಮಾಡೋದೂ… ಇವ್ನು ಹಿಡ್ಕೊಂಡ್ ದಿನಾ ಹೀಗೆ ಸತಾಯಿಸ್ತಿದ್ರೆ?

ರಾಘು: ನಾಳೆ ಬರ್‍ಲಿ… ನಾವೇಲ್ರೂ ಸೇರ್ಕೊಂಡು ನರಬಲಿ ಇಟ್‌ಬಿಡೋಣ ಅವನ್ನಾ!

ಅಪ್ಪೂ: ನಾಳೆ ನರಬಲೀನೋ… ಈವತ್ತಿನ ಹಾಗೇ!?… ಈವತ್ತು ಕಾರ್ದವ್ಲಕ್ಕಿ ಕಸ್ಕೊಂಡು ಹೋದದ್ನ ನೋಡ್ತಿದ್ರಲ್ಲಾ… ಕಣ್ ಬಾಯಿ ಬಿಟ್ಕೊಂಡು!… ಹಾಗೇ ನಾಳೇನೂ!?

ರಾಘು: ಮತ್ತೇನು ಮಾಡು ಅಂತೀರ್ರೋ? S.M. ಹೆತ್ತ complain ಮಾಡೋದೆ[?]

ಅಪ್ಪೂ: ಹೂಂ! complain ಮಾಡು!…ಆರುಜನ cubsoo ಸೇರಿ ಒಬ್ಬನ ಕೈಲಿ ಒದೆ ತಿಂದುಕೊಂಡುಬಂದು S.M. ಹತ್ರ complain ಮಾಡಿದ್ದು ಬೈಲಿಗೆ ಬೀಳ್‌ಲಿ…Brigade ಕೈಲಿ ನಗ್ಸಿ ಉಗಿಸ್ಕೊಳ್ಳಿ…!

ರಾಘು: ಮತ್ತೆ ಇಂದಿನ ಹಾಗೆ ಈ ಪೋಲಿ ಹೊಂಚುಹಾಕ್ಕೊಂಡಿದ್ದು… ಮೇಲೆ ಬೀಳ್ತಿದ್ರೆ ಏನು ಮಾಡೋದೋ?

ಮಗೂ: ಇದಕ್ಕೆಲ್ಲ ಒಂದೇ ದಾರಿ ಕಣ್ರೋ. ಅವನ್ನೂ Brigadeಗೆ ಸೇರಿಸ್ಕೊಂಡ್‌ಬಿಡೋಣ… ಸೇರಿದಮೇಲೆ Brother scoutನ ಸತಾಯಿಸ್ದ ಹಾಗೆ ನೋಡಿ ಕೋಳ್ಳೋದು S.M. ಭಾರ! ಅದೂ ಅಲ್ದೆ ಹಾಗೊಬ್ಬ strong feller ಇದ್ರೆ (ಕಣ್ಣುಗಳಲ್ಲಿ ಸ್ವಲ್ಪ ಸಂತೋಷವನ್ನು ಸೂಚಿಸುತ್ತಾ)… running …wrestling. Brigade sportsನಲ್ಲಿ ಒಂದು cupoo … prizoo ಬಾಕಿ ಇಲ್ದೆ ನಂ patrol ಏ ಲಪಟಾಯಿಸ್ಬೋದು…

ಅಪ್ಪೂ: GOOD IDEA ಕಣೋ!

ರಾಘು: ಅವನು ಸೇರ್ತಾನೋ… ಇಲ್ವೋ… ಅದೂ ಅಲ್ದೆ ಈ hopeless ಪೋಲೀನ ನಂ ಜೊತೇಲಿ ಸೇರ್‍ಸಿಕೊಂಡೂ…?

ಅಪ್ಪೂ: ಲ್ರೋ! ನಿಮ್ಮ Scout Brigadeಗೆ ಸಲಾಂ! ಈಗ ಅವನ್ಸೇರಿಸಿಕೊಳ್ಳೋಕೆ ಅಸಹ್ಯ ಪಟ್ಕೊಂಡು ಕೂತಿರಿ. ನಾಳೆ ಅವನು (ಮುಷ್ಟಿಗಳನ್ನು ತೋರಿಸುತ್ತಾ) ಚೌಕ್ದಲ್ಲಿ ನಿಂತ್ಕೊಂಡು ಉಂಡೆಗಳ್ ಬಟ್ವಾಡೆ ಮಾಡೋವಾಗ ನಾನು ಅಲ್ಲಿರೋಲಪ್ಪ!

ರಾಘು: ಹಾಗಾದ್ರೆ ಏನ್ಮಾಡು ಅಂತೀರೋ?

ಅಪ್ಪೂ: ಮಗೂನ ಮೆಲ್ಲಗೆ ಕಳಿಸ್ಬಿಟ್ಟು ಅವನ್ನ ತಾರೀಫ್‌ ಗೀರೀಫ್ ಮಾಡಿ ಸೇರೋಕೆ ಒಪ್ಕೊಳ್ಳೋಹಾಗೆ ಮಾಡ್ಬೇಕು… ಮಾಡಿದ್ರೇನೆ ವಿಮೋಚ್ನೆ ನಮ್ಗೆಲ್ಲಾ!

ರಾಘು: ಮಗೂ ಚಿಕ್ಕೋನು ಕಣೋ… ಅವನ್ಕೈಲಿ ಎಲ್ಲಾದ್ರೂ ಸಿಕ್ಕೊಂಡು… ಪಾಪ!

ಅಪ್ಪೂ: ಅದೇನು ಹೆದರ್ಕೆ ಇಲ್ಲ… ಚಿಕ್ಕೋರ ಮೇಲೇನೂ ಛಲ ಇಲ್ಲ ಅವನ್ಗೆ… “ಸಾಧುಗಳ್ನ ಸತಾಯಿಸ್ಬೇಡ” ಅಂತ ಕಿರಿಚ್‌ತಿರ್ತಾನೆ ಹಗ್ಲೂ ಇರ್‍ಳೂ!

ರಾಘು: (ಮಗುವಿನೊಡನೆ) ಹೋಗಿ try ಮಾಡ್ತೀಯೇನೋ ಗುಬ್ಬಚ್ಚಿ!

ಮಗೂ: ಹೂಂ ಕಣೋ… (ಹಲ್ಲು ಕಿರಿಯುತ್ತಾ ಪಕ್ಕಕ್ಕೆ ಸರಿಯುತ್ತಾ) ಕೋಳಿ!… ಕೋಳೀನ್ನೋದಕ್ಕೆ ಏನಂದ ಅಪ್ಪೂ… ಮುರ್‍ಗೇನೈ!

ಅಪ್ಪೂ: ಮುರ್ಗೆ ಕಾಣೋ…ತುರುಕ್ನಲ್ಲಿ ಥೇಟವ್ನು!
[ಎಲ್ಲರೂ ನಗುವರು.]

ರಾಘು: Shut up I say! ಯಂಕೆಗಳ್ನ ಮುರಿದ್ಹಾಕ್‌ಬಿಟ್ಟೇನು ಬರೋಕೋಪ್ದಲ್ಲಿ…

ಅಪ್ಪೂ: ಓಹೋ ಕೋಪ ಬೇರೆ ಬರುತ್ತೋ ನಿಂಗೀಗ! ನನ್ನ ಕಾರ್ದವ್ಲಕ್ಕೀನ ಕಸ್ಕೊಳ್ತಿದ್ದಾಗ ಗೊರ್ಕೆ… ಹೊಡಿತಿತ್ತೇನೋ ನಿನ್ಕೋಪ!… ಬರ್ರೋ ಹೋಗೋಣ ಮನೇಗೆ!
[ಸ್ಕೌಟುಗಳು ಸಾಲಾಗಿ ನಿಲ್ಲುವರು]

ಮಗೂ: (ಕಾಡಿಸುತ್ತ) chorus ಷುರು ಮಾಡು ರಾಘೂ!

ರಾಘು: (ಹಲ್ಲುಕಡಿಯುತ್ತಾ) ಇನ್ನು ಅವನ್ಮಾತೆತ್ತಿದ್ರೆ…
[ಮುಷ್ಟಿಗಳನ್ನು ಬಿಗಿ ಹಿಡಿಯುವನು.]

ಮಗೂ: ಅವನ್ಮಾತು ಯಾರೋ ಎತ್ತಿದ್ದು?…ಒಳ್ಳೇ ಹುಳ್‌ಹುಳ್ಗೋ ನಿನ್ಮನಸ್ಸೂ…

ರಾಘು: ಆ ಪೋಲೀನ ಹಿಡ್ದು… ಮೆಲ್ಲಗೆ ಗಿಲೀಟ್ ಮಾಡಿ… ಸೇರೋಕೆ, influence ಮಾಡೋ?

ಮಗೂ: ಹೂನೋ!…
[ಎಲ್ಲರೂ ಹೊರಡುವರು.)
*****

ದೃಶ್ಯ ೨

[ಸ್ಥಳ ಬೀದಿ. Magoo surrounded by his patrol]
ರಾಘು: ಏನೋ? ನೀನು ಹೇಳೋದೊಂದೂ ಅರ್ಥ್ವಾಗೋದಿಲ್ಲ!… ‘ಸೇರೋದಿಲ್ಲೂಂ’ತ್ಲೂ ಅಂದಾಂತೀಯ… ನಿನ್ನ ಹಾಳ್ ಕಾರ್ದವ್ಲಕ್ಕಿ “wasteoo ಆಗ್ಲಿಲ್ಲ”… ಅಂತೀಯ. ಏನೋ ನೀನು ಹೇಳೋದರರ್ಥ?

ಮಗೂ: ಸುಧಾರ್ಸಿಕೊಳ್ತೇನೆ ಸ್ವಲ್ಪ ಇರ್‌ರೋ… ಓಡಿ ಬಂದಿಧೇನೆ…

ಅಪ್ಪೂ: (ಮಗುವನ್ನು ಕುರಿತು) ನಡೆದದ್ದೇನ್ ನಿಧಾನದಾಗಿ ಹೇಳೋ!…

ಮಗೂ: ನಡದ್ದೇನ್ರೋ!… ಎತ್ಕೋತ ಒಂದಾಣೆ ಕಾರ್ದವಲಕ್ಕಿ ಛಟ್ಟು… ಜೇಬಲ್ಲಿ ತುಂಬ ತುಂಬ್ಕೊಂಡು… ಆ ಬೀದಿ ಕೊನೇಲಿ ಕಾದಿದ್ದೆ… ಬಂಡಿ ತುಂಬಾ ಭಕ್ಷಣ ತುಂಬ್ಕೊಂಡು ಬಕಾಸುರನಿಗೆ ಕಾದ್ಹಾಗೆ! ಬಾಯಿ ಹಾರ್ಮೋನಿಯಮಲ್ಲಿ ನಮ್ಮ ಕೋರಸ್ ಕೇಳಿಸ್ತು… ನನ್ಗೆ ಯಾಕ್ರೋಪ್ಪ!… ಅವನ biceps ಜ್ಞಾಪ್ಸ್‌ಕೊಳ್ಳುತ್ಲೂ… ಕಂಬಿ ಕಿತ್ತುಬಿಡೋಣಾನ್‌ನ್‌ತು… ಆದರೆ ನೀವಿಲ್ಲಿ ನನ್ನ… ತರಾಟೆಗೆ ತಕ್ಕೋತೀರ ಅಂತ ನಡುಗ್ತಾನೆ ನಿಂತಿದ್ದೆ. ಬಂದಾ ನೋಡು ಭೂಪ್ತಿ…ಲೋ! ಒಳ್ಳೇ born scoutoo ಕಣೋ ಅವನು!… ಪಾಪ… ಜ್ವರವಂತೆ ಅವನ sisterಗೆ….. ಹೋದ ಇನ್‍ಫ್ಲುಯೆನ್‌ಜ ಗಲಾಟೇಲಿ…husbandನ ಕಳ್ಕೊಂಡಳಂತೆ….. ಈಗ ಅವಳ್ಗೆ ಜ್ವರವಂತೆ. ಮನೇಲಿ… ಔಷ್ದ ಕೊಂಡ್ಕೊಂಡು ಹೋಗ್ತಿದ್ದ… ಲ್ರೋ ಅವನ್ಮನ್ಗೆ ಖರ್ಚು ಹೇಗೆ ಕಮಾಯ್‌ಸ್ತಾನೆ ಗೊತ್ತೇ?… ಬೆಳಿಗ್ಗೆ ಆರ್ಘಂಟೆಗೆ ಹಾಜರು ರೈಲ್ವೆ ಸ್ಟೇಷನ್ನಲ್ಲಿ…Familyಜೊತೇಲಿ ಬಂದೊರ್ನ… ಗಿಲೀಟಾಗಿ ತೋಟ್ದಪ್ನೋರ್ ಛತ್ರಕ್ಕೆ ಕರಕೊಂಡು ಹೋಗೋದು ಸಾಮಾನು ಗೀಮಾನು ಸಾಗ್ಸೋದು… ಊಟಕ್ಕೆ ಗೀಟಕ್ಕೆ arrange ಮಾಡೋದು…ಈ ಬಾಬತ್ನಲ್ಲಿ ೨ಆಣೆ ೪ಆಣೆ ಹೀಗೆ ಸುಲ್ಕೊಂಡು ದಿನಕ್ಕೆ ಒಂದು ರುಪಾಯಿ ಕಮಾಯ್ಸಿ ಬಿಡ್ತಾನವ್ನು!… ಮನೇಲೆಲ್ಲಾ poor ಅಂತೆ ಪಾಪ! Father pensionoo! ಬಲು sad history ಕಣ್ರೋ (Smiling proudly) ಕುಸ್ತಿನೂ ಕಲಿಸಿ ಕೊಡ್ತಾನಂತೆ… ಅವನ್ biceps ಹಾಗೆ ನನ್ದೂನೂ ತಯಾರುಮಾಡಿ ಕೊಡ್ತೇನೇಂದ ಕಣ್ರೋ!

ರಾಘು: ನಿನ್ biceps ಬಲ್ತ್‌ಕೊಂಡ್ರೆ ನಮ್ಗೇನು ಬಂದಹಾಗೆ ಅಯ್ತೋ! ಹೋದ ಕೆಲ್ಸ ಏನಾಯ್ತೋ?

ಅಪ್ಪೂ: ನೀನವ್ನಿಗೆ ಕಾರದವಲಕ್ಕಿ ಲಂಚಕೊಟ್ಟು ತಾರೀಫ್ ಮಾಡ್ದಾಕ್ಷಣವೇ ನಮ್ಮನ್ನ ಬಿಡ್ತಾನೇನೋ? ಅವ್ನೇನು patrolಗೆ ಸೇರ್ತಾನೋ ಇಲ್ವೋ? ಅದು ಬೊಗಳ್ ಮುಂಚೆ!

ಮಗೂ: ಅವನ್ಗೇನೋಪ್ಪ… Boy Scoutಸೂಂದ್ರೆ ಬೆಂಕಿ … ಅವನು ಹೇಳಿದ್ದು ಇಷ್ಟು… ’ನಿನ್‌ ಸತಾಯ್ಸೋದಿಲ್ಲ… Scout ಆಗೋ ಮಾತು ಎತ್ಬೇಡ ನನ್ನ ಹತ್ರ… ನಿಂ ಜಂಬದಕೋಳಿ ನನ್ನ ಕೈಗೆ ಸಿಕ್ಲೀ’ (ರಾಘುವಿನೊಡನೆ) ಅವನ್ಹೇಳಿದ್ದೋ!… ಚಮ್ಡಾ ಯೆಗರ್‍ಸಿ ಚರಂಡೀಲಿ-ಅದೆಂಥಾದ್ದು?- ಸುಲಾಯ್ಸೋದಂತೆ!…. ಅದೇನ್‌ ಅಪ್ಪೂ?

ಅಪ್ಪೂ: ತುರಕ್ನಲ್ಲಿ ಮಲಗ್ಸೋದೋ!

ಮಗೂ: ಹೂಂ, ಅದ್‌ಮಾಡ್ತಾನಂತೆ ನಿನ್ಗೆ!

ರಾಘು: (in nervous tones) ಅಲ್ಕಣೋ, ಒಂದಾಣೆ ಕಾರ್ದವಲಕ್ಕಿ ಮಾಡಿಸಿಕೊಟ್ಟು ನಿನ್ನ ಕೈಲಿಟ್ಟು.. ಈಗ ನನ್ನ ಚಮ್ಡಾ ! ಹೂಂ ಒಳ್ಳೇ treacherous fellow ಕಣೋ ನೀನು.. ಬರೋ ಕೋಪದಲ್ಲಿ! (ಹೊಡೆಯುವನಂತೆ ಮಗುವಿನ ಬಳಿ ಬರುವನು.)

ಅಪ್ಪೂ: (ರಾಘುವನ್ನು ಹಿಂದಕ್ಕೆಳೆಯುತ್ತಾ) ಹುಷಾರೋ ಲೋ ಮಚ್ಚು!.. ಇನ್ನು ಅವನ್ಹೋಗಿ ಆ ಪೋಲಿ ಹತ್ರ ನೀನು ಹೊಡೆದೇಂತ ಚಾಡಿ ಹೇಳಿ… ಛೂ ಬಿಟ್ಟುಬಿಡ್ಲಿ ನಿನ್ ಮೇಲೆ … ಅವನು ಮೊದಲೇ ನಿನ್ನ ಚಮ್ಡಾನೆಗರ್ಸಿ ಚರಂಡೀಲಿ ಸುಲಾಯ್ಸೋ ಮಾತೆತ್ತಿದಾನೆ…!?

ರಾಘು: (ಹಿಂದಕ್ಕೆ ಸರಿಯುತ್ತಾ) ಹೌದೋ ಮರ್ತಿದ್ದೆ… (ದಳದವರನ್ನು ಕುರಿತು ರುಗ್ನ ಸ್ವರದಿಂದ) ಈಗ ನೋಡ್ರೋ ತಕ್ರಾರು! ಅವನಿಗೆ ಹೆದರ್ತಿದ್ದದ್‌ರ ಜೊತೇಲಿ… ಈ ಗುಬ್ಬಚ್ಚೀಗೆ ಘಾಬ್ರಿ ಬೀಳಬೇಕಾಗಿದೆಯಲ್ಲೋ!?

ಮಗು: (ಹಲ್ಲು ಕಿರಿದು) ಅಪ್ಪೂ! ಲೇ! ಈ ಕಾರ್ದವ್ಲಕ್ಕಿ ನಿಮ್ಮಜ್ಜಿ ಕೈಲಿ special ಆಗಿ ಮಾಡ್ಸಿದ್ದೊಂದೇ… ಅದಕ್ಕೆ ನಿಮ್ಮಜ್ಜೀಗೊಂದು message ಕೊಟ್ಟಿದಾನೋ ಅವ್ನು!

ಅಪ್ಪೂ: (ಕಾತರಿದಿಂದ) ಏನೋ ಅದು?

ಮಗೂ: “ಇನ್ನೆಷ್ಟು ದಿನ old fashioned ಕಾರ್ದವ್ಲಕ್ಕಿನೆ ಮಾಡುತಿರೋದು ನೀವು? ಸಾಯೋಕೆ ಮುಂಚೆ ಒಳ್ಳೆ up-to-date ಆಗಿ ಹಲ್ವ ಧಂರೋಟು. ದೂದ್ಫೇಡ ಮಾಡಿ ನಿಮ್ಮ ಮೊಮ್ಮಗನಿಗೆ ‘ಖಲಾಯ್ಸಿ’ ಅಂದ್ರೆ-ತಿನ್ಸೋದು-ಅಲ್ವೇನೋ?… ಹೂಂ ಖಲಾಯ್ಸಿ ಸಂತೋಷ ಪಡ್ಸೋದು ಯಾವಾಗಾ” ಅಂತಂದಾಪ್ಪ… ತಕೊಂಡು ಹೋಗಿ ತಲ್ಪಿಸಿ ಬಿಡೂಪ್ಪ messageನ!

ಅಪ್ಪೂ: (ತೀವ್ರವಾಗಿ ಆಲೋಚಿಸಿ, ರಾಘುವಿನೊಡನೆ) ರಾಘೂ ಧಂರೋಟೂನ್ನೂತ್ಲೇ ಒಂದು idea strike ಅಗುತ್ತೆ ಕಣೋ! ಅ ಪಟಿಂಗನ್ ಸೇರಿಸ್ಕೊಳ್ಳೋಕೆ ಇನ್ನೂ ಒಂದು chance ಇದೆಯೋ… ಆದ್ರೆ (ಸಂಶಯ ಸೂಚಿಸುತ್ತಾ) ನೀನೇನ್ ಹೇಳ್ತೀಯೋ?

ರಾಘು: ನಾನು ಹೇಳೋದೇನೋ… ಬೊಗ್ಳೋ… ತೋಚಿದ್ನ.

ಅಪ್ಪು: ಹಾಗಾರೆ ಸೊಲ್ಪಿರೋ… (ಮಗುವಿನೊಡನೆ) ಲೋ ! ತಿರ್ಗು ಯಾವಾಗ್ಲೋ ಅವನ್ನ ನೋಡೋದು?

ಮಗೂ: ಓಹೋ… ಹೌದಪ್ಪ… ನಿಮ್ಮನ್ನ… warn ಮಾಡೋಕೆ ಮರ್ತುಬಿಟ್ಟಿದ್ದೆ ಇನ್ನೊಂದು five minituesನಲ್ಲಿ ಈ ದಾರೀಲೇ ಬರ್ತ್ತೇನೇ… ನಿನ್ನ meet ಮಾಡ್ತೇನೇಂ”ದ! (ದಳದವರೆಲ್ಲರೂ ಓಡಲು ಸಿದ್ಧರಾಗುವರು, ಅಪ್ಪು, ರಾಘು, ಅವರನ್ನು ಹಿಡಿದು ನಿಲ್ಲಿಸುವರು…)

ರಾಘು: ಸ್ವಲ್ಪಿರ್ರೋ ಹೆಣ್ಣಕ್ಸ್! – (ಅಪ್ಪೂವಿನೊಡನೆ) ಅದೇನೋ ನಿನ್ನ idea. ಬೊಗಳೋದಾದ್ರೆ ಬೇಗ ಬೊಗ್ಳೋ…

ಅಪ್ಪೂ: ಈಗ್ನೋಡು! ಈ ದಂರೋಟು, ದೂದ್ಫೇಡ, ಹಲ್ವಾಂದ್ರೆ ಅವನಿಗ್ ಪ್ರಾಣ… ಅವನು ಬರುತ್ಲೂನೂವೆ ಒಬ್ರೂ ಗಮನಿಸ್ಬೇಡಿ… ನಿನ್ ಕೇಳ್ತೇನೆ “ಆ ಹೋದ್ rallyಗೆ ಡೆಲ್ಲಿಯಿಂದ ದೂದ್ಫೇಡ ತರಿಸ್ಕೊಟ್ರಲ್ರಾ ಸ್ಕೌಟುಗಳಿಗೆಲ್ಲಾ. ಇನ್ನಾ ಬರೋ rallyಗೆ ಏನ್ ತರ್ಸಿ ಕೊಡ್ತಾರೋ” ಅಂತ ಕೇಳೋತ್ಲೂನೂವೆ, ನೀನು ಬೊಂಬಾಯಿಯಿಂದ ಬಾದಾಮಿ ಹಲ್ವಾ ತರ್ಸ್ತಾರಂತೇ”ನ್ನು. ಆಗ ಮಗೂ. ನೀನೂ “ಲ್ರೋ ಹೀಗೆ ಮೂರ್‌ ಮೂರ್‌ ಟಿನ್‌ ಮಿಠಾಯಿ ಒಬ್ಬೊಬ್ಬ ಸ್ಕೌಟ್ಗೆ ಕೊಡ್ತಾ ಬರ್ತಾರಲ್ಲ rallyಲಿ Chief Scoutoo-ಬಲು ಖರ್ಚಾಗಬೇಕಲ್ವೇ”- ಅನ್ನು… ಅದಕ್ಕೆ ನಾನು “ಯುವರಾಜರ್ಗೇನಪ್ಪ ಮೂರ್ ಟಿನ್ನಲ್ದಿದ್ರೆ ಮೂವತ್ತು ಟಿನ್ ಕೊಡ್ತಾರೆ ಖುಷಿ ಬಂದ್ರೆ” ಅಂತಾನೆ… ಇಷ್ಟ್ಹೊತ್ಗವನ್ಬಾಯಲ್ಲಿ ನೀರು ಕರ್ಗಿ. ಬಂದು ಬಿಡ್ತಾನೆ ನಂದಾರೀಗೆ. ನನಗೆ ತಿಳಿದ ಮಟ್ಟಿಗೂ ಇದೊಂದೇ ದಾರಿ ಅಷ್ಟೆ ಅಪ್ಪ! ಏನು ಹೇಳ್ತೀಯಾ?

ರಾಘು: ಹೇಳೋದೇನು try ಮಾಡೋಣ್ವೋ!

ಅಪ್ಪೂ: ಹಾಗಾದ್ರೆ ಚೆನ್ನಾಗಿ rehearsal ಮಾಡಿ ಬಿಡೋಣ ಒಂದೆರಡು ಸರ್ತಿ…

[ಎಲ್ಲರೂ ಈ ಮಾತುಗಳನ್ನು ಸರಿಯಾಗಿ ಮೂರು ಸಲ ಅಭ್ಯಾಸ ಮಾಡಿಕೊಂಡರು. ಬಾಯಿ ಹಾರ್ನೋನಿಯಂ ಶಬ್ಬ ಕೇಳುತ್ತಲೇ ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲುವರು; ಪೋಲೀ ಕಿಟ್ಟಿಯು chorus ಬಾರಿಸುತ್ತಾ ಪ್ರವೇಶಿಸುವನು: ದಳದವರು ಅವನಕಡೆ ನೋಡದೆ ನಿಂತಿರುವರು]

ಕಿಟ್ಟಿ: (ಆತ್ಮಗತಂ) ಓಹೋ! ಇದೇನಿಲ್ಲಿ ಜಮಾಯ್ಸಿದೆ… ಪಟಾಲಂ… ಯುದ್ಧಕ್ಕೆ ಗಿದ್ದಕ್ಕೆ ಹೊರ್ಡ್‌ತಾರೇನೋ ಕಾಣೆ…

ಅಪ್ಪೂ: ರಾಘೂ, ಹೋದ rallyಗೆ ನಮ್ಗೆಲ್ಲಾ ದೂದ್ಫೇಡ ದೆಹ್ಲಿಯಿಂದ ತರ್ಸ್‌ಕೊಟ್ರಲ್ಲ… ಅದ್ನ ಜ್ಞಾಪಿಸ್ಕೊಂಡ್ರೆ… ನನ್ನ ಬಾಯ್ಲಿ ಈಗ್ಲೂ ನೀರು ಬರುತ್ತೆ…

ಕಿಟ್ಟಿ: (ಆತ್ಮಗತಂ) ಅದು ಕೇಳುತ್ಲು ನನ್ನ ಬಾಯಲ್ಲೂ ನೀರು ಬರುತ್ತೆ… ದೂದ್ಫೇಡ!… ತಕೋ rally ಲಿ ಕೊಟ್ರೋ ಇವ್ರಿಗೆ? [ಸದ್ದಿಲ್ಲದೆ ಪೆಟ್ರೋಲಿನ ಹಿಂದೆ ಬಂದು ನಿಂತು ಅವರ ಮಾತನ್ನು ಗಮನಿಸುವನು)…

ಅಪ್ಪೂ: ಇನ್ನು ಬರೋ rallyಗೆ… ನಮ್ಗೆಲ್ಲಾ… ಏನ್ ಕೊಟ್ಟಾರೂ…ರಾಘೂ?

ರಾಘು: ಬೊಂಬಾಯಿಂದ ಬಾದಾಮ್‌ ಹಲ್ವ ಬರತ್ತಂತೆ [ಅಪ್ಪುವು ಮಗುವನ್ನು ಚಿವುಟಿ “ಹೇಳೋ” ಎಂದು ಅವನ ಕಿವಿಯಲ್ಲೂದುವನು.]

ಮಗು: ಲ್ರೋ!… ಹೀಗೊಂದೊಂದು rallyಗೂನೂ ಒಬ್ಬೊಬ್ಬ ಸ್ಕೌಟ್ಗೂನೂ… ಮೂರ್‌ಮೂರ್ ಸೀಮೆಯಣ್ಣೆ ಟಿನ್ ತುಂಬ ಮಿಠಾಯಿ ಕೊಟ್‌ಬಿಡ್ತಾರಲ್ಲಾ… ಬಲು ಖರ್ಚಲ್ವೇನೋ Highnessಗೇ…?

ಅಪ್ಪೂ: ಅವರಿಗೇನಪ್ಪಾ?… ಖುಷಿ ಬಂದ್ರೆ ಮೂವತ್ ಟಿನ್ ಕೊಡ್ತಾರಪ್ಪ!

ಕಿಟ್ಟಿ: (ಆತ್ಮಗತಂ) ಓಹೋಹೋ! ತಕೋ ಮೂರ್ ಮೂರ್ ಟಿನ್ನು! ತಕೋ! ದೂದ್ಫೇಡ, ಬಾದಾಮ್ ಹಲ್ವ!!… ಹಾಗಾರೇನೋ sense ಇದೆ Boy Scout movementನಲ್ಲಿ! ಈಗ ಅರ್ಥ್ವಾಯ್ತು… ಯಾಕಪ್ಪಾಂತ್ ಇದ್ದೆ… ಹಿಂಡ್ ಹಿಂಡಾಗಿ ಸೇರ್ಕೊಂಡಿಧಾರೆ ಈ ಕುರಿಮರಿಗ್ಳೂಂತ… ಓಹೋ! ಮೂರ್ ಮೂರ್ ಟಿನ್ನು ಮಿಠಾಯಿ My God! (ಪ್ರಕಾಶ) ಲ್ರೋ! ಈ ರ್‍ಯಾಲೀಂತಿರಲ್ಲ, ಈ ಮಿಠಾಯಿ ಬಟ್ವಾಡೆ… ಇನ್ನು ಎಷ್ಟ್‌ ವರ್ಷ ಸರ್ವಿಸ್ ಹಾಕ್ಬೇಕೋ… ನಿಮ್ಮ Scout ಬಾಬತ್‌ನಲ್ಲಿ?

ಅಪ್ಪು: (ರಾಘುವಿಗೆ aside) ನೀನು ಬಾಯಿ ಬಿಡ್ಬೇಡ… ನಾನು manage ಮಾಡ್ತೇನೆ… (ಕಿಟ್ಟಿಗೆ) (aloud) service ಏನೋ… Brigade ಸೇರುತ್ಲೂನೂವೆ… ಎಲ್ರೂ ಒಂದೇ!

ಕಿಟ್ಟಿ: (ಮಗುವಿಗೆ) ಮಗೂ! ಲೋ! ಈ ಸೀಮೆಯೆಣ್ಣೆ ಟಿನ್ನೂಂದ್ಯಲ್ಲ… ಈ ಮೂರ್‌ಮೂರ್ ಟಿನ್ನುಗ್ಳೂ ನಾವೇ ಪಾಕ್ಡಾ ಮಾಡ್ಕೊಂಡು ಹೋಗ್‌ಬೇಕೋ !rally rally ಗೂನೂ?… ನಮ್ಮನೇಲ್ ಕೈಯೆಣ್ಣೆ ಕಣೋ ದೀಪಕ್ಕೆ…

ಅಪ್ಪು: (ಮಗುವಿಗೆ) ಅವರೇ ಕೊಡ್ತಾರೇನ್ನೋ ಬೇಗ…

ಮಗು: (ಕಿಟ್ಟಿಗೆ)-ಅವರೇ ಕೊಡ್ತಾರೋ!

ಕಿಟ್ಟಿ: (ರಾಘು ಬಳಿಗೆ ಬಂದು)…ಲೇ ಜಂಬದ್ಕೋ… ಅಲ್ಲ Commanderರೋ… ಏನ್ನೀನು? ಕರ್ನಲ್ಲೋ? ಜರ್ಲ್ಲೋ? majorರೋ?… ಇನ್ಮೇಲೆ ನಿಮ್ಮನ್ನ ಸತಾಯ್ಸೋದಿಲ್ಲ ಕಣೋ… ನನ್ನೂವೆ (ಆತ್ಮಗತಂ) ಈಗ್ ಸ್ವಲ್ಪ ಢರಾಯ್ಸೋದು ಮೇಲು…(ಪ್ರಕಾಶಂ) ನಿಮ್ಮಗುಂಪ್ಗೆ ದಾಖಲ್ ಮಾಡಿಕೊಳ್ರೋ… (ರಾಘುವು ಹಿಂಜರಿಯುವುದನ್ನು ಕಂಡು) ಇಲ್ದಿದ್ರಪ್ಪ… ನಾನೊಂದೇ ಮಾತ್ನಲ್ಲಿ ಹೇಳ್ಬಿಡ್ತೇನೆ ನೋಡಿ… ನನ್ನೂ ಸೇರಿಸ್ಕೊಳ್ದೇ ಹೋದ್ರೋ… ನಿಮ್ಮೈಗೊಳ್ಳೇದಲ್ಲ… ಮೈಗೆ… ಬುರುಡೇಗೆ… ಚಮ್ಡಕ್ಕೆ ಒಳ್ಳೇದಲ್ಲಾ… ನಿಂ ತಬಿಯತ್ತಿಗೆ ತಕ್ಲೀಫು… ತಿಳಕೊಳ್ಳೀಪ್ಪ…

ಅಪ್ಪೂ: ಅದಕ್ಕೇನು ಕಿಟ್ಟೀ…ಸೇರು…ಸೇರು (ಕಿಟ್ಟಿಯ ಕೈ ಹಿಡಿದು) ರಾಘೂ! ನಂಕಿಟ್ಟೀ… ಸ್ವಲ್ಪ roughoo ಅಷ್ಟೇ…ಆದ್ರೆ ಒಳ್ಳೆ fine fellow ಕಣೋ… ನಿನ್ಗಿನ್ನೂ ಗೊತ್ತಿಲ್ಲ… kind hearted ಅವನು… ಅವನು ಹೇಳೋ ಹಾಗೆ…ಅವನ್ ಸೇರಿಸ್ಕೊಂಡ್ರೆ… ನಮ್ಗೆಲ್ಲ… ಒಳ್ಳೇದು…

ರಾಘು: (ನಗುವನ್ನು ತಡೆದು) ಹಾಗಾರೆ ಬರ್ರೋ… S.M. ಹತ್ರ ಹೋಗೋಣ (ಕಿಟ್ಟಿಯ ಕೈ ಹಿಡಿದು) Come on Kitty. dear boy!

ಕಿಟ್ಟಿ: ತಕೋ! Dear boy ಆವಾಗ್ಲೇ! ಲ್ರೋ! ಇನ್ನು ಯಾರೋಲ್ರೋ…! S.M. ಅನ್ನೋದು …Scout Major?… ನಿಂ commanderರೋ? ಸೊಂಟದಲ್ಲಿ ಏನಾದ್ರೂ Sword ಗೀರ್ಡು ಸಿಕ್ಸಿಕೊಂಡಿರ್ತಾರೇನೋ?

ಅಪ್ಪೂ: ಇಲ್ಲ. ಕಣೋ… Sword ಸಾಣೇಗೆ ಕಳ್ಸಿದಾರೆ…ಬಾರೋ. ಯೋಚ್ನೆ ಏನು (ಇತರ ಸ್ಕೌಟುಗಳಿಗೆ) ಬರ್ರೋ …ಎಳಕೊಂಡು ಹೋಗ್ಬಿಡೋಣ… ಇದೇ chanceoo…
[ಸ್ಕೌಟುಗಳಿವನನ್ನು ಎಳೆಯುವರು.]

ಕಿಟ್ಟಿ: (ನಗುತ್ತಾ) ಲ್ರೋ? ಇದೇನೋ ಮೆಲ್ಲಗೆ ಗಿಲೀಟ್ ಮಾಡಿ ಯಾರತ್ರ ಎಳ್ಕೊಂಡು ಹೋಗ್ತೀರೋ ಏನೋ… ಏನ್! ಬಲೀ ಗಿಲೀ ಕೊಡ್ತೀರೇನ್ರೋ! ದೇವ್ರೀಗೇ ಗೊತ್ತು.

ಮಗೂ: (ಅನಂದದಿಂದ) ಕಿಟ್ಟೀ…ನಂ Brigadeಗೆ Band master ಅಗಿಹೋಗೋ ನೀನು ಬಾರ್‍ಸು chorus… ನಾವೆಲ್ಲರೂ ಬಾಯಲ್ಲಿ ಕಿರ್ಚ್‌ತಾ ಬರ್ತೇವೆ ಜೊತೇಲಿ… ರಾಘೂ! chorus ಷುರುಮಾಡು.

[“Sri Rama’s Strength in duty” ಎಂಬ ಹಾಡನ್ನು ಹಾಡುತ್ತಾ ಕಿಟ್ಟಿಯನ್ನು ಎಲ್ಲರೂ ಎಳೆದೊಯ್ಯುವರು. ಕಿಟ್ಟಿಯು ಆ ಹಾಡನ್ನು ಬಾಯಿ-ಹಾರ್ಮೋನಿಯಮ್ಮಲ್ಲಿ ಹಾಡುತ್ತಾ ಅವರೊಂದಿಗೆ ಹೊರಡುವನು.]
*****

ದೃಶ್ಯ ೩

[ದೊಡ್ಡದಾದ ಸೌದೆಯ ಹೊರೆಯನ್ನು ತಲೆಯಮೇಲೆ ಹೊತ್ತುಕೊಂಡು ಒಬ್ಬ ಮುದುಕನು ಪ್ರವೇಶಿಸಿ. ಮುಗ್ಗರಿಸುತ್ತಾ ಬೀದಿಯ ಮಧ್ಯದವರೆಗೂ ಬಂದು, ಬಲ ಸಾಲದೆ ಹೊರೆಯನ್ನು ಕೆಳಗೆ ಹಾಕಿ ಅದರಮೇಲೆಯೆ ಊರಿಕೊಂಡು ಸುಧಾರಿಸಿಕೊಳ್ಳುತ್ತಿರುವನು. ದೂರದಲ್ಲಿ ಪೋಲೀಸ್ ಸ್ಟೇಷನ್ನಿನಲ್ಲಿ ಎಂಟುಗಂಟೆ ಹೊಡೆಯುವುದು ಕೇಳಿಬರುವುದು. ಕಡೆಯ ಗಂಟೆಯಾಗುವುದಕ್ಕೆ ಸರಿಯಾಗಿ ಅವಸರದಿಂದ ಕಿಟ್ಟಿ ಪ್ರವೇಶಿಸುವನು.]

ಕಿಟ್ಟಿ: ತಕೋ! ಶನಿ! ಇಲ್ಲೇ ಎಂಟಾಗ್‌ಹೋಯ್ತು… ಇನ್ನು ಡ್ರಿಲ್ಲಿಗೆ ಹೋಗೋಷ್ಟರಲ್ಲಿ ಬಲು lateoo (ಸೌದೆಯ ಹೊರೆ ಮೇಲೂರಿಕೊಂಡಿರುವ ಮುದುಕನ ಮೇಲೆ ಬೀಳುಸಂತೆ ನಟಸಿ) ಏನಯ್ಯ ಇದು? -ಇದೇನು ಜನಗ್ಳು ಹೋಗೋ ರಸ್ತೆನೋ… ನಿಮ್ಮನೇ ಜಗ್ಲಿನೋ?… ಸರ್ಕಾರದ ರಸ್ತೇನ ಸೌದೆಮಂಡಿ ಮಾಡ್ಕೊಂಡು ಕೂತುಬಿಟ್ರೆ ನೀನು… ಸಂಚಾರಮಾಡೋದು ಹ್ಯಾಗಯ್ಯ ಜನಗ್ಳು?…

ಮುದುಕ: ಇಲ್ಲಾ…. ದೂರ್‍ದಿಂದ ಒತ್ಕೊಂಬಂದಿದ್ದೆ ಸೌದೇನ… ದಣಿದ್ಬುಟ್ಟೇ ಬುದ್ದೀ… ಕಟ್ಟಿಳ್ಸಿ ಸುಧಾರ್ಸಿಕೊಳ್ತಿದ್ದೆ.

ಕಿಟ್ಟಿ: (ಮುದುಕನನ್ನು ಅಪಾದಮಸ್ತಕವೂ ದುರದುರ ನೋಡುತ್ತಾ) ಅಲ್ಕಣಯ್ಯ?… ಒಳ್ಳೆ ಜಾಡ್ರಹುಳದ ಹಾಗೆ ಮೈ ಇಟ್ಕೊಂಡು… ಇಷ್ಟು ದೊಡ್ಕಟ್ ಸೌದೇನ ಎಷ್ಟುದೂರ ಹೊರ್ತೀಯ?…

ಮುದುಕ: (ಬೀದಿಯ ಕೊನೆಯನ್ನು ತೊರಿಸುತ್ತಾ) ಆ ಕೊನೇಲಿರೋ ಸೌದೆ ಮಂಡೀಲಿ ಇದನ್ನಾಕ್ಬಿಟ್ಟು… (ಬೀದಿಯ ಮತ್ತೊಂದು ಕೊನೆಯನ್ನು ತೋರಿಸಿ)… ಆ ಅಸ್ಸತ್ಕಟ್ಟೇ ಮೇಲೆ ಇನ್ನೊಂದು ಕಟ್ ಇಳ್ಸಿವ್ನಿ… ಅದ್ನೂವೇ ತಂದ್ ಮಂಡೀಗೆ ಸೇರ್ಸಿದ್ರೇನೆ… ನಮ್ಮನೇಲಿ ಇಟ್ಟು ಎಲ್ರಿಗೂನು ಇವತ್ತು!

ಕಿಟ್ಟಿ: ಈವತ್ತಿನ ಹಿಟ್ಟಿರ್ಲಿ… ನೆನ್ನೇ ಹಿಟ್ಟು? ಮತ್ತ್ ನಾಳೇ ಹಿಟ್ಟು?…

ಮುದುಕ: ಇಂಗೇನೆ ನನ್ನೊಡೆಯಾ! ನಮ್ಮಳ್ಳೀಲ್ ಕಟ್ಗೆ ಒಡ್‌ದಿಟ್ಕೊಂಡು… ಜಿಣಾ… ಎರಡ್‌ಕಟ್ಟು… ಮಂಡಿ ಸೇರ್ಸಿದ್ರೇನೆ… ನನ್ನೆಂಡರ್ಗೂ… ಐಕಳ್ಗೂ… ಒಟ್ಟೆ ತುಂಬೋದು… ನನ್ನೊಡ್ಯಾ…

ಕಿಟ್ಟಿ: (ಕಟ್ಟನ್ನೆತ್ತಿ ನೋಡುತ್ತಾ) ಅಲ್ಕಣಯ್ಯಾ… ಇಂಥಾ ಕಟ್ನಲ್ಲ್ ಎರ್ಡೆರ್ಡು ನಿಂ ಹಳ್ಳಿಯಿಂದ ದಿನಾ ಹೊತ್ಕೊಂಡ್ ಬರ್ತಿದ್ರೆ ಇನ್ನೆಷ್ಟು ದಿನಕ್ಕಯ್ಯಾ ತಡೆಯೋದು… ನಿನ್ನೀ ಕೈಗಳೂ ಕಾಲುಗ್ಳೂ… ಒಳ್ಳೆ ಹಂಚೀಕಡ್ಡಿ ಜೋಡ್ಸಿದ್ ಹಾಗಿದೆಯಲ್ಲಾ ನಿನ್ ಜಿಸ್ಮು! ಇಷ್ಟು ಮುದ್ಕಾ ನೀನು… ಏನು ಸುಮಾರು ಎರ್ಡ್ ಸಾವಿರ ವಯಸ್ಸಿರಬಹುದು ನೋಡಿದ್ರೆ!… ಕೆಲ್ಸಮಾಡೋಕೆ ಗಂಡು ಮಕ್ಳಿಲ್ವೇ ನಿನ್ಗೇ?

ಮುದುಕ: (ಒಣಗಿದ ಸ್ವರದಿಂದ) ಇದ್ರೂ ಬುದ್ದೀ… ಮೂರುಜನ ಪಾಯ್ದೋರು… ಒಬ್ ದೊಡ್ಡಳಿಯನೂ ಇದ್ದ… ಒಂದು ವಾರ್‍ದಲ್ಲಿ ನಾಕ್ ಜನಾನ್ನು ಕಳ್ಕೊಂಡೇ ಬುದ್ದೀ… ದೊಡ್ಮಾರಿ ಬಾಯಿಗೆ ತುತ್ತಿಟ್ಟು…

ಕಿಟ್ಟಿ: (ಅಣಕಿಸುವುದನ್ನು ಬಿಟ್ಟು) ನಾಕುಜನಾನು! ಒಂದು ವಾರ್ದಲ್ಲೇ!… ಮಾರೀ ಬಾಯಿಗೆ! ಯಾವ ಮಾರೀಗಯ್ಯಾ?

ಮುದುಕ: ಯಾವ್ದೇನು ಬುದ್ದಿ!?… ಬಂದಿರಲಿಲ್ವಾ… ಆ ದೊಡ್‌ಜರ… ಒಂದುಮನೆ ಬಿಡ್ದೆ ಕಣ್ನೆದಿರ್‍ಗೆ ನುಂಗ್‌ಕೊಂಡೋಯ್ತಲ್ಲ ಮಕ್ಕಳೂ ಮರೀನೂವೆ… ಮಕ್ಳೂ … ಓದ್ರು ನನ್ನಳಿಯಾನೂ ಓದ… ನನ್ ಸೊಸೆಗ್ಳೂ… ನನ್ನ ಮಕ್ಳೂ… ಅವರ ಐಕ್ಳೂ, ಎಲ್ಲರ್‍ಗೂ… ನಾನ್ ದುಡ್ದ್ ಆಕ್ದ್ರೇನೆ ಒಟ್ಟಿ ತುಂಬೋದು…

[ಕಿಟ್ಟಿಯು ತನ್ನ ಮನೆಯಲ್ಲಿ ಇನ್‌ಫ್ಲುಯೆಂಜಾ ಸಾವುಗಳನ್ನು ನನೆಸಿಕೊಂಡು ಅಳುವುದಕ್ಕೆ ತೊಡಗುವಂತೆಯೇ ಇರುವನು.]

ಮುದುಕ: (ಕಣ್ಣೀರೊರಸಿಕೊಳ್ಳುತ್ತಾ) ನೀವೆಲ್ಲಿದ್ರೀ ಬುದ್ದೀ ಒಂದೊಂದ್ ಮನೇನೂ ನಮ್ದೇಶದಲ್ ಆ ಮಾರೀಗ್ ಬಲಿ ಕೊಡ್ತಿದ್ದಾಗ?… ಅದೆಂತಾದ್ದು ‘ಇಂಫ್ಲೂನ್ಸಾ’ಂತ ಆಸ್ಪತ್ರೇಲೆಸರಿಟ್ರು ಅದಕ್ಕೆ! ಒಂದ್ ಮನೇ ಬಿಡ್ದೇ?…

ಕಿಟ್ಟಿ: (ಮುಂದೆ ಕೇಳುವುದಕ್ಕಾಗದೆ ಕಿವಿಗಳನ್ನು ಮುಚ್ಚಿಕೊಂಡು) ಸಾಕೋ!… ಸಾಕೋ!…. ಸಾಕೋ!!!…(ಗಂಭೀರವಾಗಿ) ಅಲ್ಲಿರೋ ಕಟ್ನ ಇಲ್ಲಿ ಎತ್ಕೊಂಬಾ…. ಅಷ್ಟ್ ಹೊತ್ಗೆ… ಇದ್ನಂಗಡೀ ಗ್ಸೇರಿಸ್‌ಬಿಟ್ ಬರ್ತ್ತೇನೆ…

(ಸುಲಭವಾಗಿ ಹೊರೆಯನ್ನು ಹೆಗಲಿಗೇರಿಸಿಕೊಳ್ಳುವನು.)

ಮುದುಕ: ಅಯ್ಯಯ್ಯೋ ಬುದ್ದಿ ನೀವ್‌ಯಾಕ್‌…

ಕಿಟ್ಟಿ: (ಸೈರಿಸದೆ) ಹೇಳಿದ್ದು ಕೇಳಯ್ಯ…ಥುತ್‌! (ಹೊರಡುವನು. ಮುದುಕನು ಮತ್ತೊಂದು ಕಡೆ ಹೊರಟು ಇನ್ನೊಂದು ಹೊರೆಯನ್ನು ಹೊತ್ತುಕೊಂಡು ಬರುವನು. ಕಿಟ್ಟಿಯು ಸಡಗರದಿಂದ ಪುನಃ ಬಂದು ಹೊರೆಯನ್ನು ಹೊತ್ತುಕೊಳ್ಳುವನು.)

ಕಿಟ್ಟಿ: ಅಯ್ಯಾ ಇಲ್ನೋಡು… (ಬೀದಿಯ ಒಂದು ಕೊನೆ ತೋರಿಸುತ್ತಾ) ಇಲ್ನೋಡು… ಬೀದಿ ಕೊನೇಲಾದೀಪ ಕಾಣ್ಸತ್ತೆ ನೋಡು… ಮುನ್ಸಿಪಲ್ ದೀಪ… ಆ ಕಂಬದ ಮನೆ!…

ಮುದುಕ: ಅ ಸರ್ಕಾರಿ ಕಂಬಾನೆ…ಹೂಂ.

ಕಿಟ್ಟಿ: ಹೂಂ… ಅಲ್ಲಿಟ್‌ಬಿಡು ದಿನಾ ನಿನ್ನೆರಡು ಕಟ್ಟುಗ್ಳನ!… ನಾನ್ ಮಂಡೀಲ್ ಹಾಕ್‌ಬಿಟ್ ಹೋಗ್ತೇನೆ… ನೀನು ಮೆಲ್ಲಗ್ ನಡದ್ ಬಂದು ಮಂಡೀಲ್ ದುಡ್ಡಿಸ್ಕೋ …ಆ!?

ಮುದುಕ: ಹಯ್ಯಯ್ಯೋ ನನ್ಪಾಡು ಕಟ್ಕೊಂಡು ನಿಮ್ಗೇನ್ ಬುದ್ದಿ?

ಕಿಟ್ಟಿ: (ಮುದುಕನ ಮಾತಿಗವಕಾಶವನ್ನು ಕೊಡದೆ) ನಿನ್ನ ಯಾರಯ್ಯಾ ಕೇಳೂಂದ್ದದ್ದದ್ನೆಲ್ಲಾ?… ದಿನಾ ಹೀಗೇನಾದ್ರೂ ಮಾಡದಿದ್ದರೆ (ರಟ್ಟೆಗಳನ್ನು ತೋರಿಸುತ್ತಾ) ನನಗ್ ತಾಖಶ್ ಕಮ್ಮಿ ಅಗುತ್ತೆ… ನಿಂಹಳ್ಳಿ ಯಾವ್ದು? ಎಷ್ಟುದೂರ ಇಲ್ಲಿಂದ?

ಮುದುಕ: ಕುರುಬಾರಳ್ಳಿ ಬುದ್ದಿ… ಅರ್ದಾ ಅರ್ದಾರಿ ಎರ್ಡ್‌ನೇ ಕಲ್ಲು ಈ ರಸ್ತೆಲೇ…

ಕಿಟ್ಟಿ: ಇನ್ನು ನನಗ್ಹೊತ್ತಾಯ್ತು! ನಾನು ಹೇಳಿದಾಗೆ ಕಟ್ಟುಗಳ್‌ ತಂದು ಮನೇ ಮುಂದೆ ಇಳಿಸಿಬಿಡು… ಇನ್ ಬರೋ ಭಾನ್ವಾರ ನಿಂ ಹಳ್ಳೀಗ್ಬುಂದು… ಈ ಒಣಕಲ್ ರಟ್ಟೆಗಳ್‌ ಇಟ್ಕೊಂಡು ಹೇಗ್ತಾನೆ ಸೌದೆ ಒಡೀತೀಯಾ ಅದನ್ನೂ ನೋಡಿಬಿಡ್ತೇನೆ.

[ಓಡುತ್ತಾ ಹೊರಡುವನು.]

ಮುದುಕ: ಇದೇನುಚ್ಚೋ ಕಾಣೆ! (ಕಣ್ಣೀರೊರಸಿಕೊಳ್ಳುತ್ತಾ ಓಡಿದ ಕಿಟ್ಟಿಯನ್ನು ನೋಡಿ) ಮಿಕ್ಕವ್ರು ಬದ್ಕಿರೋರ್ ಮಕ್ಳೆಲ್ಲ… ಇವಯ್ಯನಂಗ್ಗಾನ ಇದ್‌ಬಿಟ್ರೆ… ನನ್ನಂತಾವ್ರು ಮಕ್ಕಳ್ನ ಕಳ್ಕಂಡದ್ದೂ ಮರೆತ್‌ಬಿಡ್‌ಬೈದು… ನೋಡಿದ್ರೆ ನಮ್ಮಯ್ಯ ಎದುರಿಗ್ ನಿಂತಂಗೈತೆ! ಯಾರುಡುಗ್ನೋ ಕಾಣೆ… ಯಾರಾದ್ರೇನು… ಇದ್ನೆತ್ತೋರ್‌ ಒಟ್ಟೆ ತರ್ಣ್‌ಗಿರ್ಲಿ…

[ನಿಟ್ಟುಸಿರು ಬಿಡುತ್ತಾ ನಿಧಾನವಾಗಿ ಹೊರಡುವನು.]

[ಪರದೆ ಬೀಳುವುದು]
******

ದೃಶ್ಯ ೪

[ಬಲು ವೇಗವಾಗಿ ಸೈಕಲ್ ಸವಾರಿಯನ್ನು ಮಾಡುತ್ತಾ ಒಬ್ಬನು ಬೈಸಿಕಲ್ಲಿನ ಸ್ವಾಧೀನನಾಗಿ ಬರುತ್ತಿರುವನು. ಆ ಸಮಯಕ್ಕೆ ಸರಿಯಾಗಿ ಅವನಿಗಡ್ಡಲಾಗಿ ಒಬ್ಬಾಕೆಯು ಒಂದು ಕೂಸಿನೊಡನೆ ಬಂದು ಪ್ರಜ್ಞೆತಪ್ಪಿ ಕಿರುಚುತ್ತಾ ಕೂಸನ್ನು ಬೈಸಿಕಲ್ಲಿನ ದಾರಿಗೆದುರಾಗಿ ಕೆಳಗೆ ಬಿಟ್ಟುಬಿಡುವಳು. ಕಿಟ್ಟಿಯು ಅತಿ ವೇಗವಾಗಿ ಪ್ರವೇಶಿಸಿ ಮಗುವಿಗೂ. ಸೈಕಲ್ಲಿಗೂ ಮಧ್ಯೆ ಬೀಳುವನು. ಬೈಸಿಕಲ್ ಅವನ ಬೆನ್ನಿನ ಮೇಲೆ ಹೊರಡುತ್ತಿರುವಷ್ಟರಲ್ಲಿ ಕಿಟ್ಟಿಯು ಎದ್ದು ಬೈಸಿಕಲ್ಲನ್ನೂ ಸವಾರನನ್ನೂ ನೆಲಕ್ಕೆ ತಳ್ಳುವನು. ಆಮೇಲೆ ಕೆಸರುಮಣ್ಣು ಸಹಿತವಾಗಿಯೇ ಎದ್ದು ಕೂಸನ್ನು ಎತ್ತಿ ಅದರ ತಾಯಿಗೆ ಕೊಟ್ಟು ಆ ಬೈಸಿಕಲ್ ಸವಾರನನ್ನು ಬಲವಾಗಿ ಹಿಡಿದೊದರುತ್ತ…)

ಕಿಟ್ಟಿ: ಏಳೋ ಲೇ! ಕಂಸಾವ್ತಾರ… ನರಕಾಸುರ! (ಅವನ ಷರಟು ಕಾಲರನ್ನು ಹಿಡಿ ದೆಳೆಯುತ್ತಾ) ಅಲ್ಕಣಯ್ಯಾ ಬೀದೀಲಿ ಹೋಗೋರ್ ಬೆನ್‌ಮುರಿಯೋಕೇನ್ ಹತ್ತೋದ್ ನೀನ್ ಬೈಸಿಕಲ್ನ? ಇದೇನ್ ರಸ್ತೇನೋ… ಇಲ್ಲ ನಿಮ್ತಾತನ್ಮನೆ ಹಜಾರ್‍ವೋ?

