ಅಮ್ಮಾವ್ರ ಗಂಡ

ಅಮ್ಮಾವ್ರ ಗಂಡ

ಅಥ್ವಾ
ಯಜಮಾನ ಹೆಂಡತಿ

ಪಾತ್ರಗಳು

ಅಮ್ಮಾವ್ರು ಸೌ, Saroja, B.A. (Cauv.)

ಗಂಡ Subbanna, B.A., B.L., Advocate

ಯಜಮಾನ್ರು Narasimhayya, M.A., (Cauv) M.C.S.
(Mys) Senior Asst. Comr.

ಹೆಂಡ್ತಿ ಸೌ. Kamalamma, M.A., (Cauv.)

ಆಯಾ

ದೇವೇರಿ

Gentleman
——————————————————
SCENE I

[Sitting room- ಅಮ್ಮಾವ್ರು: In a rocking chair, R, foreground- ಗಂಡ:- L.
middle-ground. rocking a cradle-appointment of room a la Rs. 300 per mensem
householder ಅಮ್ಮಾವು up-to-date-president of the Ladies Club Etc-ಗಂಡ: ಪಂಚೆ and
torn bunian.)

ಗಂಡ: (Rocking the cradle and meekly)
ಏನದ್ ನೀನು ಓದ್ತಿರೋದು ? interesting ಏ?

ಅಮ್ಮಾವು: (Rocking the chair and smugly)
ಅಲ್ದೆ ಏನು- at least ನನಗೆ interestingಉ… ನನಗೇಂದ್ರೆ… ನಮಗೆ, for us
womenಉ! ….. ಈ horrible institutionಉ…. marriageಉ ಅಂದ್ರೆ manಏ superiorಉ
ಅಂತ… ಇದು ಹೋಗೋವರ್ಗೂ ನಿಮಗೆಲ್ಲಿ interestಉ ಈ bookನಲ್ಲಿ?…..

ಗಂಡ: (very meekly) ಒಂದ್ವೇಳೆ… of course… ನಿನ್ judgementನಲ್ಲಿ , literary
mattersನಲ್ಲಿ ಹೇಳ್ತೇನೆ… ನನಗೆ…. personally speaking of course…. complete confidence
ಇರೋದ್ರಿಂದ, ನನಗೆ ಆ bookನಲ್ಲಿ interest ಇಲ್ದಿದ್ರೂನೂವೆ, ಆ bookನಲ್ಲಿ interested
ಆಗಿರೋ ನಿನ್ನಲ್ಲಿ ನನಗೆ interest ಇದೇ ಅಂತ…

ಅಮ್ಮಾವು: ಸಾಕು… ನಿಮ್ಮ subtle attempts at flattery! ಇಲ್ಲೇನೂ ಬೇಯೋಹಾಗಿಲ್ಲ…
ಅದಕ್ಕೆ brutes ಅನ್ನೋದು ನಿಮ್ಮನ್ನೆಲ್ಲ… ನಮ್ಮ weakness ಗೊತ್ತು ನಿಮಗೆ… Vanity
ಅಂಬೋದು… ಈ ತಂತೀ ಮೇಲೆ ಮೀಟಿ, ಮೀಟಿ, ಮೀಟಿ- at our most impressionable
ageಉ- ‘You are the queen of my lifeಉ- ‘You will be the guiding star of
my lifeeಉ….’ ‘If you marry me, I shall be a slave to you’ ಅಂತ young girlನ head
ಎಲ್ಲ giddy ಮಾಡಿ daze ಮಾಡೋದು!! …

ಗಂಡ: (Loud sottovoce)…. what a memory!…

ಅಮ್ಮಾವು: ನಿಲ್ಲ್‌ಸಿ ನಿಮ್ಮ interruptionsoo!…. (resuming) ಇನ್ ಮದ್ವೇ ಆಯ್ತೋ…
ಆ poor vanity eaten foolಉ ನಿಮ್ಮ ಕುಟುಂಬದಲ್ಲಿ ಒಂದು simple factoroo… ನಿಮ್ಮ brutal
man’s career ನಲ್ಲಿ ಒಂದು simple phaseoo… ನಿಮಗೆ ಮಕ್ಕಳ್ಹೆರೋಕೆ… ನಿಮ್ಮ ಮನೆ
ನೋಡ್ಕೊಳ್ಳೋಕೆ… a cheap unpaid ayah, cookoo, house-keeperoo, sweeping womanoo,
all combinedoo… ಅಬ್ಬ!! What a terrible price to pay for one moment’s yielding
to one’s vanity! Generations ನಿಂದ ಹೀಗೆ ನಮ್ಮನ್ನ brutalise ಮಾಡಿ, ಮಾಡಿ, ನಿಮ್ಮ
thumb ಕೆಳಗೆ ಇಟ್ಕೊಂಡಿದ್ರಿ! But thank God, we women have woke up (flourishing
her book aloft) and thanks to the angelsoo like the writer of this bookoo…;

ಗಂಡ: (interrupting) ಯಾರವ್ನು? Authoroo?….

————————————————————

ಆಮ್ಮಾವ್ರು: (with an indignant look) ಅವನು ? He! Man ಇಗೆ ಅಷ್ಟು sense of
honesty and justice ಇಧೆಯೇನು ? ಆವನಲ್ಲ… ಅವಳು… she! ಬರದೋಳು , Wormanಉ
ನಮ್ಮಲ್ಲೊಬ್ಬು… horrible ಹೆಗ್ಸು ಅಂತೀರಲ್ಲಾ ಅವ್ಳು ಬರೆದದ್ದು. Titleಉ ‘The World’s
Redeemer or woman’s place in God’s creation’ ಅಂತ

ಗಂಡ: (sottovoce) World’s Redeemer….. ಹಾಗಂದ್ರೆ, worldoo ಮೊದಲು
manನ
monopoly ಆಗಿದ್ಹಾಗೂ, ಅದ್ನ devilಗೊ ಏನೊ … ಕುದುವಿಟ್ಟ ಹಾಗೂ ಮತ್ತೆ…
ಈಚೆಗೆ.. ಅಂದ್ರೇನು… ಈಕೆ ಈ ಫಸ್ತಕ ಬರದಿಂದೀಚಿಗೆ… perhaps womanಉ, ತನ್ನ rightsನ
ತಾನು assert ಮಾಡ್ಕೊಂಡು, ತಾನು redeem ಮಾಡ್ಕೊಂಡ್ ಹಾಗೂ… ಈ ಪುಸ್ತಕ…

ಅಮ್ಮಾವು: (interrupting) ಹಾಗೇನೂ ! ಹೀಗೇನೂ! ಈಚ್ಗೇನೂ ಆಚ್ಗೇನೂ ?
woman’s rights ಯಾವಾಗ್ಲೂ ಅವಳ ಕೈಲೇ ಇದ್ದ್ವು… The hand that rocks the cradleಉ
rules the worldoo…!!