ಬೈಸಿಕಲ್ ಸವಾರ‍: ಅಲ್ಕಣ್ರಿ… ನಾನು ಲೆಫ್ಟ್‌ಸೈಡ್ (Left Side) ಆಗಿ ಬರುತಿದ್ದದ್ದು… ಬೆಲ್ಲೂ ಕೂಡ ಹೊಡ್ದೆ…

ಕಿಟ್ಟ: ಓಹೋ… ಶಿಶುಗಳ್ನ ಬಲಿ ಕೊಡೋಕ್ ಮುಂಚೆ ಬೆಲ್ಲ್ ಬೇರೆ ಹೊಡೆಯೋದ್ ಇಟ್ಕೊಂಡಿದೀಯಾ! ಘಂಟಾಪೂಜಾ? ಇನ್ನ್ ಕರ್ಪೂರಾ… ಮಂಗ್ಳಾರ್ತಿ?… ಬಲಿ ಆದ್ಮೇಲೇನೋ!! ಸ್ಪಲ್ಪಿರು… ಇಲ್‌ವಿಚಾರಿಸ್ಬಿಟ್ಟು… ನಿನಗೆ ಪ್ರಸಾದ… ವರಗ್ಳು, ಎಲ್ಲಾ ಕೊಡ್ತೇನೆ… ನಾಟಕ್ದಲ್ಲಿ ಕಾಳ್ಕಾ ದೇವಿ… ನರಮಾಂಸಾನ ನುಂಗ್ಬಿಟ್ ಹೇಳೋ ಹಾಗೆ ‘ವತ್ಸನೇ! ನಿನಗೆ ಬೇಕಾದ ವರಗಳನ್ನು ಬೇಡಿಕೋ… ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವೆನು’… ಸ್ವಲ್ಪಿರು… (ಹೆಂಗಸಿನ ಕಡೆ ತಿರುಗಿ) ಅಮ್ಮಾ ಲೆಫ್ಟ್ ಸೈಡೂ ಅಂದರೆ ಗೊತ್ತೇ ನಿನ್ಗೇ? ಬೈಸಿಕಲ್ ಹತ್ತ್‌ ಬರೋವ್ರು… ಮೂತೀ ವರ್‍ಗೂನು ಹೊಡ್ಕೊಂಡು ಬಂದುಬಿಟ್ಟು.. ಬೆಲ್ಲುಹೊಡೆಯತ್ಲುನೂವೆ… ಎದುರಿಗೆ ನಿಲ್ದೆ ಆಕಾಶಕ್ಕೆ ಎಗರ್ಬೇಕೂಂತ ಗೊತ್ತಿಲ್ವೇ ನಿನಗೆ ರೂಲ್ಸು? (ಸವಾರನ ಕಡೆಗೆ ತಿರುಗಿ) ಅಯ್ಯಾ! ಬೆಂಗ್ಳೂರ್ಗೆಲ್ಲ ಇಂಗ್ಲೀಷ್ ಹೇಳ್ಕೊಟ್‍ಬಿಟ್ಟು ಆಮೇಲೆ ಹತ್ತು ನಿನ್ನ್ ಹಾಳ್ ಬೈಸಿಕಲ್ನ……..

[ಸವಾರನನ್ನು ಬಿಡುವನು.]

ಬೈಸಿಕಲ್ ಸವಾರ: I am very sorry

[ಬೈಸಿಕಲ್ಲನ್ನೂ ಟೋಪಿಯನ್ನೂ ಸರಿಪಡಿಸಿಕೊಳ್ಳುವನು.]

ಕಿಟ್ಟಿ: ನಿನ್ನ ಸಾರಿ ಪದಗಳ್ನೆಲ್ಲಾ ನಿನ್‌ ಸೋದರ್‌ಮಾವ ಸಂಚರಿಸ್ತಿದ್ದ…. ಅವನ ಮಂದೆ ಮೊರೆಯಿಡು (ಸುತ್ತಲೂ ನೋಡಿ, ದೂರದಲ್ಲಿ ಕಂಡವನಂತೆ ನಟಿಸುತ್ತಾ)… ಅಕ್ಕೋ! ಪೋಲೀಸ್… ಕಾನ್‌ಸ್ಟೇಬಲ್‌ಉ…!

ಬೈಸಿಕಲ್ ಸವಾರ: My God………..

[ಅರಚುತ್ತಾ ಬೈಸಿಕಲ್ಲನ್ನು ತಿರುಗಿಸಿಕೊಂಡು ಹೊರಡುವನು.]

ಕಿಟ್ಟಿ: (ಹೆಂಗಸಿನ ಕಡೆ ತಿರುಗಿ). ಅಮ್ಮಾ! ಮಗೂನ್ ಸಾಯಿಸ್ಬೇಕೂ ಅಂದ್ರೆ ಮನೇಲಿ ಭಾವಿಯಿಲ್ವೇ?… ಇಷ್ಟು ತಸ್ದಿ ತಕೊಂಡು ಇಲ್ಲಗೆತ್ಕೊಂಡ್ ಬಂದು ಬೀದೀಲಿ ಹೋಗೋ ಬಂಡಿಗಳ ಮುಂದೆ ಹಾಕಿ… ಇಷ್ಟು ಜನಕ್ಕೆ ತೊಂದರೆ ಬದ್ಲಾಗಿ… ಮನೇ ಭಾವೀಲೇ ದಬ್‌ಬಿಟ್ರೆ ಎಲ್ರಿಗೂ ಸಲೀಸು!… ನಿನ್ನ ಹಾಳ್‌ಮಗೂನ ಬಚಾಯ್ಸೋ ಗಲಾಟೇಲಿ ನನ್ನ ಮೈ ಬಟ್ಟೆಗಳೆಲ್ಲಾ ಕೆಸ್ರು! ಈ ಹಾಳು ಹೆಂಗಸ್ರು ಇರೋ ಕಡೆಯೆಲ್ಲಾ ಗೋಳೇ!… ಇನ್ ಡ್ರಿಲ್ಲಿಗೆ ಲೇಟೂ… ಇನ್‌ಹಾಳ್‌ ಸ್ಕೌಟ್‌ ಮಾಸ್ಟರೂ… ಲೇಟಾಗ್ ಬಂದೇಂತ …next rallyಗೆ ಮಿಠಾಯಿ ತಪ್ಪಿಸಿಬಿಡ್ತಾನೋ ಏನೋ!? ಏನ್ಗತಿಯೋ!?
[ಅವಸರದಿಂದ ಹೊರಡುವನು. ಹೆಂಗಸು ಮಾತನಾಡುವುದಕ್ಕೆ ತೋಚದೆ ಮಗುವನ್ನಪ್ಪಿಕೊಂಡು ನಿಧಾನದಾಗಿ ಹೊರಡುತ್ತಾ ತನ್ನಷ್ಟಕ್ಕೆ ತಾನೆ ಮಾತನಾಡುವಳು]

ಹೆಂಗಸು: ನೀನೇನ್‌ ಬೇಕಾದ್ರೂ ಬೈಕೋ… ನನ್ರಾಜ… ನನ್ ಭಾಗಕ್ ದೇವ್ರಹಾಗ್ಬಂದು (ಮಗುವನ್ನು ತಬ್ಬಿಕೊಳ್ಳುತ್ತಾ) ಕಂದನ್ನ ಕಾಪಾಡಿದ್ನಲ್ಲ… ಅಷ್ಟೇ… ಸಾಕು (ನಗುವನ್ನು ಸೂಚಿಸುತ್ತ) ನನ್ನೇನ್‌ ಬೇಕಾದ್ರೂ ಅಂದ್ಕೋ!… ಮಗು!

(ನಿಧಾನವಾಗಿ ನಿಷ್ಕ್ರಮಿಸುವಳು.)

[ಪರದೆ ಬೀಳುವುದು.]
*****

ದೃಶ್ಯ ೫

[ಸ್ಕೌಟು ಮೈದಾನ-ಸ್ಕೌಟುಗಳಿಗೆ ಸ್ಕೌಟುಮಾಸ್ಟರು ಡ್ರಿಲ್ ಮಾಡಿಸುತ್ತಿರುವರು]

ಸ್ಕೌಟು ಮಾಷ್ಟರ್ : odd numbers… two Steps to rear!… Even numbers to the front ! One! Two!…[ಸೌಟುಗಳು ಅನುಸರಿಸುವರು]

ಕಿಟ್ಟಿ: (ಆಗತಾನೇ ಬಂದು. ಸ್ಕೌಟು ಮಾಸ್ಟರಿನೊಡನೆ ಬಹಳ ದೈನ್ಯದಿಂದ) ಕ್ಷಮ್ಸಿ ಸಾರ್! ಪರ್ಮಿಷನ್‌ ಕೊಟ್ರೆ (ಸ್ಕೌಟು ಹಿಂದಳವನ್ನು ತೋರಿಸಿ) ಆ ‘ಆಡು’ಗಳ ಗುಂಪಿಗೆ ಸೇರ್ಕೊಂಡು ಬಿಡ್ತೇನೆ ಸಾರ್!

ಸ್ಕೌಟು ಮಾಷ್ಟರ್: (ಕನ್ನಡಕಗಳ ಮೂಲಕ ಅವನನ್ನು ನೋಡುತ್ತ) ಯಾವ ಆಡುಗ್ಳೋ? ಅಲ್ಲ…ನೀನು…

ಕಿಟ್ಟಿ: (ಅಡ್ಡಮಾತಾಗಿ) ಅಲ್ಲಿ… ಹಿಂದೆ ನಿಂತಿರೋ ‘ಅಡು’ಗ್ಳು ಸಾರ್… ನೆನ್ನೆ ಹೇಳಿದ್ರಲ್ಲ ಸಾರ್. ನೀವೇ! ಒಂದು, ಮೂರು, ಐದು, ಏಳು ಇತ್ಯಾದಿಗಳೆಲ್ಲಾ ‘ಅಡು’ಗ್ಳು!… ಎರಡು, ನಾಲ್ಕು, ಅರು ಇತ್ಯಾದಿಗಳೆಲ್ಲ “ಈವನ್ನು”ಗಳು! ಅದೂ ಅಲ್ದೆ “Two steps to the rear”… ಅಂದ್ರೆ “ಎರಡು ಹೆಜ್ಜೆಗಳನ್ನು ಹಿಂದಕ್ಕೆ ಹಾಕಿರಿ” ಅಂತ!… ನೆನ್ನೆ ಏಳಾಗಿದ್ದೆ ಸಾರ್… ಅಡುಗಳಲ್ಲಿ ಏಳನೇದು… ಈ ಹೆಜ್ಜೆಗಳನ್ನ ಹಿಂದೆ ಹಾಕೂದ್ರಲ್ಲಿ ಮೊದಲು ಎಡಗಾಲು ಹಿಂದೆ ಹಾಕಬೇಕಲ್ವೇ ಸಾರ್? (ಮಂಕನಹಾಗೆ ಒದರುತ್ತಾ) ಎಡ ಅಂದರೆ left…

ಸ್ಕೌಟ್‌ ಮಾಸ್ಟರ್: ಏನೋ ನಿನ್ನ ಚಾಲಾಕು? ಇಷ್ಟು ಹೊತ್ತು ಬಿಟ್ಕೊಂಡ್ ಬಂದ್ಬಿಟ್ಟು… ಯಾರ ಹತ್ರಲೋ ಈ ಮಾತು ಬದಲಾಯ್ಸೋ ಚಾಲಾಕು?… ಎಲ್ಲಿಂದ್ ಧುಮ್ಕಿದ್ಯೋ ಈಗ?

ಕಿಟ್ಟಿ: ದುಮ್ಕಿದೆಲ್ಲಿಂದ ಸಾರ್?… ರಸ್ತೆ ಉದ್ದಕ್ಕೂ ಸರಸರಾಂತ ನಡ್ಕೊಂಬಂದೆ ಸಾರ್

[ಹಿಂದಳದ ಕಡೆ ಹೊರಡುವನು.]

ಸ್ಕೌಟು ಮಾಸ್ಟರ್: ಏನೋ ಎಷ್ಟು ಹೊತ್ತೋ ಬರೋದು ನೀನು?

ಕಿಟ್ಟಿ: ಕ್ಷಮ್ಸಿ ಸಾರ್… ನೀವೆ ನೆನ್ನೆ ಹೇಳಿದ್ರಲ್ಲಾ ಸಾರ್… ಎಂಟ್ ಘಂಟೆಗೆಲ್ಲ ಇಲ್ಲಿರ್‍ಬೇಕೂಂತ…

ಸ್ಕೌಟು ಮಾಸ್ಟರ್: ಈಗೆಸ್ಟ್ ಘಂಟೆ?

ಕಿಟ್ಟಿ: ಸ್ವಲ್ಪ ಹಾಗೆ ಇರಿ ಸಾರ್. ಹೇಳ್ತೀನಿ ಸರಿಯಾಗಿ! (ಸ್ಕೌಟು ಮಾಸ್ಟರ ಕೈಗೆ ಕಟ್ಟಿದ್ದ ಗಡಿಯಾರವನ್ನು ಬಗ್ಗಿ ನೋಡಿ ಎಂಟ್ ಬಜಾಯ್ಸಿ ಇಪ್ಪತ್ತು ನಿಮಿಷ ಸಾರ್! (Correct ಏನ್ಸಾರ್ ಆನ್ಸರೂ? ನೀವೆ ನೋಡಿ ಸಾರ್.

ಸ್ಕೌಟು ಮಾಸ್ಟರ್: ಅಲ್ಕಣೋ ಯಾಕಿಷ್ಟು ಲೇಟು ಅಂದ್ರೇ?

ಕಿಟ್ಟಿ: ಬರೋಷ್ಟರಲ್ಲಿ ಟೈಮಾಗಿ ಹೋಯ್ತು ಸಾರ್, ಕ್ಷಮ್ಸಿ ಸಾರ್!

ಸ್ಕೌಟು ಮಾಸ್ಟರ್: ಅದೇನೋ ನಾ ಕೇಳಿದ್ದು, ಯಾಕಿಷ್ಟು ಟೈಮಾಯ್ತೂಂತ?

ಕಿಟ್ಟಿ: ಟೈಮಾಗೋಯ್ತು, ಸಾರ್… ಅಲ್ಲ ಬರೋಷ್ಟ್‌ ಹೊತ್ತಿಗೆ ಬರ್ಲಿಲ್ಲ ಸಾರ್ ನಾನು; ಹ್ಯಾಗೆ ಬೇಕಾದ್ರು ಇಟ್ಕೊಳ್ಳಿ ಸಾರ್! ಸತ್ಯ ಸಾರ್! ಸುಳ್ಳು ಹೇಳಬೇಕಾದ್ರೇನ್ಸಾರ್… ಪೇರಿಸಿಬಿಟ್ಟೇನು ಪರ್ವತದಾಗೆ ಅಪದ್ಧಗ್ಳು?

ಸ್ಕೌಟು ಮಾಸ್ಟರ್: ಎಂಟ್ ಫಂಟೇಗೆಲ್ಲ ಇಲ್ಲಿ ಹಾಜರಾಗಿ ಇರಕೇನು ಕೇಡು? ಹೇಳೋ ನಿಜನಾ!

ಕಿಟ್ಟ: (ಆತ್ಮಗತಂ) ಸರಿ! ಇವ್ರು ನಿಜ ನಂಬೋಹಾಗಿಲ್ಲ ಇನ್ನಪದ್ಧಕ್ಕೆ ಅಪ್ಣೇನೆ… (ಸ್ಕೌಟ್ ಮಾಸ್ಟರೊಡನೆ ಗಟ್ಟಿಯಾಗಿ ಪಶ್ಚಾತ್ತಾಪದಿಂದ) ಮನೇ ಗಡಿಯಾರ ಜಪಾನೀಸ್ ಕ್ಲಾಕ್ ಸಾರ್; ಬೆಳೆಗ್ಗೆ ಕಣ್ಬಿಟ್ ಕಾಫೀಂತ್‌ ಕಿರ್ಚೋದ್ರಲ್ಲಿ ಎಂಟು ಘಂಟೆ ಹೊಡೆದ್ಬಿಡತ್ತೆ ಸಾರ್ ಶನಿ!

ಸ್ಕೌಟು ಮಾಸ್ಟರ್: ಹಾಗಾರ್ರಾಘಂಟೇಗೇ ಏಳ್ಬೇಕು.

ಕಿಟ್ಟಿ: (ಬೆಪ್ಪಾದ ನಗುವಿನಿಂದ) ಕ್ಷಮ್ಸಿ ಸಾರ್!

ಸ್ಕೌಟು ಮಾಸ್ಟರ್‌: (ತೋಚದೆ) ಯಾಕೋ?

ಕಿಟ್ಟಿ: (ಹಲ್ಲು ಕಿರಿಯುತ್ತಾ) ಹಾಗಂದ್ರೇನ್ ಸಾರ್? ಎರಡ್ಫಂಟೇಗೆ ಮೂರ್‍ಬೇಕು… ಮೂರ್ಘಂಟೇಗೆ ನಾಲಕ್ಬೇಕು… ಐದ್ಫಂಟೇಗಾರ್‍ಬೇಕು… ಆರ್ಘಂಟೇಗ್ ಏಳ್ಬೇಕೂಂದ್ರೆ… ಎಲ್ಲಾಗುತ್ತೆ… ಸಾರ್… ಒಂದ್ ಘಂಟೆ ಕಾದಿರ್‍ಬೇಕಲ್ಲ ಸಾರ್… ಕ್ಷಮ್ಸಿ ಸಾರ್!

ಸ್ಕೌಟು ಮಾಸ್ಟರ್: ಏನ್ ಕ್ಷಮ್ಸಿನೋ? ನೀನೋ ನಿನ್ನ ಅವ್ತಾರವೊ?

ಕಿಟ್ಟಿ: (ತನ್ನನ್ನೇ ನೋಡಿಕೊಳ್ಳುತ್ತ) ಯಾಕ್‌ ಸಾರ್! ನನ್ನವ್ತಾರಕ್ಕೇನು ಕಮ್ಮಿ ಸಾರ್?… ತಕ್ಮಟ್ಟಿಗಿಧೇನಲ್ಲ ಸಾರ್?… ಗಂಡ್ಸಿಗೇನ್ಸಾರ್… ಗೈರತ್ತು… ಗರಜು ಇದ್ರೆ ಸಾಲ್ದೇನ್ ಸಾರ್…?

ಸ್ಕೌಟು ಮಾಸ್ಟರ್: ಏನೋ ಷರ್ಟೆಲ್ಲಾ?

ಕಿಟ್ಟ: ಬರೋ ಆತುರದಲ್ಲಿ ಮುಗ್ಗರಿಸಿಬಿದ್ದೆ… ಸ್ವಲ್ಪ ಮದರಿಂಡಿಯ (Mother India)…ಅಲ್ಲ… ಕೆಸ್ರು ಮೆತ್ಕೊಂಡ್ಬಿತ್ತೇನೋ! ಷರ್ಟೊಂದ್ಬಿಟ್ಟು ಮಿಕ್ಕ ವಿಷ್ಯದಲ್ಲೆಲ್ಲಾ ತೃಪ್ತಿಕರವಾಗಿಧೇನ್ಸಾರ್… ತಕ್ಮಟ್ಟಿಗೆ…

ಸ್ಕೌಟು ಮಾಸ್ಟರ್: ಏನ್ ಮಿಕ್ವಿಷ್ಯದಲ್ಲಿ. ನಿನ್ ರುಮಾಲೆಲ್ಲೋ?

ಕಿಟ್ಟ: ಹಸ್ರಾಗಿದ್ರೂನೂವೆ… ಅಂಚುಗ್ಳು… ಹಳದಿ, ನಾಳೆ ಹರದ್ಬಿಟ್ಟು ಕಟ್ಕೊಂಬರ್ತೇನೆ ಸಾರ್!

ಸ್ಕೌಟು ಮಾಸ್ಟರ್: ಯಾವ್ದಕ್ಕೋ ಅಂಚು?

ಕಿಟ್ಟ: ನಮ್ಮನೇಲಿ… ಒಂದು ಹಸುರು ಸೀರೆ… ಅಲ್ಲ… ಉದ್ವಾದ ಬಟ್ಟೆ ಸಾರ್!

ಸ್ಕೌಟು ಮಾಸ್ಟರ್: ಚೆನ್ನಾಗಿಧೆ… ಒಂದೊಂದು ಕಾಲಿಗೆ ಒಂದೊಂದು ಬಣ್ಣದ ಸಾಕ್ಸು!… ಲೇಸ್ (Lace) ಇಲ್ಲದ ಬೂಟ್ಸು… ತಲೇಗೆ ಸೀರೆ… ಚೆನ್ನಾಗಿಧೆ ನಿನ್ ಯೂನಿಫಾರ್ಮು… (ಷರ್ಟನ್ನು ತೋರಿಸುತ್ತಾ) ಈಗಿರೋ ಷರ್ಟಿಗೆ ಗುಂಡಿಯಾದ್ರೂ ಸರಿಯಾಗಿ ಹಾಕ್ಕೂಡ್ದೇನೋ?

ಕಿಟ್ಟಿ: ಅಯ್ಯಯ್ಯೋ! ಹೌದೆ! ಕ್ಷಮ್ಸಿ ಸಾರ್ ನಮ್ಮಪ್ಪ ಹೇಳೋ ಹಾಗೆ… ಅಠಾರಾ ಕಚೇರಿ ಅರೇಂಜ್ಮೆಂಟಾಗಿದೆ!

ಸ್ಕೌಟು ಮಾಸ್ಟರ್ : ಅದೇನ್ ಅರೇಂಜ್ಮೆಂಟೋ?

ಕಿಟ್ಟ: ಎನೇನ್‌ ಸಾರ್! ಗುಂಡಿಗಳಿಗೆಲ್ಲ ಒಳ್ಳೊಳ್ಳೆ ಪ್ರಮೋಷನ್ಮಳು… ಕಾಜಾಗಳಿಗೆಲ್ಲ… ಪಾಪ! ರಿಟ್ರೆಂಚ್ಮೆಂಟೂ!

ಸ್ಕೌಟು ಮಾಸ್ಟರ್: ಸಾಕು! ಇನ್ಮೇಲಾದ್ರೂ ಲೇಟಾಗಿ ಬರ್ದೇ ಇರು! ಸೇರ್ಕೋ… ನೀನ್ ‘ಅಡುಗ್ಳೂ’ಂದ್ಯಲ್ಲ… ಅವುಗಳ ಜೊತೇಲಿ!

[ಕಿಟ್ಟಿಯು ಹೋಗಿ ದಳದ ಹಿಂದಿನ ಸಾಲನ್ನು ಸೇರಿಕೊಳ್ಳುವನು.]

ಸ್ಕೌಟು ಮಾಸ್ಟರ್: ರೈಟ್‌ಟರ್ನ್‌!

ಕಿಟ್ಟೆ: (ಸಾಲಿನಲ್ಲಿದ್ದವರು ತಿರುಗುತ್ತಿರಲು ತನ್ನಲ್ಲಿಯೇ ರೈಟ್… ಬಲ… ಟರ್ನ್… ತಿರುಗು…)

[ನಿಧಾನವಾಗಿ ತಿರುಗುವನು.]

ಸ್ಕೌಟು ಮಾಸ್ಟರ್: ಎಷ್ಟು ಹೊತ್ತೋ ತಿರ್ಗೋಕೆ?

ಕಿಟ್ಟಿ: ತರ್ಜುಮೆ ಮಾಡೋ ತಕ್ರಾರಿನಲ್ಲಿ ದೇರಿ ಅಗ್ಹೋಗತ್ತೆ ಸಾರ್… ಕನ್ನಡದಲ್ಲೆ ಮಾಡ್ಸಿ ಸಾರ್ ಆಗ ತೋರಿಸ್ತೇನೆ!

ಸ್ಕೌಟು ಮಾಸ್ಟರ್: (ಆತ್ಮಗತಂ) ಈ ಶುಂಠನ್ನ ಸ್ಕೌಟಾಗಿ ಹ್ಯಾಗ್ತಾನೆ ಮಾಡೋದೋ ಕಾಣೆ.

(ದಳದವರನ್ನು ಕುರಿತು) As you were!
[ದಳದವರು ಮೊದಲಿದ್ದಂತೆ ತಿರುಗುವರು.]

ಕಿಟ್ಟಿ: (ನೆರೆಯವನಾದ ಮಗುವನ್ನು ಕುರಿತು) ಲೇ!… ಗುಬ್ಬಚ್ಚಿ! ನೋಡ್ದ್ಯೇನೋ ನಿನ್ಕೆಲ್ಸ! ಆಜಾದಾಗಿ ತಿರುಗ್ತಿದ್ದೋನ್ನ… ಮೆಲ್ಲಗ್ ಕಾರ್ದವಲಕ್ಕಿ ಕೊಟ್ಟು… ಗಿಲೀಟ್ ಮಾಡಿ… ಕರ್ಕೊಂಡ್ ಬಂದು… ಸೇರಿಸ್ಬಿಟ್ಯಲ್ಲ ಈ ಶುಕ್ರಾಚಾರಿ ಸೈನ್ಯಕ್ಕೆ! ಇದೇನೇನೋ ನೀನು ಮಿಠಾಯಿ ಗಿಠಾಯಿ ಅಂದದ್ದು… ಈ ಡ್ರಿಲ್ಲಾಗ್ಲಿ… ತೋರಿಸ್ತೇನೆ.. ನಿನ್ಗೆ ಯಾವತ್ತು ಹುಟ್ಟಿದ್ಹಬ್ಬ?

ಮಗೂ: (ಗಾಬರಿಯಿಂದ) ನ…ನ..ಗ್ಗೊ…ತ್ತಿ…ಲ್ಲ…ಕಾ…ಣೋ….

ಕಿಟ್ಟಿ: ನನಗ್ಗೊತ್ತು… ಈವತ್ತು ಈ ಡ್ರಿಲ್ಲಾಗ್ಲಿ… ಮಾಡ್ತೇನೆ ಹಬ್ಬ!

ಮಗೂ: (ನೆರಯವನೊಡನೆ) ಅಪ್ಪು ! ಲೇ! ದಮ್ಮಯ್ಯಾ ಕಣೋ!… ಇಲ್ಲಿ ಬಂದ್ಬಿಡೋ…

[ಅಪ್ಪು ತನ್ನ ಸ್ಥಾನ ಬಿಟ್ಟು ಬರುವನು]

ಕಿಟ್ಟಿ: ಒಹೋಹೋ! ಅಲ್ಲಿ ಹೋದ್ರೇನ್‌ ತಪ್ಪಸ್ಕೊಂಡ್‌ಬಿಟ್ಟೇಂತ ತಿಳ್ಕೊಂಡ್ಯ?

ಮಗೂ: ಅಲ್ಲ ಕಣೋ… ಇಲ್ಲಿಂದ ಎಸ್ಸೆಮ್ಮಿನ (S.M.) ಮುಖ ಚೆನ್ನಾಗಿ ಕಾಣುತ್ತೆ.

ಕಿಟ್ಟಿ: ಹೂಂ… ಗುರುದರ್ಶನ ಚೆನ್ನಾಗಿ ಮಾಡ್ಕೋ… ಅವರ್‌ಹತ್ರ ಬರೋವಾಗ “ಮನೇಗೆ ಹೋಗಿ ಸೇರೋ ಹೊತ್ತಿಗೆ… ನನ್ಮೈ… ಕೈಗ್ಳು ಜೋಪಾನವಾಗಿರ್‍ಲಿ”ಂತ್ಲೂ ಆಶೀರ್ವಾದ ಮಾಡಿಸ್ಕೋ…

ಸ್ಕೌಟು ಮಾಸ್ಟರ್: (ದಳದ ಮೊದಲನೆಯನೊಡನೆ) ನಿನ್‌ ಗುಡ್‌ ಟರ್ನ್ ಏನೋ ಇವತ್ತು?

೧ನೇ ಸ್ಕೌಟು: ನಮ್ಮ ಮದರ್ಗೆ ಕಾಯ್ಲೆ ಆಗಿತ್ತು… ಆಸ್ಪತ್ರೆಯಿಂದ ಔಷಧಿ ತಂದೆ ಸಾರ್.

ಸ್ಕೌಟು ಮಾಸ್ಟರ್: GOOD ! (ಎರಡನೆಯವನೊಡನೆ) ನಿನ್ದು?

೨ನೇಸ್ಕೌಟು: ನನ್ನ ತಮ್ಮನಿಗೆ ಹೋಂವರ್ಕ್ ಹೇಳ್ಕೊಟ್ಟೆ ಸಾರ್!

ಸ್ಕೌಟು ಮಾಸ್ಟರ್: GOOD!

(ಹೀಗೆಯೆ ಪ್ರತಿಯೊಬ್ಬರನ್ನೂ ಕೇಳುತ್ತ ಬರೆದುಕೊಳ್ಳುತ್ತ ಇರುವನು.)

ಕಿಟ್ಟಿ: (ನರೆಯವರೊಡನೆ) ಇದೇನೋ?… ಈ ಗುಡ್ ಟರ್ನುಗಳ ಬಾಬ್ತು ಈವತ್ತು? ಏನೋ ಅದು ಗುಡ್‌ಟರ್ನು ಅಂದ್ರೆ?

ಅಪ್ಪು: ಅದೇ ಹೇಳ್ತಿಧಾರಲ್ಲೋ! ಕಾಯಿಲೆಯಾದ ಮದರ್ಗೆ ಔಷಧಿ ತರೋದು… ತಮ್ಮನಿಗೆ ಹೊಂವರ್ಕ್‌ ಹೇಳಿಕೊಡೋದು… ಹೀಗೆ…

ಕಿಟ್ಟಿ: ಹಾಗಾದರೆ ನಿಮ್ಮಮ್ಮನಿಗೆ ಜ್ವರಾನೇ?

ಅಪ್ಪೂ: ಇಲ್ಲ.

ಕಿಟ್ಟಿ: ಮತ್ನಿನಿಗೆ ತಮ್ನೂ ಇಲ್ವಲ್ಲೋ…?

ಅಪ್ಪೂ,: ಇಲ್ಲ್‌ದಿದ್ರೇನೋ?

ಕಿಟ್ಟ: ಹಾಗಾದ್ರೆ ಸಿಕ್ಕೊಳ್ತಿಯಲ್ವೇನೋ?

ಅಪ್ಪೂ: ಯಾಕೋ! ನಮ್ಮಪ್ನಿಗೆ ನ್ಯೂಸ್‌ಪೇಪರ್ ತಂದದ್ದು ಹೇಳ್ಕೋತೀನಿ.

ಕಿಟ್ಟ: ಅದೂನೂ ಈ ಗುಡ್‌ಟರ್ನುಗಳ ಬಾಬ್ತಿಗೆ ಸೇರಿದ್ದೋ?

ಅಪ್ಪೂ: ಹುಂ ಕಣೋ!

ಕಿಟ್ಟ: ಒಳ್ಳೇ ಕಾಟಕ್ಕೆ ತಗಲ್ಕೊಂಡ್ನಲ್ಲಾ! ನನಗೀ ಮೂರು ಬಾಬತ್ನಲ್ಲೂ ಸೊನ್ನೆ ಕಾಣೋ…

ಸ್ಕೌಟು ಮಾಸ್ಟರ್: (ಅಪ್ಪುವನ್ನು ಕುರಿತು) ನಿನ್ನ ಗುಡ್‌ಟರ್ನೇನೋ?

ಅಪ್ಪೂ: ನಂ ಫಾದರ್‍ಗೆ ನ್ಯೂಸ್‌ಪೇಪರ್ ತಂದ್ಕೊಟ್ಟೆ ಸಾರ್!

ಸ್ಕೌಟು ಮಾಸ್ವರ್: GOOD! (ಕಿಟ್ಟಿಯನ್ನು ಕುರಿತು) ನಿನ್ದು?

ಕಿಟ್ಟ: ಏನೂ… ಇಲ್ಲ ಸಾರ್!

ಸ್ಕೌಟು ಮಾಸ್ಟರ್: ಯಾಕಿಲ್ಲ?

ಕಿಟ್ಟಿ: ಅಪರ್ಚುನಿಟೀಸ್ ಇಲ್ಲ ಸಾರ್ ಮನೇಲಿ!

ಸ್ಕೌಟು ಮಾಸ್ಟರ್: ಅದು ಎಕ್ಸ್‌ಕ್ಯೂಸಲ್ಲ.

ಕಿಟ್ಟಿ: ಒಳ್ಳೇ… Excuse ಅಲ್ಲ… ಸಾರ್!… ನಮ್ಮಮ್ಮ ಸಾರ್… ಕಲ್ಗುಂಡಾಗಿದಾಳೆ ಸಾರ್! ಇನ್ನೌಳಿಗೆ ಜ್ವರ ಬಂದು… ನಾನಾಸ್ಪತ್ರೆಗೆ ಹೋಗಿ ಔಷದ ತಂದು… ನಿಮ್ಮ ಗುಡ್‌ಟರ್ನ್‌ ಪಟ್ಟಿಗೆ ದಾಖಲಾಗೋದು ಯಾವಾಗ್ಲೋ ದೇವ್ರಿಗೇ ಗೊತು! ಇನ್ ನನ್ತಮ್ಮನೋ ಅವನ ಹೋಂವರ್ಕ್ ಅವನೇ ಮಾಡ್ಕೊಂಡ್ಬಿಡ್ತಾನೆ ಸಾರ್!… ಕ್ಷಮ್ಸಿ… ಸಾರ್ ನಮ್ದು Brainy… healthy… family… ಸಾರ್… ಶನಿ!

ಸ್ಕೌಟು ಮಾಸ್ಟರ್: ಇಂಥಾ excuse ನಾಳೇಗಾಗ್ದು… ಹೊಸದಾಗಿ ಸೇರದವ್ನೂಂತ ಬಿಟ್ಬಿಟ್ಟಿಧೇನಿವತ್ತು [ಹೊರಡುವನು.]

ಕಿಟ್ಟಿ: ಇದೇನ್ ಹಣೇ ಬರವೋ… ಇನ್ನಾ ರ್‍ಯಾಲಿ ಗೀಲಿಯಾದ್ರೂ ಆಗಾಗ್ಗೆ ಇದ್ರೆ ಮಿಠಾಯಿ ಬಟ್ವಾಡೆ ಗಲಾಟೇಲಿ… ಮರತ್ಬಿಡಬಹುದು ಈ ತಕ್ರಾರುಗ್ಳು. ನೆಕ್ಸ್ಟ್ ರ್‍ಯಾಲಿ ಯಾವಾಗ್ಲೋ?

ಅಪ್ಪೂ: (ಹೆದರುತ್ತ) ನನಗ್ಗೊತ್ತಿಲ್ಲ ಕಣೋ!

ಕಿಟ್ಟಿ: ಮತ್ ಇನ್ಯಾರಿಗ್ಗೊತ್ತು?

ಅಪ್ಪೂ: ಎಸ್ಸೆಂಗೆ!

ಕಿಟ್ಟ: ಕೇಳಿ ಹೇಳ್ತೀಯ?… ಇನ್ನಾದ್ರೂ ತಿಳಿದ್ರೆ ಸ್ವಲ್ಪ ಹೋಪ್‌ಫುಲ್ ಆಗಿ… ತಡ್ಕೋಬಹ್ದು… ಈ ತಸ್ದಿಗಳ್ನ!

ಅಪ್ಪೂ: ನಾನ್ಕೇಳದ್ರೆ ಕೋಪಿಸಿಕೊಳ್ತಾರೋ!

ಸ್ಕೌಟು ಮಾಸ್ಟರ್: ಡಿಸ್ಮಿಸ್.

[ಎಲ್ಲರೂ ಬೇರೆ ಬೇರೆಯಾಗುವರು.]

ಅಪ್ಪೂ: (ಮೆಲ್ಲಗೆ ಮಗುವಿನೊಡನೆ) ಲೋ ರ್‍ಯಾಲಿ ಯಾವಾಗಾಂತ ಈಗ್ಲೇ ಷುರು ಮಾಡ್ಬಿಟ್ಟ ಕೇಳೋಕೆ… ನಾನ್ ಹೋಗತೇನಪ ನೀನ್ಬೇಕಾದರೆ ಬಾ ಅವನ್ಜೊತೇಲಿ!

[ಅಪ್ಪೂ ಹೊರಡುವನು]

ಕಿಟ್ಟಿ: ಲೋ! ಮಗೂ! ಈ ರ್‍ಯಾಲಿ ಅಂಬೋದು ಯಾವಾಗ್ಲೋ? ಮಿಠಾಯಿ ಗಿಠಾಯಿ

ಮಗೂ: (ಗಾಬರಿಪಟ್ಟು) ಇನ್ನೂ ಇಲ್ಲಾಂತ ಕಾಣುತ್ತೋ… ಇಷ್ಟು ಬೇಗ್ಲೆ ಗೊತ್ತಾಗೋದಿಲ್ಲ.

ಕಿಟ್ಟಿ: ಮುಮ್ಮೂರ್ಟಿನ್ನು ಅಂದ್ಯಲ್ಲ… ಅದಾದ್ರೂ ತಯಾರ್ ಮಾಡ್ತಿಧಾರೇನೋ?

ಮಗೂ: (ಆತ್ಮ) ಸರಿ! ಅಪ್ಪೂ ಕಿತ್ಹಾಗೆ ಕಂಬಿ ಕೀಳೋದೆ ಮೇಲು. (ಪ್ರ) ಎಸ್ಸೆಂನ ಕೇಳು… ಎಲ್ಲ ಹೇಳ್ತಾರೆ.
[ಬೇಗ ಬೇಗ ಹೊರಡುವನು.]

ಕಿಟ್ಟಿ: (ಸ್ಕೌಟು ಮಾಸ್ಟರೊಡನೆ ಒಬ್ಬನೇ) ಸಾರ್?…

ಸ್ಕೌಟು ಮಾಸ್ವರ್: ಏನೋ?

ಕಿಟ್ಟಿ: ಈ… ರ್‍ಯಾಲಿ ಆಂಬೋದ್ಯಾವಾಗ… ಸಾರ್?

ಸ್ಕೌಟು ಮಾಸ್ಟರ್: ಇನ್ನೂ ಗೊತ್ತಿಲ್ಲ ಕಣೋ!

ಕಿಟ್ಟಿ: ಕ್ಷಮ್ಸಿ ಸಾರ್… ನಾಡಿದ್ದು… ಚಿಕ್ದಾಗೊಂದು… ರ್‍ಯಾಲಿ ಇಟ್ಕೊಳ್ಳಿ ಸಾರ್…?

ಸ್ಕೌಟು ಮಾಸ್ಟರ್: ಚಿಕ್ದಾಗೊಂದು ರ್‍ಯಾಲಿ!… ಏನೋ ನೀನ್ ಹೇಳೋದು?… ನಾಡಿದ್ದು ತಾನೇ ಏನ್ ವಿಶೇಷವೋ?

ಕಿಟ್ಟಿ: ನಮ್ಮನೇಗೆ ಶಾಸ್ತ್ರಿಗಳು ಬಂದಿದ್ರು ಸಾರ್… ಬಂದು, ನಾಡಿದ್ದು… ‘ದಿವ್ಯವಾಗಿದೆ’ ಅದೇನೋ ‘ದಿವ್ಯವಾಗಿದೆ’ಯಂತೆ ಸಾರ್… ‘ದಿವ್ಯವಾಗಿದೆ… ಯಾವ ಕೆಲ್ಸ ಬೇಕಾದ್ರೂ ನಾಡಿದ್ದು ಮಾಡಿದ್ರೆ ಒಳ್ಳೇದೂ’ ಅಂತಂದ್ರು ಸಾರ್. ಅದಕ್ಕೇ ನಾನ್ಹೇಳಿದ್ದು ಒಂದು ಚಿಕ್ಕ ರ್‍ಯಾಲಿ ಇಟ್ಕೋತೀರ ನೀವು… ದಿವ್ಯವಾಗಿದೆ… ಲಗ್ನ… ಆಂತ…?

ಸ್ಕೌಟು ಮಾಸ್ಟರ್: ಚಿಕ್ಕ ರ್‍ಯಾಲಿ ಅಂದ್ರೇನೋ?

ಕಿಟ್ಟಿ: ಚಿಕ್ ರ್‍ಯಾಲಿ ಅಂದ್ರೆ (ಯೋಚಿಸುತ್ತ) ಮೂರ್ಟಿನ್ನು ಇಲ್ದಿದ್ರೂನೂವೆ… ಒಂದು ಟಿನ್ನು, at least ಅರ್ಧ ಟಿನ್ನು…

ಸ್ಕೌಟು ಮಾಸ್ಟರ್: ಏನು ಹುಚ್ಚೋ ನಿನಗೆ. ರ್‍ಯಾಲಿ ಅಂದ್ರೆ ಟಿನ್ನುಗಳೂಂತೀಯ… ಲಗ್ನ ಅಂತೀಯ… ದಿನ ದಿವ್ಯವಾಗಿದೇಂತೀಯಾ… ರ್‍ಯಾಲಿ ಅಂದ್ರೇನೋ? ನಿನಗೆ ಇಂಗ್ಲೀಷ್ ಗೊತ್ತೆ?

ಕಿಟ್ಟಿ: ಯಾಕೆ ಸಾರ್! ಆರ್ನೇಫಾರಂವರೆಗೂ ಮಣ್ಣು ಹಾಕಿಧೇನ್ಸಾರ್!

ಸ್ಕೌಟು ಮಾಸ್ಟರ್: ಆಮೇಲೆ?

ಕಿಟ್ಟಿ: ಮನೇಲಿ ಮಣ್ಣಾಗೋಯ್ತು ಸಾರ್… ಸರ್ಕಂಸ್ಟೆನ್ಸಸ್ಸೂ!

ಸ್ಕೌಟು ಮಾಸ್ಟರ್: ಮತ್ತೆ ರ್‍ಯಾಲಿ ಅಂಬೋದು ಇಂಗ್ಲೀಷ್ ವರ್ಡ್ ಕಾಣೋ! ಎಲ್ಲಾದ್ರೂ ಓದಧೀಯಾ… ಇಲ್ಲ ಕಿವಿಲಾದ್ರೂ ಕೇಳಿಧೀಯಾ?

ಕಿಟ್ಟಿ: (ಯೋಚಿಸುತ್ತಾ) ರ್‍ಯಾಲಿ?… ರ್‍ಯಾಲಿ?… ಚೀಫ್ ಸ್ಕೌಟೂ… ಹೈನಸ್ ಬರೋದು! ಎಲ್ಲೋ ಕಿಂಗ್ಸೋ ಕ್ವೀನ್ಸೋ ಬಂದು, ರ್‍ಯಾಲಿ… (ಮುಖದಲ್ಲಿ ಆನಂದವನ್ನು ಪ್ರಕಾಶವನ್ನೂ ತೋರಿಸುತ್ತಾ) ರ್‍ಯಾಲಿ ಗೊತ್ತಾಯ್ತು ಸಾರ್! ಸಿಕ್‌ಸ್ತ್ ಫಾರಂ ಟೆಕ್ಸ್ಟ್‌ನಲ್ಲಿ ರ್‍ಯಾಲೀಂತ ಬರುತ್ತೆ! ಸಾರ್!

ಸ್ಕೌಟು ಮಾಸ್ಟರ್: ಏನೋ ಗೊತ್ತಾಯ್ತು?

ಕಿಟ್ಟಿ: ರ್‍ಯಾಲಿ ಅಂದರೆ ಸಾರ್… ಎಲ್ಲಾ ಸ್ಕೌಟು ಪಟಾಲಂಗಳನ್ನೂ ಜಮಾಯ್ಸೋದು! ಚೀಫ್ ಸ್ಕೌಟುಗ್ಳು… ಹೈನಸ್‌ಗ್ಳು… ಬರ್ತಾರೆ ಅವತ್ತು… ಅವರ್ನ್ ಮೆಲ್ಲಗೆ ಗಿಲೀಟಾಗಿ ಒಳ್ಳೇ ಕೆಸರಿರೋ ಜಾಗಕ್ಕೆ ಕರಕೊಂಡು ಹೋಗಿ ನಂ ಸ್ಕೌಟುಗಳ ತಲೇಲಿರೋ ರುಮಾಲುಗಳನ್ನೆಲ್ಲಾ ಕಿತ್ತು ಆ ಕೆಸರ್ಮೇಲೆ ಹಾಸಿಬಿಟ್ಟು ಕೈಮುಕ್ಕೊಂಡ್‌ ನಿಂತುಕೊಂಡು “ಮಹಾಸ್ವಾಮಿ… ತಾವು ದಯವಿಟ್ಟು ನಮ್ಮ ರುಮಾಲು ಗಳ್ಮೇಲೆ ನಡೀಲೇ ಬೇಕೂಂ”ತ ಹಟ ಹಿಡಿಯೋದು. ಅದಕ್ಕೆ ಮಹಾಸ್ವಾಮಿಗ್ಳು “ಪಾಪ ಬಡ್ಕೋತಾರಲ್ಲಾಂ”ತ ಹಾಗೇ ಮಾಡ್ಬಿಟ್ಟು…ಮೂಗ್ಮೇಲೆ ಬೆರಳಿಟ್ಕೊಂಡು “ಎಲಾ!… ನನ್ಮೋಜಾಗೆ ಮಣ್ ಮೆತ್ಕೊಳ್ಳದ್ಹಾಗೆ… ತಲೇಮೇಲಿದ್ದ ರುಮಾಲ್ನ… ಕೆಸರ್ ಮೇಲ್ ಹಾಸಿದ್ರಲ್ಲ… ಇವರು!” ಅಂತ ತಾರೀಫ್ ಪಟ್ಕೊಂಡು… “ಕೊಡ್ರೋ ಇವ್ರಿಗೆ ಶಾಲುಗಳ್ನ”! ಎಸ್ಸೆಂಗೆ ಶಾಲುಗ್ಳು ಸಾರ್… “ಕೊಡ್ರೋ ಇವರಿಗೆ ಜೋಡು ಅಲ್ಲ ಶಲ್ಜೋಡುಗಳ್ನ: ಸ್ಕೌಟುಗಳ್ಗೆಲ್ಲಾ ದೂದ್ಫೇಡ. ಖಲಾಯಿಸ್ರೋ”’ ಅಣತ ಖುಷಿಪಟ್ಕೊಂಡು ಬ್ರಿಗೇಡ್ಗೆಲ್ಲಾ ಬಕ್ಷೀಸ್ ಬಟ್ವಾಡೆಗೆ ಹುಕುಂ ಕೊಟ್ಬಿಡ್ತಾರೆ… ಅಲ್ವೇ ಸಾರ್?

ಸ್ಕೌಟು ಮಾಸ್ಟರ್: (ಚಕಿತರಾಗಿ) ಯಾರೋ ಹೇಳಿದ್ ನಿನ್ಗೆ… ನಿನ್ ಟೆಕ್ಸ್ಟನಲ್ಲೆಲ್ಲೋ ಬರತ್ತಿದೂ?

ಕಿಟ್ಟಿ: ಬರ್‍ದೇ ಏನ್ಸಾರ್? ವಾಲ್ಟರ್ ಅಂಬೋನು… ಹೀಗೆ ರ್‍ಯಾಲಿ ಮಾಡ್ಬಿಟ್ಟು Sir… ಟೈಟ್ಲು ಕಸ್ಕೊಂಬಿಟ್ಟ ಸಾರ್… ಕಿಂಗ್… ಅಲ್ಲ… ಕ್ವೀನ್‌ ಕೈಲಿಂದ! ಸಾರ್! ಕ್ವೀನೆಲಿಸಬೆತ್ತೂ (Queen Elizabethoo)… ಚೀಫ್‌ ಗರ್ಲ್ ಗೈಡೇ ಸಾರ್‌?!

ಸ್ಕೌಟು ಮಾಸ್ಟರ್‌ : ನೀನೋ ನಿನ್ಬುದ್ಧಿನೋ!… ಒಳೇ ವಿಚಿತ್ರ ಸ್ಕೌಟ್ ಬಂದು ಸೇರ್ಕೊಂಡೆ… ನಿನ್ನಿಟ್ಕೊಂಡು ಏನ್ಮಾಡೋದೋ ಕಾಣೆ!

ಕಿಟ್ಟಿ: ಕ್ಷಮ್ಸಿ ಸಾರ್. ಎನೋ ಹೀಗಿದ್ರೂನೂವೆ… ಸ್ವಲ್ಪ ತಸ್ದಿ ತಕೊಂಡು ತರ್ಬೇತ್ ಮಾಡಿದ್ರೆ… ಒಳ್ಳೇ ಥೇಟಾಗಿ ತಯಾರಾಗ್ತೇನೆ ಸಾರ್ ರ್‍ಯಾಲಿ ಹೊತ್ತಿಗೆ… ಇನ್ನೂ ಎಷ್ಟ್‌ ದಿನ ಸಾರ್ ನಾನ್ ಥೇಟಾಗೋಕೆ… ಆಲ್ಲ … ರ್‍ಯಾಲೀಗೆ?

ಸ್ಕೌಟು ಮಾಸ್ಟರ್: ಇನ್ನೂ ಮೂರು ತಿಂಗಳಿದೆ ಕಾಣೋ… ಫೂಲ್!
[ಸ್ಕೌಟು ಮಾಸ್ಟರ್ ಹೊರಡುವನು.]

ಕಿಟ್ಟಿ: (ತನ್ನಲ್ಲಿ) ಫೂಲೋ ನಾನು! (ತನ್ನನ್ನೇ ನೋಡಿಕೊಳ್ಳುತ್ತಾ)… ನಿಜವೇ ರ್‍ಯಾಲೀಗೆ ಮೊದಲ್‌ದಿನ ಸೇರೋದು ಬಿಟ್ಬಿಟ್ಟು… ಮೂರ್ ತಿಂಗಳ್ ಮುಂಚೇನೆ ಸೇರ್ಕೊಂಡು ಒದ್ದಾಡ್ತೇನಲ್ಲ! ಅವನು ಹೇಳಿದ್ಹಾಗೆ ಫೂಲೇ ನಾನು! ಇನ್ ಮೂರ್ತಿಂಗಳ್ಯಾಕೋ? ಓಹೋ! ಈಗ ಬೇಸ್ಗೆ ಕಾಲ… ಕೆಸ್ರು ಸಿಗೋದು ಕಷ್ಟ… ರ್‍ಯಾಲಿಗೊಂದು ಮಳೆಯಾದ್ರೂ ಬರ್ಬೇಕೋ ಏನೋ! ದೇವರ್‌ದಯ ಹೇಗಿರತ್ತೋ! ಮಳೇಗೇನೂ… ಒಂದು ಗಾಳಿ ಬೀಸಿ ಮೋಡಗ್ಳು ಕವಿತ್ಕೊಂಬಿಟ್ರೆ ಸರಿ!… ಅದಕ್ಕೇ ಆ ಶಾಸ್ತ್ರಿಗಳು ಹೇಳಿದ್ದೋ ಏನೋ … ‘ದಿವ್ಯವಾಗಿಥೇಂ’ತ… ಮಳೆ ಬಂದ್ರೂ ಬರಬಹುದು… ನಾಡಿದ್ದು… ನಾನುಗಾನ ಎಸ್ಸೆಂ ಅಗಿದ್ರೆ ಆಗಾಗ್ಲೆಕೊಳಾಯಿ ನೀರ್‍ನಲ್ಲೇ ಕೆಸ್ರು ಮಾಡ್ಕೊಂಡು… ಬೇಕು ಬೇಕಾದಾಗ ರ್‍ಯಾಲಿ ಇಟ್ಕೊಂಡು…..

(ಹಾಗಯೇ ನಿಧಾನವಾಗಿ ಹೊರಡುವನು)
*****

ದೃಶ್ಯ ೬

[ಮಗುವಿನ ಮನೆಯ ದಿವಾನ್‌ಖಾನೆ – (Drawing Room): ಸೋಫಾಗಳಿಂದಲೂ, ಗುಂಡು ಮೇಜುಗಳಿಂದಲೂ, ಗೊಡೆಗೆ ಹಾಕಿದ ದೊಡ್ಡ ನಿಲುಗನ್ನಡಿಗಳಿಂದಲೂ ತುಂಬಿರುವುದು]

[ಪ್ರವೇಶ: ಕಿಟ್ಟಿ, ಮಗೂ]

ಕಿಟ್ಟಿ : (ಜಿಗುಪ್ಸೆಯಿಂದ ಕೋಣೆಯ ಸುತ್ತಲೂ ನೋಡುತ್ತ) ಥ್ಥೂತ್! ಲೋ! ನಿಮ್ ತಾಯಿ… ನನ್ನೋಡಿ… ‘ಎನೋ ಹೇಳ್ಬೇಕಂತಾರೆ’ ಅಂದ್ಯಲ್ಲ… ಆ ಮರ್ಯಾದೇಗೆ ಬಂದ್ನೇ ಹೊರ್ತು… (ಕೈಯಿಂದ ಕೋಣೆ ಸುತ್ತಲೂ ತೋರಿಸುತ್ತಾ) ಈ ಶನಿಜಾತೀಗೆ ಸೇರಿದವ್ರು ನೀವೂಂತ ಮೊದ್ಲೇ ತಿಳಿದಿದ್ರೆ ಬಾಬಯ್ಯನ ಆಣೆಗೂ ಬರ್ತಿರಲಿಲ್ಲ… ನಿಮ್ಮೀ ಹಾಳು ಬಂಗ್ಲೇಗೆ!

ಮಗೂ: (ವಿಸ್ಮಿತನಾಗಿ) ಶನಿಜಾತಿ!… ನಾವೂ ನಿಮ್ ಜಾತೀನೆ ಕಣೋ… ಬ್ರಾಹ್ಮಣರು… ಸ್ಮಾರ್ತರು… ಕಮ್ಮೆಗಳು!

ಕಿಟ್ಟಿ: ನಾನು ಹೇಳೋ ಜಾತಿ ಆ ಜಾತಿ ಅಲ್ಲಾ ಕಾಣೋ, ಉಲ್ಲು! …ಈಗ್ ನೋಡು ಬ್ರಾಹ್ಮಣ್ರು… ಕ್ಷತ್ರಿಯರು, ಈ ಬಾಬ್ತುಗ್ಳಾಗ್ಲಿ… ವೈಷ್ಣವ್ರು… ಸ್ಮಾರ್ತರು… ಈ ಬಾಬ್ತುಗ್ಳೇ ಆಗ್ಲಿ… ಇವುಗಳ್ನೆಲ್ಲಾ ಏರ್ಪಡಿಸಿದ್ದು ದೇವ್ರು… ಸ್ವಾಮಿಗಳು… ಮಠಾಧಿಪತಿಗಳು… ವಗೈರೆ!… ಈ ಬಾಬ್ತುಗಳೆಲ್ಲಾ ಎಗರಿಹೋಗಿ ಎಷ್ಟೋದಿನಾಗಳಾದ್ವು… ಈಗ ಸದ್ಯ ಇರೋ ಜಾತಿಗಳಿರಡೇ ಎರಡು… ನಾವ್ ನಾವೇ ಏರ್ಪಡಿಸಿಕೊಂಡದ್ದು… ದುಡ್ಡಿರೋವ್ರು… ದುಡ್ಡಿಲ್ದೋರು ಅಂತ… ಅದರಲ್ಲೂ ಇನ್ ಬ್ರಾಹ್ಮಣ್ರಲ್ಲೋ. ದೇವರು ಹಣೇಲಿ ಬರೆದದ್ದು ಪಂಗ್ನಾಮವೇ ಆಗ್ಲಿ… ಅಂಗಾರ ಮುದ್ರೇನೆ ಆಗ್ಲಿ ಅಡ್ಗಂಧವೇ ಆಗ್ಲಿ… ಬಾಹ್ಮಣರಲ್ಲೆರಡೇ ಜಾತಿ!… ಬಡವ್ರು… ಬಡಾಯಿಗಳೂಂತ!… ದುಡ್ದು ಮೈಬೊಗ್ದವ್ರು… ದುಡ್ತಿಂದ್‌ತ್ತಲೆ ಕೊಬ್ದೊವ್ರೂಂತ ಎರಡೇ ಜಾತೀ!!

ಮಗೂ: ತಲೆ ಕೊಬ್ದೌವ್ರೂಂದ್ರೇನೋ?… ನೀನು ಹೇಳೋದೊಂದೂ ಅರ್ಥವಾಗ್ಲಿಲ್ಲ!…

ಕಿಟ್ಟಿ: ಹಾಗಾದ್ರೆ… ನಂ ಶಾಸ್ತ್ರಿಗ್ಳು ಹೇಳೋಹಾಗೆ… ‘ಉದಾಹರಣ ಪೂರ್ವಕವಾಗಿ ಹೇಳು ವಂಥಾವನಾಗುವೆನು… ಕೇಳುವಂಥವನಾಗೋ ಗುಗ್ಗು! ಕಿವಿ ಬಿಚ್ಕೊಂಡು ಕೇಳುವಂಥಾವನಾಗು’!
(ಗೋಡೆಗೆ ತಗಲಿಸಿರುವ ದೊಡ್ಡ ನಿಲುಗನ್ನಡಿಯ ಬಳಿಗೆ ಹೋಗಿ) ಇಲ್ನೋಡೋ!… ಇದ್ಯಾರದೋ ಈ! ಕನ್ನಡಿ?)

ಮಗೂ: ನಮ್ಮಪ್ಪನ್ದು!…

ಕಿಟ್ಟಿ: ನಿಮ್ಮಪ್ಪನ್ದೋ… ಯಾಕೋ ಇದಿವ್ನಿಗೆ?

ಮಗೂ: ಒಳ್ಳೆ ‘ಯಾಕೋ’!… ಯಾಕೇನೋ?… ಮುಖ ನೋಡ್ಕೊಳ್ಳೋಕೆ!…

ಕಿಟ್ಟಿ: (ಎರಡು ಅಂಗೈಗಳನ್ನೂ ಒಂದು ಮೊಳದಷ್ಟು ದೂರದೂರವಾಗಿಟ್ಟುಕೊಂಡು ಕುಲಕಿ ಸುತ್ತಾ) ಹಾಗಾದ್ರೆ… ನಿಮ್ಮಪ್ಪನಿಗೇನ್ ಇಷ್ಟು ದೊಡ್ಡ ತಲೆಕಾಯೇ?…

ಮಗೂ: ಮುಖ ಒಂದೇ ಅಲ್ಲ ಕಣೋ. ಮೈಯೆಲ್ಲಾ ನೋಡ್ಕೋಬಹುದು…

ಕಿಟ್ಟಿ: (ನಗುತ್ತಾ) ಹಯ್ಯೋ ಮಂಕೂ! ಕುತ್ಗೆ ಬಗ್ಗಿಸ್ಕೊಂಡು ತನ್ನ ಕಣ್ಣಿಂದ್ಲೇ ನೋಡಿದ್ರೆ… ಮೈ ಚನ್ನಾಗ್‌ಕಾಣತ್ತೋ… ಇಲ್ಲ… ಕಣ್ಣಡಿ ಎದುರಿಗೆ ಕುಣ್ದಾಡ್ತಾ… ಅದರಲ್ಲಿ ನೋಡ್ಕೊಂಡ್ರೆ ಕಂಡ್ಬರತ್ತೋ ಚೆನ್ನಾಗೀ…? (ತಾತ್ಸಾರದಿಂದ) ಕೈಲಿ ಹುಣ್ಗಿಣ್ಣಿದ್ದರೆ ಹ್ಯಾಗೆ ನೋಡ್ಕೊಳ್ಳೋದೋ ಈ ಕನ್ನಡೀಲಿ?… ಹೇಳ್ತೇನೆ ಕೇಳೋ… ಇದೆಲ್ಲಾ ದುಡ್ಡಿನ ಕೊಬ್ಬು ಕಾಣೋ… ಯಾವ ಮಂಕೋ ಏನೋ ಅಲ್ಲಿ ಆಫೀಸ್‌ನಲ್ಲಿ ಸುರಿಯೋದು ಖಜಾನೆ ದುಡ್ಡು!… ಅದನ್ನ ಬಾಚ್ಕೊಂಬರೋದು… ಅಲ್ಲಿ ಷಾಪ್ನೌನ ಬೊಕ್ಸಕ್ಕೆ ಸುರಿಯೋದು… ಅಲ್ಲಿಂದ ಬಾಚ್ಕೊಂಬರೋದು ಅವನಿಗೆ ಬೇಡದ್ ಸಾಮಾನುಗಳ್ನೆಲ್ಲಾ… ಹೇರಿಸ್ಕೊಳ್ಳೋದು… ಮನೆ ತುಂಬಾ… ದೊಡ್ಡ ಮನುಷ್ಯರ ಜಾತಿ!… ನಮ್ಮಣ್ಣ ಕೂಡ… ನಂಜಾತಿಲ್ಹುಟ್ಟಿದೌನು… ಮಂಡೇಗೆ ಹಣದ್ಕೊಬ್ಬು ಏರತ್ಲೂವೆ… ಜಾತಿ ಖರಾಬಾಗ್ಹೋದ…

ಮಗೂ: ಏನ್ ಜಾತಿ ಖರಾಬಾಗ್ಹೋದ?

ಕಿಟ್ಟಿ: ನಂ ಜಾತಿ ಕೆಟ್ಟು ನಿಂ ಜಾತೀಗೆ ಸೇರ್ಕೊಂಬಿಟ್ಟ… ದೊಡ್ಡ ಮನುಷ್ಯರ ಜಾತೀಗೆ! ನಿಮ್ಹಾಗೆ ಔನೂನು ಗೋಡೆ ಕಟ್ಟಿದ ಮನೆ ಸುತ್ಲೂ… ಇನ್ನೂಂದ್ಗೋಡೆ ಕಟ್ಕೊಂಡು ಕೂತ್ಕೊಂಡಿದ್ದಾನೆ! ಕೂಡ್ಹಾಕ್ತಾ. ಕಾಸಿಗ್ಕಾಸು….”ತಾನೂ ತಿನ್ನ…ಪರರಿಗೂ ಕೊಡಾ”ಂತ… ‘ದಿ ಡಾಗ್ ಅಂಡ್ ದಿ ಮ್ಯಾನೇಜರ್” ಕಥೆ ಬರುತ್ತಲ್ಲಾ ಈಸೋಪ್ಸ್‌ ಫೇಬಲ್ಸಿನಲ್ಲಿ… ಹಾಗೆ… (ಸುತ್ತಮುತ್ತಲೂ ನೋಡುತ್ತಾ) ನಿಮ್ಮ ಜಾತಿಗೆಲ್ಲಾ ಮೋಕ್ಷಕ್ಕೊಂದೇ ಛಾನ್ಸೂ ಕಣೋ! ನಿಂ ಕಾಫಿ ನಿಂ ಕಾಂಪೌಂಡು… ಎರಡೂ ಕಟಾಯಿಸ್ದ್ರೇನೆ ಕರಗೋದು ನಿಂಕೊಬ್ಬು!

[ಒಳಗಿನಿಂದ ಮಗೂ! ಎಂದು ಕೇಳಿಬರುವುದು.]

ಮಗೂ: (ಥಟ್ಟನೆದ್ದು) ಓ! ನಂ ಮದರ್ ಕಣೋ!…(ಗಟ್ಟಿಯಾಗಿ) ಇಲ್ಲಿದೇನಮ್ಮಾ….

ತಾಯಿ: (ಪ್ರವೇಶಿಸಿ) ಬಂದಿದ್ದೀಯಾ… (ಕಿಟ್ಟಿಯನ್ನು ಗಮನಿಸಿ) ನಿನ್ ಸ್ನೇಹಿತನ್ನ ಕರ್ಕೊಂಬಂದಿದ್ದೀಯಾ! (ಕಿಟ್ಟಯನ್ನು ಕುರಿತು ಒಂದು ಸೋಫಾವನ್ನು ತೋರಿಸಿ) ಕೂತ್ಕೋ ಮಗೂ… ಯಾಕೆ ನಿಂತಿದ್ದೀಯಾ?…

ಕಿಟ್ಟಿ: (ಕೈಯಿಂದ ಸೋಫಾ ಕುರ್ಚಿಯನ್ನು ಸೂಚಿಸುತ್ತಾ, ಮುಖವನ್ನು ಸೂರಿಗೆ ಎತ್ತಿ) ಈ ಬಾಬತ್‌ಗಳಲ್ಲೆಲ್ಲಾ ಕುಕ್ಕುರ್ಸೋ ಅಭ್ಯಾಸ ಇಲ್ರಮ್ಮಾ ನನಗೆ; ನೆಟ್ಕೊಂಡಿದ್ರೆ… ನೋಯೋ ಹಾಗೇನೂ ಇಲ್ಲ… ನನ್ನ್ ಕಾಲುಗ್ಳು!… ನಿಂತೇ ಇರ್‍ತೆನಮ್ಮಾ…

ತಾಯಿ: (ಮುಗುಳು ನಗೆಯಿಂದ) ಅಭ್ಯಾಸ ಏನು ಬೇಕಿದಕ್ಕೆ ಮಗೂ?

ಕಿಟ್ಟಿ: ನಂ ಮನೇಲಿ ಈ ಬಾಬತ್ಗಳೇನು ಇಲ್ಲಾಮ್ಮಾ; ನೆಲದಲ್ಹೇ ಕುಕ್ಕರ್ಸೋದು…. ಅದೂ ಅಲ್ದೆ…. ನಿಂ ಜಾತಿಯವ್ರು… ಅಲ್ಲ… ದೊಡ್ಡ ಮನುಷ್ಯರ್ಗಳ ಮನೇಲಿ…ಹೆಜ್ಜೆ ಇಟ್ಟಿದ್ದು ಇದೇ ಮೊದಲ್ ದಫಾ… ಅಲ್ಲಾ… ಸಾರ್ತಿ. ಅಧೂನೂ ನನ್ನ ಖುಷಿ… ಅಲ್ಲ… ನನ್ನ ಇಷ್ಟದ ಮೇಲಲ್ಲಾ. ಈ ಗುಬ್ಬಚ್ಚಿ… ಅಲ್ಲ… ಈ ಮಗುವಿನ ದೋಸ್ತಿ… ಅಲ್ಲ… ಸ್ನೇಹದ ಮೇಲೆ ಬಂದದ್ದು ಇಲ್ಲಿಗೆ…
[ತಾಯಿಯು ವಿಸ್ಮಿತಳಾಗಿ ಕಿಟ್ಟಿಯನ್ನು ರೆಪ್ಪೆ ಮುಚ್ಚದೆ ನೋಡುತ್ತಿರುವಳು.]

ಮಗೂ: (ಘೊಳ್ಳನೆ ನಕ್ಕು) ಈವತ್ತೆಲ್ಲಾ ಕಣ್ಬಿಟ್ ನೋಡ್ತಿದ್ರೂ… ನಂ ಕಿಟ್ಟೀನ್ ಸ್ವಭಾವ ಗೊತ್ತಾಗೋದಿಲ್ಲಮ್ಮ ನಿನ್ಗೆ… ಅವನು ಬಲೂ ಪ್ರೌಡೂ… ನಂ ಜಾತೀ ಅಂದ್ರೆ ಬೆಂಕಿ ಔನಿಗೆ…

ತಾಯಿ: ’ನಂ ಜಾತಿ’! ಯಾಕೆ ಈ ಮಗೂನೂ ಬ್ರಾಹ್ಮಣರ ಮಗು ಅಲ್ವೇ?

ಮಗೂ: (ಬದಲು ಹೇಳಲುದ್ಯುಕ್ತನಾದ ಕಿಟ್ಟಿಗೆ ಅಡ್ಡಮಾತಾಗಿ) ಸ್ವಲ್ಪಿರು ಕಿಟ್ಟಿ!… ನಾನೇ ಎಕ್ಸ್‌ಪ್ಲೇನ್ ಮಾಡ್ತೇನೆ! ದೊಡ್ಕಥೇನಮ್ಮ ಅದು (ತಾಯಿಯನ್ನು ಮೆಲ್ಲಗೆ ಸೋಫಾ ಮೇಲೆ ಕೂಡಿಸುತ್ತಾ) ಕೂತ್ಕೋಮ್ಮ ಹೇಳ್ತೇನೆ…(ತಾಯಿಯ ಪಾದಗಳ ಹತ್ತಿರ ನೆಲದ ಮೇಲೆ ಕುಳಿತು ಕೊಂಡು ತನ್ನ ಪಕ್ಕವನ್ನು ಸೂಚಿಸುತ್ತಾ) ಕಮಾನ್ (come-on) ನೆಲ ಕಿಟ್ಟೀ! ಕೂತ್ಕೋ!… ನಿಂ ಜಾತಿ ಮನೆಗಳಲ್ಲೂ ನೆಲ ಇಧೇ ಅಲ್ವೇ.
[ಕಿಟ್ಟಿಯು ಮೋರೆಯನ್ನು ಸೊಟ್ಟಮಾಡಿಕೊಂಡು ಕೂರುವನು.]

ತಾಯಿ: (ಮುಗುಳು ನಗೆಯಿಂದ) ಏನ್ಮಗೂ… ಜಾತಿ… ಜಾತೀನ್ನೋದು?

ಮಗೂ: ಕೇಳಮ್ಮಾ… ಕಿಟ್ಟಿ ಲೆಕ್ಕದ ಪ್ರಕಾರ… ಮೊದಲು ನಾವೆಲ್ಲ ಬ್ರಾಹ್ಮಣರ ಜಾತೀಗ್‌ ಸೇರಿದ್ರೂನೂವೆ… ಈಗಿನ ಕಾಲ್ದಲ್ಲಿ… ಬ್ರಾಹ್ಮಣರಲ್ಲಿ ಕೆಲವ್ರು ಜಾತಿ… ಖರಾಬಾಗಿ ಹೋಗ್ಬಿಟ್ಟಿದ್ದಾರೆ…

ತಾಯಿ: (ವಿಸ್ಮಿತಳಾಗಿ) ಜಾತಿ ಖರಾಬ್ ಅಂದ್ರೇನೋ?… ‘ಖರಾಬು’?… ಎಲ್ಲಿ ಕಲೀತೀರೋಪ್ಪ ಈ ಮಾತುಗಳೆಲ್ಲಾ?… ಖರಾಬು ಅಂದ್ರೇನೋ?.

ಮಗೂ: ಖರಾಬು ಅಂದ್ರೆ ಹಾಳಾಗ್‌ಹೋಗೋ… ಅಲ್ಲ… (ಕಿಟ್ಟಿಗೆ) ಕರೆಕ್ಟ್‌ ಮೀನಿಂಗ್ ಏನ್ ಕಿಟ್ಟಿ ಖರಾಬ್ಗೆ?

ಕಿಟ್ಟಿ: (ಗುಸುಗುಟ್ಟುತ್ತಾ) ಒಳ್ಳೇ ಕಾಟಾನೋ ನಿಂದು! ಖರಾಬಾಗೋದು ಅಂದ್ರೆ… ಕೆಟ್ಹೋಗೋದು… ಜಾತಿ ಕೆಟ್ಹೋಗೋದು… ಯಾಕೆ ಬಿಚ್ತೀಯೋ ಈ ಕಂತೆನೆಲ್ಲಾ ಈಗ?

ಮಗೂ: (ತಾಯಿಗೆ) ಜಾತಿ ಕೆಟ್ಹೋಗಿಬಿಟ್ಟಿದಾರೆ! ಇದಕ್ಕೆಲ್ಲಾ ಕಾರ್ಣ ದುಡ್ಡಂತೆ?… ದುಡು ಕೈ ಸೇರುತ್ಲುನೂವೆ… ಮಂಡೆ ತುಂಬಾ ಕೊಬ್ಬು ತುಂಬಿಸಿಬಿಟ್ಟು… ಬ್ರಾಹ್ಮಣ ಜಾತಿ ಕೆಡಿಸಿ… “ಬಡಾಯ್ ಜಾತೀಂ”ತ ಇನ್ನೊಂದು ಜಾತಿಗೆ ಬಿಡುತ್ತಂತೆ… ದುಡ್ಡು… ಇವರಣ್ಣಾನೂ ಇವ್ರ ಜಾತೀಲೆ ಹುಟ್ಟಿ ಬೆಳ್ದು, ಅವನಿಗ ದುಡ್ಡು ಸೇರತ್ಲೂನೂವೆ… ತಲ್ಕಾಯಿ ತುಂಬಾ… ಕೊಬ್ಬು ತುಂಬ್ಕೊಂಡ್‌ ಬಿಟ್ಟು ನಂ ಜಾತೀಗೆ ಇಳಿದ್ಬಿಟ್ಟಿದಾನಂತೆ ಈಗ!

ತಾಯಿ: ಇವರಣ್ಣ? (ಕಿಟ್ಟಿಗೆ) ಹೆಸರೇನ್ ಮಗೂ… ಏನ್ಕೆಲ್ಸಾ ನಿಮ್ಮಣ್ಣನಿಗೆ?

ಕಿಟ್ಟಿ: (ನೀರಸವಾಗಿ) ಕಛೇರಿ ಕೆಲ್ಸಾಮ್ಮ… ಕಮೀಷ್‌ನೆರಿ ಕೆಲ್ಸ!

ತಾಯಿ: ಹೆಸರೇನ್ ಮಗೂ?

ಕಿಟ್ಟಿ: ರಾಮೂಂತ ಮನೇಲಿ ಕೂಗ್ತಿದ್ದದ್ದು ಮೊದಲು… ಈಗ ಸಿ. ಆರ್. ರಾಮಚಂದ್ರಯ್ಯ. ಬಿ.ಎ.. ಎಸ್ಕ್ವಯರ್, ಪಸ್ಕ್ವಯರ್… ಲೊಟ್ಟೂ ಲೊಸ್ಕೂಂತ… ಬಾರುದ್ದ ಬಾಲಂಗುಂಚಿ ಕಟ್ಕೊಂಡು ಕೂತಿದಾನೆ… ಬಸ್ವನ್‌ಗುಡೀ ಬಂಗ್ಲೇಲಿ…!

ತಾಯಿ: ಓಹೋ! ಗೊತ್ತಾಯ್ತು, ಮಗೂ!… ಅತನ್ನ ತಾನೇನೋ… ನಿಂ ತಂದೆ… “ಬಲು ಗಟ್ಟಿಗಾ ಅತೀ ಬುದ್ಧೀ” ಅಂತಂದದ್ದು?

ಕಿಟ್ಟಿ: “ಅತೀ ಬುದ್ಧೀಂದ್ರೆ” ಅವನೇ ಇರಬೇಕಮ್ಮಾ! ಜಗತ್ನಲ್ಲಿ ಯಾವ ಬಾಬತ್ನಲ್ಲೂ… ಅತಿ… ನಮ್ಮಣ್ಣ!

ತಾಯಿ: (ಮಗುವಿಗೆ) ಹಾಗಾದ್ರೀ ಮಗೂ… ಬಸವನಗುಡೀಲಿದ್ಕೊಂಡು ನಿನ್ ಜೊತೇಲಿ ಹ್ಯಾಗೆ ಬರೋಕಾಗುತ್ತೆ… ದಿನಾನು?

ಮಗೂ: ಬಸವನ್ಗುಡೀಲಿರೋದು… ಇವರ ಅಣ್ಣಾಮ್ಮ! ಕಿಟ್ಟಿ ಮನೆ ನಂಪೇಟೇಲೇ!

ತಾಯಿ: ಹಾಗಾದ್ರೆ… ನಿಂ ಜನಗಳ್ನ ಬಿಟ್ಟು… ನೀನೆಲ್ಲಿಧೀಯಾ ಮಗೂ?

ಮಗೂ: ಕಿಟ್ಟೀ ಜನಗಳೆಲ್ಲಾ ಇಲ್ಲೇ ಇಧಾರಮ್ಮಾ!… ಅವರಣ್ಣಾ ಮಟ್ಗೆ… ಜಾತಿಕೆಟ್ಟು… ಬಿಟ್ಟ್‌ಹೋದ್ದು… ಬಂಗ್ಲೇಗೆ. ಅಲ್ವೇ ಕಿಟ್ಟೀ… (ಮೆಲ್ಲಗೆ ಕಿಟ್ಟಿಯ ಹೆಗಲ ಮೇಲೆ ಕೈ ಹಾಕಿಕೊಂಡು) ಕಿಟ್ಟೀಗೆ ಪಾಪ, ತಾಯಿ ಇಲ್ಲಾಮ್ಮಾ… ಮತ್ತೆ ಅವರಕ್ಕನೂ…

ಕಿಟ್ಟಿ: (ಮಗುವಿನ ಕೈಯನ್ನೊದರಿ) ಸಾಕು ನಿಲ್ಸೋ…
[ಥಟ್ಟನೆದ್ದು ಗೋಡೆ ಹತ್ತಿರ ಹೋಗಿ ಮುಖವನ್ನು ಗೋಡೆ ಕಡೆಗೆ ತಿರುಗಿಸಿ ಪಟವೊಂದನ್ನು ನೀರಸವಾಗಿ ಗಮನಿಸುತ್ತಿರುವನು… ಮಗೂ. ತಾಯಿಯ ಕಿವಿಯಲ್ಲಿ ಗುಸುಗುಟ್ಟುವನು.]

ತಾಯಿ: (ಥಟ್ಟನೆದ್ದು ಮುಖದಲ್ಲಿ ಪಶ್ವಾತ್ತಾಪವನ್ನು ಪ್ರಕಟಿಸುತ್ತಾ. ಕಿಟ್ಟಿ ಇರುವ ಕಡೆಗೆ ಬಂದು)… ಇದ್ಯಾಕ್ ಮಗೂ?… ನಮ್ಹುಡುಗ… ಮನೇ ಮಾತು ಎತ್ತಿದಾಂತ. ಕೋಪವೇ?

ಕಿಟ್ಟಿ: (ದೈನ್ಯದಿಂದ) ಕೋಪ ಏನಮ್ಮಾ…

ತಾಯಿ: (ವಿನಯವಾಗಿ) ಇನ್ಯಾಕೆ ಎದ್ಬಂದದ್ದು ಮಗೂ?

ಕಿಟ್ಟಿ: (ಒಣಗಿದ ಸ್ವರದಿಂದ) ಏನೂ ಇಲ್ಲಮ್ಮಾ… ನಂ ತಾಯಿ ಜ್ಞಾಪಕ ಬಂದು…

ತಾಯಿ: (ಹತ್ತಿರ ಬಂದು. ಕಿಟ್ಟೆಯ ತಲೆಯನ್ನು ಸವರುತ್ತಾ ಮೃದುವಾಗಿ) ಪಾಪ …ಏನು ಮಾಡೋದಪ್ಪ… ಈ ಹಾಳು ಪ್ರಪಂಚದಲ್ಲಿ ಹುಟ್ಟಿದ ಮೇಲೆ… ದೇವ್ರು ಏನ್‌ ಕಷ್ಟಗಳನ್ನು ಕಳಿಸಿದ್ರೂನೂನೆ ಅನುಭವಿಸಿಯೇ ತೀರಬೇಕಪ್ಪಾ! ಆಕೇನೂ ಪಾಪ…. ಮನೇಲಿ ಮಕ್ಕಳ್ನ ಇಟ್ಬಿಟ್ಟು ಹೋಗೋವಾಗ ಏಷ್ಟು ಸಂಕಟ ಪಟ್ಟಿರಬೇಕೋ ಕಾಣೆ!

ಕಿಟ್ಟಿ: (ತುಳುಕಿ ಬರುವ ದುಃಖವನ್ನು ಆಡಗಿಸಲಾರದೆ) ಹೋಗೋ ಸಂಕ್ಟ ಒಂದೇ ಇದ್ದಿದ್ರೆ… ಎಷ್ಟೋ ಮೇಲಾಗಿರ್ತಿತ್ತಮ್ಮಾ!… ಆದೊಂದೆ ಅಲ್ದೆ… ಮನೆಲೆಷ್ಟೋ ಗೋಳುಗ್ಳೆಲ್ಲಾ ನೋಡೀ… ಬದುಕ್ಬೇಕೂಂಬೋದೇ ಆಸೆ ಕೂಡ ಇಲ್ಲದ ಸ್ಥಿತೀಗೆ ಬಂದುಬಿಟ್ಳಮ್ಮಾ….

ತಾಯಿ: (ಕಿಟ್ಟಿಯನ್ನು ಕೈ ಹಿಡಿದು ಕರೆದುಕೊಂಡು ಹೋಗಿ ಸೋಫಾವಿನಲ್ಲಿ ಮೆಲ್ಲಗೆ ಕೂಡಿಸಿ ಪಕ್ಕದಲ್ಲಿ ಕುಳಿತು ಅವನ ತಲೆಯನ್ನು ಸವರುತ್ತಾ) ತ್ಸು! ತ್ಸು! ತ್ಸು! ಎಷ್ಟ್ ದಿನ ಆಯ್ತು ಮಗು… ನಿಂ ತಾಯಿ ಹೋಗಿ? ಅದೂ ಅಲ್ದೆ ನಿಂ ಭಾವಾನೂ ಹೋಗ್ಬಿಟ್ಟಾಂತಾನಲ್ಲ ನಮ್ಮಗೂ? ಇದ್ಯಾವಾಗ?

ಕಿಟ್ಟಿ: ಯಾವಾಗೇನಮ್ಮಾ… ಅದೇ… ಆ ಇನ್‌ಫ್ಲುಯೆಂಜಾ ಗಲಾಟೇಲಿ! (ಮೆಲ್ಲಗೆದ್ದು ನಿಂತು ಕೊಂಡು ಮುಖವನ್ನು ತಿರುಗಿಸಿಕೊಂಡು) ಮೊದಲು ನಮ್ಮಮ್ಮನಿಗೇನೆ ಬಂದದ್ದು ಜ್ವರ… ಆಗ ನಂ ಮನೇಲಿ… ನಾನು, ನಮ್ಮಪ್ಪ, ನಮ್ಮಮ್ಮ…. ಮೂರ್ ಜನಾನೇ ಇದ್ದದ್ದು ಮನೇಲಿ… ನಮ್ಮಮ್ಮ…. “ಅಕ್ಕನಿಗೇನೂ ಬರೀಬೇಡಾ… ಬೆದರಿಗಿದರ್‍ಯಾಳು” ಅಂತಂದ್ಲು… ಅವ್ಳಮಾತು ಕೇಳದ ನಮ್ಮಪ್ಪ…. ಏನೋ! ಹ್ಯಾಗಿರುತ್ತೋಂತ ಹೆದರ್ಕೊಂಡು… ಬರ್ದೇ ಬಿಟ್ಟ… ನಮ್ಮಕ್ಕನಿಗೆ… ಬರದ ಮಾರ್ನೆ ದಿನ ಅವನೂ ಬಿದ್ಗೊಂಡ… ಆದ್ರೂನೂ. ಅಲ್ಲಿ, ಇಲ್ಲಿ, ಓಡಾಡಿ… ಔಷ್ದಿ ಗಿವ್‍ಷ್ದಿ… ಸಂಪಾದಿಸ್ಕೊಂಡು ನೋಡ್ಕೊಳ್ತಾ ಇದ್ದೆ… ತಕ್ಮಟ್ಟಿಗೆ… ಅಷ್ಟಲ್ಲೇ…. ನಮ್ಮಕ್ಕ… ಅವಳೊಬ್ಬ ಮಂಕು… ‘ಅಮ್ಮನಿಗ್ ಗುಣವಾದ್ದಕ್ಕೆ ಕಾಗ್ದ ಬರ್ಲಿಲ್ಲಾಂ’ತ ಬೆದರ್ಕೊಂಡು ಗೋಳಾಡೋದ್ ನೋಡ್ಲಾರ್ದೆ… ನಂಭಾವ ಕೋಲಾರ್ದಲ್ಲಿ ಲಾಯರಿ ಮಾಡ್ತಿದ್ದಾಮ್ಮಾ ಅಕ್ಕನ್ನೂ ಅವಳ ಕೂಸ್ನೂ ಕರ್ಕಕೊಂಡ್ ಬಂದ್ಬಿಟ್ಟಾಮ್ಮಾ ಇಲ್ಲಿಗೆ… (ದುಃಖವನ್ನು ತಡೆಯಲಾರದೆ) ಬಂದು ಮನೇಲಿ ಹೆಜ್ಜೆ ಇಟ್ಟುದಿನಾನೆ ಅವ್ನೂ ಬಿದ್ಕೊಂಡಾಮ್ಮ! ಏನ್‌ ಶನೀ ಜ್ವರವೋ ಕಾಣೆ? ಒಂದ್ವಾರ್‍ದಿಂದ ನರಳ್ತಿದ್ದ… ವಯಸ್ಸಾದೋರು… ಅಮ್ಮನೂ ಆಪ್ಪನೂ ಗಟ್ಟಿಯಾಗಿದ್ರೂ… ಆವನು ಜ್ವರಾಬಂದ ಮಾರ್ನೇ ದಿನಾನೆ ಪ್ರಾಣ ಬಿಟ್ಟ!… ಅಮ್ಮನ ಗೋಳೋ… ಹೇಳೋಕ್ಕಾಗ್ದು… ಅವಳೊಂದ್ಕಡೆ ನರಳ್ತಿದ್ದಾಗ… ಡಾಕ್ಟರು… ಪಾಪ!… ದುಡ್ಡು ಕೊಟ್ರೇನೆ ಔಷ್ದ ಅಂತಾನೆ… ಮನೆಲೋ, ಗಂಜಿ ಮಾಡೋಕ್‌ ಗತಿಯಿಲ್ಲ ಇನ್‌ ನಮ್ಮಣ್ಣನ್ ಮಾತೆತ್ತಿದ್ರೋ, ನಮ್ಮಪ್ಪನಿಗೆ ಬೆಂಕಿ… ಅವನಿಗ್ಮೊದ್ಲು, ಯಾವಾಗ್ಲೋ ಹೋಗಿದ್ದಾಗ, ನೋಡೋಕ್ ಪುರ್ಸೊತ್ತಿಲ್ಲಾಂತ ನಮ್ಮಣ್ಣ ಅಂದದ್ದು ಜ್ಞಾಪ್ಕ… ನನ್ಗೋ… “ಎಷ್ಟು ಪಾಪಿಯಾದ್ರೂನೂವೆ… ಮನೇಲಿ ಹುಟ್ಟಿ ಬೆಳ್ದದ್ದು ಮರ್ತ್‌ಬಿಟ್ಟು ಸಹಾಯ ಮಾಡ್ದೆ ಇದ್ದಾನೆ! ಗಂಜೀಗೂ, ಔಷಧಕ್ಕೂ ಗತೀ ಇಲ್ದೆ ಸಾಯ್ತಾ ಬಿದ್ದಿರೋ… ಹೆತ್ತೋರ್ಗೆ… ಧರ್ಮಕ್ಕಾದ್ರೂ!” ಅಂಬೋ ಹುಚ್ಚಿನ ಮೇಲೆ ನಮ್ಮಣ್ಣನ ಹತ್ರ ಹೋದೆ… ಅವನ್ನ ಬೈದು ಏನ್‌ ಪ್ರಯೋಜ್ನ? ಅವ್ನು ಮಕ್ಕಳುಮರಿಯೋನು! ಈ ಜ್ವರಾ ಅಂಟುರೋಗ ಅಂತ್ಲೋ ಯೇನೋ… ಗೇಟ್ ಒಳ್ಗೇ ನಿಂತ್ಕೊಂಡು… “ಅವನಿಗೆ ಬರೋ ಸಂಬ್ಳಾ… ಎಲ್ಲ… ಅವನಂತಸ್ತಿಗೆ ಸರಿಯಾಗಿ ಮಾಡೊ ಖರ್ಚಗೇ ಆಗುತ್ತೇಂದ್ಬಿಟ್ಟ! ಇನ್ನೇನು! ಭಾವ ಸತ್ತಾ!… ಅವನ ಸಾವ್ನೂ ನಮ್ಮಕ್ಕನ ಹಣೇ ಬರಹಾನ್ನೂ ಜ್ಞಾನ ತಪ್ಪಿರೋ ನಮ್ಮಪ್ತನ ಸ್ಥಿತಿನೂ ಇದೆಲ್ಲಾ ನೋಡ್ತಾ… ಬಡ್ಕೊಳ್‌ತಾ ಪ್ರಾಣ ಬಿಟ್ಲು ನಮ್ಮಮ್ಮನೂವೆ! (ಬಿಕ್ಕಿ ಬಿಕ್ಕಿ ಅಳುತ್ತಾ)… ನಮ್ಮಕ್ನೋ, ಗಂಡನ್ನೂ ಕಳ್ಕೊಂಡು… ತಾಯೀನೂ ಕಳ್ಕೊಂಡು ಕೂಸ್ನ ಒಂದ್ಕಡೇ ಕಿತ್ತ್ ಎಸೆದ್ಬಿಟ್ಟು… ತಲೆ ಚಚ್ಕೊಳ್ತಿದ್ಲು… ಒಂದು ಮೂಲೇಲಿ!… ಏನುಮಾಡೋದಮ್ಮಾ ನಾನೀ ಗಲಾಟೇಲಿ!? ನಂ ಭಾವನ್ನ ಸಾಗ್ಸಿ ಅವನಿಗ್ಬೇಕಾದ ಸೌದೆ ಸಂಪಾದ್ಸಿ… ಅವನ್ಸುಟ್ಟು… ತಿರುಗ್ಬಂದ ಮಾರ್ನೆದಿನಾನೆ… ನಮ್ಮಮ್ಮನೂ ಹೋದದ್ದು… ಏನ್ ಮಾಡೋದ್ ನಾನು!… ಅವಳನ್ನ್ ಸಾಗ್ಸೋದೆ? ಜ್ಞಾನ ಇಲ್ದೆ ಬಿದ್ದಿದ್ದ ನಮ್ಮಪ್ಪನ್ನ ನೋಡಿಕೊಳ್ಳೋದೆ? ನಮ್ಮಕ್ಕನ್ಗೆ ಧೈರ್ಯ ಹೇಳೋದೇ… ಇಲ್ಲ… ಆ ಕಿರ್ಲ್‌ತಿದ್ದ ಕೂಸನ್ನ ಸುದಾರ್ಸೋದೇ… ದಿಕ್ಕೇ ತೋಚದೆ ಹೋಯ್ತು (ಬಿಕ್ಕಿ ಬಿಕ್ಕಿ ಅಳುವನು. ಮಗುವಿನ ತಾಯಿಯು ಹತ್ತಿರ ನಿಂತು ಅವನ ತಲೆಯನ್ನು ಸವರಲು… ಅಲ್ಪ ರೋಷದಿಂದ) ನಂ ಮನೆ ಗೋಳ್ ನಿಮಗ್ಯಾಕಮ್ಮಾ… ನನಗ್ಯಾಕೆ ನೀವ್ ಹೇಳಿ ಕಳ್ಸಿದ್ದು?

ತಾಯಿ: (ಕಿಟ್ಟಿಯ ಕೈಯನ್ನು ಹಿಡಿದು) ಕೂತ್ಕೋ ಕಿಟ್ಟಿ ಹೇಳ್ತೇನೆ! ಕಿಟ್ಟೀಂತ ಕೂಗ್ಬಹುದೇ ನಿನ್ನ?

ಕಿಟ್ಟಿ: ಕೂಗೀಮ್ಮಾ….ಅದಕ್ಕೇನು?

ತಾಯಿ: (ಕಿಟ್ಟಿಯನ್ನು ಸೋಫಾ ಮೇಲೆ ಎಳೆದು ಕುಳ್ಳಿರಿಸಿ ಪಕ್ಕದಲ್ಲಿ ಕುಳಿತು)…ಈಗ ನೋಡು ಕಿಟ್ಟೀ! ನಮ್ಮಗು… ಈ ಬಾಯ್ ಸ್ಕೌಟೂ ಅಂತಾರಲ್ಲ… ಇದಕ್ಕೆ ಸೇರಿ ಒಂದು ವರ್ಷಕ್ಮೇಲೆ ಆಗ್ತಾ ಬಂತು… ಆದ್ರೂನೂವೆ… ಇವನ ಜೊತೇಲಿರೂವ್ರಲ್ಲಿ… ಒಬ್ಬನ್ಮಾತು… ಒಬ್ಬನ್ಹೆಸ್ರು ಮನೇಲಿ ಆಡಿದ್ದಿಲ್ಲ! ಆದ್ರೆ ಈಗ ಒಂದ್ ಹದ್ನೈದ್ ದಿವಸದಿಂದ… ನೋಡು… ಹಗಲು ರಾತ್ರಿ… “ನಂ ಕಿಟ್ಟಿ ಹೀಗೆ” “ನಂ ಕಿಟ್ಟಿ ಹಾಗೆ”… “ನಮ್ಮ ಕಿಟ್ಟಿ ಇವತ್ತಿದಂದಾ”… “ನಂ ಕಿಟ್ಟಿ ಇವತ್ತಿದ್ಮಾಡ್ದಾ”ಂತ ಯಾವಾಗ್ಲೂ ನಿನ್ಹೆಸ್ರೇ ಅವನ್ಬಾಯಲ್ಲಿ!… ಯಾವತ್ತೂ ಇಲ್ದೇ ಈ ಹದಿನೈದ್ ದಿವಸದಲ್ಲಿ… ನನ್ನ ಮಗನ ತಲೆ ತುಂಬಾ ತುಳುಕ್ತಿರೋ ಈ ಅದ್ಭುತ ಸ್ನೇಹಿತನ್ನ… ಹ್ಯಾಗಾದ್ರೂ ನೋಡ್ಬೇಕೂಂತ ನನ್ನಾಶೆ… ಈಗ ನಿನ್ನ ನೋಡಿ ನನ್ನಾಶೆ ಪೂರೈಸ್ಕೊಂಡೆ! ದೇವ್ರು… ನಂ ಗುಣ… ನಂ ಧೈರ್ಯ… ನಂ ಧಾರಡ್ಯಾನ ಪರೀಕ್ಷೆ ಮಾಡೋಕೆ ಕಳ್ಸೋ ಕಷ್ಟಗಳನ್ನ ಹ್ಯಾಗಾದ್ರೂ ಅನುಭವಿಸಿಯೇ ತಿರ್ಬೇಕೂಪ್ಪ!… ನನ್ಗಿನ್ನೂ ಅರ್ಥ್‌ವಾಗಿಲ್ಲ… ಇಸ್ಟ್ ಘಟ್ಟಿಗ… ಇಷ್ಟ್ ಬುದ್ಧಿವಂತ… ಇಷ್ಟ್ ಚಿಕ್ ವಯಸ್ನಲ್ಲೇ ಇಷ್ಟು ದೊಡ್ಡ ಕೆಲ್ಸಕ್ಬಂದವ್ನು!… ಹೆತ್ತವ್ರಿಗ ಕಷ್ಟ ಕಾಲ ಬಂದಾಗ… ಹೃದಯಾನ ಘಟ್ಟಿ ಮಾಡ್ಕೊಂಡು… ಸ್ವಲ್ಪವೂ ಸಹಾಯ ಮಾಡ್ದೆ… ಹ್ಯಾಗೆ ಸುಮ್ನಿದ್ದ?… ಚಿಕ್ಕಂದ್‌ನಲ್ಲೇ… ಒಂದ್‌ವೇಳೆ ಮನೇಲಿ ಜಗ್ಳ ಗಿಗ್ಳ ಏನಾದ್ರೂ ಅಡ್ಕೊಂಡು… ಮನೇ… ಬಿಟ್ಟು ಹೋಗ್ಬಿಟ್ನೇ?

ಕಿಟ್ಟಿ: ಚಿಕ್ಕಂದಿನಲ್ಲೇ ಜಗ್ಳ ಆಡ್ಕೊಂಡ್ ಹಾಳಾಗಿದ್ರೆ… ಎಷ್ಟೊ ಮೇಲಾಗಿತ್ತೂಮ್ಮಾ! ನಾವೀಗಿರೋ ಸ್ಥಿತೀಗೆ ಬರ್ತಿರಲಿಲ್ಲ!… ನೀವ್ ಹೇಳಿದ್ರಲ್ಲ… “ಅತೀ ಬುದ್ಧೀ”ಂತ… ಅದ್ರಿಂದಲೆ ಬಂದದ್ ಈ ಅವಸ್ಥೆಯೆಲ್ಲಾ!… ಮೊದಲು ಅವನು ಲೋವರ್ ಸೆಕೆಂಡರಿ ಫಸ್ಟಾಗಿ ಪಾಸ್ ಮಾಡ್ದಾ… ನಮ್ಮಪ್ಪ… “ಯಾವ ಪುಣ್ಯ ಮಾಡಿದ್ವೋ ಕಾಣೆ! ಬೃಹಸ್ಪತಿ ಬಂದ್ ಸೇರ್ಕೊಂಡಿದಾನೆ ನಂ ಕುಟುಂಬ್ದಲ್ಲೀ… ಇನ್ನ್ ಇವ್ನಿಗೆ ಮುಂದಕ್ಕ್ ಬರೋ ದಾರೀನ ತೋರಿಸಿ ತೋಡಿದ್ರೇನೇ ನನ್‌ ಜನ್ಮ ಸಾರ್ಥಕ್ವಾಗತ್ತೇಂದ್ಕೊಂಡು… ಷುರು; ಯಾವ್ದಕ್ಕೂ ನಮ್ಮಣ್ಣೇ ತಾರೀಫ್ ಮಾಡೋದಕ್ಕೆ! ಇನ್ ಮೆಟ್ರಿಕ್‍ಲೇಷನ್ ಫಸ್ಟ್‌ಕ್ಲಾಸಿನಲ್ಲಿ ಗೆದ್ನೋ ಇಲ್ವೋ. ಬಂತು ಮನೇಗೆ ಬೇನೆ!… ನಮ್ಮಪ್ಪ ನಂ ಹಳ್ಳೀಲಿ ನಮ್ಮದು ಹೊಲ-ಗದ್ದೇನ ಮಾರ್ಬಿಟ್ಟು ನಮ್ಮೂರು ಕಾಲೇಜ್ ಸಾಲ್ದೂಂತ ಅವನ್ನ ಮದ್ರಾಸಿಗೆ ಕಳಿಸ್ದ… ಇದ್ದ ದುಡ್ಡೆಲ್ಲಾ ಖರ್ಚೂನು ಮಾಡ್ದ… ಎಫ್.ಏ. ನೂ ಫಸ್ಟಾಗಿ ಮಾಡ್ದ! ಇನ್ ಬಿಡ್ಗಾಸ್ ಬಾಕಿಯಿಲ್ಲ. ಇನ್ನು ಬಿ.ಏ.ಗೆ ದಾರಿ ಏನೂಂತ ಔನು… ‘ಇದ್ ಸಾಧಾರಣ ಬುದ್ಧಿ ಅಲ್ಲ… ಇನ್ ಇವ್ನಿಗೆ ಹ್ಯಾಗಾದ್ರೂ ದುಡ್ಡೊದಗಿಸ್ಕೊಟ್ರೆ ಬಲು ಮುಂದಕ್ಬಂದ್ಬಿಡ್ತಾನೆ ಹುಡ್ಗಾಂ’ಂತ ನಮ್ಮಮ್ಮನ್ವೊಡ್ವೆಗಳ್ನೆಲ್ಲಾ ಮಾರಿ ಔನ್ ಬಿ.ಎ., ಖರ್ಚೂ ತೀರ್ತು. ಅದ್ನೂ ಫಸ್ಟಲ್ ಮಾಡ್ಕೊಂಡು ಮನೆಗ್ಬರುತ್ಲೂ ನೂವೆ ನಂ ಹುಡ್ಗ ದಿವಾನ್ಗಿರಿವರ್ಗೂ ಮುಟ್ಟೋದ್ರಲ್ಲಿ ಸಂದೇಹವೇನೂ ಇಲ್ಲ!… ಕಮಿಷನ್ರಿ… ಪರೀಕ್ಷೆಗೆ… ಸಿವಿಲ್‌ ಸರ್ವಿಸ್ ಪರೀಕ್ಷೆ ಅಂತಾರಲ್ಲಮ್ಮ ಅದು… ಆ ಪರೀಕ್ಷೇಗೆ ಹೇಗಾದ್ರೂ ಕಳ್ಸೇ ಬಿಡ್ಬೇಕೂಂತ “ಕತ್ತಿಗೆ ಕರೀಮಣಿ ಸಾಕೂ”ಂತ ನಮ್ಮಮ್ಮನ್‌ ತಾಳೀ ಮಾರಿ… ಪರೀಕ್ಷೆಗೆ ದುಡ್ಕಟ್ಟಿದ
ನಮ್ಮಪ್ಪ!… ಇನ್ನೇನು ಆ ಪಾಸ್ನೂಮಾಡ್ಡ… ಕೆಲ್ಸಾನೂ ಸಿಕ್ತು… ನಮ್ಮನೇಗೂ ಅವನ್ಗೂ ಇದ್ದ ಋಣಾನುಬಂಧಾನೂ ತೀರ್ತು!

ತಾಯಿ: ತೀರ್‍ತು ಅಂದ್ರೆ?

ಕಿಟ್ಟಿ: ಅಂದ್ರೆ ಏನೇ? ನಂಜಾತೀವರ್‍ನ… ಅಲ್ಲ… ಬಡವರ್‍ನ… ಬೀದೀಲ್ ನೋಡೋಕ್ಕೂಡ ಅಸಹ್ಯಪಡೋ ದೂಡ್ಮನುಷ್ಯರಲ್ಲಿ ಒಬ್ಬ ಪಾಪಿ ಬಿಡ್ದೇ ನಮ್ಮಣ್ಣನ್ನ ಮುತ್ಕೊಂಡ್ರು!… ದಿವಾನ್ಗಿರಿಗೆ ದಾಖಲಾಗೋ ಇಸಮ್ನ ಅಳಿಯನಾಗಿ ಮಾಡ್ಕೊಳ್ಳೋಕೆ! ಇನ್ನೇನು ಅ ಜಾತೀಲೆ ಮದ್ವೆಮಾಡ್ಕೊಂಡ!… ನಮ್ಮಪ್ಪ ಅಮ್ಮನ್ನ ಕೂಡ ಕರೀಲಿಲ್ಲ ಮದ್ವೇಗೆ!… ಅವನಾಯ್ತು! ಅವನ್ ಹೆಂಡ್ತಿ ಮಕ್ಳಾಯ್ತು!… ಅವನ್ ಬಂಗ್ಲೆ ಆಯ್ತು… ನಮ್ಮಮ್ಮ ಹೇಳಿದ್ಹಾಗೆ… “ಇಸ್ಟ್ ಘಟ್ಟಿಗನ್ನ ಹೆತ್ತೆವಲ್ಲಾಂತ ಪಟ್ಟ ಸಂತೋಷಕ್ಕೆ ಗದ್ದೆ ಹೊಲಾನೂ ಮಾರಿ… ಒಡ್ವೆಗಳನ್ನೂ ಮಾರಿ… ಬೆಲೆ ಕೊಟ್ಟಾಗಾಯ್ತು; ಇನ್ ನಾವು ದರಿದ್ರರಾದ್ರೂನೂವೆ ದೊಡ್ಡ್‌ ಮನುಷ್ಯರಿಗೆ ಮಗನ್‌ ಧಾರೇ ಎರೆದ್ಹಾಗೂ ಅಯ್ತು!”

ತಾಯಿ: ಸ್ಸರೀ!… ಬಿಡು ಮಗು! ಇನ್ನೇನವನ್‌ಮಾತು… ಏನೋ ಇಷ್ಟು ಕಷ್ಟಾನನುಭವಿಸಿದ್ರೂವೆ… ನಿಂ ತಂದೇಗೆ… ನೀನಾದ್ರು… ಇದ್ದೀಯಲ್ಲ! ಧೈರ್ಯವಾಗಿ ನಿನ್ನ ಕೈಲಾದಮಟ್ಟಿಗೂ… ಮನೇಗೆ ಸಹಾಯಮಾಡ್ತಾ! ಅದಕ್ಕೇ ನಾನೂ ನಂಮಗೂ ಹತ್ರ ಹೇಳಿದ್ದು… ನಿನ್ನ ಕರ್ಕೊಂಡ್ಬಾ ಅಂತ…

ಕಿಟ್ಟಿ: (ವಿಸ್ಮಿತನಾಗಿ) ‘ಅದಕ್ಕೆ’? ಯಾವ್ದಕ್ಕಮ್ಮಾ?!

ತಾಯಿ: ಈಗ ನೋಡು ಕಿಟ್ಟಿ ನಂ ಹುಡ್ಗ… ಈ ಬಾಯ್ ಸ್ಕೌಟಿಗೆ ಸೇರ್ದಾಗ್ನಿಂದ ೭ – ೭ ೧/೨ – ೮ ಹೀಗೆ ಹೊತ್ತು ಬಿಟ್ಕೊಂಡ್‌ಬ್ಬರ್ತಾನೆ ಮನೆಗೆ… ನನಗೋ, ಮಗು ಕತ್ಲಲ್ಲಿ ಒಬ್ನೇ ಬರ್ತಾನಲ್ಲಾಂತ ಹೆದ್ರಿಕೆ! ಇನ್ನು ಜವಾನನ್ನ ಕಳ್ಸೋಣ ಅಂದ್ರೋ “ನಾಚಿಕೆ ಆಗುತ್ತೆ ನನಗೆ… ಹಾಸ್ಯಮಾಡ್ತಾರೆ ನನ್ನ ಸ್ನೇಹಿತ್ರು” ಅಂತಾನೆ ಅವ್ನು… ಅದಕ್ಕೇ ನಿನ್ಗಿಂತ ದೊಡ್ಡೋನಾಗ್ಯೂ… ನಂ ಪೇಟೇಲೆ ಮನೇಲಿರೋ ಸ್ನೇಹಿತ… ಯಾರಾದ್ರೂ ಇದ್ರೆ ಅವನ್ಜೊತೇಲೇ ನಿತ್ಯಾನೂ ಮನೇಗ್ ಬಾಂತಂದೆ… ಇದ್ ನಿನಗೆ ಹೇಳೋಕೆ ಕರ್ಸಿದ್ ನಿನ್ನ… ಸಮ್ಮತವೇ ನಿನ್ ಮನಸ್ಸಿಗೆ?… (ಗಟ್ಟಿಯಾಗಿ) ನಾರಾಯಣಾ!… (ಒಳಗಿನಿಂದ ‘ಅಮ್ಮಾ’ ಎಂದು ಕೇಳಿಬರುವುದು)… ಆ ಟಿಫನ್ನು… ಕಾಫೀನೂ ತಕ್ಕೊಂಡ್ಬಾ ಮಕ್ಕಳಿಗೆ…!

ಕಿಟ್ಟಿ: ಸಮ್ಮತವಿಲ್ದೆ ಏನಮ್ಮಾ! ದಿನಾ ಬರೋವಾಗ ಮಗೂನ… ನಿಮ್ಮನೇಲಿ ಬಿಟ್ಟಿಟ್ಟು ಹೋಗೋದ್ರಲ್ಲಿ ನನ್ಗೇನೂ ತೊಂದ್ರೆ ಇಲ್ಲ… ಅದ್ರೆ… ನೀವು… ಯೋಗ್ಯ… ಗೀಗ್ಯ ಅಂತಂದ್ರಲ್ಲ… ಆ ಸರ್‍ಕೆಲ್ಲಾ ನಂ ಅಂಗ್ಡೀಲಿಲ್ಲ! ಅಲ್ಲ ಆ ಬಾಬ್ತಿಗೆ ಸೇರ್ದೋನಲ್ಲ ನಾನು!…

ತಾಯಿ: (ನಗುತ್ತಾ) ನೀನ್ ಸೇರ್ದಿದ್ರೆ… ಇನ್ನ್ ಯಾರ್ ಸೇರ್ತಾರೆ ಕಿಟ್ಟಿ!?

ಕಿಟ್ಟಿ: ಬಂಗ್ಲೇಲಿ ಬೆಳೆದ ಇಸಂಗ್ಳು… ಅಲ್ಲ… ದೊಡ್ಮನುಷ್ಯರ ಮಕ್ಳೂ ಅಮ್ಮಾ… ನನ್ನ ಬಾಬ್ತೇ ಬೇರೆ.

ತಾಯಿ: (ನಗುತ್ತಾ) ನಿನ್ನ ಬಾಬ್ತು ಅಂದ್ರೆ ಯಾವುದಪ್ಪಾ!

ಕಿಟ್ಟಿ: ಪೋಲೀ ಬಾಬ್ತಮ್ಮಾ! ನಿಂ ಹುಡುಗನ ಸಹ್ವಾಸಕ್ಕೆ ನನ್ನ ಸೇರ್ಸೋಕೆ ಮುಂಚೆ ನಿಮಗೆ ತಿಳಿಯಬೇಕಾದ ವಿಷ್ಯ ಇದು!… ನನ್ನ ಹೆಸ್ರೇ (ಮುಖವನ್ನು ಸೂರಿಗೆತ್ತಿ) ಪೋಲಿ ಕಿಟ್ಟೀಮ್ಮಾ!!

ತಾಯಿ: ‘ಪೋಲೀ’ ಅಂದ್ರೇನ್ ಕಿಟ್ಟೀ?

ಕಿಟ್ಟಿ: (ಹುಬ್ಬುಗಳನ್ನು ರಚಿಸಿ) ‘ಪೋಲೀ’ಂದ್ರೆ ಹ್ಯಾಗೆ ಹೇಳೋದಮ್ಮಾ… ಅದು… ಯಾವ ವಿಧದಲ್ಲೂ… ಹೋಪ್ಲೆಸ್ಸ್… ಅಂತಾರಲ್ಲಾ… ಆ ಬಾಬ್ತೂಮ್ಮಾ!