ಗಂಡ: (after a deep sigh) ಹಾಗಾದ್ರೆ ಕ್ಷಮ್ಸು…. if you don’t mind, I shall go out
and stand outsidcoo for a breath of fresh airoo… being a bruteoo… like our dog
Tigerಉ…. ಅದನ್ನೀನು dog-cartನ ಹಿಂದೆ ಓಡ್‌ಸ್ಕೊಂಡು ಹೋಗೋ ಹಾಗೆ ನನಗೂನು … brutish
avidity for fresh air and exerciseoo… ಆದ್ದರಿಂದ …will you…. in the meawhile,
without disturbing yourself of course… rule the worldoo (ಒಂದು ಹಗ್ಗವನ್ನು ತೊಟ್ಟಲಿಗೂ
rocking chairtಗೂ ಕಟ್ಟಿ ಮುಗಿಸುತ್ತ) for a few minutesoo…?

ಅಮ್ಮಾವ್ರು; (looking him in the eye with a subconscious soft look… crossing
over and taking charge of the cradle) ಸ್ಸರಿ: ಹೊಗ್ಬನ್ನಿ! Tigerಉ, ಹೊರಗೆ ಬಿಟ್ರೂ, ಅರ್ಧ
ಗಂಟೇಲಿ ಮನೆಗೆ ಬಂದ್ ಸೇರುತ್ತೆ…. (ಗಂಡ reaches clothes rack and puts On Coal and
turban)… ಮರೀಬೇಡಿ…. and does not disgrace the house by going out without a
collaroo….!

[ಗಂಡ goes back again to rack to wear collar]

ಗಂಡ: Quite so! Quite so! ಮರೆತಿದ್ದೆ…. Brutal instinct again to ignore the curb
of conventions of civilisationoo… ಕ್ಷಮ್ಸು…!

ಅಮ್ಮಾವ್ರು : (gently letting go off the cradle and walking towards door C) ನೀವು
ಬರೋಷ್ಟಲ್ಲಿ…. ಅಡಿಗೆ…

ಗಂಡ: (wearing the collar elaborately)
Don’t the silly dear! : ನಾನು brute ಆದ್ರೂನೂವೆ… ಅಷ್ಟು… brute ಅಲ್ಲ,
culinary arrangements ಎಲ್ಲ completeಉ….. ಬೇಳೆ ಸ್ವಲ್ಪ rebelliousoo, but… soda will
melt its heartoo within half an houroo… ಅಷ್ಟಲ್ಲಿ ನಾನೂ ಬಂದ್‌ಬಿಡ್ತೇನೆ…
————————————————————-

ಅಮ್ಮಾವ್ರು. ಆದ್ರೂನೂ…

[Disappears through door C]

ಗಂಡ: (Looks fixedly at the door C… sighs deeply, kisses the sleeping baby
in the cradle) If this little scoundrel with her beautiful eyes doesn’t develop her
fine spirit too. I will smother him! (sighs deeply and moves towards door to exit;
confronting a flashly-dressed, hat-and-stick in-hand gentleman) ಯಾರದು? Who are
you? What do you Want? ಎಲ್ಲಿಗಯ್ಯ ನುಗ್‌ತಿಧೀಯಾ ?…

Gentleman: ನೀನು ಯಾರೋ ? I want to see the president of the woman’s
associationoo. I am a delegate from…

ಗಂಡ: (ಥಟ್ಟನೆ) Forgive me sir: please come in: kindly sit down… make
yourself comfortable. (motioning him to a chair and putting a magazine before him)
The president will be here in a minute.

Gentleman: ನೀನು ಯಾರಯ್ಯಾ ? Who are you I say?

ಗಂಡ: ನಾನೇ? (hard up for a reply… with a merry twinkle in his eye)…
ನಾನು… I am the man who says “please come in … kindly sit down… make yourself
comfortable… the president will be here in a minute” etc….
[Exits briskly]

[Enter ಅಮ್ಮಾವ್ರು] ಅಮ್ಮಾವು: ಏನದು? ಇಲ್ಲಿಗೆ ಬಂದದ್ದು?

Gentleman: I have come on behalf of…

ಅಮ್ಮಾವು : ಅರ್ಥವಾಯ್ತು ..ನನ್ನ decision finaloo… I will have no woman on
the association rolls… so long as I am president… who descris her hearth and home.
ಈಗ ನಾವು fight ಮಾಡಿರೋದು … ಮನೆಲಿ ಇದ್ಕೊಂಡು…equal rights with husbandsಗೆ!…
ನಿಮ್ಮ sisterನ attitudeಉ… Woman’s responsibilities of mother-hoodನ ತಪ್ಪಿಸ್ಕೊಂಡು
ಕುಣ್ದಾಡೋಕೆ… ಅದು un-woman-likeoo! ನೀವು ಬಂದದ್ದು ತಪ್ಪು!!

Gentleman: ನನ್ನ sisterಏ ಬರಬೇಕೂಂತಿದ್ಲೂ….

ಅಮ್ಮಾವ್ರು: ಹೌದು!…..ಆ old mental slavishness, ಇವಳಿಗೆ ಇನ್ನೂ ಇರೋ
ಹೊತ್ತಿಗೇನೇ ತಾನು ಬರೋಕೆ ಹೆದರಿಕೊಂಡು brotherನ ಕಳಿಸಿದ್ಲು! please go away!

Gentleman: You must forgive me!… ನಾನು.I was only thinking of my
sister…
——————————————————–

ಅಮ್ಮಾವ್ರು: ನಿಮ್ಮ Sisterಗೆ think ಮಾಡೋದನ್ನ ಮರ್ತುಬಿಟ್ಟು… for a charge… think
for yourself…ಅಬ್ಬ!! ನೀವೂ ಒಂದು manಏ ? That is the door you came by!

[The gentleman exits crest-fallen…. the lady closes the door with a bang….
rushing back precipitately to the cradle]

ಅಯ್ಯಯ್ಯೋ! ಮಗು ಎದ್ದುಬಿಡ್ತೋ !…. ಸದ್ಯ?

[sighing at the sight of the sleeping baby… resumes rocking the cradle]
[ತೆರೆ ನಿಧಾನವಾಗಿ]

SCENE II
(Street)
[Discovered ಗಂಡ and ಯಜಮಾನ್ನು]

ಯಜಮಾನ್ರು: Good God!… Dear boy!… Fancy meeting you here and like
this!

ಗಂಡ: ಯಾಕ್ ನರಸಿಂಹ್‌! ಏನು excitement ಇದು? ಮನಸ್ಸಿಗೆ ಶಾಂತಿ ತಂದ್ಕೋಮಗು…
ನನ್ನ ಹೀಗೆ ನೋಡೋದರಲ್ಲಿ ಏನಿಧೆ wonderoo… right as clock workoo dear boy. I pass
this way at this time and ‘like this’ as you put it… everyday. ! ನೀನು ಬೇಕಾದ್ರೆ, ನಿನ್ನ
lifeoo…… ನಿನ್ನ positionoo, ಈ ಬಾಬ್ತುಗಳನೆಲ್ಲ, ನಮ್ಮ school days ನಿಂದಲೇ fix
ಮಾಡ್ಕೊಂಡು, ಈಗ faithful ಆಗಿ ಜಾರಿಗೆ ತರ್ತಿರೋನು, ಈ rotten ಗಲ್ಲೀಲಿ ನಡೀತಿರೋದು
ಆಶ್ಚರ್ಯ… Borrun Centre forwardoo….. but … but- ಒಂದು….. ten yards
ಯಾವಾಗಲಾದ್ರೂ ಓದಿದ್ದೀಯಾ ? tn your lifeಊ ಆ…..? ಹೌದೂ? ಇದೇನು new
mania ನಿನ್‌ದು ? ನಮ್ಮ good old days ನಲ್ಲಿ…. ಕಾಲು ಚಾಚೋಕೆ ಹೇಸಿಗೆ! ಈಗ actually
ನಡಿಯೋಕೆ ಸುರು ಮಾಡಿರ್ಧಿಯಾ!? If you are not very Careful and if you keep up
this habit of walking, you run the risk of suffering from an attack of… good
digestionಉ!!

ಯಜಮಾನ್ರು: What do you mean?

ಗಂಡ: I mean… nothing more or less, my dear boy, then ..ಇಷ್ಟೆ… that you
have always had, before you, (poking at ಯಜಮಾನ್ರು’s stomach)- a large future !!
ನಿನಗಿರೋದು ಒಂದೇ excuseoo…. on your way home from the cluboಏ… lodge meeting
ಏ… ?

ಯಜಮಾನು: (laughing) ಏನ್ peculiar ನೀನು ಸುಬ್ಬು?…! ನೀನು ಈ ಸ್ಥಿತಿಗೆ
————————————————————

ಬಂದಿದ್ರೂನೂವೆ… ನಿನಗೆ good old college days ನಲ್ಲಿ ಇದ್ದ hurmour ಹೋಗಲಿಲ್ಲವಲ್ಲ!..
you needn’t be frightened, dear boy!… walking ಮೇಲಿದ್ದ abhoranceoo ಈಗ
ಏನೂ ಹೋಗಲಿಲ್ಲ… .my car, you know has broken down, you know!… but… joking
apart… Subbu!!… ಎಷ್ಟು ದಿನ ನೀನು ಈ absurd positionನ stick ಮಾಡೋದು?…

ಗಂಡ: (With controlled temper) ಯಾವ positinoo?

ಯಜಮಾನ್ರು : Excuse me, dear boy, the whole town is laughing at you!!

ಗಂಡ: Yes… in the old days… it was laughing… with me!…. ಈಗ… at me!…
It’s only fair… point ಏನು ?

ಯಜಮಾಮ: ಏನೇನೂ I shall be plain….!

ಗಂಡ: ‘Shall’ ಯಾಕ್‌ಮಗೂ? future timesoo?… pastoo…, presentoo….
ಯಾವಾಗಲೂ, plain ಏ ನೀನು,

ಯಜಮಾನ್ರು: Shuttupp! ಮತ್ಥಾಡ್ಬೇಢ. point ಏನೇ?… ಹೇಳುಬಿಡ್ತೇನೆ ಕೇಳು… the
whole town is laughing at your being hen-peckedoo!!…. ನಿನ್ನ friends ಎಲ್ಲಾ… ಇಷ್ಟು
manly chapoo… old foot-ball championoo… leader of the local baroo… gayest spirit
of the townoo! ಹೀಗಿದ್ದೋನೂ… ಈಗ ಹೀಗೆ guts all goneoo! football and friendsoo….
gone also!…. ‘ಮನೆ ಆಯ್ತು ಮಿಸೆಸ್ ಆಯ್ತೂಂ’ತ ಹೀಗೆ hennecked ಆಗಿ ಬಿದ್ದಿರೋ ನಿನ್ನೂ,
ನಿಮ್ಮ ಮನೆ ಈ dirtys surroundingsನಲ್ಲಿ ಇರೋದ್ನೂ.. ನೋಡೀ ನಗ್‌ತ್ತಿಧಾರೆ…. Hyenas-
ಸುಬ್ಬೂ !-ಹೈನಾಸ್ ಹಾಗೆ… laugh ಮಾಡ್ತಿಧಾರೆ.. ಹ್ಹ ಹ್ಹ ಹ್ಹ ಹ್ಹ ಹ್ಹ ……!! ಕ್ಷಮ್ಸು dear boy!!

ಗಂಡ: “Hyenas !” ಕತ್ತೆಕಿರುಬ-composition ಉ! ಕತ್ತೆ ಎಷ್ಟು… ಕಿರುಬ ಎಷ್ಟು
proportionuಉ…..? Dont be a hyena minus the ಕಿರುಬ Narasim! ಕ್ಷಮ್ಸೋದೇನು!
ನಿಜವೇ… “ಮನೆ cocks townoo…ಮನುಷ್ಯ henpeckedoo!!…. ನಗದೇ ಇದ್ದಾರ್ಯೇ….
ಕತ್ತೆಕಿರುಬಗಳೂ….?

ಯಜಮಾನ್ರು: My dear boy! you are going to pieces! I will tell you what.
Come to the club, have a drink, have a smoke and damn every thing else!

ಗಂಡ: Impossible, ನರಸಿಂಹ್‌! my wife, you know, ಮನೆಗೆ ಹೋಗೂತ್ಲೂ
ಮುದ್ದಿಟ್‌ಬಿಡ್ತಾಳೆ. mouth ಮೇಲೆ! ಮೊದೂಲು!

ಯಜಮಾನ್ರು: (ಗಂಡನ ಹೊಟ್ಟೆಯನ್ನು With his fore-finger ಚುಚ್ಚುತ್ತ )
Oh! ho! after all, affectionoo?!

ಗಂಡ: (ಯಜಮಾನರ ಹೊಟ್ಟೆಯನ್ನು double ಚುಚ್ಚುತ್ತ
No! No! Before all, inspection!!
—————————————-

ಯಜಮಾನ್ರು: Seriously ಸುಬ್ಬು! I am going to put a stop to this .

ಗಂಡ: ಅರ್ಥವಾಗಲಿಲ್ಲ.ಹ್ಯಾಗೆ…

ಯಜಮಾನ್ರು: By speaking to your wifeoo! By convincing her that her place
is one of a help-mate, a subordinate, to the man of the houseoo.

ಗಂಡ: ಕ್ಷಮ್ಸು ! dear boy! You would be a marvel if you did!… ನನಗೆ ಅವಳ್ನ
ತಿಳಿದ ಮಟ್ಗೂ ಹೇಳ್ತೇನೆ ಕೇಳು.. ‘ಮೊದಲು ನಿನ್ನ jobನ resign ಮಾಡಿ ಒಂದು six months
ಕೂಲಿಕೆಲ್ಸ ಮಾಡಿ ಈ ನಿನ್ನ large future reduce ಮಾಡ್ಕೊಂಡು… average human being
ಆಗಿ ಬಂದು ನನ್ನೆದುರಿಗೆ ಬಂದು ಆಮೇಲೆ ಮಾತಾಡು’ ಅಂದ್‌ಬಿಡ್‌ತಾಳೆ It is best my
boy, that you do not face her like this!!