ತಾಯಿ: (ಎದ್ದು ನಿಂತು ಕಿಟ್ಟಿಯ ತಲೆಯ ಮೇಲೆ ಕೈಯನ್ನಿಟ್ಟು) ಯಾರು ಯಾವ ಬಾಬ್ತೂಂತ್ಲಾದ್ರೂ ಅಂದುದ್ಕೊಳ್ಳೀ… ನಮ್ಗೇನ್ ಕಿಟ್ಟಿ? ನಮ್ಮಗೂನ ನಿನ್ನ ತಮ್ಮನ್ಹಾಗೇ ನೋಡ್ಕೊಂಡು, ಅವ್ನೂ ಧೈರ್ಯಶಾಲಿಯಾಗಿ ಬೆಳ್ದಾಂದ್ರೆ… ಅಷ್ಟೇ ಸಾಕ್‌ನನ್ಗೆ… (ಪರಿಚಾರಕನು ಫಲಾಹಾರ ಕಾಫಿ ತಂದಿಟ್ಟು ಹೋಗುವನು) ಮಗೂ! ಇಬ್ರೂ ಟಿಫನ್ ತಿಂದು ಕಾಫಿ ಕುಡಿರೀ… ನಾನೊಳಗ್ಹೋಗ್ತೇನೆ…
[ಹೋಗುವಳು.]

ಕಿಟ್ಟಿ: ಕೇಳ್ದ್ಯೇನೋ ಲೋ! ಗುಬ್ಬಚ್ಚಿ! ನಿಂಮದರ್ ನಿನ್ನ ನನ್ನ ಛಾರ್ಜಿಗೆ ಕೊಟ್ಬಿಟ್ಟದ್ನಾ?… ಇನ್ಮೇಲೆ ನಾನ್ಹೇಳಿದ್ದು ಕೇಳಿದ್ರೆ ಎಂಕೆಗಳ್ ಬಗ್ಗಿಸಿಬಿಟ್ಟೇನು? ಹುಷಾರು!

ಮಗೂ: ಕಿಟ್ಟಿ ಲೇ! (ತನ್ನ ಬಾಹುವನ್ನು ಸವರುತ್ತಾ) ನನ್ನ ಬೈಸೆಪ್ಸೂ ನಿಂದ್ರಾಗೇ ಆಗ್ಲಿ ಸ್ವಲ್ಪ… ಆಗ ನೋಡ್ತೇನೆ…. ನೀನ್ ಯಮ್ಕೆಗಳ್ ಬಗ್ಗಿಸೋದ್ನ!… ಅದೆಲ್ಲಾ ಇರ್ಲಿ… ಈ ಬೋಂಡಾಗಳ್ನ ಬಾಯಿಗ್ಹಾಕ್ಕೊಮ್ಮೋಣ ಬಾ!

ಕಿಟ್ಟಿ: ಬೋಂಡ ನಿನ್ನ ಮೈಗೊಳ್ಳೇದಲ್ಲ ಕಣೋ!… ಬೋಂಡಾಗಳಿಗೂ ಬೈಸೆಪ್ಸಿಗೂ ಬಲ್ದೂರ!… ಬೈಸೆಪ್ಸು ಬಲ್ತೋರೂ ಬೋಂಡಾ ತಿಂದ್ರೇನೂ ಭಾಧಕವಿಲ್ಲ!…(ಕಾಫಿಯನ್ನು ಕುಡಿದು ಸೊಟ್ಟ ಮೋರೆಯೊಡನೆ) ಯೇನೋ? ಇದು?

ಮಗೂ: ಯಾಕೋ?! ಕಾಫೀಗ್ ಸಕ್ರೆ ಸಾಲ್ದೇ?

ಕಿಟ್ಟಿ: ಕಾಫೀಗ್ ಸಕ್ರೆ ಒಳ್ಳೇ ಗುಗ್ಗೂನೋ! ನೀನು! ನಾನ್ ಯಾವಾಗ್ಲೂ ಸಕ್ರೇಗೆ ಕಾಫಿ ಹಾಕ್ಕೊಂಡು ಕುಡಿಯೋದೋ!

ಮಗೂ: (ನಗುತ್ತ) ಹಾಗಾದ್ರೆ ತರ್ತೇನೆ, ಇರೋ!
[ನಿಷ್ಕ್ರಮಣ]

ಕಿಟ್ಟಿ: (ಸುತ್ತಮುತ್ತಲೂ ನೋಡುತ್ತಾ) ಮಿಕ್ಕೋವ್ರು ಈ ಮನೇಲಿ ಹ್ಯಾಗಿದ್ರೂನೂ…. ಇವರಮ್ಮ… ನಮ್ಮ ಜಾತೀನೇ… ನಮ್ಮಮ್ಮನ್ಹಾಗೇನೇ!
[ಮುಖವನ್ನು ಮೇಜಿನ ಮೇಲೊರಗಿಸುವನು]

[ಪರದೆ ಬೀಳುವುದು.]
*****

ದೃಶ್ಯ ೭

[ಸ್ಥಳ-ಮೈದಾನ]
[ರಾಘುವಿನ ದಳದವರು ಕೋಟುಗಳಿಲ್ಲದೆ ಕುಸ್ತಿ. ಓಟ ಮುಂತಾದ ಪಂದ್ಯ ಪರೀಕ್ಷೆಗೆ ತಯಾರಾಗಿರುವರು.]

ಕಿಟ್ಟಿ: ಲ್ರೋ! ಹರಕಲ್ ಬನಿಯನ್ ಹಾಕ್ಕೊಂಡಿದ್ರೆ-ಬಡ್ಕೊಂಡಾರೇನೋ. ಶುಕ್ರಾಚಾರ್ರು? ಅಲ್ಲ… ಎಸ್ಸೆಮ್ಮೂ?

ಅಪ್ಪೂ: ಏನೂ ಇಲ್ಲಾ ಕಾಣೋ… ಯಾಕೋ…?

ಕಿಟ್ಟಿ: ಅಯ್ಯೋ! ಮೊದಲೇ ಡ್ರಿಲ್‌ನಲ್ಲಿ ನಿನ್ ಷರಾಯಿ ಹೀಗಿದೆ… ಕೋಟು ಹಾಗಿದೆ… ಗುಂಡಿ ಹಾಕಿದ್ ಸರಿಯಿಲ್ಲ ಅಂದೋರು… ಈ ಹರಕಲ್ ಬನಿಯನ್ ನೋಡಿ ಬಡ್ಕೊಂಡಾರೋ ಏನೂಂತಾ ಕೇಳಿದ್ದು… ಆದ್ರೆ ಬಡ್ಕೊಂಡ್ರೆ ತಾನೇ ಏನು?… ಬನಿಯನ್ನು ಹೇಗಾದ್ರೂ ಕೋಟ್ ಮುಚ್ಚೋ ಬಾಬ್ತೂಂತ ಹೇಳ್ಕೋತೇನೆ… ಅದಕ್ಕೂ ಗೊಣಗುಟ್ಕೊಂಡ್ರೆ… ಕುಸ್ತೀಲಿ… ಕಿತ್ತು… ಹರ್ದ್ ಹೋದೀತೂಂತ… ನನ್ ರೇಷ್ಮೆ ಷರ್ಟು… ಜರ್ತಾರಿ ಬನಿಯನ್ನು… ಇವುಗಳ್ನೆಲ್ಲಾ ಮನೆ ಬೆಳ್ಳೀ ಪೆಟ್ಗೇಲಿಟ್ಟು… ಚಿನ್ನದ ಬೀಗಾ ಹಾಕಿ ಈ ಗಾಳೀ ತೂರೋ ಬಾಬ್ತು ಹಾಕ್ಕೊಂಬಂದಿಧೇನೇಂದ್ರಾಯ್ತು!… ಓಹೋ? ಬಂದ್ಬಿಡ್ತು ಸುಲೋಚನಾ!

[ಪ್ರವೇಶ-ಸ್ಕೌಟು ಮಾಸ್ಟರು]

ಸ್ಕೌಟು ಮಾಸ್ಟರ್: ಫಾಲಿನ್ (Fall in)! (ಎಲ್ಲರೂ ಸಾಲಾಗಿ ನಿಲ್ಲುವರು) ಬ್ರಿಗೇಡ್ ಸ್ಪೋರ್ಟ್ಸ್ (Brigade Sports) ದಿನ… ರೆಸ್ಲಿಂಗ್ ಕಾಂಪಿಟಿಷನ್ನಿಗೆ (Wrestling Competition) ನಂ ಪೆಟ್ರೋಲ್ನಿಂದ ಯಾರು ಹೋಗೋದು ಅಂಬೋದ್ನ ಡಿಸೈಡ್ (decide) ಮಾಡ್ಬಿಡೋಣ ಇವೊತ್ತು: Eleven to fourteen years of age! ಎಷ್ಟು ಜನ ಇದ್ದೀರಿ. ಪೇಟ್ರೋಲ್ನಲ್ಲಿ?

ಮಗೂ. ಶಾಮಿ, ರಾಮು: ನಾವು ಸಾರ್!…

ಸ್ಕೌಟು ಮಾಸ್ಟರ್: Fourteen to sixteen ಎಷ್ಟು ಜನ?

ಅಪ್ಪೂ, ವಾಸು: ನಾವಿಬ್ರು ಸಾರ್!

ಸ್ಕೌಟು ಮಾಸ್ಟರ್: ಕೃಷ್ಣ್ರಾವ್! ನಿನ್ಗೆಷ್ಟು ವಯಸ್ಸು!

ಕಿಟ್ಟಿ: ೧೮. ಸಾರ್!

ಸ್ಕೌಟು ಮಾಸ್ಟರ್: ಹಾಗಾದ್ರೆ, ನೀನೂ ರಾಘು ಒಂದು ಬ್ಯಾಚೂ (Batchoo)!… (ಎಲ್ಲರಿಗೂ) ಈ ಮೂರು ಬ್ಯಾಚ್ನಲ್ಲೂ ಒಂದೊಂದ್ರಲ್ಲೊಬ್ಬೊಬ್ಬನ್ನ ಡಿಸೈಡ್‌ಮಾಡಿ ವಿನ್ನರ್ಸೂ ಸ್ಪೋರ್ಟ್ಸ್ ದಿನ ಹಾಜರಾಗ್ಬೇಕು… (ರಾಘುವನ್ನು ಕರಿತು) ಇನ್ ಟೆನ್‌ಮಿನಿಟ್ಸ್‌ನಲ್ಲಿ ಬರುತ್ತೇನೆ… ಅಷ್ಟ್ರಲ್ಲೇ ರೆಸ್ಲಿಂಗಿಗೆಲ್ಲ ಅರೇಂಜ್‌ ಮಾಡಿರು.
[ನಿಷ್ಕ್ರಮಣ]

ಕಿಟ್ಟಿ: ರಾಘು ಲೋ! ನಾನ್ ನಿನ್ಜೊತೇಲಿ ಕುಸ್ತಿನೇ?

ರಾಘು: (ಸಿಡುಕಾಗಿ) ಹೌದೋ!

ಕಿಟ್ಟಿ: ಹಾಗಾದರೆ ಕಾಳ್ಕಾದೇವೀಗಿಧೇ ಈವತ್ತು ಒಂದ್ಕೋಳೀ ಬಲೀ?!

ರಾಘು: ಯಾವ ಕೋಳೀಯೋ?

ಕಿಟ್ಟಿ: ಅಲ್ಲ! ಜಂಭದ್ಕೋಳೀಂತದೊಂದ್ ಜಾತಿ!
[ರಾಘುವು ಕಿಟ್ಟಿಯನ್ನು ಬಿಟ್ಟು ಮಿಕ್ಕವರ ಹತ್ತಿರಕ್ಕೆ ಹೋಗಿ]

ರಾಘು: ಲ್ರೋ!… ಜೋಡಿಗ್ಳೆಲ್ಲಾ ತಯಾರಾಗಿ ನಿಲ್ರೋ ಎಸ್ಸೆಂ ಬರೋಷ್ಟ್‌ ಹೊತ್ಗೆ!…

ಅಪ್ಪೂ: ನಾವ್ ನೋಡ್ಕೋತೇವೋ ನಂ ಕೆಲ್ಸ… ಮೊದೂಲ್ಕುಸ್ತಿ ಯಾರ್‍ದು?… ಕಿಟ್ಟೀದೆ… ಅಲ್ಲಾ… ನಿಂದೇ?
[ರಾಘುವು ಉತ್ತರ ಕೊಡದಿರುವನು-ಪ್ರವೇಶ-ಸ್ಕೌಟುಮಾಸ್ಟರು]

ಸ್ಕೌಟು ಮಾಸ್ಟರ್: (ಪಟ್ಟಿಯಿಂದೋದುತ್ತಾ)… ರಾಘವೇಂದ್ರರಾವ್! ಕೃಷ್ಣ್ರಾವ್! ಸ್ಟಾರ್ಟಾಫ್‌ ! (Start off)!

ಕಿಟ್ಟಿ: ಹಾಗಾದರೆ ಷುರು ಮಾಡ್ಲೆ ಸಾರ್?

[ಕಿಟ್ಟಿಯು ಷರಾಯನ್ನು ತೊಡೆಯವರಗೂ ಎತ್ತಿ ಸಿಕ್ಕಿಸಿಕೊಂಡು, ಗರಡಿ ಪೈಲ್ವಾನನಂತೆ ತೋಳು ತೊಡೆಗಳನ್ನು ತಟ್ಟುತ್ನಾ-ಬಗ್ಗಿ ಬಲಗೈಯಿಂದ ನೆಲದ ಮಣ್ಣನ್ನು ತೆಗದು ಎದೆಗೆ ಬಳಿದುಕೊಂಡು. ಮತ್ತೆ ತೊಡೆಯನ್ನು ತಟ್ಟುತ್ಪಾ, ‘ಯಾ ಮೇರೆ ಮೌಲ’ ಅನ್ನುತ್ತ ರಾಘುವಿನಕಡೆ ಹೆಜ್ಜೆ ಹಾಕುವನು.]

ಸ್ಕೌಟು ಮಾಸ್ಟರ್: ಇದೇನೋ ಇದು ನಿನ್ ಕುಣ್ದಾಟ… ಮೈಗ್ಯಾಕೋ ಮಣ್‌ತೂರ್ಕೊಂಡೇ?… ಅದೇನೋ ಜಪಮಾಡ್ತಿರೋದ್‌ ನೀನು?

ಕಿಟ್ಟಿ: ಅದು ನಮ್ಮ ಅಖಾಡಾದ ಆದತ್ತು ಸಾರ್…ಕುಷ್ತೀ ಗುತ್ರಾಯ್ಸೋವಾಗ, ಲಾಲ್ಮಟ್ಟೀನ ಛಾತೀಗ್ ಲಗಾಯ್ಸಿಕೊಂಡು… ಮೌಲಾಲೀ ಹೆಸರ್ಹೇಳಿ… ಖಲೀಫರ್ನ ಯಾದ್ ಮಾಡ್ಕೊಂಡ್ರೆ… ಒಳ್ಳೇ ತಾಕ್ಹತ್ ಬರತ್ತೇ ಸಾರ್… ತಾಕ್ಹತ್ತು! ಇದು ಆದತ್ತು ಸಾರ್…ಅಖಾಡಾದಲ್ಲಿ!

ಸ್ಕೌಟು ಮಾಸ್ಟರ್: ನಿನ್ಯಾರ್ ಸಾಕಿದ್ರೋ?… ಎಲ್ಲಿ ಬೆಳೆದ್ಯೋ?… ಚೆನ್ನಾಗಿದೆ! ಒಳ್ಳೇ ತುಂಟರ ಪುಂಡ ಬಂದ್ ಸೇರ್ಕೊಂಡ ಬ್ರಿಗೇಡ್ಗೆ!… ಏನ್ ಭಾಷೇನೊ?… ಕಾಲ್‌ಪಾಲು ಕನ್ನಡ…?!

ಕಿಟ್ಟಿ: ಮುಕ್ಕಾಲ್ ಮುಸಲ್ಮಾನಿ ಸಾರ್! ತುರುಕ್ರು ಜಾಸ್ತಿ ಸಾರ್. ನಂ ತಾಲೀಂನಲ್ಲಿ… ನಾನ್ ನಾಲಕ್ಕ್‌ ವರ್ಷದಿಂದ ಸಾರ್, ನಂ ಬಸ್ತೀಲಿ…

ಸ್ಕೌಟು ಮಾಸ್ಟರ್: ಸಾಕೋ! ನಿನ್ನ ವಿಚಿತ್ರ ಚರಿತ್ರೆ… ಕುಸ್ತಿ ಮಾಡು…!

[ಕಿಟ್ಟಿಯು “ಹನುಮಂತ ಹೆಜ್ಜೆ” ಯನ್ನು ಹಾಕುತ್ತಾ, ರಾಘುವಿನ ಕಡೆ ನಡೆಯುವನು. ರಾಘುವು ಬೆಚ್ಚಿ ಬಿದ್ದು ನಿಲ್ಲುವನು.]

ಸ್ಕೌಟು ಮಾಸ್ಟರ್: ಏನ್ ಯೋಚಿಸ್ತಿದೀಯೋ ಕುಸ್ತಿಮಾಡೋದ್ಬಿಟ್ಟು?

ರಾಘು: ಯೋಚ್ನೆಯೇನೂ ಇಲ್ಲ ಸಾರ್! ಇವನ ಕುಣ್ದಾಟ ನನಗರ್ಥವಾಗೋದಿಲ್ಲ ಸಾರ್!

ಕಿಟ್ಟಿ: (ರಾಘುವಿಗೆ) ಅರ್ಥ್‌ವಾಗ್ದಿದ್ರೆ. ತರ್ಜುಮೆ ಮಾಡಿ ಹೇಳ್ತೇನೆ… ಇಲ್ಲಿ ಬಾ…
(ರಾಘುವು ಮುಂದಕ್ಕೆ ಬರುವನು. ಇಬ್ಬರೂ ಹಿಡಿದುಕೊಂಡು ಕ್ಷಣಮಾತ್ರ ಜಗ್ಗುವರು. ಕಿಟ್ಟಿಯು ಒಂದು “ಟಾಂಗ್”ನ್ನು ಕೊಟ್ಟು ರಾಘುವನ್ನು ಬೀಸಿ ಕೆಡಹುವನು. ರಾಘುವು ಎದೆ ಮೇಲಾಗದೇ ಅಧೋಮುಖವಾಗಿ ತಿರುಗಿಕೊಂಡು ಬೀಳುವನು.]

ಕಿಟ್ಟಿ: (ನಿಂತಿದ್ದ ಹಾಗೆ) ಇದೇನ್ಕುಷ್ತೀ ಸಾರ್!

ಸ್ಕೌಟು ಮಾಸ್ಟರ್‌: ಯಾಕೋ?

ಕಿಟ್ಟಿ: ನಮ್‌ಗೆ ಸಮಜೋಡೀ ಅಲ್ಲಾ ಸಾರ್ ಈ ಜಂಬದ್ಕೋ… ಅಲ್ಲ… ಈ ರಾಘು…

ಸ್ಕೌಟು ಮಾಸ್ಟರ್: ಏನೋ? ಒಂದು ಟಾಂಗ್ ಕೊಟ್ಟು ಅವನು ಬಿದ್ದಾಕ್ಷಣವೇ ಇಷ್ಟ್ ಜಂಬಾನೇನೋ? ಮಾಡೋ ಕುಸ್ತಿ!…

ಕಿಟ್ಟಿ: ಜಂಭ್ವೇನ್ ಸಾರ್!… ಬರೀ ಜಿಸ್ಸಮ್ಮಿನ ಮಾತು ನಾನೆತ್ತಿದ್ದು ಸಾರ್! (ರಾಘುವಿಗೆ) ಬಾರೋ! ಎದ್ಬಾರೋ!… ಇಲ್ಲಾ…. ಪೀಟ್… ಕೊಡ್ತೀಯಾ? (ರಾಘುವು ಥಟ್ಟನೆದ್ದು ಪುನಃ ಕಿಟ್ಟಿಯನ್ನೆದುರಿಸಲು ಒಂದು ಕ್ಷಣದ ಜಗ್ಗಾಟದಲ್ಲಿ ಕಿಟ್ಟಿಯು ರಾಘುವನ್ನು ತನ್ನ ಬಿನ್ನಿಗೆ ಏರಿಸಿ) ಸಾರ್! ಈ ‘ದೋಬಿ ಪಟಕ್‌’ ಅಂತಾರ್ನೋಡಿ ಸಾರ್!… ಅದ್ ತೋರಿಸ್ತೇನೆ! [ಅಗಸರು ಬಟ್ಟೆಯನ್ನು ಬಂಡೆಯ ಮೇಲೆ ಒಗಯುವಂತೆ ರಾಘುವನ್ನು ಹಿಂದಿನಿಂದ ಎತ್ತಿ ಮುಂದೊಗೆಯುವನು. ರಾಘುವು ಅಂಗತನಾಗಿ ಬೀಳುವನು.]

ಸ್ಕೌಟು ಮಾಸ್ಟರ್: (ಬರೆದುಕೊಳ್ಳುತ್ತಾ ) “First fall to Krishna Rao!”… ಒಂದೈದು ನಿಮಿಷ ಸುಧಾರಿಸ್ಕೊಳ್ಳಿ!… ಇದೋ ಬಂದೆ…
[ಮಿಕ್ಕ ಸ್ಕೌಟುಗಳನ್ನು ಬೇರೆಬೇರೆ ಕಡೆ ಕರೆದುಕೊಂಡು ಹೋಗಿ ಮಾತನಾಡಲುಪಕ್ರಮಿಸುವನು.]

ಕಿಟ್ಟಿ: (ಇನ್ನೂ ಬಿದ್ದಿರುವ ರಾಘುವನ್ನು ಕೈಕೊಟ್ಟು ಎಳೆದು ನಿಲ್ಲಿಸಿ) ಯಾಕೋ? ಏಟ್ ಗೀಟ್ ತಗಲ್ತೇನೋ? (ಅವನು ಬಿದ್ದ ಸ್ಥಳವನ್ನು ಕಾಲಿನಿಂದ ಒದ್ದು ನೋಡಿ) ನೆಲ… ನರ್ಮಿಯಾಗಿದೆಯಲ್ಲೋ!

(ರಾಘುವಿನ ಬೆನ್ನಿಗೆ ಮಣ್ಣನ್ನು ತಟ್ಟುತ್ತಾ) ಇನ್ನೂ ಸ್ಪಲ್ಪ ಸುಧಾರಿಸ್ಕೋತೀಯಾ… ಇಲ್ಲ ಷುರು ಮಾಡೋಣ್ವೋ ತಿರ್‌ಗೂ? (ರಾಘುವು ಪ್ರತ್ಯುತ್ತರಕೊಡದೇ ಇರಲು) ನನಗೇನೂ ನಿನ್ಮೇಲೆ ಜಿದ್ದಿಲ್ಲ ಕಣೋ… ಬೇಕಾದರೆ ಇನ್ನೊಂದು “ಲಡತ್‌” ನಾಳೆ ಇಟ್ಕೊಳ್ಳೋಣ… ಹೂಂ…?

ರಾಘು: ಅದೆಲ್ಲಾ ಎಸ್ಸೆಂ ಕೇಳೋದಿಲ್ಲ ಕಣೋ!… ಅದೂ ಅಲ್ದೆ ಯಾವಾಗಿಟ್ಕೊಂಡ್ರೆ ತಾನೇ ಏನೋ? ಶನಿ!…

ಕಿಟ್ಟಿ: ರಿಸಲ್ಟ್‌ ಹೇಳ್ತೀಯಾ? ಅದ್ಸರಿ!… ನಿನಗಿಷ್ಟವಿಲ್ದಿದರೇಪ್ಪಾ, ನಿನ್ನ್‌ಸೊಂಟಾ ಸ್ವಲ್ಪ ಸಡಿಲ ಅಂತ ಹೇಳ್ತೇನೆ… ಎಸ್ಸೆಂಹತ್ರ… ಆದ್ರೊಂದ್ ಕಂಡೀಷನ್ನೂ…

ರಾಘು: ಕಂಡಿಷನ್ನೇನೋ?

ಕಿಟ್ಟಿ: ಏನೂ ಇಲ್ಲ!… ದಿನಾ ಎರಡ್ ಜೋಬ್ತುಂಬಾ ತುಂಬ್ಕೊಂಬರ್ತೀಯಲ್ಲಾ ತಿಂಡೀನಾ…!

ಸ್ಕೌಟು ಮಾಸ್ಟರ್: (ಪ್ರವೇಶಿಸಿ) ಏನೋ ರಾಘು? ರೆಡಿಯೋ ನೆಕ್ಸ್ಟ್ ಬೌಟಿಗೆ (Next bout)…?

ರಾಘು: (ಭ್ರಮಿತನಾಗಿ) ಹೂಂ, ಸಾರ್!

ಕಿಟ್ಟಿ: (ಪುನಃ ಹೋರಾಡುವಾಗ ಕೆಳೆಗೆ ಬಿದ್ದ ರಾಘುವಿಗೆ “ಕೋನಿ”ಯನ್ನು ಹಾಕಿ ತಿರುಗಿಸುತ್ತಾ) ಆಗ ಹೇಳ್ತಿದ್ದದ್ಮುಗಿಸಿಬಿಡ್ತೇನೋ ಈಗ… ಆ ಎರಡ್‌ಜೋಬ್ ತಿಂಡೀನೂ ನೀನೇ ತಿನ್‌ತೀಯಾ??

ರಾಘು: ಇನ್ಮೇಲೆಲ್ಲ್ರಿಗೂ ಕೊಡ್ತೇನೆ, ಬಿಡೋ!

ಕಿಟ್ಟಿ: (ಪಟ್ಟನ್ನು ಭದ್ರಿಸುತ್ತಾ) ಎಲ್ಲಾರ ಮಾತ್ ಕಟ್ಕೊಂಡ್‌ ನನಿಗ್ಯಾಕೇ… ನಿನಿಗ್ಯಾಕೆ?… ಫಲಾನ… ಒಬ್ನಿಗೇ!… ನನ್ನೋಡು!… ಒಬ್ನಿಗೇ!… ಯಾಕೇಂದ್ರೆ… ತಿಂಡೀಗ್ ತಿರುಪೆ ಎತ್ತೋವ್ನಲ್ಲ ನಾನು! ಆದ್ರೂನೂವೆ ನಿನ್ನ ಹತ್ರಿಧಾನ್‌ ನೋಡು ಒಬ್ಬ… ಅವನ್ಗೆ… ಕೊಡ್ತೀಯಾ… ಸತ್ಯವಾಗಿ?

ರಾಘು: ಹೂಂ ಕಣೋ!

ಕಿಟ್ಟಿ: (ಸ್ಕೌಟು ಮಾಸ್ಟರನ್ನು ಕುರಿತು) ಕೋನೀಗ್ ಸಿಕ್ಕೊಂಡಿಧಾನೆ ಸಾರ್… ಫಿರಾಯ್ಸಿ “ಪೀಟ್ಮಾಡೋಣಾ”ಂದ್ರೆ… ಮೊದೂಲ್ಲಡತ್ನಲ್ಲಿ ಸೊಂಟ ಏನೋ ನೋಯತ್ತೇಂತ ಹೇಳ್ತಿದ್ದ ಸಾರ್‌!… ಪಾಪ!… ನನ್ಗೇನೋ, ಫಿರಾಯ್ಸಿದ್ರೆ… ನೋವ್‌ಗೀವ್ ಜಾಸ್ತಿಯಾಗ್ಬಿಟ್ಟೀತೂಂತ ಸಾರ್‌… ಪಾಪ!… ನಂ ರಾಘು ಸಾರ್‌!

ಸ್ಕೌಟು ಮಾಸ್ಟರ್: That’s the proper Scout spirit, my boy! ಏನ್ ಕುಸ್ತೀ… ಸ್ಪೋರ್ಟ್ಸ್ನಲ್ಲಿ ಎಷ್ಟು ರೈವರ್ಲಿ (rivalry) ಇದ್ರೂ… ಫ್ರೆಂಡ್ಲಿ… ಬ್ರದರ್ಲಿ ರಿಗಾರ್ಡು… ಬಿಡ್ಬಾರ್ದು!

ಕಿಟ್ಟಿ: ಬಲು ಫ್ರೆಂಡ್ಲಿ ಸಾರ್ ನಾವು… ಅಲ್ವೇ ರಾಘೂ? ಏನ್ ತಿಂಡಿ ತಂದ್ರೂ ನನ್ಗರ್ಧ ಕೊಟ್ಬಿಟ್ಟೇ ತಿನ್ನೋದವ್ನು! ಅಲ್ವೇ ರಾಘು?

ಸ್ಕೌಟು ಮಾಸ್ಟರ್: ಸಾಕೇಳ್ರಿ!…You are too strong for him! ಕಿಟ್ಟೀನ್ನೇ ವಿನ್ನರಾಗಿ ಬರ್ಕೊಳ್ಲೇ ರಾಘು?

ರಾಘು: ಹೂಂ…ಸಾರ್!

ಸ್ಕೌಟು ಮಾಸ್ಟರ್: That’s the spirit, my boy
[ಕಿಟ್ಟಿಯ ಹೆಸರನ್ನು ಪಟ್ಟಿಯಲ್ಲಿ ಬರೆದುಕೊಳ್ಳುವನು.]

[ಅಪ್ಪುವಿಗೂ ವಾಸುವಿಗೂ ಕುಸ್ತಿಯಾಗುವುದು. ಮೊದಲನೆಯ ಕುಸ್ತಿಯಲ್ಲಿ ಅಪ್ಪುವು ಸೋಲುವನು.]

ಸ್ಕೌಟು ಮಾಸ್ಟರ್: (ಬರೆದುಕೊಳ್ಳುತ್ತಾ) First fall to Vasudeva Rao… ಏನಪ್ಪೂ ಟೈಮಾಗ್ತಾ ಬಂತು… ವಾಸೂನೇ ದಾಖಲ್ಮಾಡಿಕೊಳ್ಳ್‌ಲೋ? ಇಲ್ಲ ಇನ್ನೊಂದ್‌ ಬೌಟು ಟ್ರೈ (try) ಮಾಡ್ತೀಯೋ?
[ಅಪ್ಪುವು ಸಂದೇಹಪಡುವನು]

ಕಿಟ್ಟಿ: ಬಿಡೋದಿಲ್ಲಾನ್ನೋ, ಬೈಗೈರತ್!… ಮೊದಲ್ ಸರ್ತಿ ಬಿದ್ದದ್ದು… ಹುಲ್ಲು ಫ್ಹಿಸ್ರಾಯ್ಸಿದ್ದ ಕಣೋ!…(ಒಂದು ಮೂಲೆಗೆಳೆದುಕೊಂಡು ಹೋಗಿ) ನಿನ್ಗಿಂತ ಒಂದೂವರೆ ಮಾರುದ್ದ ಇಧಾನವ್ನು. ನಿನಗೆ ಬೇಕಾದದ್ದೊಂದೇ ಕಮಾಲು… ‘ಡುಬ್ಬು’! ಅರ್ಥ್‌ವಾಯ್ತೇನೋ? ತೋಳಿಗ್ ತೋಳ್‌! ಕಟಾಯ್ಸೋವಾಗ ಥಟ್ಟನ್ ಕೈಬಿಟ್ಟು… ಅವನ್‌ ಕಾಲ್‌ಮಧ್ಯೆ ಮುಳ್ಗು…ಅದೇ ’ಡುಬ್ಬು’… ಮುಳುಗಿದ್ಹಾಗೆ ಎತ್ಹಾಕು… ಇದೇ ’ಡುಬಾಯ್ಸೋದೂ’ಂತ! (ಮಾತಿಗೆ ಸರಿಯಾಗಿ ಅಪ್ಪುವಿನ ಎರಡು ಕಾಲುಗಳ ಮಧ್ಯೆ ನುಗ್ಗಿ ಎತ್ತಿಹಾಕಿ… ಬಿದ್ದ ಅಪ್ಪುವನ್ನು ತಿರುಗಿ ಎತ್ತಿ ನಿಲ್ಲಿಸಿ) ಅರ್ಥವಾಯ್ತೇನೋ?

ಅಪ್ಪೂ: ಹೂನೋ!… ಟ್ರೈ ಮಾಡ್ತೇನೆ!

ಕಿಟ್ಟಿ: ಆ ಶುಕ್ರಾಚಾರಿ ಹೇಳಿದ್ಹಾಗೇ, ‘That’s the proper spirit my boy!’… ಅಲ್ದೆ ಹಂಚೀಕಡ್ಡಿಗಳಂಟ್ಸಿ ನಿಲ್ಲಿಸಿದ್ಹಾಗಿರೋ ಆ ಜಾಡರ್‌ಹುಳಕ್ಕೆ ಒಂದು ‘ದಂ’ನಲ್ಲೇ ಹೆದರ್ಕೊಂಡ್ ಹೋಗೋದೇನೋ?

ಸ್ಕೌಟು ಮಾಸ್ಟರ್: (ಗಟ್ಟಿಯಾಗಿ) ಅವನ್ನ ಏನ್‌ ಕುಕ್ತಿದೀಯೋ? ಕುಸ್ತಿ ಮಾಡೋದವನ್ನ, ಪಾಪ!?

ಕಿಟ್ಟಿ: ಕಮಾಲ್ ಸಿಕಾಯ್ಸ್‌ತಿದ್ದೆ ಸಾರ್!… ನನ್ ‘ಷಾಗಿರ್ದ್’ ಸಾರ್! ಅವ್ನು… ಅಲ್ಲ… ನನ್‌ಫ್ರೆಂಡು… (ಮುಂದಕ್ಕೆ ಬರುತ್ತಾ) ಮೆಸ್ಸೇಜ್‌ ಕೊಟ್ಟಿದಾನೆ ಸಾರ್!… ಕೊನೆವರ್ಗೂ ಮಾಡೇ ಮಾಡ್ತಾನಂತೆ ಸಾರ್! ಕುಸ್ತಿ… ಅವ್ನು… ಬುಲ್ಡಾಗೂ ಸಾರ್… ನೀವು ಅದೆಂಥಾದ್ದೋ ‘spirit my boy’ ಅಂದ್ರಲ್ಲ… ಆ ಬಾಬ್ತು ಸಾರ್ ಅವ್ನೂನು. ನಮ್ಮೆಲ್ಲರ ಹಾಗೇ…

ಸ್ಕೌಟು ಮಾಸ್ಟರ್: Start off, then!
[ಅಪ್ಪುವೂ, ವಾಸುವೂ ಮತ್ತೆ ತಿರುಗಿ ಹೋರಾಡುವರು. ಅಪ್ಪುವು ಕಿಟ್ಟಿಯು ಹೇಳಿಕೊಟ್ಟಂತೆ, ಥಟ್ಟನೆ ವಾಸುವಿನ ತೋಳುಗಳನ್ನು ಬಿಟ್ಟು. ಅವನ ತೊಡೆಗಳ ಮಧ್ಯೆ ನುಗ್ಗಿ ಅವನನ್ನು ಎತ್ತಿಹಾಕುವನು.]

ಸ್ಕೌಟು ಮಾಸ್ಟರ್: (ಬರೆಯುತ್ತಾ) Second fall to Appu Rao… one fall each… good fightoo… Now for the third bout ಇಲ್ಲಾ,… ರೆಸ್ಟ್ ತಕೋತೀರೋ ?

ಕಿಟ್ಟಿ: ಬೇಡಾನ್ನೋ!… ನಿನ್ಗಿರೋದೊಂದೇ ಕಮಾಲು!… ಅವ್ನಿಗೆ ಜ್ಞಾನೋದಯವಾಗೋದಕ್ಮುಂಚೆ ತೀರಿಸ್ಬಿಡ್ಬೇಕು ಅವನ್ ಸಾಲಾನಾ…

ಅಪ್ಪೂ: ಹೂಂ ನೋ!…. (ಸ್ಕೌಟ್‌ ಮಾಸ್ಟರಿಗೆ) ನಾನ್ ರೆಡಿ ಸಾರ್

ಸ್ಕೌಟು ಮಾಸ್ಟರ್: Start off, then! (ಅರೆ ಮನಸ್ಸಿನಿಂದ ಎದುರು ಬರುತ್ತಿರುವ ವಾಸುವಿನ ಭುಜಗಳನ್ನು ಹಿಡಿದು ಬಗ್ಗಿಸಿ. ಥಟ್ಟನೆ ಬಿಟ್ಟು. ಹಿಂದಿನಂತೆಯೇ ಅವನನ್ನು ಎತ್ತಿ ಹಾಕುವನು.)

ಸ್ಕೌಟು ಮಾಸ್ಟರ್: (ಬರೆಯುತ್ತ) ‘Third fall and match to Appu Rao’… (ಪೆನ್ಸಿಲನ್ನು ಕಿವಿಗೆ ಸಿಕ್ಕಿಸಿಕೊಳ್ಳುತ್ತಾ) Now for the last lot…(ಮಗು, ಶಾಮಿ, ರಾಮುವನ್ನು ಗಮನಿಸಿ)… ಮೂರ್ ಜನ ಇದೀರಲ್ರೋ… ಹ್ಯಾಗೆ ಅರ್ರೇಂಜ್ ಮಾಡ್ಕೋಳ್ತೀರೋ?

ರಾಘು: ಇಬ್ರೇ ಸಾರ್! ಇಬ್ರೂ ಫೋರ್ಟೀನು (fourteen)… ಮಗೂಗೆ ಈಗ್ತಾನೆ ಹನ್ನೊಂದಾಯ್ತು ವಯಸ್ಸು… ಅವ್ನಿಗೆ ಛಾನ್ಸಿಲ್ಲಾ… ಇನ್ನು ಏಟ್ಬೇರೆ.

ಕಿಟ್ಟಿ: (ರಾಘುವಿಗೆ) ಓಳ್ಳೇ ಲೀಡರೋ ನೀನು! ನಿನ್ನ ಪೆಟ್ರೋಲ್ಗಿರೋ ಅಲ್ಪ ಸ್ವಲ್ಪ ಗಂಡಸ್ತನಾನ್ನ ಘಬರಾಯ್ಸಿ ಓಡಿಸ್ಬಿಡು… (ಮಗುವಿಗೆ) ಲೋ!… ಆ ಹುಳುಗಳಿಗೆ ಹೆದರ್ಕೊಂಡು… ಕುಷ್ತೀನಾ… ನೀನ್ಗಾನಾ ತಪ್ಪಿಸಿಕೊಂಡ್ಯೋ ನಿನಿಗ್ ನನ್ನ ದೋಸ್ತಿ ಹೋಗೋದಲ್ದೆ… ನಿನ್ನ ಯಂಕೆಗಳ್ ಬಗ್ಸಿ… ನಿಮ್ಮನೆ ಮುಂದೆಸದು… ‘ಇದು ಗಂಡ್ಮಗುವಲ್ಲ… ಬೇರೆ ಹೆತ್ಕೊಡಿ ನಂಪೆಟ್ರೋಲಿಗೆ’ಂತ ಕೇಳ್ತೇನೆ!… ಹೆದರ್ತಾನೆ ಹೆಂಗ್ಸು!

[ಸ್ವಲ್ಪ ದೂರ ಜರಗುವನು]

ಮಗೂ: (ಹತ್ತಿರ ಬಂದು ಕಿಟ್ಟಿಯ ತೋಳಿನ ಮೇಲೆ ಕೈ ಹಾಕಿಕೊಂಡು ನಿರ್ಭೀತನಾಗಿ ನಗುತ್ತಾ) … ಈಗ ಹೆದ್ರಿಕೆಯಿಲ್ಲ ಕಾಣೋ?

ಕಿಟ್ಟಿ: (ಮಗುವಿನ ಹೆಗಲ ಮೇಲೆ ಕೈ ಹಾಕಿಕೊಂಡು)… ಅದು ರುಸ್ತುಂತನ!… ಗಂಡ್ಸಿಗೆ ಘಾಬ್ರೀಂದ್ರೇನೋ!?… ಈಗಿಲ್ಲಾಂದ್ಯಲ್ಲಾ… ಮೊದಲ್ ಘಾಬ್ರೀನೆ?

ಮಗೂ: ಘಾಬ್ರಿ ಅಲ್ಲ ಕಾಣೋ… ಅದೊಂದ್ ನಮೂನೆ… (ಹೊಟ್ಟೆಯನ್ನು ಸವರುತ್ತಾ)… ಫೀಲಿಂಗು… ಕಾಣೋ!

ಕಿಟ್ಟಿ: ಅಂಥಾ ಫೀಲಿಂಗ್‌… ಫೀಲ್ ಆಗೋಷ್ಟ್ರಲ್ಲೇ… ಫನಾ ಮಾಡ್ಬಿಡ್ಬೇಕು… ಅಡಗ್ಸಿ ಇಟ್ಕಕೊಂಡಿದ್ರೆ… ಡೇಂಜರು! ಬರೋವಾಗ್ಲೆಲ್ಲಾ ದಿಗಿಲ್ಪಟ್ಕೊಂಡ್ ಉಡಾಯ್ಸುತ್ತೆ! ಈ ಹೊತ್ತಿನ್ ಕುಷ್ತಿನ್ಗಾನಾ ಹಲ್‌ಕಚ್ಕೊಂಡು ಸತ್ರೂ ಸರ್ಯೇಂತಮಾಡ್ಬಿಟ್ಯೋ ಇನ್‌ ಸಾಯೋವರ್ಗೂ… ಎಂಥಾ ಡೇಂಜರ್ ಬಂದ್ರೂ ಹೆದರ್ಕೊಂಡು ಹಿಂಜರಿಯೋದಿಲ್ಲಾ… ನೀನು! ಮಂಡೇಗ್‌ ಹತ್ತಿತೇ?

ಮಗೂ: ಹೂನೋ!

ಸ್ಕೌಟು ಮಾಸ್ಟರ್: (ಮುಂದಕ್ಕೆ ಬರುತ್ತಾ) ಏನೊ… ಮಗೂ! ರಾಘು ಹೇಳೋ ಹಾಗೆ… ನಿನ್ಗೆ ಗೆಲ್ಲೋ ಛಾನ್ಸೂ…?

ಕಿಟ್ಟಿ: ಗೆಲ್ಲೋಕಲ್ಲಾ ಸಾರ್… ಅವನು ಕುಷ್ತಿ ಮಾಡೋದು…!?

ಸ್ಕೌಟು ಮಾಸ್ಟರ್: ಮತ್ಯಾಕೋ?

ಕಿಟ್ಟ: ಕುಷ್ತೀಗೇಂತ… ಅವನು ಕುಷ್ತೀ ಮಾಡೋದು… ಸಾರ್!

ಸ್ಕೌಟು ಮಾಸ್ಟರ್: ಕುಷ್ತಿಗೇಂತ… ಕುಸ್ತಿ!?… ಏನರ್ಥವೋ… ಅದಿರ್ಲಿ… ನೀನ್ ಯಾರೋ… ಅವನಿಗ ಮಾತಾಡೋಕೆ… ಅವನ್ನ್ ಲಾಯರೀನೆ?

ಕಿಟ್ಟಿ: ಛಾರ್ಜ್‌ (Charge) ತೊಕೊಂಡಿದೇನೆ ಸಾರ್… ಅವನ್ನ! ಅಲ್ಲ… ಅವನ್‌ ನನ್ನ ದೋಸ್ತು… (ಬೆಪ್ಪಾಗಿ)… ಅವನೇನೂ ಇಲ್ಲಾ ಸಾರ್… ನನಿಗೆ!

ಸ್ಕೌಟು ಮಾಸ್ಟರ್: ಸಾಕು! I cannot waste any more time! ಏನೋ ಮಗು?..

ಮಗೂ: ಮಾಡೇ ಬಿಡ್ತೇನೆ ಸಾರ್!

ಕಿಟ್ಟಿ: ನೀವ್ ಹೇಳಿದ ಹಾಗೆ… ಚಿಕ್ಕವ್ನು ಸಾರ್… ಎರಡು ಕುಷ್ತೀಗೆ ಬದ್ಲಾಗಿ…ಒಂದೇ ಮಾಡ್ಲಿ ಸಾರ್!

ಸ್ಕೌಟು ಮಾಸ್ಟರ್: ಹ್ಯಾಗೋ

ಕಿಟ್ಟಿ: ಹ್ಯಾಗೇನ್ ಸಾರ್ ಆ fourteen yearsನೋರು ಇಬ್ಬರ ಜತೇಲೂ ಮಾಡೋದ್ಬಿಟ್ಟು… ಅವರು ಕುಷ್ತಿ ಮಾಡಿದ ವಿನ್ನರ್ ಜತೇಲಿ ಮಾಡ್ಲಿ ಸಾರ್!

ಸ್ಕೌಟು ಮಾಸ್ಟರ್: (ಮುಗುಳ್ನಗೆಯೊಡನೆ) good! ನಿನ್ನ ತಲೇಲೂ ಸ್ವಲ್ಪ ಬ್ರೈನು (Brain) ಇದೆ

ಕಿಟ್ಟಿ: ಸ್ವಲ್ಪ!?… ಬುರ್ಡೆಯೆಲ್ಲಾ ಬ್ರೈನೂ ಸಾರ್!

ಸ್ಕೌಟು ಮಾಸ್ಟರ್: ಸಾಕೋ, ನಿನ್ ಪ್ರತಾಪ! (ಪಟ್ಟಿಯನ್ನು ನೋಡುತ್ತಾ) ಶಾಮಣ್ಣ… ರಾಮಸ್ವಾಮಿ… start off!

[ಇಬ್ಬರೂ ಹೋರಾಡುವರು. ಶಾಮಿಯು ಎರಡು ಸಲ ಸೋಲಿಸುವನು]

ಸ್ಕೌಟು ಮಾಸ್ಟರ್: (ಬರೆಯುತ್ತಾ) First two falls and match to Shamanna…ಮಗು! ಗೆಟ್‌ರೆಡಿ!

ಕಿಟ್ಟಿ: ಇನ್ನೂ ಘಾಬ್ರಿನೇನೋ?

ಮಗೂ: (ನಗುತ್ತಾ) ಇಲ್ಲಾ… ಕಣೋ! (ಕಿಟ್ಟಿಯ ಕೆನ್ನೆಗೊಂದು ಪೆಟ್ಟನ್ನು ಬಿಗಿಯುತ್ತಾ) ತಗೋ… ಪ್ರೂಫೂ! (proofoo)

ಕಿಟ್ಟಿ: (ಕೆನ್ನೆಯನ್ನು ಸವೆರಿಕೊಳ್ಳುತ್ತಾ) ಸಾಕೋ!… ಒಪ್ಕೊಂಡೆ! ದಯವಿಟ್ಟು ಮರತ್ಬಿಡು ನನಗಿನ್ನೊಂದ್ ಕೆನ್ನೆ ಇರೋದ್ನ! ಇನ್ನ್ ಹೋಗು!

(ಮಗು, ಶಾಮಿ ಹೋರಾಡುವರು. ಸ್ವಲ್ಪ ಮಾತ್ರದಲ್ಲಿಯೇ ಶಾಮಿಯು ಮಗುವನ್ನು ಎತ್ತಿ ಕೆಡಹುವನು. ಕಾಲಿಗೆ ಪೆಟ್ಟು ತಗಲಿ ಮಗು ಏಳಲಾರದೇ ಇರುವನು)

ಸ್ಕೌಟು ಮಾಸ್ಟರ್: ಏನೋ, ಏಟ್ ತಗಲ್ತೇನೋ?

ಮಗು: ಇಲ್ಲಾ ಸಾರ್!… ಸ್ವಲ್ಪ… ಯಲ್ಲೋ…

[ಎಲ್ಲರೂ ನೋಡಲು ಮುಂದಕ್ಕೆ ಬರುವರು]

ಶಾಮಿ: (ಕಿಟ್ಟಿಗೆ ಸ್ವಲ್ಪ ಭಯದಿಂದ)… ಬೇಕೂಂತೇನೂ ಮಾಡ್ಲಿಲ್ಲ ಕಣೋ…

ಕಿಟ್ಟಿ: ಗೊತ್ತೋ! ನಿನ್ನ ತಪ್ಪೇನೂ ಇಲ್ಲಾ! ವಜನ್ ಕಮ್ಮಿ ಅವ್ನು ಲಾಟ್ವಾಗಿ ಸಿಕ್ಕೊಂಡ ನಿನ್ ಕೈಗೆ… ಪರ್ವಾ ಇಲ್ವೋ!

ಸ್ಕೌಟು ಮಾಸ್ಟರ್: If you are not hurt, it is alright; ಆದ್ರೂYou are too small for Shamanna! (ಬರೆಯುತ್ತಾ) ಕೃಷ್ಣರಾವ್, ಅಪ್ಪೂರಾವ್, ಶಾಮಣ್ಣ…ಬ್ರಿಗೇಡ್‌ ಸ್ಪೋರ್ಟ್ಸ್‌ ದಿನ… ರೆಡಿ ಆಗಿ!

ಮೂವರೂ: ಸರಿ ಸಾರ್!

ಕಿಟ್ಟಿ: ಆ ಹೊತ್ತು… ರ್‍ಯಾಲಿ… ಅಂಬೋದುಂಟೇ ಸಾರ್‌?

ಸ್ಕೌಟು ಮಾಸ್ಟರ್: (ಕಿಟ್ಟಿಯ ಮುಖವನ್ನು ದುರುಗುಟ್ಟಿ ನೋಡಿ) Hopeless!!
[ಎಂದು ನಿಟ್ಟುಸಿರು ಬಿಡುತ್ತಾ ನಿಷ್ಕ್ರಮಣ]

ಕಿಟ್ಟಿ: ಕೇಳಿದ್ರೇನೋ ಲ್ರೋ! ನಂ ಬಸ್ತೀನೆಲ್ಲ ಬೆದರ್ಸೋ ಭೂಪತೀನ… ನಿಂ ಶುಕ್ರಾಚಾರ್ ಅಂದದ್ದು ಕೇಳಿದ್ರೇನೋ… (ಸ್ಕೌಟು ಮಾಸ್ಟರಿನಂತೆಯೇ ನಿಂತು ಅಣಕಿಸುತ್ತಾ) ‘Hopeless!’

[ದಳದವರೆಲ್ಲರೂ ತಮ್ಮ ತಮ್ಮ ಅಂಗಿಗಳನ್ನು ಹಾಕಿಕೊಂಡು ಹೊರಡುವರು. ಮಗು, ಕಿಟ್ಟಿ ಮಟ್ಟಿಗೆ ಇರುವರು]

ಕಿಟ್ಟಿ: ಯಾಕಿನ್ನೂ ಬಿದ್ದಿದೀಯೋ?

ಮಗೂ: (ಎದ್ದು ಕುಂಟುತ್ತಾ ಬಂದು) ಕಾಲು ಪರ್ವಾ ಇಲ್ಲ… ನಡೀತೇನೆ…

ಕಿಟ್ಟಿ; ಅದು ಗಂಡಸ್ತನಾ! ಹೆಂಗಸ್ರ್ಹಾಗೆ ಹೆದರ್ಕೊಂಡು ನೆಟ್ಗಿರೋದ್ ಮೇಲೋ? ಭೂಪತಿ ಹಾಗೆ ಕುಸ್ತೀಲಿ ಕಾಲ್‌ ಮುರ್ಕೊಳ್ಳೋದು ಮೇಲೋ!

ಮಗೂ: (ನಗುತ್ತಾ) ಕಾಲ್ ಮುರ್ಕೊಳ್ಳೋದೇ…?

ಕಿಟ್ಟಿ: ವಾರೆ ಮೇರಾ ಷೇರ್… ಬೆದರ್ಕೊಂಡು ಬದ್ಕಿರೋದಕ್ಕೆ ಬದ್ಲಾಗಿ ಬ್ರೇವ್‌ ಆಗಿ ಬೆಂಕೀಲ್‌ ಬೀಳೋದ್ ಮೇಲೋ! ಹೆಂಗಸ್ರೇ ಸಹಗಮನ ಮಾಡ್ತಿದ್ರಂತೆ!… ಬಾ!… ಎತ್ಕೊಂಡ್ ಹೋಗ್ತೇನೇ…

ಮಗೂ: ಪರ್ವಾ ಇಲ್ವೋ ನಡೀತೇನೆ! ನಾನೇನೂ ಹೆಂಗ್ಸಲ್ಲ!…

ಕಿಟ್ಟಿ: ಕುಂಟ್ಕೊಂಬರೊದ್ರಲ್ಲೇನೋ ಗಂಡಸ್ತನ! ಅದೂ ಅಲ್ದೆ ನಡದ್ರೆ ಜಾಸ್ತಿ ಆಗತ್ತೆ ನೋವು… ಇನ್ನ್ ನೀನ್ ಬಿದ್ಕೊಂಡ್ರೆ… ನಿಮ್ಮಮ್ಮ “ಮಗೂನ ಕರ್ಕೊಂಡ್ಹೋಗಿ ಕಾಲ್‌ ಮುರ್ಕೊಂಡ್ ಬಂದ ಕೊನೇಗೂ ‘ಪೋಲಿ ಪೋಲೀನೆ’ ಅಂದುಕೊಂಡಾರು… ಬಾ… ಕೋಟ್ಹಾಕ್ಕೊ! (ಮಗುವಿಗೆ ಕೋಟನ್ನು ತೊಡಿಸಿ ಹೆಗಲಮೇಲೆತ್ತಿಕೊಂಡು) ಈ ತಾಲೀಂ ಹಾಡ್‌ ಕಲ್ತ್ಕೊಳ್ಳೋ! ಯಾವಾಗ್ಲೂ ಗೈರತ್ ಹೋಗೋದಿಲ್ಲ!
“ಕಸರತ್ ಘಟಿಯಾ
ಕಭಿನೈ ಹಟಿಯಾ!
ಅಭಿತಕ್ ಪಹಿಲ್ವಾನ್
ಕಭಿನೈ ಹಟಿಯಾ!”… ಕಿರ್ಲೋ!!