ಯಜಮಾನ್ರು: (mad as a bull) What do you mean?… I will tell you what I
will do… I shall show her an ideal woman!… you know the old method… teaching
by example. My wife you know, sweet creature, you know the type; perfect lily…
ಸೀತಾದೇವಿ typeoo… ಹಗ್ಲೂ ರಾತ್ರಿ ಗಂಡ ಗಂಡ, ಗಂಡ, ಗಂಡ…perfect obedience…. no
protesting…. ಗಂಡ ಹೇಳಿದ್ಹಾಗೆ ಕೇಳ್ತಿರೋ ಹೆಂಡ್ತಿ! Do you know? ನನಗೆ ಬರೋದು five
hundred rupeesಉ; ಅದರಲ್ಲಿ seventy five rupeesನಲ್ಲಿ a house-hold manage ಮಾಡ್ತಾಳೆ…
ಮಿಕ್ಕದುಡ್ಡೆಲ್ಲ ನಂದೇ! no worrying me for jewelsoo… Sariesoo etc..!… ಆಯ್ತೆ!? ನನ್ನ
carನ ಮಾತು ಎತ್ತಿದ್ದಿಲ್ಲ. ನನ್ನ victoriaನ ಹತ್ತಿದ್ದಿಲ್ಲ. ಹಗಲೂ ರಾತ್ರಿ her only Careoo, is
to take care of the seven beautiful children she has presented me with. (thumping
ಗಂಡ on the back) there… is a record, my boy. of a perfect wifeoo, and remember,
she is hardly thiriy!… And to think, that, peopleoo, ನನ್ನwell-wishersಉ ! ಸುಬ್ಬೂ….
advised me against a second marriageoo!!…. ಅವಳನ್ನ ಕರಕೊಂಡು ಬಂದು, ನಿಮ್ಮನೇಗೆ,
I will make her advise your wifeoo… ಕ್ಷಮ್ಸು ಸುಬ್ಬು…. and make her realise… her
positionoo in your house-holdoo!!

ಗಂಡ: (sottovoce) ಮೂವತ್ತು ಕೂಡ ಇಲ್ಲ ವಯಸ್ಸು….! ಏಳು ಮಕ್ಳು… ಎರಡನೇ ಹೆಂಡ್ತಿ!
ಇವನ್ ಸಂಬ್ಳ 500 ರೂಪಾಯಿ!…. ಇವನ… Car ಮಾತು ಎತ್ತಿದ್ದಿಲ್ಲ… ವಿಕ್ಟೋರಿಯ
ಹತ್ತಿದ್ದಿಲ್ಲ. ಇವನ house-holdನೂ.. ಜರಗ್ಸಿ… ಈ ಮಕ್ಕಳ್ನೂ.. ಇಟ್ಕೊಂಡಿದಾರೆ 75
ರೂಪಾಯ್ನಲ್ಲಿ ಅಬ್ಬಬ್ಬಬ್ಬ! ಈ Selfish pigಗೆ ಬುದ್ದಿ ಕಲಿಕೆ ಸರೋಜ is the very
person! (aloud) ನನಗೇನೋಪ್ಪ, ನಿನ್ನ wifieoo ನನ್ನ wife ಗೆ teach ಮಾಡೋಕ್ಕಿಂತ, ನನ್ನ
wifeoo ನಿನಗೆ teach ಮಾಡಿಬಿಟ್ಟಾಳು ಅಂಬೋ ಹೆದರಿಕೆ … but still please yourself… please
yourself… ಯಾವಾಗ ಬರ್ತೀಯಾ ?

ಯಜಮಾನ್ರು: ಬರ್‌ತೀಯಾ? ನಾನೆ ? not at all… not now! ಈಗ ನೀನ್ಬರ್ತಿಯಾ ..,

ಯಜಮಾನ್ರು: ಬರ್‌ತೀಯಾ ನಾನೆ? not at all not now! ಈಗ… ನೀನ್ಬರ್ತೀಯಾ…
ನನ್ ಜೊತೇಲೀ… to see and learnoo how… ಹ್ಯಾಗೆ … I mean… but do… dear boy!…
I shall show you… not only…ಹ್ಯಾಗೆ wife ಇರ್ಬೇಕು … but also… ಇಧಾಳೆ ಬಾ!!
[Exeunt Right]
———————————————————-
SCENE III
[The office room of ಯಜಮಾನ್ರು used usually with pertinent appointments
of a hotch-potch of Pseudo-European-morning visiting-parlour, with furniture
including a cheval galls set and an uncomfortable lounge which itself with a glass,
would have been comfortable along of a bed-room suite. The white-wash of the
walls is almost all covered up with Group Photoes of ಯಜಮಾನ್ರು, which recording
his nomination-probationary-assistant Commissionership-subaltern days to the
present Secretariat job, is a chronological demostration of his inflation
from nine stone to his present fourteen-stone]

[Found discovered two boys, six and four of age.]

ದೊಡ್ಡೋನು: ಅಪ್ಪನ ಹೆಜ್ಜೆ!

(Runs away-Exit L running)

[Enter ಯಜಮಾನ್ರು & ಗಂಡ]

ಯಜಮಾನ್ರು: (Comes up to ಚಿಕ್ಕ ಹುಡುಗ and coolly adjusting his instep to
the boy’s nether part as a full back kicking off a goal kick,
lifts him aloft and wafts him into the sidewings L)

T h e r i s i n g g e n e r a t i o n!
Office roomನಲ್ಲಿ ಏನ್‌ ಕೆಲಸ ಈ bratಗೇ?

ಗಂಡ: Darmit Narisim-don’t be a brute! ಯಾಕ್ ಒದ್ದದ್ದು ಆ ಮಗೂನ?

ಯಜಮಾನ್ರು: ಮಗು! ಅವನು ನಿನ್ನ ನನ್ನ ನುಂಗೋ ಯಮಘಾತ್ಕ! He will live
to ruin me!? ನನ್ನ red inkನೂ black irakನೂ ಕಲಸಿಬಿಟ್ಟೂ ಈಗ ಯಾವ ಬಣ್ಣಾಪ್ಪಾ ಅಂತ
questionoo ನನಗೇ! That is the sort of scoundrel he is! Never mind ನನ್ನ ಮಕ್ಕಳ ಕಥೆ!
ಬಂದ purpose ಮರೀಬಾರ್ದು… I shall show you!… But… ತೆಪ್ನಿರ್ಬೇಕು ನೀನೂ ….. none
of your gutless interferences?!
ಲೇ ! ! ! ! ! ! ! !
(Thumping his chest)
Tiger of the Houscoo!!
ಕಮಲ: ಏನು
ಯುಜಮಾನು: ಏನೇನು?- ಬಡಕೊ ಬೇಕೆ ನಿತ್ಯ?
—————————————-
(Sitting in a chair & stretching both his legs)

(ಕಮಲು ನರಸಿಂಹಯ್ಯನ ಬೂಟ್ಸು ಬಿಚ್ಚುವಳು)

[ಈ…. ತನಗೆ ಅನ್ಯಾಯವಾಗಿ ತೋಚುವ, ‘ಗಂಡನು’ ಏನೂ ಮಾಡಲಾರದೆಯೂ,
ಏನಾದರೂ ಮಾಡಬೇಕೆಂದು ಹೇಳುವ ಹೃದಯಕ್ಕೆ ಏನನ್ನೂ ಮಾಡಲಶಕ್ತನಾಗಿ ಕೈ ಕೈ
ಹಿಸುಕುತ್ತಿರುವುದನ್ನೂ ಗಮನಿಸಿದ]

ಯಜಮಾನ್ರು: Stopit! I know what you are thinking, but discipline. dear boy!,
disciplinoo!! ನಿನ್ನ !houseoo ನೀನು ruin ಮಾಡ್ಕೊಂಡೇ- but ನನ್ನ ಹೋಮೂ…
(ಹೆಂಡತಿಗೆ) ಬೂಟ್ಸೂ ಸಾಕ್ಸೂ ಇಟ್ಟುಬಿಟ್ಟೂ… ಇಬ್ಬರಿಗೂ ಎರಡು Cup Coffee… ಭೇಗ… ಎರಡು
ನಿಮಿಷದಲ್ಲಿ ಆಗುತ್ತ್ಯೇ?

ಕಮಲು: ಹೂಂ.

ಯಜಮಾನ್ರು: Liar! ಯಾರಹತ್ರ ಈ ಸುಳ್ಳು! ಎರಡು ನಿಮಿಷ ! ನೀರೂ ಕಾಯಿಸಿ
ಪುಡಿಹಾಕಿ ಸೋದಿಸಿ ಹಾಲೂ mix ಮಾಡ್ಕೊಂಡು… ಇನ್ನು ಸಕ್ಕರೆ ಬೇರೆ… In two minutes-
ಸುಳ್ಳೂ!- ಸುಳ್ಳು ಹೇಳೋ ಹೆಂಗಸನ್ನ ಇಟ್ಟುಕೊಂಡು ಏನು ಮಾಡೋದು ತಾನು ? My God!?

ಕಮಲು: ಕಷಾಯ ಇದೆ… ತಣ್ಣಗಿದ್ರೂನೂವೆ ಮಕ್ಕಳಿಗೆ ಕಾಸಿದ ಹಾಲು ಇದೆ ಬಿಸಿಯಾಗಿ…
ಬೇಗ ತರ್ತೇನೆ,
[Exit Centre)

ಗಂಡ: Do you call yourself a man Narsim?

ಯಜಮಾನ್ರು: ಲ್ಲೋ ! I am not a man in my house and you are not a man
in your house! Are you satisfied?…. you will not be! Because, in my house I am
not a manoo but a Godoo! In your house you are not a manoo but a wormoo! ಅಃ!
ಬಂದ್ಲು !.. I shall show you!!

[ಕಮಲುವು ಎರಡು ಬೆಳ್ಳಿಯ saucer ಮೇಲೆ spoon ಸಮೇತ ಬೆಳ್ಳಿಯ cupಗಳನ್ನು
ಮೇಜಿನ ಮೇಲಿಟ್ಟು ತಲೆವಾಗಿ ನಿಲ್ಲುವಳು. ನರಸಿಂಹಯ್ಯನು ಒಂದು saucer-cupಗಳನ್ನು ಸುಬ್ಬಣ್ಣನ
ಕೈಗೆ ಕೊಟ್ಟು, ಮತ್ತೊಂದು ಸಾಸರ್ ಕಪ್ಪನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಿಂದ spoon
ಹಿಡಿದು ಕಾಫಿಯ ಅಲ್ಪಾಂಶವನ್ನು ಅದರಿಂದ ತೆಗೆದು ನಾಲಿಗೆಗೆ ತಾಕಿಸಿ ಮುಸಾಂಬ್ರವನ್ನು ಬೇವಿನ
ಎಣ್ಣೆಯಲ್ಲಿ ಅರೆದ ಲೇಹ್ಯವನ್ನು ಜಿಹ್ವಾಗ್ರದಲ್ಲಿ ತಾಕಿಸಿದವರ ಮುಖದಂತೆ ತನ್ನ ಮುಖವನ್ನು
ಮಾಡಿಕೊಂಡು]

ಏನೇ ಇದೂ… ಆ೦? ಕೈಯಣ್ಣೇ-ಆದೂನೂ guest ಇರೋವಾಗ! you horror!
ಏನರ್ಥ? This-poisoning your husband! (to Subbu) Dear boy! ಕುಡೀಬೇಡ! Stop
it! God knows? ನಿನಗೇನಾಗುತ್ತೋ ?…!…..
——————————–

ಕಮಲು: ಇನ್ನು ಮೇಲೆ ಸರಿಯಾಗಿ ಮಾಡ್‌ತೇನೇಂದ್ರೆ.
ಯಜಮಾನ್ರು: ‘ಇನ್ನು ಮೇಲೆ’? ನನ್ನ ಮಾನಾ ಎಲ್ಲಾ ಪ್ರಪಂಚದ ಎದುರಿಗೆ ಕೆಟ್ಟ
ಮೇಲೆ- ಇನ್ನೇನು ಮಾಡಿದ್ರೇನು?

Get out of my sight – ನೀನೋ ನಿನ್ನ ಹಾಳು ಮೂತೀನೋ….. Get out (ಕಮಲು
ನಿಷ್ಕ್ರಮಿಸುತ್ತಲಿರು…. ಸ್ವಲ್ಪಿರು! ನೀನು ಹೋದ್ರೇನು? ನಿನ್ನ ಈ ಹಾಳು ಸ್ವರೂಪ
ಎತ್ಕೊಂಡ್ಹೋಗು !
[Snatches a beautiful silver-mounled photograph of ಕಮಲು and throws it at
her. She catches it deftly and exits.

ಯಜಮಾನ್ರು : (Sipping his coffee slowly and appreciatingly)
ಹ್ಯಾಗಿದೆ ಕಾಫೀ… ಸುಬ್ಬೂ?
ಗಂಡ: ಚೆನ್ನಾಗಿಧೆ..?

ಯಜಮಾನ್ರು : (Rising up in a fury)

‘ಚೆನ್ನಾಗಿದೆ’ be damned, you fool! It is the best coffee in the state! She is the
best coffee maker in the worldoo!

ಗಂಡ: ಮತ್ತೆ…? ಈ ಕೈಯೆಣ್ಣೆ… ಗಿಯ್ಯೆಣ್ಣೆ..?

ಯಜಮಾನ್ರು: [ಭೃಕುಟರಚನೆ ಮಾಡುತ್ತಾ, Approching ಗಂಡ)
That is the secretoo! Domestic happinessಗೇ… dead secretoo, ಮನೆಯಲ್ಲಿ
ಒಂದು ಸಾರ್ತಿ ನಾಲ್ಗೇತಪ್ಪಿ “Satisfactory” ಅಂದು ಬಿಟ್ಟೆಯೋ nothing will come up to
the markoo, afterwards! In my house. I am always happy because I am always
miserable, or I take care to be miserable!!
ಈಗ ಅರ್ಥವಾಯ್ತೇ … ನಿನ್ನ dull brain… how to rule a house!- nuleroo!
(ಗೆರೆಹಾಕುತ್ತಾ demonstrating) ಹೀಗಲ್ಲ ಹೀಗೆ! (ಮುಷ್ಟಿಯಿಂದ ಹೊಡೆಯುವ ಹಾಗೆ
ತೋರಿಸುತ್ತ ) home… ruleroo!!! ಹಿಡಿಯೋದು horizontaloo but works verticaloo!
That …. is the secret! resutoo night and morning ಒಂದೇ ಜಪ “ಗಂಡ… ಗಂಡ….
ಗಂಡ”….. ಗಂಡನ ಬೂಟ್ಸೂ …. ಗಂಡ shirtoo ಗಂಡನ ಕಾಫಿ…. ಗಂಡನ socksoo! Now,
that my dear boy, is the one creature in the world… ನಿನ್ನ horrible wifeಗೆ… ಕ್ಷಮ್ಸು
dear boy… you know I love you though I hate you gutlessness… like Seetha
ಉಪದೇಶಾಡ್‌ ಶೂರ್ಪನಖಿ.. Or ತಾಟಕೀ… never mind… whatever ರಾಕ್ಷಸೀ it was…
you see what I mean ! ಆ!? (ಎನ್ನುತ್ತ ಕಾಫಿ ತಂದ ಪಾತ್ರೆಗಳನ್ನು ಎತ್ತಿಕೊಂಡು ಒಳಗೆ
ಹೋಗುತ್ತಿರುವಷ್ಟರಲ್ಲಿ ಅವಳ ಹಿಂದೆ ಅಲ್ಲಿ ಕಾದು ನಿಂತಿದ್ದ ಕಮಲುವು ಮುಂದೆ ಬಂದು
ಪಾತ್ರೆಗಳನ್ನು ಅವನ ಕೈಯಿಂದ ತೆಗೆದುಕೊಂಡು ಹೋಗುವಳು.)
—————————————————-