[ಕಿಟ್ಟಿಯೂ ಅವನ ಹೆಗಲ ಮೇಲೆ ಮಗುವೂ ಈ ಹಾಡನ್ನು ಹಾಡುತ್ತಾ ನಿಷ್ಕ್ರಮಣ]
*****

ದೃಶ್ಯ ೮

(ನೇಪಥ್ಯದಲ್ಲಿ )

“ಕಸರತ್ ಘಟಿಯಾ…
ಕಭಿನಹಿ ಹಟಿಯಾ…
ಅಭಿತಕ್ ಪಹಿಲ್ವಾನ್‌…
ಕಭಿನೈ ಹಟಿಯಾ! “…

[ಎಂದು ಹಾಡುತ್ತಿರುವ ಕಿಟ್ಟಿ ಮತ್ತು ಮಗುವಿನ ಧ್ವನಿಗಳು ಹಾಡುತ್ತಾ, ಹಾಡುತ್ತಾ, ಕ್ರಮೇಣ ವ್ಯಾಪಿಸುವುವು]

ಕಿಟ್ಟಿ: (ಮಗುವನ್ನೆತ್ತಿಕೊಂಡು ಪ್ರವೇಶಿಸಿ) ಮಗೂ ಲೇ, (ಮಗುವನ್ನು ಇಳಿಸಿ ನೆಲಕ್ಕಿಟ್ಟು) ಇಲ್ಲಿಂದ ಎರಡ್ ಫರ್ಲಾಂಗ್ ಕೊಡ ಇಲ್ಲ ನಿಂ ಮನೆ. ಇನ್ ಹೀಗೇ ಎತ್ಕೊಂಡ್‌ ಹೋಗಿಳ್ಸಿದ್ರೆ ನಿಮ್ಮಮ್ಮನ್ ಮುಂದೆ “ಮೈ ಕೈ ಮುರ್ದು ಮನೇಗೆ ತಂದು ಕೆಡ್ವೋಕ್ಕಾ ನಿನ್ನ ಸುಪರ್ದಿಗೆ ಬಿಟ್ಟಿದ್ದು ನನ್ನ ಮಗೂನಾ”ಂತ ಕೇಳೋವಾಗ, ನಾನ್ ಕತ್ತೆತ್ತೊಕೆ… ಗೈರತ್ತಿರೋದಿಲ್ವೋ… ಇದುವರ್ಗೂ ನಾನು ಯಾರ್‍ಹತ್ತರಲೂ ಸರ್ ಝುಕಾಯ್ಸಿದ್ದಿಲ್ಲ… ಅಭಿತಕ್ ಪೆಹಿಲ್ಹಾನ್ ಕಭಿನಹಿ ಹಟಿಯಾ… ಅದಕ್ಕೋಸ್ಕರ ಸ್ವಲ್ಪ walking practice ಮಾಡು… ಅರಮನೆ ಗೇಟ್‌ನಲ್ಲಿ ಸಿಪಾಯಿ-duty ಗುಜ್ರಾಯ್ಸೋ ಹಾಗೆ… ಇಲ್ಲಿಂದಲ್ಗೆ, ಅಲ್ಲಿಂದಿಲ್ಗೆ. “ಶುಕ್ರು” ಹೇಲ್ಕೊಟ್ಹಾಗೆ…Left… Right… Left… Right… about… turn ತಿರ್ಗು. Left… Right… ಮಾಡ್ತಿರು. ಇವತ್ ಕುಸ್ತೀಗೆ ಉತ್ರಾಯಿಸ್ದಾಗಿನಿಂದ, ಒಂದು ಬೀಡೀಗೂ ಬಿಡ್ವಿಲ್ಲ… ಇದು public roadಉ…ನಂ ಕೊಂಪೆ ನಸ್ದೀಕು… ನೋಡಿದೋರು… ಗೀಡಿದೊರು ನಮ್ಮಪ್ನ ಹತ್ರ ಚುಕಾಯ್ಸಿದ್ರೋ ವರ್ತಮಾನಾನ ನಮ್ಮಪ್ನ ಕಿವೀಗೆ… ಇನ್ನು ಮುಂದೆ ಅವ್ನಜೀವ್ನ… mental hospital ಊ; again therefore (ಪ್ರವೇಶಿಸಿದ ಬಲಭಾಗವನ್ನು ಸೂಚಿಸಿ) ಆ ಮರದಕಟ್ಟೆ ಹಿಂದೆ ಎರ್‍ಡು ದಮ್ಮು ಎಳ್ಕೊಳ್‌ತೇನೆ… ಅಷ್ಟ್ರವರ್ಗೂ ನೀನಿಲ್ಲೇ ಠಳಾಯಿಸ್ತಿರು. ಆಗುತ್ಯೋ ಇಲ್ವೋ?… ಇಲ್ಲಾ… ಎತ್ಕೊಂಡೇ…?

ಮಗೂ: (at once) ಯಾಕ್ ಕಿಟ್ಟೀ… ನಾನೇನ್ ಹೆಂಗ್ಸಲ್ಲ… “ಅಭಿತಕ್…ಪೆಹಿಲ್ವಾನ್… ಕಭಿನಹಿ ಹಟಿಯಾ”!!

ಕಿಟ್ಟಿ: ಹಾಗಾದ್ರೆ ಫೈಲ್ವಾನ್ ಆಗ್ಹೋದೇ ನೀನು?… ಅದೂ ಗಂಡಸ್ತನ ಗುಬ್‌ಚೀ… ನನ್ನಗಾನ ಖಲೀಫ್ ಮಾಡ್ಕೊಂಡ್ಯೋ ಗುಬ್‌ಚೀಯಿಂದ ಗಿಡ್ಗ ಆಗ್ಹೋಗ್ತೀಯಾ ನೀನು (Magu’s eyes gleam) ಷುರು ಮಾಡ್ ನಿನ್ನ ಕವಾತ್ನ!… ನೋಡೋಣ!

[ಮಗುವು ಪೆಟ್ಟು ತಿಂದ ಕಾಲನ್ನು ಅಂಗುಲದಷ್ಟೂ ಕದಲಿಸಲಶಕ್ತನಾದರೂ ಕಿಟ್ಟಿಯು ಅಹರ್ನಿಶಿಯೂ ಜಪಿಸುವ ಗರಡಿ ವ್ಯಾಯಾಮ ಇತ್ಯಾದಿ ಮಹಾ ಸರ್ಪಗಳಿಂದ ಆವೇಷ್ಟಿನಾಗಿ ಅವನ ರಜೋದ್ರೇಕ ವ್ಯಾಯಾಮಗಳಿಗೆ ಬೆಚ್ಚಿಬಿದ್ದು, ಹಲ್ಲು ಕಚ್ಚಿಕೊಂಡು, ನೊಂದು ಬಗ್ಗುವ ಕಾಲನ್ನು ನೆಟ್ಟಗೆ ಮಾಡಿ ರಂಗಸ್ಥಳಕ್ಕೆ ದಕ್ಷಿಣ-ವಾಮ ಪಹರೆಯನ್ನು ಕೊಡಲು ಉಪಕ್ರಮಿಸುವನು]

ಬೇಷ್ ಗುಬ್‌ಚೀ! ನಿಮ್ಮಮ್ಮನ್‌ ಮುಂದೆ ಹೀಗೆ ರಾತ್ರೆ ನಡೆದ್ಬಿಟ್ಟು, ನನ್ ಮಾನಾಗಾನಾ ಬಚಾಯಿದ್ಯೋ. ನಾಳೆಯಿಂದ ನಾನ್ ನಿನ್ನ slave ಉ… ಹೀಗೇ ನೆಟ್ಟಗ್ ನಡೀತಿರು… ಬಂದೆ!

(ಕಿಸೆಯಿಂದ ಬೀಡಿ ಕಟ್ಟನ್ನೂ ಬೆಂಕಿ ಪೆಟ್ಟಿಗೆಯನ್ನೂ ಹೊರ ತಂದು. ಬೀಡಿಯೊಂದನ್ನು ಆರಿಸಿ, ಕೈಗೊಂಡು ಕಟ್ಟನ್ನು ಕಿಸೆಗೆ ತಳ್ಳಿ, ದಕ್ಷಿಣತಹ ನಿಷ್ಕ್ರಮಿಸುವನು. ಮಗುವು ಮೇರಿನಿಂದ ಮೇರೆ ಒಂದೆರಡು ಸಲ ಸಂಚರಿಸಿ ದಕ್ಷಿಣ ಮುಖನಾಗಿ ರಂಗಾರ್ಧವನ್ನು ಮೆಟ್ಟುತ್ತಿರಲು, ದೀರ್ಘಾಂಗಿಯಾದ ಸ್ತ್ರೀಯೊಬ್ಬಳು, ತಲೆಯ ಮೇಲಿಟ್ಟುಕೊಂಡ ತರಕಾರಿ ತುಂಬಿದ ಮಕ್ಕರಿಯನ್ನು ಪ್ರಾಂಶುವಾದ ದಕ್ಷಿಣ ಬಾಹುವಿನಿಂದ ಹಿಡಿದುಕೊಂಡು, ಸವ್ಯಬಾಹುವಿನಿಂದ ತನ್ನಂತೆಯೇ ಅತಿ ಕೃಷ್ಣವರ್ಣದ ಕೂಸೊಂದನ್ನು ತನ್ನ ಘನ ವಕ್ಷಕ್ಕೆ ಅಪ್ಪಿಕೊಳ್ಳುತ್ತಾ, ರಂಗ ದಕ್ಷಿಣದಿಂದ ಪ್ರವೇಶಿಸಿ, ಮಗುವಿನ, ಇಲ್ಲಿಂದಲ್ಲಿನ ಅಲ್ಲಿಂದಿಲ್ಲಿನ ನಡೆದಾಟವನ್ನು ನೋಡಿ ತನ್ನ ಅಸಿತಾಸ್ಮದಲ್ಲಿ ವಿಸ್ಮಯವನ್ನು ವ್ಯಕ್ತಗೊಳಿಸಿ, ಸ್ತಂಭಿತಳಾಗುವಳು.)

ಬಸವ್ವ: ಇದ್ಯಾಕಪ್ಣೀ… ಇಲ್ಲಿಂದಲ್ಗೇ… ಅಲ್ಲಿಂದಿಲ್ಗೇ ಓಡಾಡ್ತಿದೀಯಾ… ಇಂಗೆ? ಯಾಕ್ ಬುಡಾಕಿಲ್ವಾ ನಿನ್ನ ಈಗಲ್ಲಿಯಿಂದಾಚೀಚ್ಗೆ?

ಮಗೂ: (ನಡೆಯುತ್ತಾ) ಮಾತ್ತಾಡ್ಬೇಡಿ… ನಾನ್ ಸ್ಕೌಟು!

ಬಸವ್ವ: ಅದೆಂತಾದ್ದು?… ಕೌಟು!… ಅಂಗಂದ್ರೇನು… ಮರಿ ಪೋಲೀಸಾ… ನೀನು!… ಆದೇನ್ ನೀನಂದದ್ದು ಅಪ್ಣೀ ?

ಮಗೂ: (ನಡೆಯುತ್ತಾ) ನಾನು Boy Scoutoo.

ಬಸವ್ವ: ಯಾಕದು?

ಮಗೂ: (ತಲೆಯನ್ನು ಕೆರೆದುಕೊಳ್ಳುತ್ತಾ) ಯಾಕೇಂದ್ರೆ… good-turn ಮಾಡೋಕೆ… ಅಂದ್ರೆ ಉಪ್ಕಾರ ಮಾಡೋಕೆ.

ಬಸವ್ವ: ಉಪ್ಕಾರಾ ಮಾಡಾಕಾ… ಇಂಗ್ ನೀನೋಡಾಡೋದು… ಪೊಲೀಸ್ನೋರಿಗ್ ಗೊತ್ತಾದ್ರೇನೋ?…

ಮಗೂ: ಗೊತ್ತಾದ್ರೇನು! ಅವ್ರು ನಾವು ಹೆಚ್ಚು ಕಮ್ಮಿ ಒಂದೇ!

ಬಸವ್ವ: ಅಂಗಾರ್‌ ನೀನು ಮರಿ ಪೋಲೀಸೇ ನಾನೇಳ್‌ದಂಗೇ! “ಉಪ್ಕಾರಾ”ಂದ್ಯಲ್ಲ ಅಪ್ಣೀ! ಯಾರಿಗ್‌ ಮಾಡೋಕ್ ಓಡಾಡ್ತಿರೋದ್‌ ನೀನು?

ಮಗೂ: (ತಲೆಯನ್ನು ಕೆರೆದುಕೊಳ್ಳುತ್ತಾ) ಯಾರಿಗೇನು? ಕೇಳ್ದೋರ್ಗೆಲ್ಲಾ…

ಬಸವ್ವ: ನಂಗೂನೂವೆ?

ಮಗೂ: (hesitatingly)… ಹೂಂ…

ಬಸವ್ವ: ಕೂಲಿ?

ಮಗೂ: ಏನೂ ಇಲ್ಲ (ಭೃಕುಟಿಗಳನ್ನು ಎತ್ತುತ್ತಾ) ಏನೂ ಇಲ್ಲ!

ಬಸವ್ವ: (ಆತ್ಮಗತಂ) ಇದೇನು ಒಸವುಚ್ಚೋ!… ಸರ್ಕಾರೀದು… ಇಂಗೆ ಬಿಟ್ಟೀ ಕೂಲಿಗಳ್ನ ಇಡಾಕೆ!! [ಕಿಟ್ಟಿಯು ಅಜ್ಞಾತನಾಗಿ ಪ್ರವೇಶಿಸಿ ಬಸವ್ವನ ಹಿಂದೆ ನಿಂತು ಆಕೆಯ ವಚನಗಳನ್ನು ಆಕರ್ಷಿಸಿ ಮೋದಿಸುತ್ತಾ ನಿಲ್ಲುವನು] ಆಂಗಾರೀ ಮಕ್ರಿ ವಶಿ ಎತ್ಕೋನನ್ರಾಜ! (ಶಾಕಾಭರಿತ ಪಿಟಕವನ್ನು ಮಗುವಿನ ಮೂರ್ಧನಿಯ ಮೇಲೆ ಪ್ರತಿಷ್ಠಿಸಿ) ಬುಟ್ಟುಗಿಟ್ಟೀಯಾ… ಬಲ್ತ್ ಸೋರೆ ಬುಲ್ಡೆ ಅಂಗೆ ಬೆಳ್ದಿದ್ರೂನೂವೆ… ಎಂಗ್ಸು… ಎಂಗ್ಸೇ ! ಮೆಣಸ್ನ್ ಈಚ್ನಂಗೆ ಇದ್ರೂನೂವೆ. ಊರೋರ್ಗೆಲ್ಲಾ ಉಪ್ಕಾರ ಮಾಡೋಕೊಂಟ ನೀನು ಗಂಡ್ಸೇ ! ಬಾರಾನಾ… ಬುಟ್ಟೀ?

ಮಗೂ: (ಹಲ್ಲು ಕಚ್ಚಿಕೊಳ್ಳುತ್ತಾ) ಇ…ಇ…ಇ…ಇ…ಲ್ಲಾ…!!

ಬಸವ್ವ: ಅಂಗಾದ್ರಪ್ಪಾಜೀ… ನನ್ನೈದ್ನ ವಸಿ… ಇಡ್ಕೋ! (ತನ್ನ ಕಂಕುಳಲ್ಲಿದ್ದ ಕೂಸನ್ನೂ ಮಗುವಿನ ಕಂಕುಳಿಗೆ ವರ್ಗಿಸಿ ಭದ್ರಿಸಿ) ಬುಟ್ಟ್‌ಗಿಟ್ಟೀಯಾ! ಜೋಕೆ! ಎಲೆ ಅಡ್ಕೆ ತಗಲ್ಸಿ ಏಟೊತ್ತಾಯ್ತೋ ನಾಲ್ಗೇಗೆ… ಕೂತ ನನ್ ಗಂಟಲ್ನಾ… ಎಬ್ಬರ್ಸ್ತಿನಿ ವಸಿ! [ಮಡಿಲಿನಿಂದ ಸಂಚಿಯೊಂದನ್ನು ಹೊರತಂದು. ಯಥಾ ಸೌಕರ್ಯ ತಾಂಬೂಲ ಸಾಮಗ್ರಿಗಳನ್ನು ಸಂಯೋಗಿಸಿ, ಮೆಲ್ಲುತ್ತಾ, ಈ ಸುಖವನ್ನು ಅನುಭವಿಸುವ ಆವೇಶದಲ್ಲಿ, ಮುರಿದ ಕಾಲಿನ ಅವಸ್ಥೆಯನ್ನೂ, ಮಸ್ತಕದ ಮೇಲಿರುವ ಮಕ್ಕರಿಯ ಭಾರವನ್ನೂ ಕಲ್ಕಣಜದಂತೆ ಕಂಕುಳನ್ನು ಕಚ್ಚಿ ಹಿಡಿದುಕೊಂಡಿರುವ ಶಿಶು ವೇಷಧಾರಿ ಯಾದ ಕಪ್ಪಂಕರೇ ಕಲ್ಲುಗುಂಡಿನ ಒದ್ದಾಟವನ್ನೂ ಗಮನಿಸದೇ ಹಲ್ಲು ಕಚ್ಚಿಕೊಂಡು ಹೆಜ್ಜೆ ಹಾಕುತ್ತಿರುವ “ಗುಬ್ಬಚ್ಚಿ”ಯ ಅವಸ್ಥೆಯನ್ನೂ… ಇದೆಲ್ಲವನ್ನೂ ಕೇಳಿ ನೋಡುತ್ತಾ ರೌದ್ರವನ್ನು ತಾಳಿ ಮುಷ್ಟಿಗಳನ್ನೂ ಬಿಗಿದು ಹಿಂಬರುವ ಕಿಟ್ಟಿಯನ್ನೂ ಗಮನಿಸದೇ. ಈ ಗಜಗಾತ್ರಿಯು ಮುಂದು ಮುಂದು ಮುಂದುವರಿಯುವಳು]

ಕಿಟ್ಟಿ: ಇದ್ಯಾಕೋ! ನಂದೇಶದ ಹೆಂಗಸ್ರೆಲ್ಲಾ twoವೇ two divisions ಉ!… ಹಂದಿ! ಇಲ್ಲ ಹಲ್ಲಿ!… ಉಬ್ಬು ಇಲ್ಲ ವಣಕ್ಲು!… ಆನೆ… ಇಲ್ಲ… ಅಳಿಲು! ನಂದೇಶದ ಹೆಂಗಸ್ರೇನೂ… ಯಾವ್ ಹೆಂಗ್ಸೂನೂ… ನಮ್ಮಮ್ಮ ಇಲ್ಲ ಮಗೂ ಅಮ್ಮನ್ಹಾಗೆ… ಗಾತ್ರ ಹೇಗಿದ್ರೂನೂವೆ-ದಿಲ್ಲು ನರ್ಮೀಂತ ತಿಳ್ಕೊಂಡಿದ್ದೆ! ಇವಳಾದ್ರೋ, ಹೆಂಗಸಿನ್ಹಾಗೆ ಸೀರೆ ಉಟ್ಕೊಂಡಿದ್ರೂನೂವೆ… ಬೀದೀಲ್ ಹೋಗೋ ಬಚ್ಚಾನ್ ತಲೇಮೇಲೆ ಭರ್ತಿ ಠೋಕ್ರೀನೂ ಹೊರಿಸ್ಬಿಟ್ಟು… ತಾನೆತ್ಲಾರ್ದ ಈ ಕೋಲ್ಸಾ ಭಟ್ಟೀಕೆ ಅವಲ್ಯಾದ್ನೂ. ಆವನ್ ಬಗಲಲ್ಲಿ ಬಿಠಾಯಿಸ್‌ಬಿಟ್ಟು, ಉಪ್ಕಾರ ಮಾಡಿಸ್ಕೋತಿದಾಳಲ್ಲಾ, ಮೆಲಕ್‌ಹಾಕ್ತಾ!… ಹೀಗೆ ಊರ್ನೋರೆಲ್ಲಾ ಸ್ಕೌಟುಗ್ಳೆಲ್ಲಾರ್‌ ಕೈಲಿ ಉಪ್ಕಾರ ಮಾಡಿಸ್ಕೋಳ್ತಾ ಬಂದ್ರೆ ಊರ್ನೋರ ಕೈಯಿಂದ ಪ್ರತ್ಯುಪಕಾರಾನ ಮಾಡಿಸ್ಕೊಳ್ಳೋದು ಯಾವಾಗ್ಲೋ, ಸ್ಕೌಟುಗ್ಳು?… ಯಾವಾಗೇನೂ!… ಊರ್ನೋರ್‌ ಒಬ್ಬೊಬ್ರೂ boy scouts ಆದ್ರೇನೇ… possibleಉ ! (ಮಗುವು ಹೊತ್ತಿರುವ ಮಂಕ್ರಿಯನ್ನು ಪರೀಕ್ಷಿಸಿ ) ದೇವ್ರೇಗತಿ! ಎತ್ಕೋತಾ ಕುಂಬ್ಳಕಾಯಿ. ಕುಕ್ಕೇಲಿ! ಕಾಲ್ಮುರ್ದ ಗುಬ್ಬಚ್ಚೀನ ಕುತ್ಗೇನೂ ಮುರ್ದು ಮನೇಗ್ ಕರ್ಕೊಂಡ್ ಹೋಗೋಕೆ ನನಗ್ ಹೆದರ್ಕೆ… ಎತ್ಕೋತ ನನ್ನ first duty ಉಪ್ಕಾರ ಮಾಡ್ಬೇಕಾದ್ದು, ನಾನು brother scoutಗೆ!… ಮಗೂಗೂ ಉಪ್ಕಾರಾ ಮಾಡಿ, ಪ್ರತ್ಯುಪ್ಕಾರಾನ ಮಾಡಿಸ್ಕೊಂಡು ಮಗೂ ಮನೆ ನಾರಾಯಣನ್‌ ಕೈಲಿ ಇದ್ನ ಹಲ್ವಾ ಮಾಡ್ಸಿ ತಿಂದು, ಸಂತೋಷಪಟ್ಟು. ನನಗ್‌ಮಟ್ಗೆ special rally ಮಾಡಿಸ್ಕೊಂಡು, ಪ್ರಪಂಚದಲ್ಲಿ first rally ಮಾಡಿಸ್ದ Englandದೇಶ್ದಲ್ಲಿ Walter ಕೈಯಿಂದ good turn ಮಾಡಿಸ್ಕೊಂಡ first girl guide Queen Elizabethನ ಹಾಗೆ ಈ ಕಾಲು ಹುಟ್ಟದ ಕಿರಿಗಿರಿರಂಗನ ಬೆಟ್ಟಾನ ಈ ಕ್ಷಣವೇ ಮೈಸೂರು ದೇಶದ ಮೊದಲ girl guide ಆಗಿ ಮಾಡೋದು ನನ್ನ second duty… (ಹುಷಾರಾಗಿ ಕುಂಬಳಕಾಯನ್ನೆತ್ತುವನು… ಭಾರವು ಕಮ್ಮಿಯಾಗುತ್ತಲೂ ತಿರುಗಿ ನೋಡಿದ ಮಗುವನ್ನು ಮುಖದ ರೌದ್ರದಿಂದಲೂ ತುಟಿಗಳಿಗೆ ತಗುಲಿಸಿದ ಬೆಟ್ಟಿನಿಂದಲೂ, ತೂಷ್ಣಿಸಿ)… ಆಸ್‌ಬಾಬು ವಜನ್‌… ದೊಡ್ಡಬಾಬ್ತು… ಮುಂಡಾದ್ ಮೇಲೆ ಬಿಠಾಯ್ಸಿಸ್ಕೊಂಡ್ರೋ, ಮುಂದೆ ವಿಚಾರ್ಣೆ ಆಗೋವಾಗ ಹೆಗೆಲ್ ಮುಟ್ಟಿ ನೋಡ್ಕೊಂಡು ಹೊರಗ್ಹಾಕಿ ಬಿಟ್ಟೇನು ಚೋರೀನ!… (ಕ್ಷಣಮಾತ್ರ ಯೋಚಿಸಿ ಕಾಯನ್ನು ಷರ್ಟಿನೊಳಪಡಿಸಿ) team ನಲ್ಲಿ ನಾನಿದ್ಹಾಗೆ centre forward ಉ…ಆಗ್ ನಾನಿದ್ಹಾಗೆ ಈಗ್ಲೂನ್ನೂ ಆದ್ರೆ ಇದು hopeless ಉ!… Therefore (ಕ್ಷಣಮಾತ್ರ ಯೋಚಿಸಿ ಷರಟಿನೊಳಗೆಯೇ ಕಾಯನ್ನು ಉರುಳಿಸಿ ಬೆನ್ನಿನ ಕಡೆ ರವಾನಿಸುತ್ತಾ) only chanceಉ, Chaney-Lon chaney (ಕಾಯನ್ನು ಆಗ್ರೀವಾಂತಂ ಬೆನ್ನಿಗೆ ತಿರುಗಿಸಿಕೊಂಡು) Hunch back of ನಾಟ್ರೀಡ್ಯಾಮಿ !! (ಮತ್ತೆ ಪುನಃ ಕುಕ್ಕೆಯನ್ನು ಇಣಿಕಿ ನೋಡಿ ತಲೆಯ ಟೋಪಿಯನ್ನು ತಲೆಕೆಳಗಾಗಿ ಸಿಕ್ಕಿಸಿಕೊಂಡು ತುಂಬುವಷ್ಟು ತರಕಾರಿಗಳಿಂದ ತುಂಬಿಕೊಂಡು) ಬಸವ್ವನಿಗೆ ಟೋಪಿ ಮತ್ತು ಬೆನ್ನಿನ ಮೇಲಿರುವ ಭಾರಗಳು ಕಂಡು ಬಾರದಷ್ಟು ದೂರ ಹಿಮ್ಮೆಟ್ಟಿ… ಥಟ್ಟನೆ ರೌದ್ರ ಸ್ವರದಿಂದ) constable ರಂಗಣ್ಣಾ! Halt! About turn! (ಮಗುವು ದಕ್ಷಿಣಮುಖಂ ತಿರುಗುವನು) ನಿನ್ನ ರಸ್ತೆ ನೋಡ್ಕೋಂತ ಕಳ್ಸಿದ್ದೇನು? ನೀನೀಗ ಮಾಡ್ತಿರೋದೇನು? fool !…quick march !… ಈ ಕೂಸ್ನೂ ಈ ಕುಕ್ಕೇನೂ ಈ ಓಣಿ ಕೊನೇಗೆ ಹೋಗಿ ಕುಕ್ಬಿಟ್‌ಬಾ. quick march ! (ಬೆಚ್ಚಿಬಿದ್ದ ಮಗುವು ಕಿಟ್ಟಿ ಹೇಳಿದಂತೆ ಹಾದು ಹೋಗುತ್ತಿರುವಾಗೆ) ಗುಬ್ಬೀ ಲೇ ! ಹೇಳಿದ್ಹಾಗ್ ಮಾಡಿ ಬಚಾಯ್ಸೋ ನನ್ನ್ ಇzzತ್ನಾ… Quick march !… Left… Right… Right… Left… ಓಣಿ ಕೊನೇಲ್ ಕುಕ್ಕು ಆಸ್ಬಾಬ್ನ ! ಆ ಮೇಲೆ about turn ವಾಪ್ಸು ಬಾ!

[ಬೆಚ್ಚಿ ಬಿದ್ದ ಮಗುವು. ಹಾಗೆಯೇ ಮಾಡಲು ದಕ್ಷಿಣತಃ ನಿಷ್ಕ್ರಮಿಸುವನು]

ಬಸವ್ವ: (ಕೂಸೂ ಕುಕ್ಕೆಯೂ ಹೋಗುವ ಹೆದರಿಕೆಯಲ್ಲಿ ಕಿಟ್ಟಿಯ ಟೋಪಿ, ಬೆನ್ನುಗಳನ್ನು ಗಮನಿಸದೆ ತಿರುಗಿ) ಅಯ್ಯೋ! ನನ್ ಐದಾ! ..ನನ್ ಮಕ್ರೀ!…

ಕಿಟ್ಟಿ: ಮಾತ್ಥಾಡ್ಬೇಡಿ!… ನಮ್ಮುಪ್ಕಾರ! (ಕೈಯನ್ನು ಬೀಸಿ ತೋರಿಸುತ್ತಾ) ಅಲ್ಲಿಂದಿಲ್ಲೀಗೆ ಇಲ್ಲಿಂದಲ್ಲೀಗೆ double ಉಪ್ಕಾರ… ನಿಂಕೆಲ್ಸ ಯಥಾಪ್ರಕಾರ. ಕೂಸ್ನೂ. ಕುಕ್ಕೇನೂ. ಎಲ್ಲಿ ಇಳಿಸಿದ್ರೋ ಅಲ್ಲಿಂದ್ ಮುಂದಕ್ಕೆ…

ಬಸ್ಸವ್ವ: (ಕಿರ್ಲುತ್ತಾ) ಅಯ್ಯೋ! ನೀವೋ ! ನಿಮ್ಮುಪ್ಕಾರಾನೋ !… ನನ್ ತರ್ಕಾರಿ ! ನನ್ ಕುಕ್ಕೇ… ನನ್ ಐದಾ !
[ಅರಚುತ್ತಾ, ದಕ್ಷಿಣಿತಃ ನಿಷ್ಕ್ರಮಿಸಿರುವ ಮಗುವನ್ನು ಹಿಂಬಾಲಿಸಿ ನಿಷ್ಕ್ರಮಿಸುವಳು]

ಕಿಟ್ಟಿ: [“Reverse gear” ನಲ್ಲಿ ಹಿಂದೆ ಸರಿಯುವ ಮೋಟಾರಿನಂತೆ. ತಾನು ಹೊತ್ತ ಹೊರೆಯು ಹೆಂಗಸಿಗೆ ಕಂಡು ಬರದಷ್ಟು ಹುಷಾರಾಗಿ ರಂಗದ ವಾಮತಃ ಹಿಮ್ಮೆಟ್ಟುತ್ತಾ) constable ರಂಗಣ್ಣಾ! ಓಡ್ಬಂದು join ಮಾಡ್ಕೋ ನಿನ್ನ dutyಗೆ!!

[ನಿಷ್ಕ್ರಮಿಸುವನು]

(ಮಗುವು ಕುಂಟುತ್ತಾ ಪ್ರವೇಶಿಸಿ ದಕ್ಷಿಣದಿಂದ ವಾಮವನ್ನು ಹಾದು ನಿಷ್ಕ್ರಮಿಸುವನು)

[ದಕ್ಷಿಣತಃ ನೇಪಥ್ಯದಲ್ಲಿ ಬಸವ್ವನ ಆರ್ತನವು ಕೇಳಿಬಂದು ನಿಲ್ಲುತ್ತಾ, ಬೀದಿಯ ಪಾರದೆಯು ಎದ್ದು ಮತ್ತೊಂದು ಬೀದಿಯ ಮನೆಯ ಮುಂಭಾಗವು ವ್ಯಕ್ತವಾಗುವುದು.]

ಮಗೂ: (ಹಿಮ್ಮೆಟ್ಟುತ್ತಾ ತನ್ನ ಮುಂದುವರಿಯುವ ಕಿಟ್ಟಿಯೊಂದಿಗೆ ವಾಮತಃ ಪ್ರವೇಶಿಸಿ) ಇದೇನ್ ಕಿಟ್ಟಿ! ತುರಕ್‌ ಭಾಷೇಲಿ ನೀನು ಥೇಟಾಗಿದ್ದಾಕ್ಷಣವೇ… ನಡೆಯೋದ್ರಲ್ಲೂ ಆ ಭಾಷೇನ ಬರ್ಯೋ ಹಾಗೇ ನಡೀಬೇಕೇ?

ಕಿಟ್ಟಿ: (ತಿರುಗಿ) ಬಲ್ ವzನ್ನೋ! (ಮೆಲ್ಲಗೆ ಕೂಷ್ಮಾಂಡ ಇತ್ಸಾದಿ ಶಾಕಗಳನ್ನು ರಂಗದ ದಕ್ಷಿಣಾಂತ್ಯದಲ್ಲಿಟ್ಟು) ಗುಗ್ಗುಲೇ… ನಿನ್ನ ಗರ್ದನ್ನು… ಬಗಲ್ನೂ… ದಖಾಯಿಸ್ದ… ಆ ಹಿಡಿಂಬಿ ಹತ್ರ ಲಪ್ಟಾಯಿಸಿದ ಬಾಬ್ತೋ ಇದು!

ಮಗೂ: ಓಹೋ !!… ಅದಕ್ಕೇನೋ ಬಚ್ಚಿಟ್ಟ್‌ಕೊಂಡು ನಡದಿದ್ದ್‌ ಹೀಗೆ? !

ಕಿಟ್ಟಿ: ಹೂಂ!!… ಲಪ್ಟಾಲಜೀಲಿ first rule ಉ ಮಾಲೀಕ ಮರೆಯಾಗೋವರೆಗೂ ಮಾಲನ್ನು ಮರೆಮಾಚಿ ಇಡೂl! ಹೂಂ! ಇತಿ ನನ್ನ ಅಮರಃ ! ಆ ಕಿರಾತಿಕೈಲೇ ಸಿಕ್ಕೊಳ್ಳೋದು… ಕುಂಬಳಕಾಯಿ… ಕಳ್ಳನಾಗಿ?… ನಾನು?… Poli Kitti ? Never let… it be said !… Therefore ಇಷ್ಟು ಮೆಹನತ್ತು, ಅರ್ಥ್‌ವೇ?… ಈ ಬಾಬ್ತುಗ್ಳು ನಿಮ್ಮನೇ ನಾರಾಯಣ್‌ನ ಅಡ್ಗೇ office ಗೆ ದಾಖ್ಲಾಗೋವು… ಇಲ್ಲ್‌ಬಂದ್‌ ಕೂತ್ಕೋ… (ಮಗುವು ಹಾಗೆ ಮಾಡುತ್ತಲೂ) ಇಲ್ಲ್ ನೋಡ್‌ ಮಗೂ! ನೀನ್ ಗೂಡು ಸೇರೋವರ್ಗೂ ಘಬ್ರಾಯಿಸ್ತಿರ್ತಾಳೆ ನಿಮ್ಮಮ್ಮ!… ನ್ಯಾಯ! ಹೆತ್ತ್ ಹೊಟ್ಟೇ! ದೇವ್ರೇಗತಿ!… ಮರ್ತೇಬಿಟ್ಟೆ. ನಮ್ಮಪ್ಪನ್ನ… ನಿನ್ನ ಮನೇಗ್ ಸೇರ್ಸೋ ಗಲಾಟೇಲಿ…

ಮಗೂ: ಏನ್ ಮರ್ತದ್ ಕಿಟ್ಟೀ?

ಕಿಟ್ಟಿ: ನಗ್ಬೇಡ ಗುಬ್ಬೀ… ನಮ್ಮಪ್ಪ ಹೆಣ್ಣಕ್ಸು… ನಮ್ಮಮ್ಮ್ ಸತ್ತಾಗ್ನಿಂದ ನೀನ್‌ ಮನೇ ಸೇರೋ ವರ್ಗೂ! ನಿಮ್ಮಮ್ಮ ಹೆದರ್ತಿರೋ ಹಾಗೆ ಹೆದರ್ತಿರ್ತಾನೆ ನನ್ಕೋತಿಮೂತೀನ ನೋಡೋ ವರ್ಗೂ!… ಹೊತ್ ಮುಳುಗುತ್ಲೂವೆ ನಂ ಕೇರಿನೆಲ್ಲಾ ಗಡ್‌ಗಡಾಯ್ಸೋ ನನ್ನ… ಭೂಪ್ತೀನ ಯಾವ್ ಗಾಡೀನೋ. ಯಾವ್ ಮೋಟ್ರೋ… ನಿಮ್ಮಪ್ಪ. ನಮ್ಮಣ್ಣನ್ ಹಾಗೆ. ದುಡ್ಡಿಂದ್ ಕೊಬ್ದೋರ ಕಾರಿನ ಕೆಳ್ಗೆ… ಸತ್ತಿರ್ತೇನೋಂತ… ಹೆಣ್ಣಕ್ಸಾಗಿ ಹೆದರ್ತಿರ್ತಾನೆ ಇಷ್ಟ್‌ ಹೊತ್ಗೆ… ಸಂಧ್ಯಾವಂದ್ನೇನ ಅಟ್ಸಿ… ಬೂದಿ ಬಳ್ಕೊಂಡ್ ನನ್ನ ಹಣೇಗೆ… ನಮ್ಮಪ್ನಿಗೆ ದಿಖಾಯ್ಸಿ… ಹಿತ್ಲು ಗೋಡೇನ್ ಹಾರಿ… ನಿನ್ನ ಬಂದ್ ಸೇರೋವರ್ಗೂ-ನೀನಿಲ್ಲೇ. ನಂ ಮೋಟೋ ಹಾಗೆ Be prepared ಆಗಿರ್ಬೇಕು… ಆಮೇಲೇನ್ ಇದ್ದೇ ಇದೆ… ಯಥಾಪ್ರಕಾರ (ಮಗುವಿನ ಎರಡು ಕೆನ್ನೆಗಳನ್ನು ಎರಡು ಕೈಗಳಿಂದಲೂ ಬಡಿಯುತ್ತಾ) ನೀನು… ನಿಂ ಬಂಗ್ಲೆ! ನಿಮ್ಮಮ್ಮಂಗೆ ನಿನ್‌ ಮೊಖಾಬ್ಲೆ… ನನಗೆ ನಾರಾಯಣನ ಮೊಕಾಬ್ಲೆ! ಕಾಫಿ… ಉಪ್ಪಿಟ್ಟು ಎಕ್ಸೆಟ್ರಾ… ಇಲ್ಲಿಂದ ಕದಲ್ಬೇಡ… ಬಂದೇ ಬಿಡ್ತೇನೆ… ಬಂದೇಬಿಡ್ತೇನೆ… ಅಷ್ಟ್ರವರ್ಗೂ ಜಪಿಸ್ತಿರು…

“ಕಸರತ್ ಘಟಿಯಾ ಕಭಿನಹಿ ಹಟಿಯಾ”

ಕಾಲ್ನೋಯುತ್ಯೇ?

ಮಗೂ: ಏನೂ ಇಲ್ಲ… ಮೊಣಕಾಲು… ಸ್ವಲ್ಪ…

ಕಿಟ್ಟಿ: ಒಳ್ಳೇ ಗಂಡ್ಸೋ!… ಬೊಗಳ್ಬಾರ್ದೆ?… ಶುಕ್ಲಾಚಾರಿ… ಅಲ್ಲ ಎಸ್ಸೆಮ್ಮೂ-First aid ಬಾಬತ್‌ನಲ್ಲಿ ಗೋಳಾಡಿದ್ಹಾಗೆ… “ಕಾಲೂನಕ್ಕೋಲ್ಡ್ bandageoo”…ಕದಲ್ದೆ ಇಲ್ಲೇ ಕುಕ್ಕರ್ಸ್ಕೋ! (tears his own banian into a strip; rushes out saying “ಕೊಳಾಯಿಲ್ಲೇ ಇದೆ” and re-enters with the strip soaked) ಕೊಳಾಯಿ convenient ಕಾಣೋ ಕಾಲ್‌ ಮುರ್ದೊರ್ಗೆ… (binds it around ಮಗೂ’s knee, and standing up) ಮರೀಬೇಡ ಮಗು… ಉತ್ತರಾರ್ಧ ಮರೀಬೇಡ… ಅಭಿತಕ್‌ ಪಹಿಲ್ವಾನ್ ಕಭಿನೈ ಹಟಿಯಾ” ! ಕದಲ್ಬೇಡ ಇಲ್ಲಿಂದ !… ಬಂದೇ ಬಿಡ್ತೇನೆ.
[Exit]

ಮಗೂ: ಈಗ ಯಾರನ್ ನಂಬೋದೋ ಕಾಣೆ… ಒಂದ್‌ಕಡೆ ಜಂಬದ್‍ಕೋಳಿ ರಾಘು… ಒಂದ್‌ಕಡೆ ಅಮ್ಮ… ರಾಘು ಹೇಳೋದೋ.., “ಆ ಪೋಲಿ ಸಹವಾಸ ತಪ್ಪೂ”ಂತ… ಅಮ್ಮನೋ”ನೀನು ಬಂದ್ ಮನೆ ಸೇರ್ದ್ಯಲ್ಲಾ, ಕಿಟ್ಟಿ ಮನೇಲಿ ಏನು, ಹ್ಯಾಗಿದೆ ವಿಚಾರಿಸ್ದ್ಯಾ” ಅಂತಾಳೆ… ಇವನ್ ಹೇಳ್ದ್ ಹಾಗೆ ಥೇಟ್‌ ಪೋಲೀನೇ ಇವ್ನು… ಬೇಡದ್‌ ಕುಸ್ತೀನ ನನ್ ಕೈಲ್‌ಮಾಡ್ಸಿ… ಕಾಲ್ ಮುರ್ಸಿ… Cold Bandage ಕಟ್ಟಿ ಕುಕ್ಕರ್ಸಿಸಿ ನಡುರಸ್ತೇಲಿ … ಜಪಿಸ್ತಿರೂಂತ ಹೇಳ್ಬಿಟ್ಟು ಹೋಗಿಧಾನೆ. ಆದ್ರೂ ರಾಘು ಜಂಬದ್ಕೋಳೀನೆ… ಅಮ್ಮ ಅಮ್ಮನೇ… ಅಮ್ಮ ಹೇಳೋಹಾಗೆ ಕಿಟ್ಟಿ ಕಿಟ್ಟೀನೆ ! ಸರಿ ! “ಕಸರತ್ ಘಟಿಯಾ, ಕಭಿನಹಿ ಹಟಿಯಾ, ಕಭಿನಹಿ ಹಟಿಯಾ, ಅಭಿತಕ್‌ ಪಹಿಲ್ವಾನ್‌, ಕಭಿನಹಿ ಹಠಿಯಾ”… ಇದೇನ್ ಬೆಳ್ಕು !… ಹಯ್ಯೋ ! ಬೆಂಕಿ !!

[ತಾನು ಕುಳಿತಿರುವ ಮನೆಯ ಮುಂಭಾಗದಲ್ಲಿರುವ ಬಾಗಿಲು ಕಿಟಕಿಗಳು ಥಟ್ಟನೆ ಬೆಳಕು ತುಂಬಿರುವುದನ್ನು ಗಮನಿಸಿ]

ಅಯ್ಯೋ! ಇದೇನಿದು… ಬೆಳ್ಕು ಅಲ್ಲ ಬೆಂಕಿ… ಒಳಗೆ ಯಾರೋ ? (ಕಿವಿಯನ್ನು ಚಾಚುತ್ತಾ)
ಹಯ್ಯೋ! ಕಿರ್ಲ್ಲುತಿಧಾರೆ (ಎದ್ದು ಕುಂಟುತ್ತಾ ಬಾಗಿಲನ್ನು ಸಮೀಪಿಸಿ) ಹಯ್ಯಯ್ಯೋ… ಹೆಂಗ್ಸು ಯಾರೋ… (ಹೆದರಿ) ಓಹೋ! ಮರ್ತೆ, (ಜೇಬಿನಿಂದ ಸೀಟಿಯನ್ನು ಸಳೆದು ಊದಿ)

[ನೇಪಥ್ಯದಲ್ಲಿ “ಹಯ್ಯೋ… ಇನ್ನೇನ್‌ ಗತೀ”]

ಇದೋ ! ಬಂದೇಮ್ಮಾ

[Exit through door]

[Re-enter limping, dragging a woman, latter shouting “ಕೂಸೂ… ಕೂಸು”… “ಇವ್ರು”!]

ಮಗೂ: ನೋಡ್ಡೇಮ್ಮಾ… ತೊಟ್ಟಲ್ನ… ಇಲ್ಲೇ ಇರಿ… ಎತ್ಕೊಂಡ್ ಬರ್ತೇನೆ. ಭಯಪಡ್ಬೇಡಿ… ನಂಬೀಮ್ಮಾ (blows the whistle again) ಯಾಕ್ ಬರ್ಲಿಲ್ಲ ಯಾರೂ? ಕಿಟ್ಟೀನೂ ಇಲ್ಲ ! ಇನ್ನೂ ಅವ್ನ್ ಇದ್ಧಿದ್ರೆ… (Exit as before… Re-enter with baby in cradle) ಇಕೋ ಕೂಸೂಮ್ಮಾ.

ಈಕೆ: (ತೊಟ್ಟಿಲು ಸಮೇತ ಮಗುವನ್ನು ಅಪ್ಪಿಕೊಂಡು)… “ಇವ್ರು”…! ?

ಮಗೂ: ಎಲ್ಲಮ್ಮಾ? (ಭಯದಿಂದ ಜ್ವಾಲೆಯನ್ನು ಕಾರುತ್ತಿರುವ ದ್ವಾರವನ್ನು ಸಮೀಪಿಸಿ) ಹಯ್ಯೋ ! ಯಾರೋ ಕಿರ್ಲ್‌ತಿಧಾರೆ ವಳಗ್ ಸಿಕ್ಕೊಂಡು… ಗಂಡ್ಸು “ಬೆಂಕಿ ಬೆಂಕೀ”ಂತ!

ಈಕೆ: ಹಯ್ಯೋ ಇವ್ರೇ! ಜ್ವರ… ನಿತ್ರಾಣಿ… ಪಡಸಾಲೇಲಿ… ಇನ್ನೇನ್ ಗತೀ!!!!
[ತೊಟ್ಟಿಲಿನಲ್ಲಿರುವ ಮಗುವನ್ನು ಬಿಟ್ಟು ಹೋಗಲಾರದೆಯೂ, ಪತಿಯ ಸಮೀಪಕ್ಕೆ ಹೋಗಲಾರದೆಯೂ, ಬಾಗಿಲಿಗೂ, ತೂಟ್ಟಿಲಿಗೂ, ಹಾರಾಡುತ್ತಿರುವಳು.|

ಮಗೂ: (ಸೀಟಿಯನ್ನು ಮತ್ತೊಂದು ಸಲ ಊದಿ. ನಡುಗುವ ಧ್ವನಿಯಿಂದ) ಭಭಭಭಯ ಪಡ್ಬೇಡೀಮ್ಮಾ [Exit! Re-enter after fully a minute with the man. The man sits down and wife’s-attentions to revive him sucoeed]

ಮನೆಯಾತ: (ಕಣ್ಣು ತೆರೆಯುತ್ತಾ) ಎಲ್ಲಿಧೇನೆ ! (ಥಟ್ಟನೆ) ಹಯ್ಯೋ ಹೌದು ಬೆಂಕಿ (to wife) ಇಧೀಯಾ (grabbing his wife’s hand) ಕೂಸು ಭದ್ರವೇ?

ಈಕೆ: ಹೂ… (ಮಗುವನ್ನು ತೋರಿಸಿ) ನಂ ಭಾಗದ್ ದೇವ್ರ ಹಾಗೆ ಬಂದ ಈ ಹುಡುಗನ್ ಧೈರ್ಯದಿಂದ… ಮನೇನೂ ಸಾಮಾನೂ ಬೆಂಕಿ ಪಾಲಾದ್ರೂನೂವೇ. ನಾವ್‌ಭದ್ರ… ಹ್ಯಾಗ್ ಬಿತ್ತೀ ಬೆಂಕಿ…? ಮುಂದಿನ್ಕೋಣೆ ಸೀಮೆ ಎಣ್ಣೆ ದೀಪಾ ಏನಾದ್ರೂ…? ಇಲ್ಲ ಪಡ್ಸಾಲೇಲಿ ಪೆಟ್ಗೆ ಪಕ್ಕದಲ್ಲಿ ಇಟ್ಟ ದೀಪಾ ಏನಾದ್ರೂ?… ಇಲ್ಲ ನಾ ಬರೋವಾಗ್‌ ಕೂಡಾ ಉರೀತಾ ಇತ್ತು ಸರ್ಯಾಗಿ.

ಮನೆಯಾತ: ಪೆಟ್ಗೆ ಅಂದರೆ ಜ್ಞಾಪ್ಕ ಬರುತ್ತೆ… ಹಯ್ಯೋ ಪೆಟ್ಗೆ ಮುಚ್‌ಲೂ ಇಲ್ಲ. ಬ್ಯಾಂಕ್ನಲ್ ನಂಬ್ಕೆ ಇಲ್ದೆ ಮೂರ್‌ವರ್ಷ್‌ದಿಂದ ದುಡ್ದು ನೋಟ್‌ನೋಟಾಗಿ
ತುಂಬಿಟ್ಟಿದ್ದೆ… ಹಯ್ಯೋ! ಇನ್ನ್‌ ಬದುಕಿತಾನೇ ಏನು ಪ್ರಯೋಜ್ನ… ಮನೇನು ಹೋಗಿ ಇದ್ದ್ ದುಡ್ಡೂ ಹೋದ್ಮೇಲೆ ಮನೆಮನ್ಗೂ ಹೋಗಿ ಭಿಕ್ಷಾ ಬೇಡೋದೇ? ಕೆಟ್ವಲ್ಲಾ (gradually crawls up to the door and pointing) ಹಯ್ಯೋ ಇಲ್ಲೇ ಇಧೆ… ನನ್ನ ಕಣ್ಣಿಗ್‌ ಕಾಣ್ಸೋ ಹಾಗಿಧೆ… ನನ್ ಮೈಗಾನ ನೆಟ್ಟ್‌ಗಿದ್ದಿದ್ರೆ ನಾನೇ ಹೋಗ್ತಿದ್ದೆ… (to ಮಗೂ). ಅಪಾಯ ಹೌದು… ಆದ್ರೂ ಅಷ್ಟ್‌ಕಷ್ಟ್‌ವಲ್ಲಾ… ಇಲ್ಲೇ ಇಧೆ ಆ ಮಗು ತೊಟ್ಲಿತ್ತು ನೋಡು ಅಲ್ಲೇ… ಅದರ್ ಪಕ್ದಲ್ಲೇ… ಒಂದೆರಡ್ ಹೆಜ್ಜೆ ಮಗು ಅಷ್ಟೆ!…

ಈಕೆ: ಅಯ್ಯೋ ! ಬೇಡೀಂದ್ರೆ… ಬೆದ್ರೋ ಹಾಗಿಧೆ ಆ ಮಗು… ಯಾರ ಮಗೂನೋ ಪಾಪಾ… ಅದಿಷ್ಟ್‌ಮಟ್ಗೆ ಮಾಡಿದ್ದೇ ಎಷ್ಟೋ ಉಪ್ಕಾರಾಂದ್ರೆ… ಹಯ್ಯೋ! ಒಂದ್‌ ಪ್ರಾಣಿ ಇಲ್ವೇ ಈ ಹಾಳಾದ್‌ ಬೀದೀಲೀ?… ಒಬ್‌ಗಂಡ್ಸಿದ್ದಿದ್ರೆ?

ಮಗೂ: (at once) ಯಾಕಮ್ಮಾ ನಾನೇನ್ ಹೆಂಗ್ಸೆ? ಕಾಲು… ಪರ್ವಾ ಇಲ್ಲಮ್ಮಾ… ಯಾಕ್‌ಬರ್ಲಿಲ್ವೋ ಇನ್ನೂ ಯಾರೂ?

[blows whistle and steps towards door]

ಈಕೆ: ಹೆರ್ದಕ್ಕೆ ಇದ್ರೆ ಬೇಡಾ ಮಗೂ! ಬೇಡ… ಬೆಂಕಿ… ನಮಗೆ… ಲಭ್ಯವಿದರೆ… ಗಂಡಸ್ರು ಯಾರಾದ್ರೂ…

ಮಗೂ: (indignantly) ನಾನ್ ಹೆಂಗ್ಸಲ್ಲಮ್ಮಾ…ನಾನ್ ಗಂಡ್ಸು! ನನ್ಕಾಲ್‌ಗಾನಾ
ಸರೀಗಿದ್ದಿದ್ರೆ… ಬೆಂಕಿ ಆದ್ರೂನೂ… ಕಿಟ್ಟಿ ಹೇಳಿಧಾನೆ. ಹೆಂಗಸ್ರೇ ಬೆದರ್‌ತಿರಲಿಲ್ವಂತೆ. ಕಿಟ್ಟೀಗಾನಾ ಈಗಿದ್ದಿದ್ರೆ? ಈಗ ನಾನ್ ಹೆದ್ರಿದ್ರೆ… ಹೆಂಗ್ಸೂ ಅಂದ್ ಬಿಡ್ತಾನೆ… ಗೊತ್ತು! ಹೇಗಿದ್ರೂ ಬಂದೇ ಬಿಡ್ತಾನೆ… ಆ…ಭಿ…ತ…ಕ್…ಪ…ಹಿ…ಲ್ವಾನ್…ಕ…ಭಿ…ನೈ…ಹ…ಟಿ…ಯಾ (muttering, blows the whistle hysterically; finding no immediate response enters the burning building)

[A sudden stream of men and women, and scouts. all shrieking and shouting incoherently in questions asked; the forlorn
family’s answers given; is hushed by S-M’s entrance, who takes in the situation and plants himself at the door of the burning building]

ಸ್ಕೌಟು ಮಾಸ್ಟರ್: Ranga Rao !…run to the Police Station !… Phoneoo.. fire brigadeoo! ಇಲ್ದಿದ್ರೆ ಬಕೆಟ್ಸು, water house ಉ… ನರಸಿಂಹ ಮೂರ್ತಿ, ರಾಮಣ್ಣ, ರಂಗಣ್ಣ, ನೆರೆಹೊರೆಯೋರ್‌ಮನೆ… ಚೆಂಬು… ಬಿಂದ್ಗೆ… ಕೊಳಾಯಿ must be near!!…

[A number of Scouts press against him]

ಅಪ್ಪೂ: Scout ಸಿಕ್ಕಿಕೊಂಡಿಧಾನ್ ಸಾರ್ ವಳ್ಗೇ !!…

ಸ್ಕೌಟು ಮಾಸ್ಟರ್: ಹ್ಯಾಗ್‌ ಗೊತ್ತೋ!

ಅಪ್ಪೂ: ಈಕೆ ಹೇಳ್ತಾರ್ ಸಾರ್‌! “ನಿಂಹಾಗೆ ಹಸುರ್‌ರುಮಾಲ್… ಕಟ್ಟಿದ್ದಾ ಚಿಕ್‌ಹುಡ್ಗ… ಕುಂಟ್ತಾ ವಳಗ್ಹೋಧಾಂತ… ಅಯ್ಯೋ ಮಗು ಸಾರ್!… ರೆಸ್ಲಿಂಗ್ನಲ್ಲಿ ಏಟ್‌ತಿಂದು… ಅವ್ನೇ ಇರ್ಬೇಕ್‌ ಸಾರ್… ಮಗೂನೇ ಸಾರ್‌… ವಳಗ್‌ಸಿಕ್ಕೊಂಡಿಧಾನೆ. ಸಾರ್ !…

ಸ್ಕೌಟ್‌ ಮಾಸ್ಟರ್: ಮಗು ಆಗ್ಲಿ ಯಾರೇ ಆಗ್ಲಿ… ಈಗ ಒಳಗ್ಹೋಗಿ ಬರೋದು hopelessoo!

[puts his hand against door rigidly and blows whistle repeatedly]

ಅಪ್ಪೂ : ರಾಘು ಲೇ, ಶಾಮೀ, ತಮ್ಮೂ, ಮಗು ಸಿಕ್ಕೊಂಡಿಧಾನೆ ಕಣ್ರೋ! ಕತ್ತೆಗಳ್ಹಾಗೆ ನೀವ್‌ ಬೇಕಾದ್ರಿಲ್ಲಿ ನಿಲ್ಲಿ… ನನ್ಕೈಲಾಗೋದಿಲ್ಲ! ನುಗ್ಗೇಬಿಡೋಣ ಒಳ್ಗೆ! S.M. or no S.M.! ಬರ್ರೋ ಹೆಣ್ಣಕ್ಸ್!

ರಾಘು: ಹೌದು ಸಾರ್… ಮಗು ಸಾರ್… ಗುಬ್ಬಚ್ಚಿ ಸಾರ್‌… ಸುಮ್ನಿರ್ಬಾರ್ದು ಸಾರ್‌ ನಾವು

ಸ್ಕೌಟು ಮಾಸ್ಟರ್‌ : (pushing them back and being pushed back) ತಪ್ಪು ಕಾಣ್ರೊ Fools !… ಒಬ್ಬ ಸಾಯ್ತಿದ್ರೆ ನೀವೆಲ್ಲಾ ಸಾಯೋದ್ ತಪ್ಪೂ ಕಾಣ್ರೋ… Get Back! Get back !!

[All this while, thick flames of smoke have been issuing out of the door and an unequal struggle between a sensible S.M. and hot headed hysterical scouts goes on, with the S.M being worn down. with a great gaping crowd of men and women around them, watching helpless and whispering inane platitudes. Suddenly, behind the scenes, Kitti’s voice, first faint, but gradually growing stronger, is heard.]

“ನಬಿಕತು ಛೋಡ್ಕೇವಾಃ !
ನಬಿಕೇ ಸಾತ್‌ ಫಿರ್ ನಿಕಲ್ಯಾವಾಃ!
ಮೇರೆ ಷೇರಾಲಿ… (ರಾಗ-ಮಾಂಡ್)

ಈ Engine markoo too Strongooಪ್ಪ ಇದು ನನಿಗ್ಬೇಡ ಕರೀಂ ಬೇಡಿಯೇ ಬೇಕು.

ಕಿಟ್ಟಿ : (in panche and torn banian with forehead ashed white, smoking a beedi) ಇದೇನ್ ಗಲಾಟೆ?… ಮನೆ… ಬೆಳ್ಕು… ಜನಗ್ಳು… ಮದ್ವೆ… ಹಯ್ಯೋ ಶುಕ್ಲಾಚಾರಿ… ತಕೋ… ಎಲ್ಬಂದ್ರೂ ಇವನ್ ಸ್ವರೂಪ.

ಸ್ಕೌಟು ಮಾಸ್ಟರ್: ಯಾರದು ? ಕೃಷ್ಣ್ರಾವ್!!

ಕಿಟ್ಟಿ: ಕ್ಷಮ್ಸಿ ಸಾರ್, ತಿರ್ಗೂ ಡ್ರಿಲ್ಲಂತೆ ನನಗೆ ಗೂತ್ತಿಲ್ಲ ಸಾರ್… ಕಿತ್ತ್‌ಹಾಕ್ಬಂದೆ ಸಾರ್ ನನ್ ಯೂನಿಫಾರಂನ !

ಸ್ಕೌಟು ಮಾಸ್ಟರ್: ಕೃಷ್ಣ್ರಾವ್! come here! ಬೆಂಕಿ, ಮನೆ, ನನ್ನ ತಳ್ತಿಧಾರೆ
ಹುಡುಗ್ರು… help-help! ರಾಘೂನ್ ಗ್ಯಾಂಗ್ನ ಹಿಂತಳ್ಳೋಕೆ help-help ಮಾಡು!!

ಕಿಟ್ಟಿ: ಏನ್ ಜಂಬದ್ಕೋಳಿ ಪಟಾಲಂ ನಿಂಮ್ಮೇಲ್ ಕೈಯೇ? (Jumps to S.M.’s side, pushing the crowd back) ಇದು ಲಡತ್ತು ಸಾರ್ ! (Fisting the faces pressing on him) ಹ್ಯಾಗಿವ್ಯೋ ಉಂಡೆಗ್ಳು ?

ಅಪ್ಪೂ: ಮಂಕೂ, ಲೇ ! ಮಗು ವಳಗ್ ಸಿಕ್ಕೊಂಡಿಧಾನೋ ?!

ಕಿಟ್ಟಿ : ಮಗು?… ವಳ್ಗೆ?…

ಅಪ್ಪೂ: ಹೂಂ, ಕಾಣೋ, ಅವನ್ನ ಎಳ್ಕೊಂಬರೋಕೆ ಬಿಡೋದಿಲ್ಲ ಎಸ್ಸೆಮ್ಮೂ!

ಸ್ಕೌಟು ಮಾಸ್ಟರ್: Hopeless ಕೃಷ್ಣ್ರಾವ್!ಒಬ್ಬ scout ನ save ಮಾಡೋಕ್ ಹೋಗಿ ಹತ್ ಸ್ಕೌಟುಗ್ಳು ಸಾಯೋದ್ ತಪ್ಪು!

ಕಿಟ್ಟಿ: (flaring up) ಒಳ್ಳೇ ತಪ್ಪೂ ಸಾರ್!? ಮಗು ವಬ್ಬ ಸ್ಕೌಟ್ ಅಲ್ಲಾ! Brigade Brigade ಏ ಅವ್ನು ಸಾರ್!
[steps inside the door]

ಸ್ಕೌಟು ಮಾಸ್ಪರ್: (Grabbing Kittis hand) ಕೃಷ್ಟ್ರಾವ್, ನೀನ್ ಹೊರಟ್ಹೋದ್ರೆ ಇವ್ರೆಲ್ಲಾ ನುಗ್ತಾರೆ ನಿನ್ ಹಿಂದೇ…!

ಕಿಟ್ಟಿ: (turning round and facing the others) ಲ್ರೋ, ಮಗೂನ್ ತರೋದ್ ನನ್ಭಾರ, ವಳಗ್ ಗಿಳಕ್ ಬಂದ್ರೋ ಗರ್ದನ್ ಕತ್ತರಿಸ್ತೇನೆ… ತೆಪ್ಗೆ ಇಲ್ಲೇ ನಿಂತಿರಿ.

[is lost in the smoke]

[Enter some men and scouts with buckets and water and a few policemen too, chucking water at windows and doors and Exit through door and return]

Policeman: ಒಳ್ಗೆ ಹೋಗೋದಾಗೋದಿಲ್ಲ, ಹೊಗೆ ಬಲ್ ಜಾಸ್ತಿ… (looking at side-wing left) ಅಕೋ. Inspector ಬಂದ್ರು.

[Enter more constables and Inspector]

[Sound of a passing car stopped; heard from within.]
(a voice from inside) ಏನದ್ ಗಲಾಟೆ ವಿಚಾರಿಸ್ಕೊಂಬನ್ನಿ. Trouble ಏನು ? (car engine stops)

Another Voice: ಚಿತ್ತ.

[Enter a gentleman. with turban. long black close-collar coat, white trousers and lace ಕಮ್ಮರ್ ಬಂದ್]

Gentleman: (addressing Inspector) ಏನಿದ್ ಗಲಾಟೆ?… (ಹತ್ತಿರಕ್ಕೆ ಹೋಗಿ Inspector ಕಿವಿಯಲ್ಲಿ ಗುಸುಗುಟ್ಟುತ್ತಲೇ, ಆತನು ಬೆಚ್ಚಿಬಿದ್ದು ನೆಟ್ಟಗೆ ನಿಂತು ರುಮಾಲು ಬಟ್ಟೆ ನಡುಕಟ್ಟುಗಳನ್ನು ಸರಿಮಾಡಿಕೊಂಡು.)

Inspector: ಏನು ಇಲ್ಲೇ ಇಧಾರ್ಯೇ ?

Gentleman: ಹೌದು carನಲ್ಲಿ !

Inspector: Fall in !

[Police ನವರು ಲೈನಾಗಿ ನಿಲ್ಲುವರು]

Inspector: “Shun”
[Police ನ ಲೈನು ನಿಷ್ಕಂಪವಾಗಿ ನಟ್ಟುಕೊಳ್ಳುವುದು.]

ಸ್ಕೌಟು ಮಾಸ್ಟರ್ : ಇದೇನ್ ಇನ್ಸ್ಪೆಕ್ಟ್ರೇ ಡ್ರಿಲ್ಲು ಈಗ ?
[Inspector S.M. ಕಿವಿಯಲ್ಲಿ ಗುಸುಗುಟ್ಟುವನು.]

ಸ್ಕೌಟು ಮಾಸ್ಟರ್ : (ಬೆಚ್ಚಿ ಬಿದ್ದು) Boys, Fall in !
[ಸ್ಕೌಟು ಹುಡುಗರು ಪಂಕ್ತಿ ಪಂಕ್ತಿಯಾಗಿ ನಿಲ್ಲುವರು.]

[ಇಷ್ಟರಲ್ಲಿ ಇಲ್ಲಿಯ ವರ್ತಮಾನವನ್ನು ವಿಚಾರಿಸಿ ತಿಳಿದುಕೊಂಡ ದೊಡ್ಡ ಮನುಷ್ಯರು ನಿಷ್ಕ್ರಮಿಸಿ, ಇಷ್ಟು ಹೊತ್ತಿಗೆ ಪುನಃ ಪ್ರವೇಶಿಸುವರು.]

Inspector: ಅಕ್‌ಪಕ್ದಿಂದ ನೀರೆರ್ಚಿ ನಿಲ್ಸೊಕೆತ್ನ ಪಡ್ತಿಧಾರೆ… ನಿಲ್ಸೋದು ತಕ್ಮಟ್ಗೆ ಅಸಾಧ್ಯ.

Chief Scout: (Entering) ಯಾಕೆ, Fire Brigade ಇಲ್ಲೇ ಊರ್ಲಿ?

Gentleman: ಇಲ್ಲ, ಮಹಾಸ್ವಾಮಿ… municipality… afford ಮಾಡೋದು ಕಷ್ಟ!

Chief Scout: (Turns round, gravely accepting the salutations round him, advances) ಯಾರ ಮನೆ ಇದು! lifeಗೇನಾದ್ರೂ danger ಏ?

Inspector: ಇಲ್ಲ ಮಹಾಸ್ವಾಮಿ!………………. ಮನೇವ್ರು… ಅವ್ರ ಹೆಂಡ್ತಿ, ಮಗು. Safe ಆಗ್ ಬಂದ್ಬಿಟ್ರು.

ಅಪ್ಪೂ : ಒಳ್ಳೇ lifeಗೆ danger ಇಲ್ಲ! (to S. M.) Scouts ಸಿಕ್ಕೊಂಡ್‌ ಇದಾರೇಂತ್ ಹೇಳಿ ಸಾರ್!

Chief Scout: ಏನು ! scouts ಸಿಕ್ಕೊಂಡಿಧಾರ್ಯೆ ವಳ್ಗೆ ?

ಸ್ಕೌಟು ಮಾಸ್ಟರ್: (advancing and saluting) ಹೌದು ಮಹಾಸ್ವಾಮಿ, ನಾವ್ ಬರೋಷ್ಟ್ರಲ್ಲಿ ಒಬ್ಬ Scout ಹೋಗಿದ್ದ… ಏನೋ property ನೋ… ಏನೋ (doubtfully looks around him.)

ಅಪ್ಪೂ: ಮೊದ್ಲು ಮನೇಲಿದ್ದೋರ್ನ ಒಬ್ಬೊಬ್ಬರ್ನಾಗಿ rescue ಮಾಡ್ಬಿಟ್ಟು, ಆಮೇಲೇನೋ ದುಡ್ಡಿನ್ ಪೆಟ್ಗೆ ಇದೇಂತ ಹೇಳಿದ್ರು. ಅದನ್ ತರೋಕೆ ಹೋದ್ನಂತೆ ! ಆಮೇಲಿನ್ನೊಬ್ಬ Scout ಹೋದ!

ಸ್ಕೌಟು ಮಾಸ್ಟರ್ : ಅಷ್ಟು ಹೊತ್ಗೇನೆ enter ಮಾಡೋದು fataloo ಅಂತ ನಿಶ್ಚಯಿಸಿ ಕೊಂಡು ತಡೀತಿದ್ದ ನನ್ನೇ ತಳ್ಬಿಟ್ಟು… ಹೋದ ಆ ಹುಡ್ಗ…!

Chief Scout: ಏನು:? ನಿಮ್ಮನ್‌ ತಳ್ಬಿಟ್ಟು…? ಹುಡ್ಗ…? (to Appu) ಏನು, fellow scout ನ rescue ಮಾಡೋಕೆ?

ಅಪ್ಪೂ: Scout ಅಂಬೋ… ಅಂಬೋದೊಂದೇ ಅಲ್ಲ Sir…ಮಗು ಮೊದ್ಲು ಹೋದೋನು… ಚಿಕ್ ಹುಡ್ಗ… ಚಿಕ್ scoutoo…ಚಿಕ್‌ ಕಬ್ಬು… ರೆಸ್ಲಿಂಗ್‌ನಲ್ಲಿ ಕಾಲ್‌ಬೇರೆ ಮುರ್ಕೊಂಡ ಇವತ್ತು… ಅವ್ನೇ ಮೊದಲ್‌ ಹೋದ್ದು (pointing to couple) ಇವರ್ನೂ, ಇವರ್‌ ಕೂಸನ್ನೂ, ಒಬ್ಬೊಬ್ಬರ್ನಾಗಿ ಹೊರಕ್‌ ಸಾಗ್ಸಿ, ಇವರ್ ದುಡ್ಡಿನ್‌ ಪೆಟ್ಗೆ ತರೋಕೆ!… ಆಮೇಲೆ ಪೋಲಿ… ಕಿ… ಅಲ್ಲ… ಆ… ಎರಡ್ನೆಯೋನೂ ಒಳಗ್ಗ್ ಹೋದದ್ದು ಮಗೂಂತ್ ತಿಳೀತ್ಲೂನೂವೆ… ನಮ್ಮನ್ನೆಲ್ಲ ದಬಾಯಿಸ್ಬಿಟ್ಟು ವಳಕ್‌ ನುಗ್ಗಿದ್ದು… ಅವರ್ ಮದರ್ಗೆ ಮಾತ್ ಕೊಟ್ಟಿದ್ದ ಮಹಾಸ್ವಾಮಿ…!

Chief Scout: ಯಾರ್‌ ಮದರ್ಗೆ… ಏನ್ ಮಾತು? ಯಾರು ಕೊಟ್ಟಿದ್ದು!

ಅಪ್ಪೂ: ಆ ಚಿಕ್ಕ್ ಹುಡುಗ್ನ ಮದರ್ಗೆ… ದಿನಾ ಮಗೂನ ಮನೇಗ್ ತಂದ್ ಸೇರಸ್ತೇನಂತ ಒಪ್ಕೊಂಡು ದಿನಾ ಕರ್ಕೊಂಡ್ ಹೋಗಿ ಅವರ್ ಮನೇಲಿ ಬಿಡ್ತಿದ್ದ… ಇವತ್ತೂ ಮಗು ವಳ್ಗಿಧಾನೇಂತ ತಿಳೀತ್ಲೂವೆ… ಹ್ಯಾಗಾದ್ರೂ…

Chief Scout: ತ್ಸು! ತ್ಸು! ತ್ಸು!… ಬೆಂಕಿ ಬಿದ್ದ್ ಮನೇಗ್ ಮೂರ್ ಸಲ ನುಗ್ಗಿ ಮೂರ್ ಲೈವ್ಸ್ ಸೇವ್‌ಮಾಡಿ, ತಿರ್ಗೂ ನುಗ್ಗಿದ್ನೇ?…cub ಏ… ಯಾರದು… ದುಡ್‌ ತರೋಕೆ?… ಯಾರ ದುಡ್ಡು?

ಮನೆಯಾತ: ನಂದು ಮಹಾಸ್ವಾಮಿ… ಕ್ಷಮ್ಸಿ (ಏಳಲುಪಕ್ರಮಿಸಿ, ಆಗಲಾರದೇ ತಿರುಗಿ)…

ಒಬ್ಬ Scout: ರೋಗಿ ಮಹಾಸ್ವಾಮಿ!

Chief Scout: (ರೋಗಿಗೆ) ಪರ್ವಾ ಇಲ್ಲ… ಏಳ್ಬೇಡಿ ಕೂತ್ಕೊಳ್ಳಿ.

ಮನೆಯಾಕೆ: (ಗಂಡನಿಗೆ) ಅಯ್ಯೋ ಹೇಳೀಂದ್ರೆ! ಏನು ತಿಳ್ಕೊಂಡಾರಾತ… “ತಾನ್ ಬೀಳೋಕ್ ಬೆದ್ರಿ ಕಂಡೋರ್ ಮಗೂನ ಬೆಂಕೀಲಿ ದಬ್ಬಿದ್ರೂ” ಅಂದ್ಕೊಂಡಾರು… ಹೇಳೀಂದ್ರೆ ಹೆದರ್ಬೇಡಿ!

ಮನೆಯಾತ: ಕ್ಷಮ್ಸಿ, ಮಹಾಸ್ವಾಮಿ-ಮುದ್ಕ… ನಾನ್ ಕೂಡಿ ಹಾಕಿದ್ದ್ ದುಡ್ಡೆಲ್ಲಾ ಇತ್ತಾ ಪೆಟ್ಗೇಲಿ. ಇಲ್ಲೇ ಹತ್ತಿರ್ದಲ್ಲೇ ಇತ್ತೂ… ಅಪಾಯವೇನೂ ಇಲ್ದೆ… ಹೆದರ್ದೆ… ಹೋದ ಆ ಹುಡ್ಗನ್ ಧೈರ್ಯದಿಂದ ಮೋಸ ಹೋದೆ ಮಹಾಸ್ವಾಮಿ! (ಬಿಕ್ಕಿ ಅಳುವನು.)

Chief Scout: ಹೌದು!? ಅಷ್ಟ್ ದುಡ್ಡೂ ಪೆಟ್ಗೇಲಿಡೋದೆ ? ಈಗ ಆ ಮಗು… ಇನ್ನ್ ಅವನ ಮದರ್ಗೆ ಮಾತ್‌ಕೊಟ್ಟೇಂತ ಇನ್ನೊಬ್ನೂ… ಸಿಕ್ಕೊಂಡಿಧಾರೆ…! (to Inspector) Inspector, can nothing be done ?

Inspector: Everything that is possible is being done, Sir!… detached… houseoo… neighboursಗೇನೂ ಅಪಾಯ್‌ವಿಲ್ಲ… ಹಿಂದ್‌ಗಡೆ ನೀರ್ ಎರ್ಚ್‌ತಿದಾರೆ!… ಆದ್ರೆ ಈ scouts ನ rescue ಮಾಡೋದು, (drops his eyes) ಸ್ವಲ್ಪ…

Chief Scout: How awful!!?… Two scouts being roasted alive! (ನಿಟ್ಟುಸಿರುಬಿಡುತ್ತಾ)… ಸುಮ್ನೆ ನಿಂತ್ಕೊಂಡ್‌ ಹ್ಯಾಗೆ watch ಮಾಡ್ತಿರೊದು? ನಾವ್‌ ನಾವುಗ್ಳು comfortable ಆಗಿರೋವರ್ಗೂ everything is all right around us,ಊ ಅಂತ ಸುಮ್ನಿದ್ದ್ ಬಿಡ್ತೇವೆ… ಥಟ್ಟಂತ ಹೀಗೇನಾದ್ರೂ ಒಂದು happen ಆಗುತ್ತೆ… ಆಗ್ ಗೊತ್ತಾಗುತ್ತೆ. ನಮ್ಮ helplessnessoo-awful! (His eyes seem to suddenly hear something inside the house) ಏನದ್ scuffleಉ? ನೋಡಿ!… ಎಲ್ರೂ ಹೋಗ್ಬೇಡಿ… ಸ್ವಲ್ಪ ನೀರೆರ್‍ಚಿ… ಆ smoke clear ಆದ್ರೆ ಒಳಗ್ಗ್ ಕಾಲಿಡಿ! ಏನೊ! steps ಕೇಳಿಬರುತ್ತೆ (moves forward to the door himself.)

Scout Master and Inspector: ಕ್ಷಮ್ಸಿ ಮಹಾಸ್ವಾಮಿ! ತಾವು ಹೀಗೆ ಬರಬೇಕು.

Chief Scout : Indignantly ನಾನಿರ್ಲಿಂದ್ರೆ… ಅಲ್ನೋಡಿ!

[A few of the Scouts, who have gone out and returned with buckets of water, go a step into the door, and emptying the buckets in the air… Re-enter]

The two Scouts : (In excited tones, but breathing hard as though choked by the smoke) ಬರ್ತಿರೋ ಹಾಗಿದೆ… ಯಾರೋ…

[Everybody looks expectantly and with held breath at the door – Poli Kitti with Magu on his shoulder – The latter hugging tightly a steel deed box – stumbles out of the door and falls helplessly. The Chief Scout himself rushes forward, catches Magu in his arms and gently lowers him and Kitti to the floor. The scouts rush forward, some fanning the faces of the victims, others using artificial respiration, whilst one or two run out with buckets for water – A gentleman moves out of the crowd which has hitherto been standing all struck and quiet towards the victims.]

Gentleman: I am a Doctor…ದಾರೀ ಬಿಡಿ !

Chief Scout: ಯಾರು? ಡಾಕ್ಟ್ರೇ?… Will you please-examine these boys, doctor?

Doctor: Yes, Your Highness! (bends down; loosens the collar of Magu, puts his ear to the heart; with a relieved look) ಪರ್ವಾ ಇಲ್ಲ, ಮಹಾಸ್ವಾಮಿ. serious ಏನೂ ಇಲ್ಲ… ಸ್ವಲ್ಪ open air ಏ ಸಾಕು restoringಗೆ… ಅಂದ್ರೆ… ಕಾಲ್‌ ಮಟ್ಗೆ… seriously burntಉ… shift ಮಾಡ್‌ಬಿಡ್ಬೇಕು at onceಉ… to the hospital!

Chief Scout: Certainly!…… ನನ್ ಕಾರಿದೆ!… ಯಾರ ಮಗು ಇದು?

ಸ್ಕೌಟ್ ಮಾಸ್ಟರ್ : Mr. ರಾಮಣ್ಣೋರ ಮಗು; assistant commissioner ರಾಮಣ್ಣೋರು!

Chief Scout: Take him home doctor, and on to the hospital from there, if you think it best! ಹೌದೂ?… ಆ ಇನ್ನೊಬ್‌ ಹುಡ್ಗ?

Doctor: (bending over Kitti, shaking him and putting his ear over his heart for a second, gets up) ಪರ್ವಾ ಇಲ್ಲ ಮಹಾಸ್ವಾಮಿ… Strong boy! ಸ್ವಲ್ಪ cold water ಉ…ಸ್ವಲ್ಪ artificial aid ಉ ಸಾಕು! in the meanwhile, (looking around him) will some body help me?
[bends down and lifts Magu, who is carried away by a few scouts]

Chief Scout: (to S.M.) ಹೌದೂ? ಈ ಮಗು father ಯಾರು ?… ಯಾವ ಸ್ಕೂಲು?

ಸ್ಕೌಟು ಮಾಸ್ಟರ್: ತಂದೆ ಯಾರೋ ಗೊತ್ತಿಲ್ಲ ಮಹಾಸ್ವಾಮಿ!… ಸ್ಕೂಲು?… ಓದೋ type ಅಲ್ಲಾಂತ ಕಾಣುತ್ತೆ.

Chief Scout: (bewildered and indignantly) Father ಗೊತ್ತಿಲ್ಲ!… ಓದೋ type ಅಲ್ಲ!… ಆ ಹುಡುಗ್ನ father ಗೊತ್ತು! ಈ ಹುಡುಗ್ನ Father ಗೊತ್ತಿಲ್ಲ!… ಈ ಮಗು ತಂದೆ assistant commissioner ಅಲ್ವೇನೊ? ಈ ಮಗು ಯಾವ ಸ್ಕೂಲು?… ಅಲ್ಲ ಯಾಕ್‌ ಹೋಗೋದಿಲ್ಲ ? ಸ್ಕೂಲ್ಗೆ ? (ಇತರರಿಗೆ ) ನಿಮಗೆ ಯಾರಿಗಾದರೂ ಗೊತ್ತೆ?

ಅಪ್ಪೂ: Father oldoo ಸಾರ್!… ಪೂರು…mother ಉ ಇಲ್ಲ! sister widow-Sixth form ನಲ್ಲಿ ಓದ್‌ತಿದ್ದ ! discontinue ಮಾಡ್ಬಿಟ್ಟ… circumstancesಊ!!

Chief Scout: ತ್ಸು! ಎಷ್ಟ್ ದಿನಾಂತ ಈ circumstances ಊ circumstancesoo ಅಂಬೋ ದೆವ್ವ Stateಗೆ rob ಮಾಡ್ತಿರೋದು ಇಂಥಾ noble children’s service ನ? ಇವ್ನಿಗೇನ್ ನಷ್ಟ?… ಒಂದು khushy joboo…ಒಂದ್ ಬಂಗ್ಲೆ… one American car ಊ! ಒಂದು pension to prevent chances of further workoo! precious little lost! But the State can’t afford to ignore him, and his name is legion… (turning to S. M. and in Sad almost irritated indignation) ಕ್ಷಮ್ಸಿ ನಿಮ್ಮ rank ಉ, designation ಉ! ನೀವೇನು subaltern ಎ… major ಏ… ಕರ್ನಲ್ಲೇ ? ಲೆಫ್ಟಿನಂಟೇ… ಕ್ಯಾಪ್ಪನ್ನೇ?

ಸ್ಕೌಟು ಮಾಸ್ಟರ್: (Standing at attention) ಸ್ಕೌಟು ಮಾಸ್ಟರು, ಮಹಾ ಸ್ವಾಮಿ!

Chief Scout: ಈ ಹುಡ್ಗ ಯಾರು, ಏನು… ಇವನ್ಗೆ educational facilities ಏನಾದ್ರೂ ಒದಗ್ಸೋದ್ ಹ್ಯಾಗೆ? ಏನಾದರೂ ವಿಚಾರ ಮಾಡ್ತೀರಾ?

ಸ್ಕೌಟು ಮಾಸ್ಟರ್: ಚಿತ್ತ, ಮಹಾಸ್ವಾಮಿ… ಅವನ್ ಸೇರಿ ಇನ್ನೂ fortnight ಕೂಡ ಇಲ್ಲ. ಅದಕ್ಕೇ ಅವನ circumstances ಉ… ತಿಳ್ಕೊಳ್ಳೊಕೆ…

Chief Scout: ಏನ್‌ fortnight ಕೂಡ ಆಗಲಿಲ್ವೇ ಸೇರಿ?

ಸ್ಕೌಟು ಮಾಸ್ಟರ್: ಹೌದು ಮಹಾಸ್ವಾಮಿ!

Chief Scout: Fortnight service ಕೂಡ ಇಲ್ದೆ ‘Be prepared unto death to succour the distressed’ ಅಂಬೋ ನಂ Motto ನ ಇವತ್ತ್ ರಾತ್ರೆ uphold ಮಾಡಿದ ಹುಡ್ಗನ್ಗೆ (restlessly sighing)… Some mark of recognition… (looking about himself up, his eyes suddenly gleam and rest upon his heavy wristlet watch … snatching it off his wrist, he clasps it round the wrist of the still prone boy – The series of movements is an impulsive but none the less deliberate noble gesture-Rising up dignifiedly he steps back a pace or two)… Give him more air… ls he coming to?

A scout: ಹೌದ್‌ ಮಹಾಸ್ವಾಮಿ! Breathing regular ಆಗ್ತಾ ಇದೆ! dashes successive handfuls of cold water on Kitti, who slowly opens his eyes and glares around at those who are rendering first aid.)

ಕಿಟ್ಟಿ: (Shaking them off roughly) ಯಾಕ್ರೋಲ್ರೋ… ಏನು ಯಾತಾನೇನ್ರೋ ನನ್ ಕೈಗ್ಳು ಹೀಗೆ ಹಲಾಯ್ಸೋಕೆ? ಯಾರಿದು… ಅಪ್ಪು… ಜಂಬದ್ಕೋಳಿ… ಎಲ್ಲಿಧೀನ್ರೋ…?… (ಸುತ್ತಮುಂತ್ತಲೂ ನೋಡಿ) ಹೌದು! ಬೆಂಕಿಬಿದ್ದ ಮನೆ S.M.ಉ ಲಡತ್ತು.. (ಏಳುತ್ತಾ) ಮಗು…ಮಗು…ಮಗು!!!? … (ಅಪ್ಪುವಿಗೆ) ಅಪ್ಪು, ಲೇ…! ವಳ್ಗಿಧಾನೋ ಮಗು ಗುಬ್ಬಚ್ಚಿ ಬೇಯ್ತಿಧಾನೋ ವಳ್ಗೆ… ಅವ್ರಮ್ಮ ಅದರ್ತಿರ್ತಾಳೆ ಮನೇಲಿ! (Struggles to get up)

ಅಪ್ಪೂ: (Forcing him down and dropping to his knees and tenderly nursing Kitti’s brow and hair) ಇಲ್ಲ, ಕಿಟ್ಟೀ!… ಎತ್ಕೊಂಬಂದ್ಯಲ್ಲಾ ನೀನೇ… ಗುಬ್ಬಚ್ಚೀನ ಜ್ಞಾಪಸ್ಕೋ!!

ಕಿಟ್ಟಿ: (Gently) ಅಪ್ಪು ಲೇ, ಯಾಕೋ ಸುಸ್ತು ಕಾಣೋ, ನಾನು… ಭಿರ್ಕಾಯಿಸ್ತಿಧೆ ನನ್ಫೇಜ… ಎಲ್ಲೋ ಮಗು… ಮನೇಗ್ ಸೇರಿಸ್ಬೇಕೋ ನಾನು… ಕಾದಿರ್ತಾಳಮ್ಮ… ಅವರಮ್ಮ ಸತ್ತ್ ನಮ್ಮಮ್ಮನ್ ಜಾತಿ ಕಾಣೋ! (Shoots up to a sitting position and shooting his glances around) ಮಗು ಎಲ್ರೋ ಲ್ರೋ!?

ಅಪ್ಪೂ: ಮನೇ ಸೇರ್ಬಿಟ್ಟ ಕಿಟ್ಟೀ!…

ರಾಘು: ಕಾರ್ನಲ್ಹೋದ… ಕಿಟ್ಟೀ!

ಕಿಟ್ಟಿ: ಕಾರ್ನಲ್ಲೋ ! (laughing in hysterical sardony) ಹ ! ಹ!! ಹ!!! ನಂ ಗುಬ್ಬಚ್ಚಿ! (sarcastically)! ಮರ್ತೆ… ದೊಡ್ಡಮನುಷ್ಯರ್‌ ಜಾತಿ… (his eyes suddenly catch the gleams of the gold wristlet and gleam in surprise, suspicion and danger. And in tones, tearful, but full of fury) ಇದ್ ಹ್ಯಾಗ್ಬಂತ್‌ ನನ್ಕೈಲೀ ಈಗ…? (laughing hysterically)… ಥಕೋ, ಮೊದ್ಲೇ ಪೋಲಿ!… (darting glances around, and fixing on the Inspector) ಪೋಲೀಸ್ನೋರು! (his eyes suddenly light on the prone owner of the burning house)… ನಿಮ್ದೇನ್ರಿ ಇದು? ಉರೀತಿದ್ದ್ ನಿಂ ಹಾಳ್ಮನೇಗ್ ನುಗ್ಗಿ… ಇದನ್ ಕೈಗ್ ಹಾಕ್ಕೊಲ್ಲೋಕೆ ಬಿಡ್ವಿತ್ತೇನ್ರಿ?… (turns to S.M.) ನೀವಾದ್ರೂ ಹೇಳಿ ಸಾರ್ ಬರೋ ವಾಗೇನೂ ಇರ್ಲಿಲ್ಲ ಕೈಲಿ ಅಂತ! (running his fingers through his hair with dazed look and voice) ನಿಮ್ಮನ್ನ ಇವರ್‌ ದಬಾಯಿಸ್ತಿದ್ದ್‌ದ್ದ್‌ ಯಾರು… ನಿಂ ಪಕ್ದಲ್ಲಿ ನಿಂತು ಕುಮ್ಮಕ್ ಕೊಡ್ತಾಲಡತ್‌ ಮಾಡ್ತಿದ್ದದ್ದ್ಯಾರು… ನೀವ್ ಕೂಗಿದ್ಯಾರು… ಗುಬ್ಬಚ್ಚೀನ್ ಬಚಾಯ್ಯ್ಸೋಕ್ ನುಗ್ಗಿದ್ದ್ಯಾರು! ಅಪ್ಪು ಎಬ್ಸಿದ್ ಯಾರು… ಈ ಗಲಾಟೇಲಿ ಇದನ್ ಲಪ್ಟಾಯ್ಸಿ ಕೈಗ್ ಲಗಾಯಿಸ್ಕೊಳ್ಳೋಕೆ ಎಲ್ಸಾರ್ ಬಿಡ್ವು? (to himself as he unclasps the watch, agonised and sardonically) ಇದೊಂದೇ ಕಮ್ಮಿ ನಂ ಅಪ್ನಿಗೆ! ಮನೆಯೆಲ್ಲಾ ಹಾಳಾಗ್ಹೋಗಿ ಮಗ್ನೂ ಕಳ್ತನ…?

Chief Scout:ಅಲ್ಲ! ನಿಂದು ಮಗು… ಅದು ನಿಂದು

ಕಿಟ್ಟಿ: ಮಗು… ನಾನಲ್ಲ ಸಾರ್!… ಮಗು ಆ ದೊಡ್ಮನುಷ್ಯರ್‌ ಮಗ (sardonically)… ಕಾರಲ್ಹೋದೋನು… ನಾನ್ಮಗು ಅಲ್ಲ… ನಾನು… ಪೋ… ಅಲ್ಲಾ… ನಾನ್ ನಾನೇ.

Chief Scout: ಗೊತ್ತೂ ಮಗು… ಅದ್‌ನಂದು… ನಾನೇ… ನಿನಗ್ ಕೊಟ್ಟಿದ್ದು.

ಕಿಟ್ಟಿ: (blazmg in anger and suspicion, flinging the watch owards the Chief Scout along the floor, like boys play ducks and drakes with a Slab of Slate on water) ಯಾಕ್ಸಾರ್? ನೀವ್ಯಾಕ್ ಸಾರ್ ನನಗೆ ಕೊಡ್ಬೇಕು watch ನ ? ನಿಮ್ಗೇನಂಥಾ ದೋಸ್ತಿಸಾರ್ ನನ್ನೊಂದ್ಗೆ?

ಅಪ್ಪೂ ಮುಂತಾದ ಸ್ಕೌಟುಗಳು: (ಮುಚ್ಚಿಕೊಂಡು) ಹುಚ್ಚೂ ಲೇ, ಹುಷಾರೋ, Chief Scout ಕಣೋ, ಬೆಪ್ಪು!

ಕಿಟ್ಟಿ: Chief Scout ಊ ?

ಅಪ್ಪೂ: Highness ಕಣೋ?!!

ಕಿಟ್ಟಿ: Highness ಊ! Rally! ಡೆಲ್ಲಿ ದೂದ್‌ಫೇಡ… ಮೂರ್ಮೂರ್ಟಿನ್ನು ಇವ್ರೇನೆ?

Scouts: (in hushed tones) ಹೌದು ಕಣೋ!

ಕಿಟ್ಟಿ: ಹಾಳಾಗ್ಹೋಯ್ತು! ಹಾಗಾರ್ಚಚಾನೇನ್ನು next rally ಯಿಂದ! ತ್ಸು! ತ್ಸು! ತ್ಸು! ತ್ಸು ಅಲ್ಲ ನನ್ನ ಕಿಸ್ಮತ್ ನೋಡ್ರೋ ಮುಚ್ಕೊಳ್ರೋ ನನ್ನ ಅಪ್ಪುಲೇ ನೀನಾದ್ರೂ S.M ಗೆ ಹೇಳಿ Highnessಗ್ಳ -Chief Scoutಗ್ಳ ಸೂರತ್ತಿನ ವಾಕೀಫ್‌ ಇಲ್ದೆ ವಾಚ್ನ ಭಿರ್ಕಾಯಿಸ್ದ ಬೇವಕೂಫು… ಇನ್ನೂ Boy Scout ಬಾಬತ್ತ್ನಲ್ಲಿ ಬಚ್ಚ ಅವನ್ಗೆ ಈ ಬಾಬತ್ನಲ್ಲಿ ತಜ್ರೂಬ್ ಇಲ್ಲ… Rally ಹೊತ್ಗೆ ಥೇಟಾಗಿ ತಮ್ಕೈಲಿದ್ದ ವಾಚ್ನೂನೂ ಕಸ್ಕೊಳ್ಳೋ ಅಷ್ಟು ತಯಾರಿ ಕೊಡ್ತೇನೇಂತ ಷಿಫಾರಸ್ಸು ಮಾಡ್ಸೋ! ಈಗ ಹಿಂದ್ಹೇಟ್ ಹೊಡದ್ಯೋ (ಮುಷ್ಟಿಗಳನ್ನು ಬಿಗಿದು) ನಂ ಕಲೀಫ್ರಿಗೆ ಕುಮ್ಮಕ್ಕ್‌ ಕೊಟ್ಟದ್ಯಾದ್ಮಾಡ್ಕೊ!

[Scout ಗಳು ಕಿಟ್ಟಿಯನ್ನು ಎಬ್ಬಿಸಿ ನಿಲ್ಲಿಸುವರು]

Chief Scout: ಮಗೂ ಇಲ್ಬಾ… ನಿನ್ನ ಹಸ್ರೇನು?

ಕಿಟ್ಟಿ: (ತಡವರಿಸುತ್ತಾ ಮುಂದೆ ಬಂದು, ಅಧೋದೃಷ್ಟಿಯಿಂದ ಪೋ ಅಲ್ಲಾ ಕಿಟ್ ಅಲ್ಲಾ..

ಸ್ಕೌಟ್‌ ಮಾಸ್ಟರ್: ಕೃಷ್ಟ್ರಾವ್! ಇಲ್ಬಾ ಕೃಷ್ಟ್ರಾವ್!

(ಕಿಟ್ಟಿಯು ಮೊದಲು ಕೈಮುಗಿದು, ಮತ್ತೂ ಮುಗಿಯಲು ಜೋಡಿಸಿದ ಎರಡು ಹಸ್ತಗಳಿಂದಲೂ ಸಲಾಮನ್ನು ಮಾಡಲುದ್ಯುಕ್ತಿಸಿ ಹೇಸಿ ಹಸ್ತಗಳನ್ನು ಹಿಸುಕುತ್ತಾ ತಡವರಿಸಿ ಮೆಟ್ಟಿ ಯುವರಾಜರನ್ನು ಸಮೀಪಿಸುವನು.)

Chief Scout: ನಮ್ಮ brother-hood ಗೆ ನೀನು ಸೇರಿ ಹದ್ನೈದ್ ದಿವ್ಸಗ್ಳು ಕೂಡ ಆಗಿಲ್ಲವೆಂದು ನಿಮ್ಮ S.M ತಿಳಿಸ್ತಾರೆ.

ಕಿಟ್ಟಿ: (ಕೈಮುಗಿಯುತ್ತಾ) ಹೌದು… ಸಾರ್… ಹೈನೆಸ್‌ಗೆ ಶುಕ್ರ S. M ಗು, ಹೇಳೋದ್ ಸತ್ಯ (ಕಣ್ಣಗಳನ್ನು ಇಳಿಸಿ ಎಡಗೈಯಿಂದ ಬಲಗೈನ ಬೆರಳುಗಳನ್ನು ಮಡಿಸಿ ಎಣಿಸುತ್ತಾ ನಾನ್ ದಾಖ್ಲಾದ್ದು ಶನಿವಾರ, ಇವತ್ತು ಶನಿವಾರ ಶನಿಯಿಂದಶನಿಗೆ ಹದ್ನೈದು… ದಿವ್ಸ… answer correct ಉ… ಅಲ್ಲ… ನಿಜ… ನನ್ನ ಸರ್ವಿಸು ಸ್ಕೌಟ್ ಪಟಾಲಂನಲ್ಲಿ… (ಅರ್ಧಾತ್ಮಗತಂ) ಇದೇನ್ ಸರ್ವಿಸ್ಸನ್ ಲೆಖ್ಖಾಚಾರ ಈಗ? ಟಿನ್ನುಗ್ಳಿಗೆ… ಅಲ್ಲ rallyಗೆ ಸರ್ವಿಸ್ಸಿನ್ ಲೆಖ್ಖಾ ಇಲ್ಲಾಂದ್ನಲ್ಲಾ ಅಪ್ಪು? (ಆತ್ಮಗತಂ) ಅದ್ಯಾಕೋ ಈಗಾಮಾತು?

Ch1ef Scout: Scout-brother-hoodಲ್ಲಿ ಇಷ್ಟು short time ಇದ್ದಿದ್ರೂನೂ, ಸ್ಕೌಟ್‌ಗ್ಳ purpose ಅನ್ಯೋಪ್ಕಾರಾಂಬೋದ್ನ ತಿಳ್ಕೊಂಡು ನಿನ್ನ ಪ್ರಾಣಭಯಾನೂ ಬಿಟ್ಟು, ಬೆಂಕೀಂತ್ಲೂನೂ ಬೆದರ್ದೆ ನೀನೀರಾತ್ರೆ ನಮ್ಮೆಲ್ರ ಎದುರಿಗ್‌ ತೋರ್ಸಿದ ಅದ್ಭುತ ಧೈರ್ಯರ್ಸಥೈರ್ಯಗಳಿಗೆ, scout brother hood ಪರ್ವಾಗಿ ನಾನ್ ಸಂತೋಷಪಡ್ತೇನೆ.

ಕಿಟ್ಟಿ: (ಮಹಾಸ್ವಾಮಿಗ್ಳು ಮೇಲಿನಂತೆ ಹೇಳುತ್ತಿರಲು ಕೈಮುಗಿದುಕೊಂಡು. ಸ್ಕೌಟುಗಳೂ, ಪೋಲೀಸ್ ಹುದ್ದೇದಾರರೂ. ತುಂಬಿತುಳುಕುವ ಜನಕೂಟವೂ. ಉಸಿರು ಹಿಡಿದು ಸ್ಥಬ್ದರಾಗಿ ಕೇಳುತ್ತಿದ್ದ, ನಿಶ್ಶಬ್ಧ ಸನ್ನಿವೇಶಾವೇಶದಲ್ಲಿ ಬಿದ್ದು… ಅರ್ಧಾತ್ಮಗತಂ) ಪಡೀಸಾರ್… ಅಲ್ಲ ಹೈನೆಸ್ಸುಗ್ಳೆ… ಪಡೀ…ಪಡೀ…

Chief Scout: ಈ ನಮ್ಮ ಸಂತೋಷವನ್ನು ಇನ್ನು ಮುಂದಕ್ಕೆ ನಿನ್ನ ಆಯುಃಕರ್ಮದಲ್ಲಿ ನಮ್ಮ Scout brother hoods ನ “ಪರೋಪಕಾರಾಯ ಇದಂ ಶರೀರಂ” ಎಂಬ ನಿಮಿತ್ತವನ್ನು ಪ್ರದರ್ಶಿಸಿ ನಮ್ಮ ವಿಶ್ವಸಂಘಕ್ಕೆ ಗಣ್ಯತೆಯನ್ನು ತರುವೆ ಎಂಬ ಭರವಸೆಯನ್ನು ನಮಗೆ ಪ್ರದರ್ಶಿಸಿ, ನಿನಗೂ ಮುಂದಕ್ಕೆ ಜ್ಞಾಪಿಸುವ ಹಾಗೆ ಕೊಡುವ, ಈ (putting out his watch) ಪಾರಿತೋಷಕವು ನಿನ್ನ ಕೈಯಲ್ಲಿಯೆ ಯಾವಾಗಲೂ ಇರಲಿ.

ಕಿಟ್ಟಿ: (ಗೊಣಗುಟ್ಟುತ್ತಾ) ಇರ್ಲಿ… ಮಹಾಸ್ವಾಮಿ… ಇರ್ಲಿ! (ಗೊಣಗುಟ್ಟುತ್ತಾ, ಬೆದರಿ, ಅಪರಾಧಿಯು ನಾಚಿ ನಿಲ್ಲುವಂತೆ, ತಲೆಬಾಗಿ ನಿಲ್ಲುವನು)

[Sound of a car stopping is heard within]

Chief Scout: Scout master! It is late in the night; please see to it that the boy is really all right and gets home to his anxious parents.

[The Gentleman in attendance reverentially approaches the Chief Scout and whispers]

Chief Scout: ಕಾರ್‌ ಬಂತೆ? ಆ little boy ಇ ?(putting his ear out) That’s good! Inspector!

Inspector: Fire ಆರ್ಸಿದ್ದಾಯ್ತು ಮಹಾಸ್ವಾಮಿ! ಹಿಂದ್ಗಡೇಯಿಂದ!… details ಊ ಬೆಳಗ್ಗೆ ಸರಿಮಾಡ್ಬಿಡ್ತೇನೆ.

Chief Scout: ಹೌದು ಈ family…?

Inspector: ರಾತ್ರೆ ಇಲ್ಲೇ ಮನೇ ಮುಂದಿನ್ ಕೋಣೇಲಿ ತಂಗಬಹ್ದು comfortable ಆಗಿ… ಮಿಕ್ಕ ವಿಷ್ಯಗಳ್ನೆಲ್ಲಾ ನಾನೇ ಬೆಳೆಗ್ಗೆ attend ಮಾಡ್ತೇನೆ ಮಹಾಸ್ವಾಮಿ!

[ರಂಗಸ್ಥಳದ ಮತ್ತೊಂದು ಸ್ಥಳದಲ್ಲಿ ಸ್ಕೌಟುಮಾಸ್ಟರು ಮತ್ತು ಸ್ಕೌಟುಗಳು ಸೇರಿರುವರು]

ಸ್ಕೌಟು ಮಾಸ್ಟರ್: Boys! ಕಿಟ್ಟಿ ಮುಖಾ ಮೈಬಟ್ಟೆಗಳ್ನ ಸರಿಮಾಡಿ.

ಕಿಟ್ಟಿ: (half indignantly) ಯಾಕ್ಸಾರ್… ನನ್ಮೂತಿಗೇನ್ಕಮ್ಮಿ ಸಾರ್… ಕ್ಷಮ್ಸಿ ಸಾರ್…

ಅಪ್ಪೂ: ಕಮ್ಮಿ ಅಲ್ಲ ಕಾಣೋ, ಜಾಸ್ತಿ… ಹುಬ್ಬಿಂದ ಗಲ್ಲದವರ್ಗೂ ಒಂದೇ ಮಸಿ ಕಾಣೋ… ಬರ್ರೋ ಲ್ರೋ! ಎಳ್ಕೊಂಡ್ಹೋಗೋಣ ಕೊಳಾಯಿನ್ಹತ್ರ… [The scouts partly lead, partly drag and partly carry, exiting]

Chief Scout: (advancing L to owner of the house) ಏಳ್ಬೇಡಿ… ಪರ್ವಾ‌ಇಲ್ಲ. ಮೈಗಸ್ವಸ್ಥ; ಮನೆ ಬೆಂಕಿ ಎಲ್ಲಾ ಆರಿಸಾಯ್ತೂ… ರಾತ್ರೆ ನಿಮ್ಮ ಮನೇಲೆ ತಂಗ್ಬಹ್ದು, ಇನ್ನು ಮುಂದಿನ ಅನಾನುಕೂಲಾನಾ ನಾಳೆ Inspector ಇತ್ಯಾದಿ ನಿವಾರಿಸ್ತಾರೆ…. ಆದ್ರೆ ವಂದ್ಮಾತು; ದುಡ್ನ ನೀವೂ ಉಪ್ಯೋಗಿಸ್ದೆ, ಮನೇಗ್‌ಬಿದ್ದ ಬೆಂಕೀ ಪಾಲೋ ಕಳ್ಳ್ರಪಾಲೋ ಆಗೋಕೆ ಹೀಗೆ ಆಸ್ಪದ ಕೊಡೋದು ಶುದ್ಧ ಹುಚ್ಚು. ನಮ್ದೇಶದಲ್ಲಿ ದುಡ್ಡ್ನ, ಸಂಪಾದ್ಸಿದ್ದುಡ್ನ, ಬ್ಯಾಂಕ್ನಲ್ಲಿ ಹಾಕಿದ್ರೆ ನಿಮ್ಮ ದುಡ್ಡು, ಬೆಂಕಿ, ಕಳ್ಳ್ರ ಭಯವಿಲ್ದೆ, ಭದ್ರವಾಗಿದ್ದು, ಬಿತ್ತಿದ್ಬೀಜ, ಗಿಡವಾಗಿ ಫಲಿಸೋ ಹಾಗೆ ಬಡ್ಡೀ ಸಮೇತ ವರ್ಧಿಸೋದೂ ಅಲ್ದೆ ದೇಶೋಪ್ಯೋಗಕ್ಕೆ ನಿಮ್ಮ ದುಡ್ನ ಬ್ಯಾಂಕ್ನೋರು ಉಪಯೋಗಿಸಬಹುದಾದ ಉಪ್ಕಾರಾನಾ ನೀವು ಮಾಡಿದ್ಹಾಗೂ ಆಗುತ್ತೆ. ಆದ್ದ್ರಿಂದ ಈ ಮುಪ್ಪಿನಲ್ಲಿ ನಿಮಗ್ ಮುಂದಕ್ಕೆ ವದಗ್ಬೇಕಾದ್ದುಡ್ನ ನೋಟ್ನೋಟಾಗಿ ಇಟ್ಕೊಂಡಿರೋದು ಅನುಚಿತ. ಈಗ್ಲೇ ಎಣ್ಸಿ Inspector ಕೈಲೊಪ್ಸಿ ನಾಳೆ ಬ್ಯಾಂಕ್ನಲ್ಹಾಕೋದು ನಿಮ್ದುಡ್ಗೂ, ನಿಮ್ಮನೇಗೂ, ನಿಮ್ಗೂ ಭದ್ರ… ಸಮಾಜಕ್ಕೂ ಅನ್ಕೂಲ.

(significantly sweeping his eyes a round)

Officer! take charge of the money and arrange at a Co-operative Bank agent, to convince this couple, typical of thousands like these, of the criminal folly of keeping loose money in the house, to its own danger and to the loss of the State… You understand!?

Inspector: (at attention, saluting) Yes, sir!

[The scouts lead in Kitti with washed face and dripping hair]

Chief scout: (putting his hand out to the Inspector) Good night, officer, I congratulate your men on their calm execution of their duties! (Officer salutes. The Prince acknowledges, wheels round to S. M. and putting his hand out) Good night! Scout master! I congratulate you. You and your boys have acquitted yourselves through this trial in a manner befitting the ideals of the Brotherhood that I am proud to belong to and be chief of! (shakes hands with S. M.)… where is that boy… “ಕಿಟ್ಟಿ”…I think, his name is…?

ಸ್ಕೌಟು ಮಾಸ್ಟರ್: Krishna Rao, sir !…Krishna Rao ! forward…!!
[Kitti is pressed forward by his brother-scouts]

Chief Scout: (Shaking hands with Kitti) I am glad to see that you are none the worse for your heroic hazarding of your life for a fellow scout and I hope your conduct to night will prove an example to the rest of us all in the Brotherhood of scouts, in which I sincerely hope, you will grow to live and serve in your youth prime and age, as brilliantly as you have started in your cub-hood! (turning to S. M.) ಈ ಮಗುವಿನ್ಮನೇಗೆ ನೀವ್ಹೋಗಿ ಅವರ ತಂದೆಗೆ explain ಮಾಡ್ಬಿಟ್ಟು… ಇವನ ಮುಂದಿನ education ವಿಷ್ಯದಲ್ಲಿ ಈ boys ಹೇಳಿದ “circumstancessoo” ಅಂಬೋ obstacle ನ surmount ಮಾಡ್ಬೇಕಾದ details ನ ನಾಳೆ report ಮಾಡಿ! Goodnight, every body..!!
[ಹೊರಡಲುಪಕ್ರಮಿಸುವರು]

ಸ್ಕೌಟು ಮಾಸ್ಟರ್: (haranguing at attention) Scouts of the Bangalore City “N”th brigade! ‘SHUN!’ Salute (The patrol salutes) The Anthem !!

[’ಕಾಯೌ ಶ್ರೀ ಗೌರೀ’ is sung]
[The Chief Scout stands at salute]

ಸ್ಕೌಟು ಮಾಸ್ಟರ್: Scouts! Stand at ease…stand easy! (The scouts do accordingly) Three cheers to his Highness the Chief Scout and the Royal House!…

Hip… H1p… Hip… Hurray!
(The scouts join in)
Hip… H1p… Hip… Hurray!
Hip… H1p… Hip… Hurray!

[To the sound of the cheers, the Chief Scout exits followed at a respectable distance by the Scout master, the Inspector, the scouts, the policemen and the crowd : Kitti with the couple is left behind]

ಈಕೆ: (ತೊಟ್ಟಿಲನ್ನಾಡಿಸುತ್ತಾ) ನೀವಿಷ್ಟ್‌ ದಿನ ಹೇಳ್ತಾಲೇ ಇದ್ರಲ್ಲಾ… “ನಮಗ್ನಾವೇ ನಮಗ್ನಾವೇ… ನಮ್ಕಷ್ಟಕಾಲಕ್ಕೆ ಯಾರೂ ಆಗೋದಿಲ್ಲಾ”ಂತ!… ಇವತ್ನೋಡಿ. ಮನೇಗೆ ಬೆಂಕೀನೂ ಬಿದ್ದು ನೀವೂ ಕದಲೋಕಾಗ್ದೆ ಬಿದ್ಕೊಂಡು, ಕೂಸೂ ನಾನೂ “ದೇವ್ರೇ ಕಾಪಾಡ್ಬೇಕೂ”ಂತ ಕಂಗೆಡ್ತಿದ್ದಾಗ. ಆ ಮಗು-ಆ ಮಗು ನಮಗ್ಯಾರು? ನಾವು ಆವನಿಗ್ಯಾರು… ದೊಡ್ಮನುಷ್ಯರ ಮಗ್ನಂತೆ… ಕುಂಟಿದ್ರೂನೂವೆ… ಬೆಂಕೀಗ್ ಬೆದರ್ದೆ ನಮ್ಮನ್ನೆಲ್ಲಾ ಹೊರಕ್ಕ್ತಂದು ನಂದುಡ್ಡಿನ್ಪೆಟ್ಗೆ ತರೂಕೇಂತ ವಳಕ್ಕ್ ನುಗ್ಗಿದ್ನಲ್ಲಾ… ಆಮೇಲೆ ಆಷ್ಟೊಂದು ಜನ ಮುತ್ಕೊಂಡ್ ಪೇಚಾಡ್ತಿದ್ದ್ರಲ್ಲಾ… ಈ ಇನ್ನೊಬ್ಬ ಹುಡ್ಗ ಎಲ್ಲಿಂದ್ಲೋ ಬಂದು, ಆ ಮಗೂನೆದರ್‌ನೋಡ್ತಾ ಕಾದಿರೋ ಹೆತ್ತ್‌ತಾಯಿ ಹಂಬಲಾನ ತೀರ್ಸೋಕೆ, ಹೊಗೆಗೂ ಬೆಂಕೀಗೂ ಹೆದರ್ದೆ ತನ್ನ ತಡ್ದೋರ್ನ ತಳ್ಬಿಟ್ಟು ಒಳನುಗ್ಗಿ, ಆ ಹುಡ್ಗನ್ನೂ, ನಂ ದುಡ್ಡಿನ್ ಪೆಟ್ಗೇನೂ. ಹೊರಗ್‌ ತಂದ್ಹಾಕ್ದ. ಈ ಹುಡಗನ್ಗೆ ಆ ಹುಡುಗನೂ, ಆ ಮಗೂನ ಹೆತ್ತ ದೊಡ್ಡ್‌ಮನುಷ್ರ್ಯೂ, ಯಾರು?… ಇನ್ನಮ್ಮ ಮುಂದಿನ ಕ್ಷೇಮಕ್ಕ್ ಅಭ್ಯಾ ಕೊಟ್ಟು, ನಮ್ಮುಂದಿನನುಕೂಲಕ್ಕೆ ಏರ್ಪಾಡ್ಮಾಡಿ ಹೋದಯುವ್ರಾಜ್ರೆಲ್ಲಿ!??…. ಎನೋ ನಂ ನಂ ಸೌಕರ್ಯಗಳಲ್ಲಿ, ನಮಗ್ತಾನೇಂತ ತಿಳ್ಕೊಂಡಿರ್ತೇನೆ ಹೊರ್ತು, ನಮ್ಕಷ್ಟಕಾಲಕ್ಕೆ ದೇವ್ರುಗಾನ ದಯವಿಟ್ಟ್ರೆ ಎಲ್ಲಿಂದ್ಲಾದ್ರು ಬರ್ತಾರೆ ಸಹಾಯಕ್ಕೇಂತ! – (to Kitti) ಮೈ ಜಾಸ್ತಿ ಸುಟ್ಟಿದ್ಯೇ ಮಗು? ಹತ್ರಾ ಬಾ… ಹತ್ರಾ, ಬಾಪ್ಪಾ!… ಹೊತ್ತಾಯ್ತು; ಬೇಕಾದ್ರೆ ನಮ್ಮನೇಲೇ ಮಲಕ್ಕೋಪ್ಪಾ.