ಗಂಡ: (ಸ್ವಗತ) She was in here all the time! !? (ಆ್ಹ !?
(with galint in his eyes-aloud)
ಒಪ್ದೆ! ನರಸಿಂಹ್‌! You are quite right. It is imperative that our better halfs
should meet to better their their own worse-halfsoo. “When shall we foregather
on the morrow?” all together? two-gether ಏನೂ!? four-getheroo?! ಯಾವಾಗ
ಬರ್ತೀರಿ… tomorrow ?

ಯಜಮಾನ್ರು: ಯಾವಾಗಲೇನು…? Shall consult (Cಗೆ ಹೋಗಿ ವಾಪಸು ಬಂದು)
consult be damned. ಅವಳ formula as per usual:”ನೀವು ಹೇಳಿದ ಹಾಗೆ”! Therefore
Teatimeಗೆ ಬಂದು ಸೇರ್ತೇವೆ dear boy!…. tomorrow …. ತೇವೆ ಏನೂ….”ತ್ತೇನೆ!” with my
wifeಉ…. a distinctionoo with a differenceoo …. ಅರ್ಥವೇ?

ಗಂಡ: ಟೀ ಟೈಮೂ ಅಂದ್ರೆ?.. and at the same timeoo ನನಗೀಗ ಕಾಫಿ
ಕುಡಿಸಿಬಿಟ್ಟು?! ನೋಡು dear boy! ಈವತ್ತಿನ Tea-timeಗೆ ಕಾಫಿ ಕುಡಿಸ್ತಿಯಾ ನಂಗೆ.
ನಿಮ್ಮನೇಲಿ;! ನಾಳೆ ನಮ್ಮ ಮನೆಗೆ ನನ್ನ ಕಾಫಿ ಟೈಮ್ನ Tea-time ಅಂತೀಯ! Therefore let
us compromise!

ಯಜಮಾನ್ರು: Compromise be damned! Tea timoo ಬೇಡ. ಕಾಫೀನೂ ಬೇಡ….
what do you say for Cocoa time. ?..I mean 4’0 clock…?

ಗಂಡ: 4’o-clock ಏ ?… coffee time ನನಗೆ Cocoa time really, for my wife
and guestsoo-milk timeoo for my baby and Tigeroo! So. 4’0 clockಗೆ ಬಂದ್‌ ಬಿಡಿ….
Sorry! for the goodisoo!- I mean…. ಬಂದ್‌ ಬಿಡು – with your appurtenance…… or is
it affianced? …. ಎರಡೂ ಒಂದೇನೇ….?

ಯಜಮಾನ್ರು: ಒಂದೇನೇ be damned! ಈ tigeroo ಅಂದ್ಯೆಲ್ಲಾ…. what is it?

ಗಂಡ: Come tomorrow and see…. and find out… Good Night Narsim.

[Exeunt Right briskly ]

ಯಜಮಾನ್ರು: ನಾನೂ, ನನ್ನ wifeoo, Subboo. ಅವನ tertible wifeoo:
ಮಧ್ಯದಲ್ಲಿ ಅವನ poor baby…. ಅರ್ಥವಾಯ್ತು but ಈ ನಮ್ಮ ನಮ್ಮ ಸಂಧೀಲಿ
ಸಮಾರಾಧನೆಗೆ ಕಾದಿರೋ ‘tiger’ ಯಾವ್ದೂ… ಆ? (ನಿಟ್ಟುಸಿರಿಡುತ್ತ) ಸುಬ್ಬೂ ಹೇಳಿದ ಹಾಗೆ
“Can find out tomorrow”, and must remember that tiger or no tiger, my name is
ನರಸಿಂಹಯ್ಯ ನವ ಇರೋ ಸಿಂಹಕ್ಕೆ ಅಯ್ಯ! ಅದರ ಅಪ್ಪ!

ಲೇ !!!!!!!!! ಎಲ್ಲಿಧೀಯಾ !
—————————————————
ಕಮಲು: ಆಗಿನಿಂದ ಇಲ್ಲೇ ಇದ್ದೇನೆ. ನೀವು ಮುಂದೆ ಕೇಳೋದು ಗೊತ್ತು. ಕಿರ್ಲ್‌ ಬೇಡಿ.
ಮುಂದೆ ಗಾನ ಕಿರ್ಲಿದರೋ…. ಈಗ ತಾನೇ ನಿದ್ದೆ ಹೋಗಿರೋ baby ಎದ್ದುಬಿಡ್ತೋ ….
ರಾತ್ರೆಯಲ್ಲಾ ಕಿರ್ಲಾಟ: ನಿಮಗೆ ನಿದ್ದೇನೇ ಇಲ್ಲ…. ಭದ್ರ!… ಗಲಾಟೆ ಮಾಡದೆ ತೆಪ್ಪನ ಅಡಿಗೆ
ಮನೆಗೆ ಬಂದು ತಿಂದುಬಿಟ್ಟು ಹೋಗೋದು ಮೇಲು! ಇಲ್ಲಾ! ಯಥಾ ಪ್ರಕಾರ ಇಷ್ಟ್ಹೊತ್ತಿನಲ್ಲಿ
ಎಲ್ಲರನ್ನೂ ಬೆದರಿಸಿ ಗದರಿಸಿದ್ರೋ…. ನಿಮ್ಮ baby ಎದ್ದ ಕಿರ್ಲಾಟದಲ್ಲಿ … ನಿದ್ದೆಗೆಟ್ಟು… ಬೆಳಿಗ್ಗೆ…
Inspection…. ಅಂತಿದ್ರಿ ….?

ಯಜಮಾನ್ರು : (in whispering husky notes)
ಎಲ್ಲಾ ಗೊತ್ತೇ ! That is alright. ದಮ್ಮಯ್ಯ! ಆ ಪಾಳು ಬೇಬಿನ ತೂಗ್‌ತಿರು.
[Exit Kamalu ]
[ನರಸಿಂಹಯ್ಯನು ತನ್ನ ಬಟ್ಟೆಗಳನ್ನು ಒಂದೊಂದಾಗಿ ಕಿತ್ತೆಸೆದು ಧೋತ್ರವನ್ನುಟ್ಟುಕೊಳ್ಳುತ್ತ]
baby be darnned! ನನಗೇನೋ.! ಮನೆಗಳಲ್ಲಿ ಕೂಸುಗಳು ಹುಟ್ಟಿದ್ರೆ Cradles ಅಲ್ಲ
ಕೊಂಡ್ಕೊಳ್ಳಬೇಕಾದದ್ದು … Chloroformoo ಲೇ! (Exit slowly C)
[ಪರದೆಯು ಬೀಳುವುದು]

SCENE IV
[ಗಂಡ, at the stove shaking a feeding bottle ಅಮ್ಮಾವ್ರು about to go out,]

ಗಂಡ: ಸ್ವಲ್ಪಿರು dear! ಎಲ್ಹೋಗ್ತೀಯಾ?

ಆಮ್ಮಾವ್ರು: ಇದೇನಿದು ಹೊರಡೋವಾಗ?

ಗಂಡ: (with a smile)ನಮಗ್ಗೊತ್ತು… ನಿಮ್ಮ father motherಗೆ ಇದ್ದ ಹಾಗೆ ಈ brahmin
orthodoxy ಎಲ್ಲಾದ್ರೂ ನಿನ್ನ blood ನಲ್ಲೋ. ಇಲ್ಲಾ bonesmarrow ದಲ್ಲೇನಾದ್ರೂನೋ
ಅವಿತುಕೊಂಡಿರುತ್ತೇಂತ-ಗೊತ್ತೂ ನನಗೆ…!

ಅಮ್ಮಾವು: (indignantly | Ortho!….. ಹೌದು… ನಾನು and I think you also. But
this adventitious “doxoo”!. ನಾನಲ್ಲ, perlaps…ನೀವು!

ಗಂಡ: ಅಲ್ಲಾ… ಹೊರಡೋವಾಗ ಎಲ್ಲೀಗೇಂತ ಕೇಳಿದ್ರೆ ಅಪಶಕುನಾಂತ… ಒಂದ್ವೇಳೆ…
ನಿನಗೆ ತೋಚಿದ ಹಾಗೂ… ಅದರ ಮೇಲೆ ನೀವು ಕೇಳಿದ್ಹಾಗೆ ಅರ್ಥ ಇಟ್ಕೊಂಡು … ನಾನೂ…
ಹೇಳಿದ್ದೂ… but ನೀನು ಹೇಳಿದ್ದು corectoo dear! Ortho!- but doxಊ ಬಾಬತ್ತು
ನನಗೇನೋ para-doxಊ!! But yet. ನಾನು ಬದ್‌ಕಿರೋದೂ for just one pair of dear
‘ducksoo’! ಮಗೂಗೆ dinner houroo: therefore ನಿನ್ನ ಹೋಗ್‌ಬೇಡಾ ಅಂದೆನೋ, ಶಾಸ್ತ್ರಕ್ಕೆ
ವಿರುದ್ಧ; ಮಾಗಾ ‘ಇತಿ ಆಮಂಗಳಂ’! But yet “ಅಂಮ್ಮಾ ಇತಿ Calastraphicoo”
ನೀನಿಲ್ಲದಿದ್ದರೆ; ನೀನು ಹೊರಟ್ಹೋಗೋದು, Society calls you -ಇಲ್ಲಿ brutish ನಾನು and bruteletish ಇವನು……….. both hungry………. One cardiacally and the other gastrically!
ಇದಕ್ಕೆ…. anti…. ven…. ಅಲ್ಲ …..anti…. nectaroo….

ಅಮ್ಮಾವ್ರು: ಈ antiಗೆಲ್ಲಾ ಒಂದೇ ಔಷಧಿ! Atkinson’s nippleoo… feeding
bottleoo….. ದೇವರಿಗೆ ಗೊತ್ತು…. bottleಗೆ contentsoo ಕಾಸ್ದ milkoo ದೇವರೀ
ತೋರಿಸ್‌ತಾಳೇ… so the brutelet’s hungeroo ತೀರುತ್ತೆ… but considering you are a
partner also in brutelet….ದಯವಿಟ್ಟು diarrhoea etcನ climinate ಮಾಡೋಕೆ, cleanliness
pauperises physicians ಅಂಬೋದ್ನ…

ಗಂಡ: ಹೌದೂ!? ಈಗ ನೀನು ಹೋಗ್ತಿರೋದು… Lectureoo…. what I mean is…
What a great loss you are to….

ಅಮ್ಮಾವ್ರು: Cut out your compliments!!

ಗಂಡ: Quite so!

ಅಮ್ಮಾವ್ರು: I know what you mean!

ಗಂಡ: (ಮೂಲೆಯಲ್ಲಿದ್ದ parasolನ್ನು ಬಿಚ್ಚಿ ಅಮ್ಮಾವ್ರ ಕೈಗೆ ಕೊಡುತ್ತ) I know that
you know what I mean which means also that you also know what we both meanoo;
but in this meanwhileಊ, in short… A little brute ಇರೋವರೀಗೂ We are both
supplimentary from my angle of view… not complimentary to you of course… but
then two brutes!… I mean one decimal something…. I mean everything… lo me.
meaning…. us… which reminds… me; ದಮ್ಮಯ್ಯಾ dear!… audience waitingoo!
Disappear dear!: but ನಿನಗೋ brain terribleoo! memory… forgive me for
reminding you!…

[Fixing up the leather attachments of a parasol and a chateline about
ಅಮ್ಮಾವ್ರು’s lily fingered hand and wrist)…. audience firstoo… the rest nextoo. Dog-
cart harnessedoo; Tigeroo ಪಕ್ಕದಲ್ಲಿ ಕೂತಿಧೆ . ತಿರುಗಿ ಬರೋದು late ಆದ್ರೆ ಲಾಂದ್ರಾs all
right… Match-boxco ಕಂಚಿ-case ಪಕ್ಕದಲ್ಲಿ….!

[The two disappear- Exit L-Curtain]

SCENE V
[Setting as before, but the following afternoon Discovered: ಅಮ್ಮಾವ್ರು and
ಗಂಡ at a table.)
ಅಮ್ಮಾವ್ರು: ಇದೇನು? revolutionoo? tea-timeಲಿ ಕೂಡ I must have coffee ಅಂತಿದ್ದ
ನೀವೂ…. ಯಾಕೀ sudden swthing of to ಕೋ ಕೋ?

———————————————–

ಗಂಡ: ಕ್ಷಮ್ಸು dear! ನಿನಗೆ ಕೋಕೋ … ನನಗ್ ಕಾಫಿ…. cow’s milkಗಿಂತ condensed
milkoo.. ನಮ್ಮ bruteletಗೆ… ಹೀಗೇ ನಮ್ಮ ನಮ್ಮ tasteಗಳೂ But then, dear. ನಾವು
ಮೂವರೂ, we three including Tiger, are subserviert slavesoo to our self-invited
guestoo… I should say guestsoo….I really should say.. my guestoo… to whom I
am a hostoo… as well as your guestessಊ… to wllom you are a hostessಊ….
ಅದೇನೋ ಕಾಣೆ! …. ನಿನ್ನ guestess ಅಲ್ಲ… but her husband…could have understood…
if he were a woman and Enciente ಅವನಿಗೇನೋ…. ಒಂದು ಕೇಸರಿಕೆ ….. for ಕೋ ಕೋ !!
He is hopelessoo successful in everything except being a husbandoo… Wile… cock-
peckedoo…

ಅಮ್ಮಾವು: (ಬಿರುಸಾಗಿ, ಮದಗುಟ್ಟುತ್ತ)
Go on! ನಿಮ್ಮ ನಿಮ್ಮಲ್ಲಿ ನೀವು MEN ಉಗ್ಳು behind cach other’s backs… ಎಷ್ಟು
ಬೇಕಾದರೂ bite ಮಾಡಿಕೊಳ್ಳೀ…. but… your quest’s wifeಉ… my guestessoo
ಅಂದ್ರಲ್ಲಾ… horrible englishoo-but go on… and take care to go on carefully!! ಯಾರು?
ಇವರು ?