ಕಿಟ್ಟಿ: ಕ್ಷಮ್ಸೀಮ್ಮಾ ನಿಮ್ಮ ಜಾನ್ ಬಚಾಯ್ಸಿದ್ ನಾನಲ್ಲ. ಮೊದ್ಲು ಹೋದ ಹುಡ್ಗನ್ನೆತ್ತ್ಕೊಂಡ್‌ ಬಂದದ್ದ್ ನಾನು… ಅವ್ನೇ ಎತ್ಕೊಂಡ್ಬಂದದ್ದು ನಿಂ ಆಽಬಾಬ್ನ…. ಅವ್ನು ಅದನ್ನ ತಬ್ಕೊಂಡಿದ್ದ್ಹೊತ್ಗೆ ಹೊರಗ್ಬಂತು ನಿಂದುಡ್ಡಿನ್ಪೆಟ್ಗೆ… ನಾನಲ್ಲ ಅದನ್‌ ತಂದದ್ದು… ನಿಮ್ಮ್ಯಜಮಾನ್ರು ಹೇಳಿದ್ಸರಿ… ಯಾರಿಗ್ಯಾರೂ ಇಲ್ಲ, ನಿಮಗ್ನಾನೂ ಇಲ್ಲ ನಗ್ನೀವೂ ಇಲ್ಲ… ಈ ಚರ್ಚೆ ಇರ್ಲೀ!… ಹಿಮ ಬೀಳ್ತಿದೆ, ಎಳೇ ಕೂಸೂ ಚಳೀ, ಕ್ಷಮ್ಸಿ ಏಳಿ… (taking up the cradle with the baby in it) ಬನ್ನೀಮ್ಮಾ ಇದನ್ನೆಲ್ ಕುಕ್ಕೋದು?… ಇಲ್ಲ… ಹಗ್ಗಕಟ್ಟಿ ಹಲಾಯ್ಸೋ ಬಾಬ್ತೋ?… (looking into the cradle-in admiring Face and voice) ಒಳ್ಳೆ ರುಸ್ತುಂ ಕಣಮ್ಮಾ ನಿಂ ಹುಡ್ಗ? ಅಲ್ಲಾ ಯೋಗೀಂತಾರಲ್ಲಾ! ಆ ಬಾಬ್ತು! ನಿಮ್ಮನೇಗ್ ಬೆಂಕೀಬಿದ್ದು, ಬೆಂಗ್ಳೂರ್ ಬೆಂಗ್ಳೂರೇ ಬಂದಿತ್ತು ಬಾಣ ಬಿರ್ಸು ನೋಡೋಕೆ… ಯುವ್ರಾಜ್ರಿಂದ್ ಹಿಡ್ದು, ಯಾರೂ ಬಿಡ್ದೆ… ಇಲ್ಲಾದ್ಗಲಾಟೆ ಏನು? ಕಿರ್ಲಾಟ ಏನೂ? ಇವೆಲ್ಲಕ್ಕೂಭೋಡಾ ಆಗಿ, ದುನ್ಯ ದುನ್ಯನೇ ಫನಾ ಆಗ್ತಿರೋವಾಗ, ಹೆಬ್ಬೆಟ್ಟು ಕಚ್ಕೊಂಡು, ಹಾಯಾಗ್ತೇಲ್ತಿರೋ ಆಲ್ದೆಲೆ ಕಿಟ್ಟಿ ಹಾಗೆ, ಒಳ್ಳೆ ಸ್ವಯಂಭೂಮ್ಮಾ… ನಿಮ್ಹುಡ್ಗ!… ನಮ್ಮಕ್ಕನಿಗೊಬ್ಬ್ ಮಗಾ ಇದಾನಮ್ಮಾ… ಇವ್ನಷ್ಟೇ ಅವ್ನೂವೆ… ನಾಳೆ ಬೇಕಾರೆತ್ತಿಕೊಂಡ್ಬರ್ತೇನೆ… ಸಮ್ಜೋಡಿ… ಕುಸ್ತೀಗ್ಬಿಡ್ತೇನೆ ನೋಡೀ ಅವ್ನಜೂರತ್ನೂ! (exit through house-door followed by the lady and re-enters alone and helps the old man to rise) ಬನ್ನಿಸಾರ್, ಏಳಿ, ಬೆಂಕೀಗೆ ಬೆದರ್ಕೊಂಡು ಹೊರಗ್ಬಂದದ್ದಾಯ್ತೂ… ಈಗ್ಹೊರಗೆ ಅಳಿ… ಒಳಗ್ಬನ್ನಿ! ಪ್ರಪಂಚಾನೇ ಹೀಗೆ, ಅಲ್ವೇ? ನೆನ್ನೆ ಮಳೆ… ಇವತ್ತು ಬೆಂಕಿ… ನಾಳೆ ಗಾಳಿ!…

ಮನೆಯಾತ: ಅಪ್ಪಾ… ನಿನ್ನಡ್ತೆ, ನಿನ್ಭಾಷೆ, ನಿನ್ಮಾತು, ಒಂದಕ್ಕೊಂದು ಹೊಂದೋದೆ ಇಲ್ಲ. ಧೀರನ್ಹಾಗೆ ಬೆಂಕೀಗ್‌ ನುಗ್ತೀಯಾ! ಹೆಂಗಸಿನ್ಹಾಗೆ ಮಗೂನ ಲಾಲಿಸ್ತೀಯಾ; ತುರಕು, ಸಂಸ್ಕೃತ. ಕನ್ನಡ, ಇಂಗ್ಲೀಷು ಕಲಸ್ಮೇಲೋಗ್ರ ಮಾಡಿ ಮಾತಾಡ್ತೀಯಾ! ಎಷ್ಟು ಯೋಚಿಸಿದ್ರೂನೂವೆ ಬಿಡಸ್ಲಾಗ್ದ ವಗ್ಟೆ ಹಾಗಿದ್ದೀಯಲ್ಲಪ್ಪಾ ನೀನು?

ಕಿಟ್ಟಿ: (tenderly leading him through the door) ನಿಮಗೇನೂ?… ಎಂಥೆಂಥಾ ಶುಕ್ರಾಚಾರ್ರುಗ್ಳಿಗೇನೇ ಬಿಡಿಸ್ಲಾಗ್ದ ವಗ್ಟೇ ನಾನೂ!… ಬನ್ನಿ ವಳಕ್ಕೆ [Exit wiih the old man, with the cash box under his arm]

[Enter-L. Appu, Raghu and the rest of the patrol]

ಅಪ್ಪೂ: ಆ ಗುಬ್ಬಚ್ಚೀ ಹೇಳಿದೊಂದೊಂದೂ ಚಾಲ್ತಿಗೆ ಬರ್ತಿಧೆ ಕಣೋ… ಜ್ಞಾಪಕ್ವಿಧ್ಯೇ… ನನ್ನ್ಸಪಡಾಯ್ಸಿ, ನನ್ಜೋಬ್ನಿಂದ ಕಾರದವ್ಲಕ್ಕಿ ಛಿನಾಯಿಸ್ಕೊಂಡ್ನಲ್ಲಾ…

ರಾಘು: ಅದೇನೋ ಛಿನಾಯ್ಸೋದು?

ಅಪ್ಪೂ: ಕಸುಕೊಳ್ಳೋದು ಕಣೋ !

ರಾಘು: Good words!… ಓ ಇನ್ಮೇಲ್ಕಲೀಬೆಕ್ಕಾಣ್ರೋ ಕಿಟ್ಟಿ languageಉ!… ಹುಂ ಅದೇನ್ ಹೇಳ್ತಿದ್ದದ್ ನೀನು?

ಅಪ್ಪೂ: ಏನೇನೋ?… ಗುಬ್ಬಚ್ಚಿ ಹೇಳಿದ್ದು… ಜ್ಞಾಪಕ್ವಿಲ್ವೇ? ಆದಿನ… ನಿನ್ನ “ಮುರ್ಗೈ” ಅಂದ್ನಲ್ಲಾ ಅವತ್ತು. ಕೋಪಿಸ್ಕೋ ಬೇಡ ರಾಘೂ!… ಗುಬ್ಬಚ್ಚಿ ಹೇಳಿದಾ ನೋಡು “ಕಿಟ್ಟೀನ್ ಸೇರಿಸ್ಕೊಂಡ್ರೆ wrestlingಉ runningಉ swimmingಉ ಒಂದೊಂದ್ರಲ್ಲೂ cupಉ championshieldಉ ನಂ ಪೆಟ್ರೋಲೇ ಲಪ್ಟಾಯಿಸ್ಬಹ್ದೂ”ಂತ. ಅದೊಂದೊಂದು ಜಾರೀ ಗ್ಬರ್ತಾ ಇದೆ ಕಣೋ! mile raceನಲ್ಲಿ ಜಿಂಕೆ. jumpingನಲ್ಡೇಗೇ; cupಉ ನಮ್ದು ಖಾತ್ರಿ! swimming ನಲ್ಲಿ ಒಳ್ಳೇ ಬಾತೂ, ಆ cupಉ ನಮ್ದೇ! ಇನ್ನು wrestlingನಲ್ಲೋ, ಸಿಂಹ!!

ಶಾಮಿ: ಸಿಂಹ?… ಲೋ! ಥೇಟ್ ಖಾಸ್‌ ಬಂಗ್ಲೇನೋ ಕಿಟ್ಟಿ.

ಅಪ್ಪೂ: ಹೂಂ… ಅವನ್ನ WrestIingನಲ್ಲಿ ಗಿರಾಯ್ಸೋ ಗಾಮ ಇನ್ನೂ ಹುಟ್ಟಿಲ್ಲ… ನಮ್ಮ brigadeನಲ್ಲಿ; ಆ cupಊಂ ನಮ್ದೇ. ವಟ್ನಲ್ಲಿ sports shieldಊ ಖಾತ್ರಿ! (suddenly raising his voice triumphantly) ಆಯ್ತೋ!! ಕೇಳ್ರೋ… ಲ್ರೋ, ಕಿಟ್ಟಿ ಹೇಳೋ ಹಾಗೆ ಕೇಕ್ಡಿಗಳ್ರಾ! ಯುವರಾಜ್ರು, ಕೊನೇಗೆ ಹೋಗೊವಾಗ ಹೇಳಿದ್ದು… ಕೇಳಿದ್ರೇನೋ? ವಳ್ಳೆ leader ಓ ನೀನು !!

ರಾಘು: ಅದೇನೋ ಹೇಳ್ತಿದ್ರೋ… ಇಂಗ್ಲೀಷಿನಲ್ಲಿ ! S. M ಊ, ಎಲ್ರೂ ಮುಚ್ಕೊಂಡಿದ್ರೋ.

ಅಪ್ಪೂ: ನಮ್ಮ ಪೆಟ್ರೋಲ್ಗೆ, ಶುಕ್ರದೆಸೆ ಕಣ್ರೋ, ಶುಕ್ರ ದೆಶೇ Highnessಗ್ಳು ನಮ್‌ faರ್ಮಾಯ್ಷಿ ಕೆಲ್ಸಾನ್ನೋಡ್ಬಿಟ್ಟು award ಮಾಡಿದಾರೆ ಕಣ್ರೋ! brigade- brigade ಏ ಬೆಚ್ಬೀಳತ್ನೋಡ್ರೋ ಬೆಳಕ್ ಹರೀಲಿ!

ಶಾಮಿ: (ಥಟ್ಟನೆ ಎಚ್ಚರಿಸುವ ಧ್ವನಿಯಿಂದ) S.M.ರೋ!…S S S H H H H!!!! S.M.ರೋ!

(Enter S. M.)

ಸ್ಕೌಟು ಮಾಸ್ಟರ್ : l congratulate you Raghavendra Rao! (shakes hands with Raghu)… Troop ನಲ್ಲೆಲ್ಲಾ most coveted honour, ನಿನ್ನ patrolಗೆ…ನನ್ನ ದಬ್ಕೊಂಡ್ಹೋಗೋಕೆ ಪ್ರಯತ್ನ ಪಟ್ಟಿದ್ದು foolishoo ಅದಿರ್ಲಿ ನಿಮ್ಮೆಲ್ರ heroic behaviourನ ಗಮನ್ಸಿ “life saving shield” ನ ನಿನ್ನ patrolಗೆ award ಮಾಡಿದ್ದಾರೆ Chief Scoutಉ!

ರಾಘು: (ದೃಷ್ಟಿಯಿಂದ patrolನ ಬೀಸಿ. ಅಪ್ಪುವನ್ನು ದುರುಗುಟ್ಟಿ ನೋಡಿS. M.ಕಡೆ ತಿರುಗಿ) ನನ್ನ patrol ಏನ್ ಸಾರ್… ಗುಬ್ಬಚ್ಚಿ… ಆಲ್ಲ, ಮಗು ಇಲ್ದಿದ್ರೆ, ಮನಯವ್ರುಫಡ್ಚ. ಇನ್ನು ಕಿಟ್ಟಿ ಇಲ್ದಿದ್ರೆ ಮಗೂ ಫಡ್ಚ… ಅವ್ರಿಗೆ ಸಾರ್… shieldoo!

ಅಪ್ಪೂ: (anxiously) ಹೌದು! ಮಗೂಗೆ ಹ್ಯಾಗಿದೆ ಸಾರ್? ಪರ್ವಾ ಇಲ್ಲ್ವೇ?

ಸ್ಕೌಟು ಮಾಸ್ಟರ್: ಅವರನ್ನೂ ಮರೀಲಿಲ್ಲ; Chief scoutಗ್ಳು. ಇಬ್ಬರಿಗೂ “Life saving badgeಉ… ರಂಗಣ್ಣೀಗೆ-ಮಗೂಂತಿರೋ ನೀವು!?—danger ಏನೂ ಇಲ್ಲ. ಆದ್ರೆ ವಂದ್‌ತಿಂಗ್ಳು ಕದಲೋ ಹಾಗಿಲ್ಲ ಮನೆಯಿಂದ… ಕಾಲು ಸುಟ್ಟಿದೆ… ಇವ್ನೆಲ್ಹೋದ ಕಿಟ್ಟೀ?… I mean young Krishna Rao? ಮನೇಗ್ ಹೋಗ್ಬಿಟ್ನೇನೋ? ನಾನ್ಮೊದ್ಲು ಹೋಗಿ explain ಮಾಡ್ಬೇಕೂಂತಿದ್ದೆ. ಅವರ fatherಗೆ Chief Scout ಹೇಳಿದ್ಹಾಗೆ… ಹೊರ್ಟ್ಹೋಗ್ಬಿಟ್ನೇ?

[looks around]

ಅಪ್ಪೂ: ಎಲ್ಹೋದಾನು ಸಾರ್! ಅವನ ಕೋಟು ನನ್ನ ಹತ್ರಾನೆ ಇದೆ. ಕೋಟ್ನಲ್ಲಿ ಒಂದ್ಕಟ್ಟಿಂಜನ್… ಅಲ್ಲ…

ಸ್ಕೌಟು ಮಾಸ್ಟರ್: ಜೋಬ್ನಲ್ಲೇನು? ಇಂಜಿನ್ನೇ?…

ಅಪ್ಪೂ: ನನಿಗೇನ್ಗೊತ್ತು ಸಾರ್! ಹ್ಯಾಗ್ಸಾರ್ ಮಾಡೋದು ಜಪ್ತೀನ. fellow scout ಕೋಟ್ನ? ಇಂಜಿನ್ನಲ್ಲ ಸಾರ್… ಜಿನ್ ಜಿನ್ ಅಂತ jingle ಮಾಡ್ತಿದ್ದೆ ಸಾರ್ ಜೋಬ್ನಲ್ಲಿ! ದುಡ್ಡೋ ಏನೋ? ಬಿಟ್ಹೋಗೋ ಬಾಬ್ತಲ್ಲ ಸಾರ್ (aside to Shami) ಕಿಟ್ಟಿ ವರ್ಸೆ ಕಣೋ… ಗಫೆ!

ಸ್ಕೌಟು ಮಾಸ್ಟರ್: ಮತ್ತೆಲ್ಲಿ ಅವ್ನು? ನೋಡಿ!…

[The scouts disperse to look around- The lilt of a lullaby is heard within the house]

ರಾಘು: (giving his ear to the window) ಅಪ್ಪೂ! ಶಾಮಿ! ಲೋ! ಇಲ್ಕೇಳ್ರೋ ಕಿಟ್ಟೀನೇ ಅಲ್ವೇನ್ರೋ?

(cautiously opens the window)

[heard within: ರಾಗ-ಕಮಾಚ್ ತಾಳ-ಏಕ

ಮಥುರಾ ಪುರೀಗೆ ಬಂದು!
ಮಾಯಾ ಕಂಸನ ಕೊಂದು ||
ಜನಕೆ ಶಾಂತಿಯ ತಂದ ಈ
ಜಗರಾಜ ನಿನಗಿಂದು |
ಜೋ ಜೋ ಜೋ ಗೋಪಾಲ
ಕುವಲಯ ನೀಲಾ ||ಪ||

[Kitti is seen singing and rocking a cradle to and fro to time]

ರಾಘು: After all ಹೆಂಗ್ಸೇ ಕಣೋ, ನಮ್ಮ hero !!

ಅಪ್ಪೂ: ಹೌದೋ ಮಕ್ಳು ಮರೀಂದ್ರೆ ಹೆಂಗ್ಸೇ ಅವ್ನು!… ಗಂಡಸರೆದುರ್ಗೆ ಕಿರುಬ್ನಿಂದ ಕೋಳಿ ವರ್ಗೂ-ಕೋಪಸ್ಕೋಬೇಡ ರಾಘು- ಗಂಡ್ಸು!

[Within]
ಮನೆಯಾಕೆ: ಎಷ್ಟು ಚನ್ನಾಗ್ಹಾಡ್ತೀಯಾ ಮಗೂ!? ಇದೆಲ್ಲಿ ಕಲ್ತೆ ಹೆಂಗಸ್ರ್ಹಾಡು?

ಕಿಟ್ಟಿ : ಹಾಡಲಿಕ್ಕೆ ಎಲ್ಲಮ್ಮಾ ಬಿಡ್ವು ಗಂಡಸ್ರಿಗೆ? ಈ ಹಾಡ್ನ, ರಾತ್ ತಪ್ದೇ ರಾತು ನಮ್ಮಕ್ಕ ಅವಳ್ಕೂಸಿಗೆ ಹಾಡ್ದಿದ್ರೆ, ಅವನಿಗೆ ನಿದ್ರೆ ಇಲ್ಲ! ಅವನಿಗ್ ನಿದ್ರೆ ಇಲ್ದಿದ್ರೇ, ನಮಗ್ನಿದ್ರೆ ಇಲ್ಲ!… ಗಡಾರೀಮ್ಮಾ ಅವ್ನ ಗಂಟ್ಲು ನನ್ನ್ಹೆಸ್ರೇ ಇಟ್ಟಿದಾಳೆ ಅವ್ನಿಗೆ ನಮ್ಮಕ್ಕ… ವಟ್ನಲ್ಲಿ ಅವ್ನು ಬಾಯ್ಬಿಟ್ರೆ ಕೃಷ್ಣಗಡಾರಿ… ಮೇಘ್ನಾದ…. ಈ ಫಟಿಂಗ್ನಿಗೂ-ಇವ್ನೂ-ಕೆಂಪು… ಆದೇ ಮಟ್ಟೇ ‍ಷೋಕಿ! ಸುಸ್ತುಮ್ಮ ಮಗು… ಇನ್ಹೊರ್ಡ್ತೇನೆ… ನಿಮ್ಹಾಳು ದುಡ್ಡಿನ್ಪೆಟ್ಗೇ ಜೋಪಾನ… ಹೆದರ್ಕೆ ಆದರೆ ಹೇಳಿ, ಇಲ್ಲೇ ಮಲಕ್ಕೋತೇನೆ… ನಮ್ಮಪ್ಪ ಬೆದರ್ತಿರ್ತಾನೆ ಏನು ಬೇನೆ ಬಂತೋ ನನ್ಗೇಂತ… ಹಿಂದಿನ್ಬಾಕ್ಲೆಲ್ಲಾ ಹಾಕಿದೇನೆ… ಒಳಗ್ಯಾರೂ ಬರೋಹಾಗಿಲ್ಲ! ಕಾಸಿದ್ಹಾಲು ಅ ಮೂಲೇಲಿಟ್ಟಿದ್ದೇನೆ… ಕ್ಷಮ್ಸೀಮ್ಮಾ! ಉಕ್ಕಿಬಂದಾಗಿಳ್ಸಿದ ಗಲಾಟೇಲಿ ಸ್ವಲ್ಪ ಚಲ್ಹೋಯ್ತು.

ಮನೆಯಾಕೆ: ಭಯವೇನೂ ಇಲ್ಲ, ಮಗು! ಇಷ್ಟ್‌ದಿನವಿಲ್ದಿದ್ದ ಭಯ ಇವತ್ತೇನೂ? ಹೊರ್ಡು ಮಗು… ಕತ್ಲೆ… ಹುಷಾರಾಗ್ಹೋಗ್ಸೇರು!

[By this time the patrol and the S. M. who have over-heard all this, draw together to L]

[ಕಿಟ್ಟಿ enters followed by ಮನೆಯಾಕೆ]

ಮನೆಯಾಕೆ: (standing on the door step) ಏನೋಪ್ಪ ಇವತ್ತಿನ್ ಕಷ್ಟಾನ್ನೂ ದೇವ್ರೇ ಕಳಿಸ್ದ ನಮ್ಮನ್ನ್ ಶೋದ್ಸೋಕೆ… ಆದನ್ನ್ ನಿವಾರ್ಸೋಕೂ ನಿಮ್ಮೆಲ್ರನ್ನೂ ಕಳಿಸ್ದ ಅದೇ ದೇವ್ರು! ನಿಮ್ಮುಪ್ಕಾರ ಯಾವಾಗ್ಲೂ ಮರೆಯೋದಿಲ್ಲ, ನಾನೂ ಇವ್ರೂ! ಇನ್ ನಮ್ಮಿಂದ ಅಲ್ಪ ಸ್ವಲ ಉಪ್ಕಾರ ಏನಾದ್ರೂ ನಿನಿಗಾಗ್ಲೀ ಈ ನಿನ್ನ ಸ್ನೇಹಿತರಿಗಾಗ್ಲಿ ಆಗೋ ಪಕ್ಷಕ್ಕೆ, ಈ ದೊಡ್ಡ್ರುಣಾನ ತೀರಿಸ್ಕೊಳ್ಳೋಕೆ ನಮಗವಕಾಶ ಕೊಡೋಕೆ ಮರೀಬೇಡ ಮಗೂ!

ಕಿಟ್ಟಿ: ಹಾಗಾದ್ರೆ… ನನಗೊಂದು ಉಪ್ಕಾರ ಮಾಡ್ತೀರಾಮ್ಮಾ?

ಮನೆಯಾಕೆ : (anxiously) ಸತ್ಯವಾಗಿ ಮಾಡ್ತೇನಪ್ಪ… ಕೈಲಾದ್ರೆ… ಅದೇನ್ ಮಗು, ಹೇಳು!?

ಕಿಟ್ಟಿ : ಹೆದರ್ಬೇಡೀಮ್ಮಾ! ಅದೇನು ಕೊಂಚ ಕೆಲ್ಸ; ಇದೋ ಬಂದೆ! (Exits R and re-enters with ಕುಂಬಳಕಾಯಿ and cap, full of vegetables) ತರ್ಕಾರೀಮ್ಮ!! ಒಬ್ಬಾಕೇಗೆ ಉಪ್ಕಾರ ಮಾಡ್ಬಂದದ್ದಿದು! ನೀವು ಎರಡೆನೇ girl guideಊಮ್ಮಾ!… ಕುಂಬ್ಳಕಾಯಿ ಹಲ್ವಾ ಮಾಡೋದು ಗೊತ್ತೆ ನಿಮ್ಗೆ…?

ಮನೆಯಾಕೆ: (ಹುಸಿನಗೆಯೊಡನೆ) ಹೂಂ…

ಕಿಟ್ಟಿ: ಹಾಗಾದರೆ ಋಣಾಂದ್ರಲ್ಲಾ. ತೀರ್ಹೋಯ್ತೂಮ್ಮಾ, ವಂದೇ ಏಟ್ಗೆ! ಇನ್ನು, ಮಜ್ಜಿಗೆ ಪಳಿದ್ಯಾ ಅಂತಾರಲ್ಲ, ಆದು?… ಜಾಸ್ತಿ ಸಾಸ್ವೆ ಇರ್ಕೂಡ್ದು!… ಸಾಸ್ವೆಮ್ಮಾ!, ಬಾಯಿಗ್ರುಚಿ ಹೊಟ್ಟೇಗ್ಬಿಚ್ಚು-ಅಂದ್ರೆ-ಚೇಳು! (ತರಕಾರಿಗಳನ್ನು ವಿಂಗಡಿಸುತ್ತಾ) ಹುರುಳೀ ಕಾಯನ್ನಕ್ಕೆ, ಅಕ್ಕಿ ಇದೆ ತಾನೆ ಮನೇಲಿ? ಇದು ತಾಜಾಮ್ಮಾ ಮೊಸ್ರು ಬಜ್ಜಿಗೆ… ದೊಣ್ಣೆ ಮೆಣಸಿನ್ಕಾಯಿ!… ಇಲ್ಲ್ಹತ್ರ ವ್ಂದ್ ಹಳ್ಳೀಲಿ ಸೌದೆ ವಡ್ಯೋ duty ನನ್ಗೆ. ಭಾನ್ಭನ್ವಾರ… ನನ್ನ ಕೂಲಿ ತರ್ಕಾರಿ. ಗಡ್ಗೆ ತುಂಬಾ ಕೆನೆ ಮೊಸ್ರೂ. ಅಲ್ದೆ ಬೇಕಾದಾಗ ಹಾಲು ತುಪ್ಪ; ಗೌಡ ನನ್ನ್ ದೋಸ್ತು-ಅಲ್ಲ-ಸ್ನೇಹಿತ- ನಾಳೆ ಡ್ರಿಲ್ ತುಂಡು… ನಾಳೆ ಹತ್ಗಂಟೇಗೇನೇ ಹಾಜರಾಗ್ತೇನಮ್ಮಾ… ಪಳದ್ಯಾ ಬಜ್ಜೀಗೆ ಮೊಸ್ರು, ಪಟಿಂಗ್ನಿಗೆ ಹಾಲು ಎಟ್ಸೆಟ್ರಾನ ಎತ್ಕೊಂಡು;… ಆದ್ರೆ ಹುಷಾರಮ್ಮಾ! ಹೆಚ್ಚೋವಾಗ ಹಲ್ವಾಗರ್ಧ ಹುಳೀಗರ್ಧ ! (placing all the vegetables inside the house and coming out) ಬಾಕ್ಲ್ ಹಾಕೋಳ್ಳೀಮ್ಮಾ, ಬರ್ತೇನೆ.

ಮನೆಯಾಕೆ: ಹೋಗ್ಬಾ, ಮಗೂ!

[The door is bolted from within]

ಸ್ಕೌಟು ಮಾಸ್ಟರ್: ಕೃಷ್ಣ್ರಾವ್! ಇನ್ನೂ ಇಲ್ಲೇ ಇದ್ದೀಯಾ! Late ಆಗ್ಲಿಲ್ವೇ, ಮನೇಗೆ?

ಕಿಟ್ಟಿ: (stragglingly) ಕ್ಷಮ್ಸಿ ಸಾರ್!… ಬೆಂಕಿ ಬಿದ್ಮನೆ… ಎಲ್ಲಿ? ಏನು? ಯಾವಾಗ? ಹ್ಯಾಗೆ? ಏನೂ? ಎತ್ತ? ಹೀಗೋ? ಹಾಗೋ? ಹ್ಯಾಗೋ? ಇವುಗಳೆಲ್ನಾ ತನ್ಖೆ ಮಾಡ್ದೇ ಕೈ ಹಾಕಿದ್ಕೆಲ್ಸಾನ ಕಾಲು-ಹಾಗ-ಮುಪ್ಪಾಗವಾಗಿ ಬಿಟ್ಟು ಬಿಟ್ಟು ಬರೋದು ತೀನ್‌ತೇರಾಂತ ತಂಗ್ಬೇಕಾಯ್ತು ಸಾರ್‌ ಸ್ವಲ್ಪ! Be prepared ಅಂತನ್ನೋಹಾಗೇ… (ಕೈಗಳನ್ನು ಕಿವಿಚುತ್ತಾ)… ನಮ್ಮನೇಗ್ಮೊದ್ಲು ಹೋಗ್ಬಿಟ್ಟು-ನಮ್ಮಪ್ಪ ಮುಂಗೋಪಿ ಸಾರ್… ಹೊತ್ತ್ ಬಿಟ್ಟ್ಹೋದ್ರೆ ಬೆಂಕಿ ಸಾರ್-ನಾನ್ಯಾಕೆ ಇಷ್ಟು lateಎಂಬೋದ್ನ… ನೀವೇ ಹೇಳ್ಬಿಟ್ರೇ… (ಬಲಗೈಯನ್ನು ಚಾಚಿ) ಅಕೋ ! ಅಶ್ವತ್ಥಕಟ್ಟೆ ಹತ್ರ ಮುನಿಸಿಪಲ್ ಲಾಂದ್ರದ ಎದುರ್ಗೆ… ಮನೆ!… ಸುಣ್ಣಹೊಡ್ದು ಬಲ್ದಿನ ವಾದ್ಬಣ್ಣ!… ಮೆಟ್ಲು ಹತ್ತೋವಾಗ ಹುಷಾರು ಸಾರ್!… ಯರಡ್ನೇ ಮೆಟ್ಲಮೇಲೆ ಕಾಲಿಡ್ಬೇಡಿ ಸಾರ್… ಅದಿಲ್ಲ ಅಲ್ಲಿ-absent ಉ!!

ಸ್ಕೌಟು ಮಾಸ್ತರ್: Quite so! ನಾನ್ಹೇಳ್ಹೋಗ್ತೇನೆ! ನೀನ್… ನಿಧಾನ್ವಾಗಿ ಬಾ… By the way, ನಾಳೆ drill ಗೆ ಬರ್ಬೇಕಾದ್ದಿಲ್ಲ… take a rest!

ಕಿಟ್ಟಿ: (ಬೆದರಿ) Arrestoo?! ಖುದ್ದಾಗವ್ರೇ ಹಾಕ್ದ್ರು ಸಾರ್‌ ! ಹಾತ್‌ಗೆ! (ವಾಚು ಕೈಯನ್ನು ಚಾಚುತ್ತಾ) ಹೈನೆಸ್ಸುಗ್ಳು !… ಇನ್ನ್ತಿರ್ಗೂ arrest ಏ ಸಾರ್?!

ಸ್ಕೌಟು ಮಾಸ್ಟರ್: Arrest ಅಲ್ಲಾ ಕಣೋ fool. ಅಲ್ಲಾ, silly! (ಮುಂದಕ್ಕೆ ಬಂದು ಕಿಟ್ಟಿಯ ತಲೆಯನ್ನು ಸವರುತ್ತಾ)… ಅಲ್ಲಾ poor foolish child! restಉ ನಾನ್ಹೇಳಿದ್ದು, restಉ (to other scouts) ನೀವುಗ್ಳು ಕೃಷ್ಣ್ರಾವ್ನ ಮನೇಸೇರಿಸ್ಬಿಟ್ಟು, ನಿಮ್ನಿಮ್ಮ ಮನೇಗ್ಸೇರ್ಕೋಳಿ !… you Will report to me, Raghu!, tomorrow morning. Good night all!

[Exit R]

[The moment he is out of sight, Raghu, Appu, Shami and Ramu, rush up to Kitti and “chair” him]

ಎಲ್ಲರೂ: ಕಿಟ್ಟೀಲೇ!!

ಕಿಟ್ಟಿ: (Interrupting, in hushed voice) ಹುಷಾರ್ರೋರ್ರೋ! ಲೋ! ಹುಚ್ಚೂಸ್! ಮಗು ಮಲಕ್ಕೊಂಡಿದೆ ವಳ್ಗೆ… ಮುದುಕ್ರು ಪಾಪ ದಂಪತಿಗಳು… ಮೊಮ್ಮಗು! ಮಗ, ಸೊಸೆ… ಇನ್‌ಫ್ಲೂಯೆಂಜಾಲಿ! ಅದಿರ್ಲಿ! ಮಗು… ದೊಡ್ಕಿಟ್ಟಿ ದೊಡ್ಡಪೋಲೀಕಿಟ್ಟಿ ತದ್ರೂಪ್ ತಸ್ಬೀರು ಸ್ವಲ್ಪಕೆಂಪು ಅಷ್ಟೆ!…

ಅಪ್ಪೂ: ದೊಡ್ಕಿಟ್ಟೀ??! ದೊಡ್ಪೋಲಿಕಿಟ್ಟೀ?! ನಿನ್ಗಿಂತ ದೊಡ್ಪೋಲಿ!? ಎಲ್ಲಿ? ಯಾರು ?

ಕಿಟ್ಟಿ: ಎಲ್ಲೇ? ಯಾರೇ? ಕೇಳ್ರೋ ಲ್ರೋ!! ಕಿಟ್ಟಿ ನಾನೇ!? ಪೋಲೀ ನಾನೇ!? ದೊಸ್ತ್ನೂ ದುಷ್ಮನ್ನೂ ಫರಕ್ಕಿಲ್ದೆ ಫನಾ ಮಾಡ್ಬಿಟ್ಟು ಕುರುಕ್ಷೇತ್ರದ ಜಂಗ್ನಲ್ಲಿ ಇನ್ನು ತನ್ನ ಹರ್ನಲ್ಲಿ ಅಪ್ಪ ಅಮ್ಮ ಭಾಯಿ ಬೆಹಾನ್‌ ಬಚ್ಚ ಬಾಬತ್ಗಳೇ ಬಾಕಿ ಇಡ್ದೆ ಗುಮ್ಮಾಡ್ಬಿಟ್ಟು, ಕೊಳಲ್ಬಾರಸ್ತಾ ಕುಣೀತಿದ್ದ್ನಲ್ಲಾ ಅವ್ನು ಬೇಕಾದ್ರೆ ಪೋಲೀ! ದೊಡ್ಪೋಲಿ!! ಕಿಟ್ಟಿ!? ದೊಡ್ಕಿಟ್ಟೀ!! ಮಹಾಭಾರತದೋನು! ಅವನಮೇಲಿನ ಆಷಕ್ಕಿನ್ ಷೋಕೀ ಮೇಲೆ ನಮ್ಮಜ್ಜಿ ಅವನ್ಹೆಸರ್ನ ನನಗಿಟ್ಟು ಅವನ್ಕಥೇನ ನನ್ನ ಬಚ್ಚತನದಲ್ಲಿ ಹೊಗಳ್ತಿದ್ಲಲ್ಲಾ, ಅ ಕಿಟ್ಟಿ ಬೇಕಾದ್ರೆ ಪೋಲಿ!! ನಾನಂತೆ!! ಮನೇಲಿ ನಡಗ್ತಾ ಕಾದಿರೋ ಅಪ್ಪನ್ನೂ ಅಕ್ಕನ್ನೂ ಮರ್ತು ಬೀದಿಲ್ಹೋಗ್ತಾ, ಬೆಂಕಿ ಬಿದ್ಮನೆಗಳಲ್ಲಿ ಬುದ್ಧಿ ಇಲ್ಲ್ದೇ ತಾನ್ತಾಗಿ ಬಿದ್ದ ಬಚ್ಚಗಳ್ನ ಬಚಾಯ್ಸೋದೂ ಅಜಾದಾದ್ನಾನು ನನ್ಮೇಲೆ ಆಷಕ್ಮಾಷಕ್ ಇಲ್ದ ಶುಕ್ರಾಚಾರಿಗಳಿಗಾಗಿ ಲಡತ್ಮಾಡ್ತಾ ಅವನ್ ಸುಲೋಚ್ನ ಬಚಾಯ್ಸೋದೂ;… ನಮ್ಮನೆ ಗೋಳಲ್ದೆ; ನಮ್ಮ್ಹಾಗೇ ಇರೋವ್ರ ಗೋಳ್ನೆಲ್ಲಾ ನನ್ನ್ಹೆಗಲಿಗೆ ನಾನೇ ಹೇರಿಸ್ಕೊಂಡು ಕಣ್ಕಣ್ಬಿಡ್ತಾ… ನನ್ನಾಲ್ಗೇಲಿರೋ ಶನಿಸಿಹಿನರದ ತೀಟೆ ತೀರಿಸ್ಕೊಳ್ಳೋಕೆ ನಿಮ್ಮಾತುಗಳ್ಗೆ ಫಿಸ್ರಿಬಿದ್ದು, ನೀವ್ ಬೊಗಳಿದ ಬೊಂಬಾಯ್‌ ಬಾದಾಮ್‌ ಹಲ್ವ-ಡೆಲ್ಲಿ ದೂದ್ಫೇಡ-ಇವುಗಳ್ನ ಎದುರ್ನೋಡ್ತಾ ನಿಮ್ಹಾಳು ಪಟಾಲಂಗೆ ದಾಖ್ಲಾಗಿ ಕಣ್ಬಿಡ್ತಿರೋ ಈ ಕಪೋತ! ಕೃಷ್ಣನಂತೆ ಪೋಲೀಂತೆ!… ದೊಡ್ಕಿಟ್ಟಿ…. ದೊಡ್ಪೋಲಿ ಕಿಟ್ಟಿ ! ಅವ್ನು! ಮಹಾಭಾರತ್ದೋನು! ವಳ್ಗಿರೋನು ಅವನ್ತದ್ರೂಪು… ಸುಸ್ತಾಗಿ ನಿದ್ದೆ ಮಾಡ್ತಿಧಾನೆ! ಅವ್ನು ಎದ್ರೆ ಎಲ್ರಿಗೂ ತಕ್ರಾರು therefore (ಮೋಟಾರ್ ನಡೆಸುವವನು brake ನ್ನು ಹಾಕುವಂತೆ. ತನ್ನ ಕೈಯನ್ನು ಎತ್ತಿ ಆಡಿಸುತ್ತಾ) brake ಉ, ನಿಂ ಗಲಾಟೆಗೆ !!

ಅಪ್ಪೂ: ಹಾಗಾರ್ಹೀಗ್ಬರ್ರೋ ಲ್ರೋ!
[Led by Appu, the patrol carries Kitti to the edge of the proscenium]

ಕಿಟ್ಟಿ: ಏನೋ ಇದು ತಾರೀಫು?… ಕುಸ್ತೀಲ್ಮುರ್ಕೊಂಡ ಬೆಂಕೀಲೂ ಸುಟ್ಕೊಂಡು ಮನೇಲ್ಮಲ್ಗಿರೋನು, ಮಗು! ದೊಡ್ಮನುಷ್ಯರ್ಮಗ! carನಲ್ಹೋದೋನು… ನಾನಲ್ಲ… ಪೋಲೀ ಕಿಟ್ಟಿ ಅಲ್ಲ… ಬಿಡ್ರೋ!!.

[struggles to find his feet]

ರಾಘು: ಅಲ್ಲ ಕಿಟ್ಟೀ!… ನಿನಗ್ಗೊತ್ತಿಲ್ಲ, sports shieldಊ, life saving shieldoo… ನನ್ patrol ಗೇನೇ…

ಕಿಟ್ಟಿ: ನಿನ್ patrol ಓ ?? ನಿಮ್ಮಪ್ಪ ಬರ್ಕೊಟ್ಟಿದ್ದ ಅಲ್ವೆ ನಿನ್ಗೆ?…

ರಾಘು: ಕೋಪಿಸ್ಕೋಬೇಡ, ಕಿಟ್ಟೀ, ನಂದೇನ್ ನಿಂದೇನು… ನಮ್ಮ್ Patrol ಗೆ!

ಕಿಟ್ಟಿ: ಹಾಗಾರ್ ಕಣ್ಬಿಡ್ತಿದೀಯಾ? ಅದು better ಉ! (holding Raghu’s shirt by the collar, softly) ಪರ್ವಾ ಇಲ್ಲ ರಾಘು ! ನಿನ್ಜಂಭ ಕರಗ್ತಿಧೆ! ಇನ್ನು ನಿನ್ಕೋಳೀ ತನದ ಕೊನೇ ತೊಟ್ಟು ಕುಗ್ಗುತ್ಲೂನೂವೆ, ಹುಂಜ ಆಗ್ತೀಯಾ!

ರಾಘು: ಒಪ್ದೇ ಕಿಟ್ಟೀ!

ಅಪ್ಪೂ: ನಮ್ಮ ರಾಘು ನಿನಗ್ಗೊತ್ತಿಲ್ಲ, ಕಿಟ್ಟೀ! ಅವನ್ ಜಂಭದ ಬಾಬ್ತೇನೂ ಇಲ್ಲ ಈಗ! Grimm’s fairy talesನಲ್ಲಿ ಬಂದ್ಹಾಗೆ -once upon a time ಉ in days of yoreಉ… ಅಂದ್ರೆ ಒಂದಾನೊಂದು ಕಾಲದಲ್ಲಿ!

ಕಿಟ್ಟಿ: ಯಾರ್ಹತ್ತರ್ಲೋ ನಿನ್ನ yoreನ ಜೋರು? ನಿನ್ನ English ಓ ನೀನೋ… ಅರ್ಥ ಹೇಳ್ಕೊಡ್ತಾನೆ…ನನ್ಗೆ… English ತಿಳೀದ ಗುಗ್ಗೂಂತ ತಿಳ್ಕೊಂಡ್ಯೇನೋ… ಆರ್ನೇ formಗೆ ಮಣ್ಹಾಕ್ದ ಭೂಪ್ತೀಗೇ?

(struggles to get down in vain)

ದಳದವ್ರು: ಕೋಪಿಸ್ಕೋಬೇಡ ಕಿಟ್ಟೀ.

ಕಿಟ್ಟಿ: ಇದ್ಯಾಕ್ರೋ ಎತ್ತ್ಕೊಂಡಿದ್ದೀರಾ ನನ್ನ ಅಮರದ್ಹಾಗೆ “ಪೌಲಸ್ತ್ಯೋ ನರವಾಹನಃ!” ಇತ್ಯಮರಃ!! ನಿಮ್ಮೇಲ್ಸವಾರಿ ಮಾಡೋಕೆ? (ಕೈ ಬಿಸಿ ಹೇಳುತ್ತಿರುವಾಗ ಕೈಯಲ್ಲಿರುವ ಗಡಿಯಾರದ ಕನಕದ ಹೊಳಪು ಕಣ್ಣಿಗೆ ತಾಕಲು) ಅಯ್ಯೋ ಹೌದೇ! ಕುಬೇರ್ನೇ ನಾನು… ತಿಳಿತ್ರೋ… ಲ್ರೋ… ನಿಂ ತಾರೀfoo (ಎತ್ತಿಕೊಂಡಿದ್ದವರನ್ನು ವದ್ದುಕೊಂಡು ನೆಲಕ್ಕಿಳಿದು) ವರ್ದಾಚಾರಿ ಕಂಪ್ನಿ ಕಂದದಲದಲ್ಲಿ ಹಾಡಿದ್ಹಾಗೆ…. ಈಗರ್ಥವಾಯ್ತ್ರೋ ನಿಮ್ತಾರೀfoo!; ನೀವ್ಮುತ್ಕೊಳ್ಳೋದು ನನ್ನ!… S.M.ಗೆ ಈವತ್ಮದ್ಯಾಹ್ನ “fool” ಉ: “hopeless” ನಾನು, ಅದೇ ನಾನು… ಈಗ್ಹೋಗೋವಾಗ ಸಿರ್‌ನ ಸವರ್ತಾ “You poor child” ಉ.! ನಿಮಗೋ ವಾಕೀಫಾ ಆದ್ವಖತ್ತು ‘ಪೋಲಿ,’ ಈಗ “ಕಿಟ್ಟಿ, hero”; ಬಿಠಾಯಿಸ್ಕೊಳ್ಳೋಣ ಭುಜದ್ಮೇಲೆ ಥಕೋ!!… ಇದ್ಯಾಕೆ ಗೊತ್ತೇನ್ರೋ (ಕೈಯಿನ gold watch ನ್ನೂ ಮುಂಗೈಯನ್ನೂ ಅಲುಗಿಸುತ್ತಾ) ಇದು ಸುವರ್ಣ gold ಉ, ಸಿರಿ; ವರ್ದಾಚಾರಿ ಕಂಪ್ನಿ ಕಂದದ್ದಾಗೆ ಸಿರಿ! (ಹಾಡುವನು)

ರಾಗ-ಕಾಂಭೋದಿ

“ಸಿರಿ ತಾಂ ಬರಲು ಷಕ್ಸಿಗೆ
ದುನಿಯಾನೇ ದೋಸ್ತುಗಳೂ ||”
Gold watch ಬರಲು brigade ಎಲ್ಲ ಬಂಧುಗಳೂ ||

ಈಗ ಬಂದ್ಸೇರಿದ್ರಾ?… (ದುಃಖವನ್ನು ನಟಿಸಿ, ಇಲ್ಲದ ಕಣ್ಣೀರನ್ನು ತೋರಿಸುತ್ತಾ) ಇನ್ನಿದ್ಹೊರಟೋಯ್ತೋ… ?

(ಪುನಃ ಹಾಡುವನು)
ರಾಗ-ನೀಲಾಂಬರಿ

“ಸಿರಿ ತಾಂ ತೊಲಗಲು ಭಗಾಯಿಸುವರೂ
Gold watch ತೊಲಗಲೂ…

S.M. ಉಗಳು S. ಉಗಳು. Cub ಉಗಳು, ದೌಡಾಯಿಸುವರು… ಶಿವಶಿವಾ ಹರಿಹರೀ, ಹರಹರಾ, ಅನುಪಮಾ ಸತ್ಯಂ, ದಿಟಂ, ನಿಜಂ ಧರೆಯೋಳ್, ಇಳೆಯೋಳ್ ಮೇಣ್…. ಅಕ್ಕುಂ”|| (ಎಂದು ಗೋಳಾಡಿ ಥಟ್ಟನೆ ತಾತ್ಸಾರದ ನಗೆಯನ್ನು ನಟಿಸುತ್ತಾ) ಗೊತ್ತ್ರೋ; ಲ್ರೋ ! ನಿಮ್ ತಾರೀfooಗ್ಳೂ! ಹೆದರಸ್ತಾರೆ… ಹೆದರಸ್ತಾನೆ. yore ಊ ಗೀರೂ ಅಂತ ಇಂಗ್ಲೀಷ್ನಲ್ಲಿ… ನಾನೇನು ಸ್ಕೂಲಿಗ್ಹೋಗ್ಲಿಲ್ಲಾ… ಸ್ಕೂಲಿಗ್ ಮಣ್ಣ್ ಹಾಕಲಿಲ್ಲಾಂತ ತಿಳ್ಕೊಂಡಿದೀರಾ?

ಅಪ್ಪೂ : sixth from ನಲ್ಲಿ ಇದ್ದದ್ದು… ಅಲ್ಲ… ನಮ್ಮನ್ನೆಲ್ಲಾ ಒದ್ದದ್ದು… ಗೊತ್ತು… ಸ್ಕೂಲ್ ಬಿಟ್ಟದ್ದೂ… circumstanceಊ… ಅಂತ…

ಕಿಟ್ಟಿ: ಹಯ್ಯೋ, ಮಂಕೂ! ನನ್ನ ಸ್ಕೂಲಿಂದ್ದೋಡ್ಸಿದ್ದು cir ಊ ಅಲ್ಲ, cum ಊ ಅಲ್ಲ, stances ಊ ಅಲ್ಲ; ಉರೀ ಕಾಣೋ, ಎದೆ ಉರಿ! ನನ್ನ ಸ್ಕೂಲು ಓಡಿಸ್ತೋ… ಇಲ್ಲಾ ನಾನ್ ಬಿಟ್ಟು ಓಡಿದ್ನೋ… ಬರತರ್ಫೋ ಇಲ್ಲ ರಾಜೀನಾಮೇನೋ… ನೀನೇ ಹೇಳೋ cirಊ cum ಊstances ಓ…! ಕೇಳ್ರೋಲೋ ಕಬ್ಬುಗಳ್ರಾ ! in days of yoreಊ ಅಂದೇ… yore ಏನೂ?!… ಯಾರೇನೂ?!… ಯಾರ್ less a man… ಈಗ್ಲೂ ಹೆದ್ರಿಕೆ ಬರತ್ತೆ… than Inspectroo! ಆತ ಹೈಸ್ಕೂಲಿಗೆ ಅಜ್ಮಾಯಿಷೀಗೆ ಬಂದಾಗ set ಮಾಡ್ದ Composition questions ನಲ್ಲಿ answer ಕೊಡೋವಾಗ ನಾನು ತೋರಿಸಿದ ನನ್ನ ಕೊಬ್ಬೇ… ಹಚ ಮಾಡಿದ್ದು… ನನ್ನ… ಹೈಸ್ಕೂಲಿಂದ!! ನನ್ನ ಇಂಗ್ಲೀಷೂ… ಯಾವಾಗ್ಲೂ Strong ಊ! ಆ ಇನ್ಸ್ಪೆಕ್ಟರು- ಆ ದೊಡ್ಡ ಮನುಷ್ಯ ಪ್ರಾಣೀ ಬಂದ್‌ದಿನ… ನಮ್ಮಣ್ಣನ್ ಜ್ಞಾಪ್ಕ ಬಂತೂ therefore ನನ್ನಂಗ್ಲೀಷು ಆವತ್ತು ಚಂಡಪ್ರಚಂಡ strongoo – strongoo ಅಂದ್ರೇನು ? ಒಂದು ನಮೂನೆ strongoo!! ಸಾಲದ್ದಕ್ಕೆ… ಹಕ್ಕೀಹಾಗೆ ಆzದಾಗ್ಹಾಡ್ತಿದ್ನನ್ನ, ಸ್ಕೂಲು ಅಂಬೋ ಬೋನ್ನಲ್ಲಿ ನಮ್ಮಪ್ಪ ದಬ್ಬುತ್ಲೂನೂವೆ, ನನ್ಗಿರೋರೆಕ್ಕೆಗಳ್ನ ಮರ್ತು, ಬೊಕ್ಕೆ ಮಾಲೀಕ್ರು, ಅದೇteachersಉ, ಉತ್ತ್ರಾಯಿಸ್ದ್ರೂ ನೋಡು… ಒಬ್ಬನ್ಮೇಲೊಬ್ರು… ನನ್ಹೊಟ್ಟೇಗೆ ಕಿಚ್ಚಿಡೋಕೆ! ಎತ್ಕೋತಾ ಅರ್ಥ್‌ಮಿಟಿಕ್‌ನೋನು; ನನ್ಕೋಟೋ, open collarsನ pin ಹಾಕಿ close collarಉ! ಹರ್ಕ್ಲು!…ಒಳಗ್ಷರ್ಟಿಲ್ಲ… ಟೋಪಿ, ಚರಿತ್ರೆ ಹಾಸನದಲ್ಲಿ ಹೆಣದದ್ದು, ಎರಡೆಕ್ರೆ ಭರತ್ಮಾತೆ ಭರ್ತಿಯಾಗಿರೋ ಪಂಚೆ… ಬಡವರ ಬಚ್ಚ ನಾನು… ಬಿಸ್ಸಂ ಬಿಸ್ಲು… ಬಿರುದು ಪಡೆದ ಪಾದ… ಬರೀಹೊಟ್ಟೆ… ಬಂದಿಧೇನೆಕ್ಲಾಸ್ಗೆ!… ಹಾಕ್ತಾನೆ ಕೊಶ್ಚನ್ನು… ಕಂಭ್ಳೀ ಕೋಟ್ ಹಾಕ್ಕೊಂಡು… ಬೊಜ್ಜೆ… ಬಲ್ತು… ಎಲೆ ಅಡ್ಕೆ ಮೆಲ್ತಾ ನನ್ನ ಮ್ಯಾಥಮ್ಯಾಟಿಕ್ಸ್ ಟೀಚರ್‌ಉ Iyengarಇ, ಮೇಲ್ಕೋಟೆ, ಗಿಳಿಮೂಗ್ ಗಳ್ಡಾಚಾರಿ ‘practice’ ನಲ್ಲಿ ಕೊಶ್ಚನ್ನು… ಕೇಳ್ರೋ ! ಲ್ರೋ ಹೊಟ್ಟೆ ಹಸೀತಾ ಇರೋ ನನ್ಗೆ… ಕೊಶ್ಚನ್ ಹಾಕೋವ್ನು… ಹೊಟ್ಟೆ ತುಂಬ ತಿಂದು ಬಂದ teacherಉ… ಕೊಶ್ಚನ್ answer ಮಾಡೋನು ಹೊಟ್ಟೆ ಬೇಯ್ತಿರೋ ಬಿಚಾರಿ… ಕೊಶ್ಚನ್ನೋ, ಬೇಯೋ ವಲೇಗೆ ಮತ್ತಷ್ಟು ಸೀಮೆಯೆಣ್ಣೆ! sumಊ practice sumಊ! “Find the cost of”ಎಕ್ಸೆಟ್ರಾ… ಕೇಳ್ರೋ ಲ್ರೋ! ಹಸ್ದೋನ್ಗೆ ಹಾಕೋ ಪ್ರಶ್ನೇನಾ!
(1) 100 loafs of breadoo at one anna eachoo
(2) 20 tons of apples at ಬಿಡ್ಗಾಸು ವಂದಕ್ಕೆ
(3) 1,000 gallons of ಷರ್ಬತ್… at freeನೋ ಏನೋ… ಅಂತೂ cheapoo
(4) l0 tons of ice…at ಬಿಟ್ಟಿ…’ ಥಕ್ಕೋ ಯಾರಪ್ಪನ್ ಮನೆ ಗಂಟೂ? (5) one pound of ಧಂರೋಟ್ at ಧಮ್ಡಿ a ಧಡಿಯ ! ಸೋರಿ ಸುರ್ಯೋದಿಲ್ವೇನ್ರೋ ನಾಲ್ಗೆ? ಉರಿಯೋದಿಲ್ವೇನ್ರೋ ಉದ್ರ?… ಇದೊಂದೇ ಅಲ್ಲ! ಸ್ಕೂಲ್ ಫೀಸ್ಗೆ ಗತಿ ಇಲ್ದ ಹುಡಗರ್ನ ಹತ್ಸಾವಿರ್ರೂಪಾಯಗಳ್ನ ಬ್ಯಾಂಕಿನಲ್ಲಿ, ನೀನು ಹಾಕಿದ್ರೆ ಶೇಕ್ಡಾ 4ರ ಪ್ರಕಾರ ನಾಲ್ಕು ವರ್ಷ ಮೀರಿದ ನಂತರ”?! ಯಾಕ್ರೋ!? ಬಿಡಿಗಾಸಿಲ್ಲದ ಬಡವರ್ಗೆ… ಈ ಬ್ಯಾಂಕಿನ್ಯೋಚ್ನೆ!? ಹೀಗೆಲ್ಲ ಹೇಳಿ ಕಾಡ್ಸೋದು, ಗರೀಬ್ ಹುಡುಗ್ರ ಹೊಟ್ಟೇ ಉರ್ಸೋಕಲ್ವೇನ್ರೋ?…ಇವನೊಬ್ಬ ದುಷ್ಮನ್ನಾಯ್ತೇ?…

ಇನ್ನು Algebra ದೋನೋ!? ಆಚಾರಿ! ಮುದ್ರಾರಾಕ್ಷಸ!! alphabet completeಆಗಿ ಗೊತ್ತಿಲ್ಲ ಅವನಿಗೆ!… A. B. C ಗೊತ್ತು! xyz ಗೊತ್ತು, ಆಗಾಗ್ಯೆ PQRS ಉ! ಯುವಾಗ್ಲಾದ್ರೂ ಅವನಿಗೆ Lಊ M ಊ N ಊ ! ಆದ್ರೂನೂವೇ ಬ್ರಾಕೆಟುಗಳೂ ಅಂದ್ರೆ ಪ್ರಾಣ… ಆ ಮುದ್ರಾರಾಕ್ಷಸನಿಗೇ… ‘half moon bracketಊ, square bracketoo, flower braket ಉ’ ಇದ್ರಲ್ಲಿ ಮುಳ್ಗಿ ನನಗೆ marksoo ಅವ್ನ ಮುದ್ರೆ ಹಾಗೆ ‘full moon bracketಉ’ algebra ದಲ್ಲಿ ಬರೋವರ್ಗೂ boysನ ಸತಾಯಿಸ್ತಿದ್ದ, ಎರಡ್ನೇ ದುಷ್ಮನ್ನೂ! ಇನ್ನಿವರಲ್ದೆ, ಜಾಗರ್ಫಿಯೋನು: ಶಾಸ್ತ್ರಿ! ಘಾತ್ಕ! ನಮ್ಮ ಕೋಲಾರದಲ್ಲಿ ಚಿನ್ನದ ವ್ಯಾಪಾರ! ನಮ್ಮದ್ದೂರ್ನಲ್ಲಿ ಆಸ್ಪತ್ರೆ ಐಬು! ನಮ್ಮ್ ಆನೇಕಲ್ನಲ್ಲಿ ಅನಾವೃಷ್ಟಿ! ಅಂದೋ ನಮ್ಮ ಮೈಸೂರು ದೇಶದ ವಿಚಿತ್ರ ಚರಿತ್ರೇನ ಹೇಳೋದ್ಬಿಟ್ಟು ಆ ಘಾತ್ಕ…. Kisdder minister carpet ಗ್ಳು! ಸಹರಾದ ಸಸ್ಯಾದಿಗ್ಳು!… Swiss ಸಾಗರದ ಮೇರೆಗ್ಳು! ಅಂತ ತಾನ್ಹುಟ್ಟಿ ಬೆಳ್ದ ಮೈಸೂರ್ನೇ ಮರ್ತ್‌ಬಿಟ್ಟು ಹೊರದೇಶ್ದ ವರ್ಮಾನಾನೆಲ್ಲ ಹುಡುಗರ ತಲೇಗೆ ಹತ್ತಿಸ್ತಿದ್ದ ಈ Geography ಶಾಸ್ತ್ರಿ ಒಬ್ಬ!, ಮೂರ್ನೇ ದುಷ್ಮನ್ನು! ಆಯ್ತೆ!? ಇನ್ನು History ಯೋನು ! ಮನುಷ್ಯ ಬ್ರಾಹ್ಮಣ! ಅದರಲ್ಲೂವೆ ಅವನ್ಕೇಳೋ ಪ್ರಶ್ನೆ : “ನೈಸಾಮುಲ್ ಮುಲ್ಕ್ ಯಾವಾಗ ಸತ್ತ? ಸತ್ಹೋದ ಯಾವ್ದೋ ಶತಮಾನದಲ್ಲಿ!… ಇವ್ನಿಗ್ಯಾಕೋ ? ತಿಥಿ ಮಾಡೋಕೇ… ‘ಭಾರತಮಾತೆಯನ್ನು ಅಗೆದು ನುಂಗಲು ಬಂದ ಅಲೆಕ್ಸಾಂಡರನ ಅಶ್ವದ ಹೆಸರೇನು?’ ಅಲ್ದೆ ‘ಸ್ವೀಡನ್ ರಾಜನ ರಾಯಭಾರಿಯ ಮಗನನ್ನು ಕಚ್ಚಿದ ವಿಷದಿಂದ ಸತ್ತ ನಾಯಿಪಿಳ್ಳೆಯ ಹೆಸ್ರೇನು?’: ಹೀಗೆಲ್ಲ ಹುಡುಗ್ರ ಹೊಟ್ಟೇಗೆ ಕಿಚ್ಚ್ಹಾಕ್ತಿದ್ದ History teacher ರೊಬ್ಬ, ನಾಲ್ಕನೇ ಬಾಲ ವೈರಿ!… ಇನ್ನಿವರಲ್ದೆ ಸಂಸ್ಕೃತದ Teacherಉ… ಶಾಸ್ತ್ರಿಗ್ಳು!… ‘ನಮಾಮಿ-ನಮಾವಃ-ನಮಾಮಃ’ ಅನ್ಬೇಕಂತೆ; ಆದ್ರೆ. ‘ಕರಾಮಿ-ಕರಾವಃ-ಕರಾಮಃ’ ಅನ್ಬಾರ್ದಂತೆ!! ಯಾಕೋ ? ಇಷ್ಟಕ್ಕೂ ನಮ್=ನಮಿಸು; ಕರ್-ಮಾಡು!! ಬೇಡದ್ದಕ್ಕೆ English ಟೀಚ್ರು!! ಸಿ.ಯು.ಟಿ cut ಅಂತೆ; ಎಚ್. ಯು. ಟಿ. hut ಅಂತೆ; ಆರ್. ಯು. ಟಿ. rut ಅಂತೆ; ಪಿ.ಯು.ಟಿ. ಮಟ್ಟಿಗೆ put ಅಂತೆ!! ಯಾಕ್ರೋ…ಇದೂ?! ಹಿಡ್ಸುತ್ತೋ ಇಲ್ವೋ ಹುಚ್ಚು, ಹುಡುಗ್ರಿಗೇ? ಹೇಳ್ರೋ! ಹೀಗೊಬ್ಬೊಬ್ಬಾಲವೈರೀನೂ petrol ಹಾಕ್ತಾ ಹಾಕ್ತಾ ಉಕ್ತಿತ್ತು ನನ್ ಖೂನು! ಅರ್ಥಮಿಟಿಕ್‌ನೋನ ಪೌಂಡುಗ್ಳು-ಶೇಕ್ಡಾಗ್ಳು, algebraದೋನ ಹೂವು ಬ್ರಾಕೀಟುಗ್ಳು, ಜಾಗರ್ಫಿಯೋನ land surrounded by wateroo, history ಯೋನ causes of warsoo, Sanskrit ನೌನ ಸಾವಿರ exceptions to Bhandarkar’s one ruleoo. ಇನ್ ಇಂಗ್ಲೀಷ್ ನೌನ charmingoo, chemistry, chamoisಗ್ಳೂ – ಇಷ್ಟರಪೈಕಿ ಈ ಇಂಗ್ಲಿಷ್ ಟೇಚರೊಬ್ಬ -ಸಾಧು ಪ್ರಾಣಿ-ಮನೆ ತುಂಬ ಮಕ್ಳು- ಇಪ್ಪತ್ತೈದು ರುಪಾಯಿ ಸಂಬ್ಳ-ಆ ಇನ್‌ಸ್ಪೆಕ್ಟರ್ ಪ್ರಾಣೀಗೆ ಇವನೂಂದ್ರೆ ಬೆಂಕಿಯಂತ…ಯಾಕೋ ಕಾಣೇ…

ಈ ಹಿಂಸೆಗಳ್ನ ತಪ್ಪಿಸ್ಕೋಳ್ಳೋಕೆ… ಪಂಜರದಲ್ಲಿ ಸಿಕ್ಕೊಂಡ ಪಾರಿವಾಳಕ್ಕೆ ಒಂದ್ ಚಾನ್ಸ್ ಸಿಕ್ಕೀತೇ ಅಂತ ಕಾದಿದ್ದೆ! ಸಿಕ್ತು! Inspectroo ಬಂದ!… ಬಂದೋನು ಕಾರಿನಿಂದಲೇ ಇವನ್ನೋಡಿ ರೇಗ್‌ಕೊಂಡೇ ಇಳ್ದ…. ಅವನೇನ್ಮಾಡಾನ್ ಪಾಪ!… ಅವನ್ನ್ ದೊಡ್ಡಮನುಷ್ಯತನದ್ ಧೋರ್ಣೆ!… ಧಿರ್‌ರ್‌… ಅಂತ… ಫಿರ್ಕಾಯಿಸ್ತಿದೆ ದಿಮಾಕ್ನ!… ತಗಲ್ಕೊಂಡ ಟೀಚರ್ನ… ಕ್ಲಾಸಿಗ್‌ ಬರುತ್ಲೂವೆ!… ಈ ಸಾಧು… ಬೆದರಿಕೊಂಡು… ಅರ್ಧಂಬರ್ದ ಬಾಯಿ ಬಿಡುತ್ಲೂವೆ, ‘ನಿನ್ಗೇ ಇಂಗ್ಲೀಷ್ ಗೊತ್ತಿಲ್ಲ… ಟೀಚರ್ ಕೆಲಸಕ್ಕೆ ನೀನ್ ಲಾಯಕ್ಕಿಲ್ಲ… ಆದ್ರೂ ನೋಡೋಣ ನಿನ್ನ ಹುಡುಗರಿಗೆ ಕಲಿಸಿರೋ ಇಂಗ್ಲೀಷ್ನ’ ಅಂತ ಬರ್ದ ಬೋರ್ಡು ಮೇಲೆ ಚಾಕ್ನಲ್ಲಿ… ಕೊಶ್ಚನ್ನು ಕಾಂಪೋziಷನ್ ಕೊಶ್ಚನ್ನು!! ಅವನ್ ಸುಲೋಚ್ನಾನೋ… ಅವನ್ಷರಾಯಿ ಬೂಟ್ಸೋ… ನೋಡುತ್ಲೂವೆ – ಅವನ್ಹಾಗೆ ದೊಡ್ಮನುಷ್ಯನಾಗಿ ಮೆರ್ಯೋ ನಮ್ ಮನೆತನದ ಮಾರಿ!, ನಮ್ಮಣ್ಣನ್ನ ಜ್ಞಾಪ್ಸಿ… ನನ್ನ ಮುಯ್ಯಿ ತೀರಿಸ್ಕೊಳ್ಳೋಕೆ ಮೋಕ್ಕಾನೂ ತೋರಿಸ್ದ by his composition questionoo!

ಸ್ಕೌಟುಗಳೆಲ್ಲರೂ: ಅದೇನ್ composition ಕಿಟ್ಟೀ?… ಹೇಳು ಕಥೇನ.

ಕಿಟ್ಟಿ: ‘Write a compositionoo’ಂತ್ಲೋ ಏನೋ ಮೊದ್ಲು ಹಾಕ್ಕೊಂಡ ತಸ್ಕರ! ಆಚಾರೀ! “The dog is a noble animaloo and man who loves dogoo is a noble manoo!” ಅದು (A)!; ಇನ್ನು (B), “Give example, ನಿಮ್ಮ life ನಿಂದಾಂತ”; ನಾನೋ, composition class ಬರುತ್ಲೂನೂವೆ ಕಿಟಿಕಿ ಧುಮ್ಕಿ ಓಡೋನು!!… ಒಂದನ್ಕೂಲ ಕಾಣ್ರೋ ಹೈಸ್ಕೂಲ್ನಲ್ಲಿ! low ಸ್ಕೂಲ್ನಲ್ಲಿ ಚೆನ್ನಾಗಿ ಓದಿ promotion ಸಂಪಾದ್ಸಿದ್ರೆ – low classesನ ಕಿಟ್ಗಿಗಳ್ಗೆ ಕಂಬಿಗ್ಳು ಹೈಸ್ಕೂಲ್ ಕ್ಲಾಸ್ ಕಿಟ್ಗಿಗಳ್ಗೆ ಇರೋದಿಲ್ಲ- attendance ಆಗತ್ಲೂನೂವೆ ಆzaದಾಗಿ ಧುಮಕ್ಬಹ್ದು foot ball fieldಗೆ!!! ಆದ್ರೆ, ಇವತ್ತೇನೋ ನಮ್ಮ ಸಾಧು ಟೀಚರ್ನ ತಾತ್ಸಾರ ಮಾಡಿದ, ನಮ್ಮಣ್ಣನ್ನ್ ಜ್ಞಾಪಿಸ್ದ, ಈ ದೊಡ್ಮನುಷ್ಯ ಇನ್‌ಸ್ಪೆಕ್ಟರ್ಗೆ ತೋರ್ಸೇ ಬಿಡ್ಬೇಕು ನನ್ನ ಇಂಗ್ಲೀಷ್ನ ಅಂತ ನಾಟ್ಕೊಂಡು ಹಿಡ್ದೆ ನನ್ನ ಮನಸ್ಸಿನಲ್ಲಿ ಒಂದ್ಹಟ! ಬರದೇ ನೋಡು ಭೂಪ್ತಿ… ಒಂದು compositionoo…

ಅಪ್ಪೂ: (With eyes gleaming) ಹೇಳು ಕಿಟ್ಟೀ… subjectಉ ? ‘The dog is a noble animal’ಏ? ಏನ್ಬರ್ದೆ ?

ಕಿಟ್ಟಿ : subject ಇರ್ಲೋ! object…ಉ… ಉರಿ… ಸೇಡು… ಮುಯ್ಯಿ… ಸ್ಕೂಲಿನ್ಮೆಲಿದ್ದ ಸೇಡ್ನೂ masters ಮೇಲಿದ್ದ ಮುಯ್ನೂ ನಮ್ಮಣ್ಣನ್ಮೇಲಿದ್ದ ಆಂಗಾರ್ನೂ ಭುಜಾಯಿಸ್ಕೊಳ್ಳೋಕೆ chanceಉ… objectಉ!! predicateಉ, verboo! `A verb is a word that declares somethingoo’! ಡಿಕ್ಲೇರ್ ಮಾಡ್ದೇ ನೋಡು ನನ್ನ compositionನಲ್ಲಿ; ನನ್ನ ದಿಲ್‌ನಲ್ಲಿ ಜಲಾಯಿಸ್ತಿದ್ದ ಬೆಂಕೀನ ಇಸ್ತೆಮಾಲ್ಗೆ ತಂದೇ ನೋಡು ಈ ನಾಯಿ ಸಬ್ಜೆಕ್ಟ್ನಾ… ಕೇಳ್ರೋ, ಲ್ರೋ! ಕೇಕ್ಡಿಕೇಸ್! ಈ ನಾಯಿ subject ನ್ನಿಟ್ಕೊಂಡು…ನನ್ನ object ತೀರಿಸ್ಕೊಳ್ಳೋಕೆ ಬರದದ್ನ! ಕೇಳ್ರೋ, ಲ್ರೋ ನನ್ನ high schoolನಿಂದ ಹಚ್ ಮಾಡ್ಸಿದ composilionನ!!

ರಾಘು : (Chastened by his witnessing that night, of a great Prince’s humble but dignified solicitude for his helpless subjects… a crippled boy’s rush into fire and a ‘ಪೋಲೀ’s blindness to fume and flame in succouring a brother scout turning his eyes full of true affection towards Kitti) ಹೌದು ಕಿಟ್ಟಿ! ನಿನ್ನ composition ಹೇಳು… ಚಾಚೂ ಬಿಡ್ದೆ… ವಪ್ಸು ಬರೆದಿದ್ದ್ನ… ನೋಡೋಣ ನಿನ್ನ memoryನ!

ಕಿಟ್ಟಿ: (Drawing Raghu’s arm into his own) ಕೇಳ್ಹುಂಜಾ!… ಕೇಳ್ರೋ, ಲ್ರೋ! ನಾನು ಸ್ಕೂಲ್ನಿಂದ ತಪ್ಪಿಸ್ಕೊಂಡ compositionನ ಕೇಳ್ರೋ, ಲ್ರೋ… ನಾನು ಸ್ಕೂಲಿಂದ ಬರ್ತರ್ಫಾಗಿ ಘರ್ತರ್ಫು ಬಂದ ಪುರಾಣಾನ! (ಚಿನ್ಮುದ್ರೆಯನ್ನು ಧರಿಸಿಕೊಂಡು) ಶುನಕಾದಿ ಮಹರ್ಷಿಗಳೇ! ಕೇಳ್ರೋ compositionನ, ಶೌನಕಾದಿ ಮಹರ್ಷಿಗಳ್ರಾ!

ಕೊಶ್ಚನ್ A: DOG IS NOBLE ANIMAL MAN WHO LOVES DOG IS NOBLEMAN

ANSWER

(a) Dog = 2÷S
lst ÷ dog = Country (ಕಂತ್ರಿ)
2nd ÷ dog = Caste (ಜಾತಿ)
lst ÷ dog’s house = Street
\ Country dog’s food = ಯೆಂಜ್ಲು
\ but ಯೆಂಜ್ಲು is in ತಿಪ್ಪೆ ಗುಂಡಿs
\ 1st ÷ ಕಂತ್ರಿ dog’s house is street

Q.E.D.

2nd ÷ dog is ಜಾತಿ
2nd ÷ dog’s house is bungalay
\ Bungalaywalas are afraid of robbers; again
\ Bungalaywalas are ದೊಡ್ಮನುಷ್ಯರ್ಜಾತಿ!
\ Keep money and jewels ಎಕ್ಸೆಟ್ರಾ!
But 2nd ÷ dogs also want food.
\ money having ದೊಡ್ಮನುಷ್ಯಾs give for food
2nd ÷ dogs with flesh to make strong to bite
lst ÷ dogs, robbers and ಬಡ ಮನುಷ್ಯಾs
But flesh market’s master is ಕಸಬಾ:
(ಕ=ಕಟುಕ, ಸಾಬಾ= ಸಾಬಿ= mussalman – Gandhi-brother
\ ಕಟುಕ = ಕಸಾಬಾ = Gandhi brother)
\ wantedಏ wantedಊ, food for 2nd ÷ dogs for strong teeths.

(b) Egsample from life!

One day I walk up road of Big-wigs pet (ದೊಡ್ಮನುಷ್ಯರ ಪೇಟೆ) full of Bangalows=ಬಂಗಲೆಗಳು.

One bungalow with name ‘ಸುಖನಿವಾಸ’ on gate door pillar = joyful living place. This out side bungalow.

\ inside all bungalows quarrels etc.

\ ದೊಡ್ಮನುಷ್ಯರ್ಸ್ get much pay ಎಕ್ಸೆಟ್ರಾ and buy many foods and grow fat.

Their quarrels is all empty fat=ಬರೀ ಕೊಬ್ಬು. Bungalay-walas being all fat, (no muscle), always afraid of outside people, keep dogs.

When I was before ಸುಖನಿವಾಸ್ ಬಂಗ್ಲೋ, a big black dog came and made noise.

Dog’s noise = bark = ಬೊಗ್ಳು.

This dog which is noble animal, jumped on my legs and became hungry, took away one quarter ಸೇರು from my leg.

4 ಪಾವ್s=1 ಸೇರು,
\ 1 quarter ಸೇರ್ = l ಪಾವು Ans.

\ To stop giving more meals to dog, I took a heavy stone in hand, 1 ಪಂಚೇರ್ weight.

5 ಸೇರ್ಸ್ =1 ಪಂಚೇರು Ans.

[pressed ಪಂಚೇರ್ stone on noble animal’s head strongly. Noble animal stopped meals with my leg and made crying noise =ಗೋಳು. Hearing noble animals crying noise the ದೊಡ್ಡಮನುಷ್ಯ of the bungalow came out and sent ಜವಾನ್ = working man, in car for doctor.

\ ದೊಡ್ಮನ್ಷ also noble man.

Doctor came and ದೊಡ್ಮನ್ಷ said ” See boy’s leg” ! Doctor saw.
ದೊಡ್ಮನ್ಷ asked “Has boy got any disease?” \ dog noble animal,
price is 200 rupees. Please also see if dog’s teeths broken, \ “that boy’s leg very strong.”

This is egsample fram life for Dog is noble animaI…

ಅಂತಾ ತೀಡ್ತಾ ತೀಡ್ತಾ ಇಧೇನೆ! ಪೆನ್ನೂ… ಪೇಪರ್ನೂ…! ನಮ್ಮ teacher ಗೋ ಖುಷಿ-
“ಯಾವತ್ತೂ ತಪ್ಪಿಸ್ಕೊಳ್ಳೋನು, ಈವತ್ತು ಕೂತ್ಕೊಂಡು, ದಸ್ತಿನ್ಮೇಲೆ ದಸ್ತು extra paper ಮೇಲೆ ink ಸುರಿದು ಸಾರಿಸ್ತಿಧೇನೇಂತ; ನಾನ್ಮುಗ್ಸೋ ಅಷ್ಟ್ಹೊತ್ಗೆ ಮಿಕ್ಕೋರ paper ಗಳ್ನೆಲ್ಲಾ Correct ಮಾಡಿ. ಕಾದಿದ್ದ Inspector ಉ ಕೇಳ್ರೋ!… ಎರ್ಡು ಕೈಯಿಂದ್ಲೂ… because of ವzzanಊ ನನ್ಕಾವ್ಯಾನ ಎತ್ಕೊಂಡ್ಹೋಗಿ, desk ಮೇಲಿಟ್ಟಿದ್ದು ವಂದ್ ಜ್ಞಾಪ್ಕ; ಸುಲೋಚ್ನ ಸಿಕ್ಕಿಸ್ಕೊಂಡು ಹಾಳೆ ಮೇಲೆ ಹಾಳ್ಯಾಗಿ ತಿರುವ್ತಾ! ಪ್ರಾಣಿ, ಮೂತೀಲಿ ತೋರುಸ್ತಾ… ‘ಹಾವ ಭಾವಗ್ಳೂಂ’ತಾರಲ್ಲ ಅವುಗಳ್ನ ಆಗಾಗ್ಯೆ ಹೆಡೆ ಎತ್ತಿ ತೋರುಸ್ತಾ, ಅವುಗ್ಳ ಯಾತ್ನೇನ ನೋಡಿ, ನನ್ನ objectಉ ವ್ಯರ್ಥವಲ್ಲಾಂತ ಆನಂದದಿಂದ್ನಾನು ಉಬ್ಬಿದ್ದೊಂದ್ ಜ್ಞಾಪ್ಕ; ಕೊನೆಗೆ ನನ್ನ composition ಓದಿದ್ದೀ, ನಮ್ಮಣ್ಣನ್ಜಾತೀಗೆ ಸೇರಿದ ಜಾನ್ವಾರು. ಕಂಬದಿಂದಿಳಿದ ನರಹರಿ ಹಾಗೆ-ಕನ್ನಡ ಪೊಯಿಟ್ರೀಲಿ ಬರುತ್ತಲ್ಲಾ- “ದಂತಾವಳಿಯ ಕಟಕಟನೆ, ಕಡಿಯುತ ಕನಲಿ” – ಬಲಗೈ ಚಾಚ್ತಾ ಬೀದಿ ಬಾಗಲ್ಕಡೆ… judgementoo!…ತುಟಿ ಅದರ್ತಾ ಉಸಿರ್ದ’! Get out at once! Don’t show your face again !! ” ಮೊಖ ಏನು ? recurring decimalsoo ಅಂತ ತಿಳಿಕ್ಕೊಂಡ್ನೇನೋ ?… ನನ್ನ ಇಂಗ್ಲೀಷ್ compositionನ resultಉ, Leave ಊ! ಸಂಬಳ ಇಲ್ದೆ!!

ರಾಘು : Leave ಊ? without payನೇ ?… ಇಲ್ಲಾ… ಫರ್ಲೋನೆ?

ಕಿಟ್ಟಿ: ಇಲ್ಲಾ ಹುಂಜಾ! ಲೋಫರ್, loaf+er! loaf=ರೊಟ್ಟಿ, plus er=ಮಾಡೋನು! equals ರೊಟ್ಟಿ ಮಾಡೋನು, equals ರೊಟ್ಟಿ ತುಂಬೋನು! ಆಗಿನಿಂದ ಈಗಿನ್ವರೇಗೂ ನಮ್ಮನೇ ನಾಲ್ಕು ಹೊಟ್ಟೆಗ್ಳೂ ತುಂಬ್ತಿರೋದು, ನನ್ನ sixth form ನಲ್ಲಿ, ನಮ್ಮಣ್ಣನ್ಮೇಲಿನ್ ಸೇಡು ತೀರಿಸ್ಕೋಳ್ಬೇಕೇಂತ್ಲೂ ನಮ್ಮ ಸಾಧು ಇಂಗ್ಲೀಷ್ ಟೇಚರಿಗಾದ ಅವಮಾನಾನ avenge ಮಾಡ್ಕೋ ಬೇಕೂಂತ್ಲೂ ನಾನ್ ಬರೆದ ನನ್ನ ಇಂಗ್ಲಿಷ್ composition ಪ್ರಭಾವ ! Therefore ನಾನು ಸ್ಕೂಲು ಬಿಟ್ಟಿದ್ದು cirooಅಲ್ಲ- cumooಅಲ್ಲ- stancesooಅಲ್ಲ! ಕ್ಖೊಬ್ಬು! fatoo!! ಬರ್ರೀ ಕೊಬ್ಬು! Empty fatoo!! ಬರೀ ಮಸ್ತಿ!!! ಹೈಸ್ಕೂಲಿನಿಂದ ಹಚ ಆಗೋಕೆ, welcome ಚಪ್ಪರ!

ಅಪ್ಪೂ: ಆದ್ರೇನ್ ಕಿಟ್ಟಿ… S.M.ಗ್ಳು ನಿಮ್ಮಪ್ಪನ್ಹತ್ರ ಯಾತಕ್ಕ್ಹೋಗಿರೋದು ಗೊತ್ತೇ… ತಿರ್ಗೂ ನಿನ್ನ high Schoolಗೆ ಸೇರ್ಸೋಕೇ!

ಕಿಟ್ಟಿ: ದಮ್ಮಯ್ಯಾ! ಸಾಕು ನಿಮ್ಮ ಸ್ಕೂಲುಗ್ಳೂ! ’ನಾನಾಯ್ತು!…ಇನ್ಸಾನಾಯ್ತು’, ಅಂತ! ರಕ್ಕೆ ಹೋದ ಹಕ್ಕಿ ತಿರುಗಿ ರಕ್ಕೆ ಬಂದು ಅzaದಾಗಿ ಹಾರ್ತಾ ಬಂದ ಹದ್ದು, ಗೃದ್ರ… ಗರುಡ!! ಭೂಪ್ತೀ ಈಗತಾನೇ ಬೇಬಾಕೂಫ್ ಹಾಗೇ, ನಿಮ್ಮೀ ಹಾಳ್ಳ್ ಸ್ಕೌಟ್ ಪಂಜರದಲ್ಲಿ ನನಗೆ ನಾನೇ, ದೂಧ್‌ಪೇಡಾ-ಹಲ್ವಾ ಚಪಲಕ್ಕೆ ಸಿಕ್ಕೊಂಡು ವದ್ದಾಡ್ತಿಧೇನೆ!

(ಕೈಗಳನ್ನು ಜೋಡಿಸಿಕೊಂಡು ವ್ಯೋಮವನ್ನು ಈಕ್ಷಿಸುತ್ತಾ)
“ಅಸ್ಸೀರ್ ಐಸಿನಾ‌ಅಕ್ಕರೋ ಕಿಸೀಕು ಕುರ್ದ್‌ಗಾರ್!
ಇಕ್ಕುರ್ದಗಾರ್ ಷುಕೃತೇರಾಹೈ ಹzaರ್‌ ಬಾರ್ರ್!

ಅಪ್ಪೂ: ಹಾಗ್ಹೇಳಿ ಏನ್ಪ್ರಯೋಜನ ಕಿಟ್ಟೀ, ತಿರ್ಗು ಬಂದ್ಬಿಡ್ತಿಯಾ ನಮ್ಮ ಸ್ಕೂಲ್ಗೆ!

ಕಿಟ್ಟಿ : ನಾನು! ತಿರ್ಗೂ ಸ್ಕೂಲು! ಅಲ್ದೆ… ಆ ತೀರ್ಥಂಕರರೂ viz… ಗಿಣೀ ಮೂಗು ಗಲ್ಡಾಚಾರಿ, ಮುದ್ರಾ ರಾಕ್ಷಸ… ಅಡ್ಗಂಧ ಪಿಶಾಚಿ…

(ಮಂತ್ರದಂತೆ)

Kidderminister for its carpets
Sheffield for its cutlery
Newcastle for its coal export
Northampton for its boots -ಇತಿ!!

ಇನ್ನು attendenceಉ ! lessonsಉ ! Home workಊ? ಸಾಕಪ್ಪಾ… ಸತ್ತರೂ ಬೇಡ…

ಅಪ್ಪೂ: Chlef Scout’s order ಎದುರ್ನೆ ಇಲ್ಲಾಂಬೋದು ಇಲ್ಲ ಕಿಟ್ಟೀ ! ಇಲ್ವೇ ಇಲ್ಲ! ಬಂದೇಬಿಡ್ತೀಯ ನಮ್ಮ ಸ್ಕೂಲ್‌ಗೆ.

ಕಿಟ್ಟಿ: ಹಾಗ್ಬಂದರ್ತಾನೇ ಏನೋ ?! ಯಥಾ Inspector ಉ! ಯಥಾ Composition Koschanoo! ಯಥಾ ಭೂಪ್ತೀ answer ಉ! ಯಾವ subject ಇರ್ಲಿ; ನನ್ composition ವಂದೇ ವಂದು: ಯಥಾ furlough; ಮುಂಚಿನ ಹಕ್ಕಿ ಅಲ್ಲಾ, ಗಿಡ್ಗ ನಾನೀಗ… ಯಥಾ ಹುಬ್ಬ್ಗಂಟು.. ತಥಾ ಹಚಾ…ತಿರ್ಗೂ ಆzaದು!…. ಬಿಡ್ರೋ! ನನ್ನ ಕಟ್ಟ್ಹಾಕ್ಕೊಳ್ಳೋ ಕಾಲೇಜ್ನ ಕಟ್ಟೋಕೆ ಕಲ್ಲಿನ್ನೂ ಕೈಗ್ಸಿಕ್ಕಿಲ್ಲ ಕಂಟ್ರಾಕ್ಟರಿಗೆ, ಸಧ್ಯ ಸುಲೋಚ್ನದ ಮಾತ್ಗೆ… ಬೆಚ್ಬಿದ್ದು ಎದರ್ ನೋಡ್ತಿರ್ತಾರೆ. ನಮ್ಮ ಮನೇಲಿ… ನಾನು ಬೆಂಕೀಲ್ಬಿದ್ದು, ಬದುಕಿ ಬಂದು ಬೂದಿಯೋ ಇಲ್ಲ, ಬಗ್ಗೋಂತ. Therefore ನಾನ್ ನಮ್ಮನೇ ಕಡೆ at onceಊ (ತನ್ನ ಮನೆಯ ಕಡೆ ತಿರುಗಿ ನೋಡಿ, ಧಟ್ಟನೆ)

ಅಯ್ಯಯ್ಯೋ! ಹೀಗೇ ಬರ್ತಾಯಿಧೇಯೇ ಸುಲೋಚ್ನಾ ತಿರ್ಗೂ! ಯೊಕೋ ಕಾಣೆ!

ಸ್ಕೌಟು ಮಾಸ್ಟರ್: (Entering, muttering to himself, absorbed in deep thought) ತ್ಸು! ತ್ಸು! ತ್ಸು! ಏನು ತಿಳ್ಕೊಂಡ್ರೋ!?

ಕಿಟ್ಟಿ : ಯಾರ್‌ ಸಾರ್! ತಿಳ್ಕೊಳ್ಳೋದೂ?

ಸ್ಕೌಟು ಮಾಸ್ಟರ್ : ಓ!! ಹೈನೆಸ್ಸು!; ಮಕ್ಕಳ್ನ ಒಳಗೆ ಬಿಟ್ಬಿಟ್ಟು ಧಾಂಡಿಗನ್ಹಾಗೆ ಹೊರಗೆ ನಿಂತಿದ್ದ್ನಲ್ಲಾ ನಾನು…?

ಕಿಟ್ಟಿ: ಏನ್ಸಾರ್ ನಿವೂನೂನೆ? (ವಾಚು ಕೈಯನ್ನುಚಾಚಿ ತೋರಿಸುತ್ತಾ) ಈ ಫಿರಾವ್ ಬಾಬತ್ತು ಮೇಲೆ ನಿಗಾನೇ… ನಿಮ್ಗೇ? ಒಳಗೆ ಗಾನಾ ಬಂದಿದ್ರೋ… ಎಂಟು ಇಂಜನ್ ಮಾರ್ಕು ದಫನ್ ಮಾಡೋನು ನಾನು! ನನಗೇ ದಮ್ಮು ಗುಮಾಯಿಸ್ತಿತ್ತು… ಮತ್ಲದ್ ಜಿಸ್ಮು ನಿಮ್ದು… ಅಲ್ಲ… ನಾಜೋಕು…!

ಸ್ಕೌಟು ಮಾಸ್ಟರ್: ಏನು ಎಂಜಿನ್ ಮಾರ್ಕೋ… ದಫನ್ನು… ಎಂಟು ಕಟ್ಟೂ?

ಕಿಟ್ಟಿ : (ಚಮಕಿತನಾಗಿ ಮುಖ ಬೆಪ್ಪಾಗಿ ನಾಲ್ಗೆ ತುದಿಯನ್ನು ಕಚ್ಚಿ) ಎಂಜಿನ್ನೂ ಅಂದರೆ… “ಎಂಜಿನ್ನೂ” ಸಾರ್… “ರೈಲೆಂಜಿನ್” ಹಾಗೇ… “ಹೊಗೇಬಿಡೋ” ಹಾಗೆ… ನೀರು… ಅಲ್ಲಾ ‘ನಮ್ಮನೆ ನೀರ್ಮನೆ’ ಸಾರ್… ‘ಎಂಟು ಕಟ್ಟು ಹಸೀ ಸೌದೆ’ ಹಾಕಿ ಹೊಗೆ ನನ್ನ್‌ಗೆ ರಾಬೀತು ಸಾರ್ ರೋಜೀನಾ… ಆದತ್ತು ಸಾರ್! ಅಂಥಾ ನನ್ಗೇ ತಕ್ಲೀಫಾಗಿತ್ತೂ ಇನ್ನೂ ಅಲ್ದೇ… ಏನ್ ಸಾರ್ ನೀವುಗಾನಾ ಬಾಕಲ್ನಲ್ಲಿ ನಿಂತ್ಕೊಂಡು ಬೆದ್ರಿಸಿ, ಭಗಾಯಿಸ್‌ದಿದ್ದರೇ ಒಳಕ್ನುಗ್ಗೀ… ಪಟಾಲಂ ಪಟಾಲಮ್ಮೇ ಗುಮಗಮು ಸಾರ್!… ಸ್ಸಾರ್ ನಾಮರ್ದ್‌ಗಳೂಂತಿಳ್ಕೊಂಡಿದ್ದೆ ಸಾರ್ ನಮ್ಹುಡುಗುರ್ನ… ಏನ್ನ್ ಸಾರ್! ಹೊಸಲಲ್ಲಿ ನಿಂತ್ಕೊಂಡು ಲಡ್ಡೂಗ್ಳು ಬಟ್ವಾಡೇ ಮಾಡ್ದಿಧೇನೆ! ನನ್ನೇ ದಬಾಯ್ಸೋ ಗೈರತ್ತು ಸಾರ್ ಹುಡುಗರಿಗೆ…!? ಒಬ್ಬ Boy Scout ಸಿಕ್ಕೊಂಡಿದಾನೆಂದ್ರೆ, ಜಾನ್ ಕೊಟ್ಟಾದ್ರೂ ಬಚಾಯಿಸ್ಬೇಕೂಂಬೋ ಗರz ಇಧೆ ಸಾರ್ ಬ್ರಿಗೇಡ್ಗೆ ! ನೀವೇನ್ನ್ ಕಮ್ಮೀನೇ ಸಾರ್ ? ನಾನೂ ಒಂದ್ನಮೂನೆ. ನಿಮ್ಮನ್ನ… ಸತಾಯಿಸಿದ್ದಿದ್ದೇನ್ ಸಾರ್… ಕ್ಷಮಿಸಿಬಿಡಿ ಸಾರ್! ಒಬ್ಬರು ನಿಂತ್ಕೊಂಡು ಹತ್ತು ಜನಾನ ದಬಾಯ್ಸ್ತಿದ್ರಲ್ಲಾ ಸಾರ್ ನೀವು? ನನ್ಗೇನೇ ನಾಚ್ಕೆ ಆಗೋಯ್ತು ಸಾರ್!… (ತಲೆಯನ್ನು ತಗ್ಗಿಸಿ ಅರ್ಧ ಗದ್ಗದ ಸ್ವರದಿಂದ ತೊದಲುತ್ತ)… ಸಾರ್! ನಾನೇನೋ ಈ ರ್‍ಯಾಲೀ ರುಚೀಲಿ… ಈ Scout ಬಾಬತ್ತಿನಲ್ಲಿ ಕಮ್ ನಿಗಾ ಆಗಿದ್ದೆ ಸಾರ್! ಈಗ ಕೈಗೆ ವಾಚೂ ಬಂದ್ಬಿಡ್ತು! ಇದೇನ್ ಫಿರಾವ್ ಬಾಬ್ತೋ ಏನೋ! ಏನಾದ್ರೂ ಆಗ್ಲಿ… ಇನ್ಮೇಲೆ ಇದ್ನೇ ಆಗಾಗ್ಯೆ ಫಿರಾಯಿಸ್ಕೊಂಡು timeಗೆ ಸರಿಯಾಗಿ ಹಾಜರಾಗೋದು… good turnooಗ್ಳು ಮಾಡ್ಕೊಂಡು… good turnooಗ್ಳೂಂದರೆ ಸಾರ್-ಪಾಠ ಹೇಳೋ ಬಾಬತ್ತು ತುಂಡೂ! – ಹೈಸ್ಕೂಲಿಂದ ಹಚ ಆದೋನ್ನಾನು!… ಊರಲ್ಲಿ ಯಾರ ಮನೇಗಾದ್ರೂ ನುಗ್ಗಿ ಒಂದಷ್ಟು ಮದ್ದೋ ಮುಲಾಮೋ ಭಿರ್ಕಾಯ್ಸಿ… ಗುಡ್ ಟರ್ನ್ನುಗ್ಳೂ ಬಾಬತ್ತ್ನಲ್ಲಿ ನನ್ನ ಇzzaತ್ತೂ… ತಮ್ಮ ಇ zzaತ್ತೂ ನಿಭಾಯಿಸ್ತೇನೆ ಸಾರ್! ಇನ್ನು ಮೇಲೆ ಸ್ವಲ್ಪ ತಸ್ದಿ ತಗೊಂಡು… ತಯಾರಾಗ್ತೇನೆ ಸಾರ್! ಯೋಚಿಸ್‌ಬೇಡಿ ಸಾರ್!

(ಕಣ್ಣುಗಳಲ್ಲಿ ಹನಿಗೂಡುವುದು)

ಸ್ಕೌಟು ಮಾಸ್ಟರ್ : (ಇದನ್ನು ಕೇಳಿ ಅವರ ಕಣ್ಣುಗಳಲ್ಲಿ ಹನಿಗೂಡಿ, ನಿಟ್ಟುಸಿರಿಡುವರು: ಆತ್ಮಗತಂ) What a born Scout !! Join ಮಾದ್ದಾಗ್ನಿಂದ ಅವ್ನ careerಊ Series of good turnsoo!… and… he does not even know it! (ನಿಟ್ಟುಸಿರಿಟ್ಟು) ಇದು, ideal of a scoutoo!…

(ಎಂದು ಹೇಳಿಕೊಳ್ಳುತ್ತ ನಿಷ್ಕ್ರಮಿಸುವನು!)

[ದಳದವರೆಲ್ಲ ಈ ಸಂಭಾಷಣೆ ಕೇಳಿ ಅವಾಕ್ಕಾಗಿ, ಕಿಟ್ಟಿಯನ್ನೇ ಎವೆಯಿಕ್ಕದೆ ನೋಡಿ ತಲ್ಲೀನರಾಗಿರುವರು]

ಕಿಟ್ಟಿ : (ಎಚ್ಚೆತ್ತು -recovering his usual sang-froid) ಏಳ್ರೋ ಲ್ರೋ! ಗುಗ್ಗುಗಳ್ರಾ! ನಿಮ್‌ಗೂ ಗೂಡುಗ್ಳಿವೇ ಅಂಬೋದು ಯಾದಿಲ್ಲ್ದೆ ನಡ್ರಾತ್ರೇಲಿ, ನಡ್ರಸ್ತೇಲಿ ನನ್ನ ತಾರೀಫ್ ಮಾಡ್ತಿಧೀರಾ?! ಏಳೋ! therefore ನಮ್ಮ -Scouts of the Nth patrol! `FALL IN’! (automatically the scouts obey including Raghn) ಹೊರಗ್ಬಾರೋ…ಜಂಬದ್ಕೋ! ಅಲ್ಲ… ಹುಂಜಾ! (drags Raghu out and takes his place) ಕೋರಸ್ ಕಿರ್ಲ್ರೋ. ರಾಘು, ಮನೆಗ್ಳಿಗೆ march ಮಾಡೋಣ. ನೀನು ಲೀಡರು (pulls out his mouth organ) ಗುಬ್ಬಚ್ಚಿ ಹೇಳಿದ್ಹಾಗೆ ನಾನು band masterಆಗ್ತೇನೆ.

[Starts playing the chorus]
ರಾಘು : ಕಿಟ್ಟಿ, ಲೇ ಇವತ್ತ್ ರಾತ್ರೆ ನಿಮ್ಮನೇಮಟ್ಟಿಗಾದ್ರೂ ನೀನು ನಮ್ಮ leaderಉ! ಕೋರಸ್ ಕಿರ್ಲು, ನಾವೂ ಕಿರ್ಲ್‌ತೇವೆ.

[Pulls Kitti out by his banian and takes his place]

ಕಿಟ್ಟಿ: ಜ್ಞಾಪ್ಕ ಬಂತು!. ನನ್ನ coat ಎಲ್ರೋ ?

ಅಪ್ಪೂ : (producing the coat held by Shami, reverently) ನಾನ್ ಇಟ್ಕೊಂಡಿದ್ದೆ ಕಿಟ್ಟೀ.

ಕಿಟ್ಟಿ : ನನಗ್ಗೊತ್‌ ಅಪ್ಪೂ! ನಿಂಗ್ ನಿಗಾಂತ (putting the coat on) hopeless coatಊ! ಆದ್ರೂ ಜೋಬ್ನಲ್ಲಿ one ಕಟ್ of ಇಂಜಿನ್ನೂ… ಅಲ್ಲ ಮಿಷೀನೂ! (puts the mouth organ to his lips) Scouts of the Nth patrol…The chorus!

(ಎಲ್ಲರೂ ಹಾಡುವರು)

Sri Rama’s strength in duty
Sri Krishna’s love, devotion
Give unto us the pattern
of India’s perfection
For e’er, for e’er…
In danger, and distress,
There is none to be compared
With the lads of India’s brilliant star
With the lads of India’s brilliant star
With the lads of India’s brilliant star
With their motto “Be prepared”

[ಕಿಟ್ಟಿ, turns round facing R and starts exitting, marching, playing the mouth-organ; the patrol follows him marching two paces to Kittee’s rear, their steps synchopating with the tempo at which Kittee, marching ahead, is playing the Scout Chorus]

[Curtain drops slowly on Empty Stage]

ಭರತರಂಗ

THE GENESIS OF THIS PLAY

AN EXPLANATORY EPILOGUE

“lt is an ill wind that brings no one any good” is an adage that was driven home to me by the following scrap of a local rag which unknowingly helped to slove what has been, these four weeks and more, a mystery that has intrigued two great personages and not a few others of more humble status.

To discuss and decide the practicability of bringing to pass an All-lndia-Scout-Jambooree in Bangalore, a conference was held a month ago at the Residency, in which His Highness The Chief Scout, The Hon’ble The Resident, The Chief Scout Commissioners of Mysore and Madras, took part.

As the Officer in command of the Inner Cordon waiting on His Highness The Chief Scout, I had the privilege of witnessing the proceedings of that function. At the very outset, quite a stir positively unusual on such occasions-pervaded the air, by the absence at the appointed moment, of the invariably punctual Chief Commissioner of Scouts of Mysore. He arrived no less than fifteen minutes beyond schedule; what chagrin the distinguished company waiting might have felt faded away in the bizaarre condition, the belated Commissioner of Scouts of Mysore, presented himself in. It was but the dignified self-control of the Royal Scout that smothered the mire on scene from culminating in a farcical fiasco;

Trailing a stream of slime and mire as he walked, the Commissioner reached the dias and standing at attention saluted his seniors, gruffly murmuring appologies in unintelligible accents, with turban, tunic and breeches dripping mud and moss, his face a death mask. The importance of the occasion precluded personalities and the conference proceeded came to a close with all the decorum characteristic of such functions, and the distinguished assemblage dispersed.

At the end, on the basis of previous acquaintance, I purposed to accost the Commissioner to learn the why and wherefore of the mishap to his proverbial spick and span smartness Cap a pie. But the forbidding grimness of his hard countenance, which had ever looked to me as a cross between a gorilla, a tiger and a button-hook, discouraged any advances and I wisely and severely let well alone. With the newspaper cutting given hereunder coming accidentlay under my eye, the mystery ceased to be one; and I may assure the writer with all my experience of lifelong companionship with the culprit, that no power on earth, in heaven and elsewhere too, can budge him an inch from his thoughts and actions. In explanation thereof, I have given the foregoing history of an entity, who in my eyes, is a phenomenon, a freak, and yet a MAN all the time. In publicising the biography of a man who has all my life exerted a weird influence on me-body, mind, heart, soul, character and career-, I must confess here and now, that nothing short of my status of Police Officer in the Service of His Highness The Maharaja of Mysore protects me from the drastic maltreatment that is invariably meted out to any one that takes liberties with the name and personality of `Polee Kittee’! With `Jambada Kolee’ now a Major and an M. C., serving with the Imperial Forces in Italy, with `Appoo’ and `Shamee’ both holding Commissions from His Majesty and serving overseas in the Army Medical Corps. It has fallen to the lot of the youngest of the quintette of the earliest cubs in Mysore Scout History, to present for the entertainment and earnest emulation of present-day cubs, `Gubbatchee’s History of a Mysore Boy Scout who carried a COMMISSIONER’S BATON in his CUB’S HAVERSACK: Mr. Hassan Krishna Rao, Chief Commissioner of Scouts, Mysore State.

Sakleshpur Ranganna, M.A., M.C.S.,
Dist. Supt. of Police, Bangalore.

ಈ ಪಟಿಂಗನ ಪುಂಡನ್ನು ಅಡಗಿಸುವ ಪ್ರಭುಗಳಿಲ್ಲವೆ?
ದೇಶಾಭಿಮಾನಿ ಪತ್ರಿಕೆ ಸಂಪಾದಕರಲ್ಲಿ ವಿಜ್ಞಾಪನೆಗಳು:

ಅಯ್ಯಾ,
‘ಸತ್ಯಾನ್ನ ಪರಮೋಧರ್ಮಃ’ ‘ಅಹಿಂಸಾ ಪರಮೋಧರ್ಮಃ’ ‘ಸತ್ಯಮೇವೋದ್ಧರಾಮ್ಯಹಂ’ ಎಂಬ ಬಿರುದಾಂಕಿತರಾದ ನಮ್ಮ ಮಹಾಸ್ವಾಮಿಯವರು ನಮ್ಮನ್ನಾಳುತ್ತಿರುವಲ್ಲಿ ಮೊನ್ನೆ ಶನಿವಾರ ಪ್ರಭಾತಾನಂತರ ಸುಮಾರು ಹತ್ತು ಹತ್ತೂವರೆ ಗಂಟೆ ಸಮಯದಲ್ಲಿ, ತಾರಾಮಂಡಲಪೇಟೆಯ ಮುನಿಯಮ್ಮ ಎಂಬ ಗೃಹಿಣೀ ತನ್ನ ಎರಡು ವಯಸ್ಸಿನ ಸೀಮಂತೆ ಪುತ್ರನನ್ನು ಸಂಪಂಗೀ ಕೆರೆಯ ಕಟ್ಟೆಯ ಮೇಲೆ ಕೂಡಿಸಿ ತನ್ನ ಸೀರ ಮತ್ತು ತನ್ನ ಗಂಡನ ಬಟ್ಟೆಗಳನ್ನು ಶುಚಿ ಮಾಡುತ್ತಿರುವಲ್ಲಿ, ಅರಿವಿಲ್ಲದ ಆ ಶಿಶುವು ಅಂಬೆಗಾಲು ಇಟ್ಟುಕೊಂಡು ಇಳಿಯುತ್ತಿರುವಲ್ಲಿ ಮೆಟ್ಟಲುಗಳ ಚೂಪಾದ ಅಂಚುಗಳು ಜಾನುಗಳಿಗೆ ಘರ್ಷಿಸಿ ಘಾತವಾಗಿ ರಕ್ತೋಸ್ಫಲನವಾಗಿ ಜಾರಿಬಿದ್ದು ಜಲದಲ್ಲಿ ಪತೀತನಾದ ಪುತ್ರನ ಅಸುವನ್ನು ರಕ್ಷಿಸಲೋಸುಗ ತಾನೂ ತಜ್ವಲದಲ್ಲಿ ಮುಳುಗಿ ಎದ್ದು ಕಿರಲಿದ ಆರ್ತನ ಧ್ವನಿಯು ಸಂಪಂಗೀ ರಸ್ತೆಯ ಮೇಲೆ ಹೋಗುತ್ತಿದ್ದ ಖಾಕೀ ಯೂನಿಫಾರಂ ಟರ್ಬನ್ ಧರಿಸಿ ಮೋಟಾರ್ ಸೈಕ್ಲಿಸ್ಟ್ ಒಬ್ಬನ ಕಿವಿಗೆ ಬೀಳುತ್ತಲೂ, ಅವನು ಅದೇ ಸೈಕಲ್ಲನ್ನು ತಿರುಗಿಸಿ, ಸಂಪಂಗೀ ಕೆರೆ ಕಟ್ಟೆಯನ್ನು ಸೇರಿ, ಸೈಕಲ್ಲನ್ನು ಒಗೆದು, ಅಂಗಿ ಷರಾಯಿ ಬೂಟ್ಸ್ ಸಮೇತ ನೀರಿನಲ್ಲಿ ಧುಮುಕಿ, ಮುಳುಗುತ್ತಿದ್ದ ಮುನಿಯಮ್ಮನ ಕೇಶವನ್ನು ಒಂದು ಹಸ್ತದಲ್ಲಿ ಹಿಡಿದುಕೊಂಡು, ಮುಳುಗಿ ಎದ್ದ ಮುನಿಯಮ್ಮನ ಶಿಶುವಿನ ಕೇಶವನ್ನು ದಂತಾವಳಿಯಿಂದ ಕಚ್ಚಿಕೊಂಡು ಉಳಿದೊಂದು ಕೈಯಿಂದ ಡದಕ್ಕೆ ಈಜಿ, ಇಬ್ಬರನ್ನು ಫಸ್ಟ್‌ಎಯಿಡ್‌ (First aid) ಕ್ರಮದಿಂದ ಉಪಚಾರ ಮಾಡಿ ಸಜೀವಿಗಳನ್ನಾಗಿ ಮಾಡಿದ್ದು ಶ್ಲಾಘನೀಯವೇ! ಆದರೂ ಸರ್ಕಾರಿ ಯೂನಿಫಾರಂ ಹಾಕಿರುವವರ ಕರ್ತವ್ಯ; ಡ್ಯೂಟಿ ! ಅವರಿಗೆ ನಾವು ತರುವ ತೆರಿಗೆಯ ಋಣ ವಿಮೋಚನಕ್ಕೆ ದ್ವಾರ, ತನ್ನ ಕಾರ್ಯದಿಂದ ತನ್ನ ಋಣವನ್ನು ತೀರಿಸಿಕೊಂಡ ಆತನು ಆ ಕುಟುಂಬ ಸ್ತ್ರೀಯ ನಾಸಿಕವನ್ನು ಎಡಗೈ ಬೆರಳುಗಳಿಂದ ಹಿಡಿದು ಬಲಗೈಯಿಂದ ಅವಳ ಕಪೋಲವನ್ನು ತಾಡಿಸಿ ಹುಯಗಡುಬನ್ನು ಮೀರಿಸುವಂತೆ ಉಬ್ಬಿಸುತ್ತಾ… ‘ಇನ್ಮೇಲೆ ಹಸುಮಕ್ಕಳ್ನ ಕೆರೇಗೆ ತರ್ತೀಯಾ?… ತರ್ತೀಯಾ?… ತರ್ತೀಯಾ? ಮನೇಲೇ ಬಿಟ್ಬಿಟ್ಟು ಬರ್ತೀಯ?… ಬರ್ತೀಯಾ?… ಬರ್ತೀಯಾ?’ ಎನ್ನುತ್ತಾ ರಾವಣಾಸುರನು ಕೂಡ ಕುಟುಂಬಿನಿಯಾದ ಸೀತಾದೇವಿಗೂ ಮಾಡದ ಅಪಕಾರವನ್ನು ಮಾಡಿ ಪ್ರಾಣಿಯನ್ನು ತಟಾಕದ ಕಟ್ಟೆಗೆ ಬಿಸರಿ, ತೊಯ್ದ uniform ಸಮೇತ ಅದೇ ಕೆರೆಯಲ್ಲಿ ಪನಃ ಧುಮುಕಿ ಈಜಿ, ಮೋಟಾರ್ ಬೈಸಿಕಲ್ಲನ್ನು ಸೇರಿ, ದಂಡಿನ ಕಡೆಗೆ ದಂಡಯಾತ್ರೆ ಮಾಡಿದ ಈ ಧಾಂಡಿಗನನ್ನು ದಂಡಿಸುವ ದಯಾಳುಗಳು ಈ ದೇಶದಲ್ಲಿಲ್ಲವೇ? (ಘನ ಸರ್ಕಾರದವರು ಇಂತಹ ಆಫೀಸರುಗಳನ್ನು ಶಿಕ್ಷಿಸಿ ಸರಿಯಾದ ದಾರಿಗೆ ತರುವ ಕಾರ್ಯಕ್ರಮವನ್ನು ಕೈಗೊಳ್ಳುವರೇ!)

– ಕಂಡು ನೊಂದವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತೆಯ ಹುಟ್ಟು
Next post ಮಿಂಚುಳ್ಳಿ ಬೆಳಕಿಂಡಿ – ೧

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…