ಗಂಡ: Narasimoo! my old crony…

ಅಮ್ಮಾವ್ರು: ಆ… pigಏ …. ಯಾಕೆ ಕರದ್ರಿ ಅವನ್ನ ನನ್ನ ಕೇಳೇದೇನೆ…? Equal rights
ಅಲ್ಲವೇ ಇಲ್ಲಿ !

ಗಂಡ: ಹೇಳಿದ್ದೆಲ್ಲಾ ಮೊದಲೇ….. Self invitedoo ಅಂತ!…. ಅಲ್ದೆ ಅವನೊಬ್ಬನೆ: ಅಲ್ಲ..

ಅಮ್ಮಾವು: ಏನು, ನಿಮ್ಮ ಸ್ನೇಹಿತರ ಕೊಂಪೇನೇ ಬಂದು ಸೇರುತ್ತೆಯೋ ಇಲ್ಲಿ?

ಗಂಡ: ಇಲ್ಲವಲ್ಲಾ!…. ಹೇಳ್ತಿದೇನಲ್ಲ… ಅವನೂ ಅವನ Sweet wifeoo… ಅಷ್ಟೆ.

ಅಮ್ಮಾವ್ರು: ಓ! I see ! ಅವಳನ್ನ ಕರ್‌ಕೊಂಬರ್ತಾನೆಯೇ! ಬರ್‌ಲಿ! ಅವಳನ್ನ
ಕರ್‌ಕೊಂಡ್‌ಬರೋದೂ Godsendoo! ಅಬ್ಬಬ್ಬಬ್ಬಬ್ಬ! ಏನು bruitalise ಮಾಡ್ತಾನೇಂತೀರಾ
ಅವಳ್ನ? ಬರಲಿ! I will kick ಕಮಲು and kill that pigoo…. widow or no widow….!
ಇರ್ಲ್ಲೀ ?? ಕೋ ಕೋ ಏನ್‌ ಬಂತೂ… to that fat hagoo?

ಗಂಡ: ಹಾಗೂ….ಹೀಗೂ two guestsoo. Up to us bothoo…. ಬಂದೋವರ್ನ
kickingoo, killingoo widowing or widowering. ಈ ನಿನ್ನ – righteous of course-
indignationನ curb ಮಾಡ್ಕೊಂಡು…. “ಏನೋ ಪಾಪ! ಬಂದಿಧಾರೆ…. ಕೋ ಕೋ ಕುಡೀತಾರೆ….
ಬಂದ್ಹಾಗೇ ಹೊರಟ್ಹೋಗ್ತಾರೆ” ಆಂಬೊ idea betterಏ ಇಲ್ಲಾ ಈ killing and kickingoo…?
I shall help of course… ನನ್ನ football bootsಊ!… killing ಬಾಬ್ತೂ… Tiger’s
departmentಊ !…. ನನಗೆ ಒಂದೇ objectionoo… ಕಿರ್ಲ್ದೆ carpet dark colour bestoo
ಅಂತ… but you of course…

ಅಮ್ಮಾವು: P o i n t ಗೆ ಬನ್ನಿ!
——————————————————–

ಗಂಡ: ಏನೂ ಇಲ್ಲ! proposed bloodshedoo…. ruined carpetoo…. corpses to
explainoo. ಕ್ಷಮ್ಸು dear? ನಿನ್ನ friend ಕಮಲೂನ ಕಿಕ್ ಮಾಡದೇನೂ … ನನ್ನ friendನ ಕಿಲ್
ಮಾಡದೆಯೋ…just like ನಿನ್ನgreatnessನ ನಾನು apprecate ಮಾಡೋ ಹಾಗೆ ನಿನ್ನ
classmate greatnessನ…ಆ pigoo… hogoo…. appreciate ಮಾಡೋಹಾಗೆ…. ನೀನು! after
all, he is my freindoo!

ಅಮ್ಮಾವ್ರು : But she is also my friendoo! ನಿಮ್ಮ friendಗೆ hurnane feelingsನ
teach ಮಾಡೋಕೆ ನಿಮಗೆ ಶಕ್ತಿ ಇಲ್‌ದಿದ್ರೂವೆ ನನ್ನ friendಗೆ human rightsನ realise
ಮಾಡ್ಕೊಳ್ಳೊದ್ನ ಹೇಳ್ಕೊಡೋ ಶಕ್ತಿ ನನಗಿದೆ! ಬರ್ಲಿ! – ಆ bruteoo! The Lord hath delivered
him into mine hands!!

ಗಂಡ: ಹೌದೂ dear! but… only to construe and construct … perhaps…
reconstruct… their homeoo… without of course. ನಿನ್ನ್ kicking… killing……
ಆವೇಶದಲ್ಲಿ:… destructoo…. our little home…

ಅಮ್ಮಾವ್ರು: sssಸ್ಷ್! Rest assured! ಬಾಕ್ಲು….. ಬಂದರು ! ಕಮಲೂಗಿಲ್ಲದ gutsoo
ನಾನು inject ಮಾಡ್ತೇನೆ. ಆ Pigಗೆ ಇರೋ fatನ ನೀವು ಕರಗಿಸಿಬಿಡಿ… ಹ್ಯಾಗೆ?

ಗಂಡ: ನೀನು ಹೇಳಿದ ಹಾಗೆ!

[Bung: at the door]
(ದೇವೇರಿ-ಪ್ರವೇಶಿಸಿ)

ಯಾರೋ ಬಂದವ್ರೆ… ಬರ್ತವ್ರೆ, ಬಂದೈತೆ, ಕುದುರೆ ಉಳ್ಳಿ; ಕಟ್ಟಿದ್‌ಮೇಗೇ… ಉಳ್ಳಿ
ಸಾರು ನಮ್ಮ ನೀಗೊಯ್‌ಬೌದೇನ್ರವ್ವ?

ಅಮ್ಮಾವು: ನೀನ್ ಹೇಳಿದ ಹಾಗೇ ಹಾಳಾಗಿ ಹೋಗು…. ಹುರಳಿ ಸಾರು ಸಮೇತ
ಟೈಗರ್‌ನ ಸರಪಣೀ ಹಾಕೀ ಕಟ್‌ಬಿಟ್‌ ಹೋಗು….

ಗಂಡ: Quite right, dear! That will stop any killingsoo!

[ದೇವೇರಿ ಹೋಗುವಳು-ನರಸಿಂಹಯ್ಯನ ಪ್ರವೇಶ ]

ನರಸಿಂಹಯ್ಯ: (ಗಟ್ಟಿಯಾಗಿ) Hallo! Dear boy !

ಅಮ್ಮಾವು: [Rocking chairನಲ್ಲಿದ್ದು ಅವನ ಕಡೆಯೇ ತಿರುಗದೆ ಸುಬ್ಬುವಿನ ಕಡೆ
ತಿರುಗಿ-freezingly]

Rooms ಒಬ್ಬ lady ಇಧಾಳೆ ಅಂಬೋದ್ನ ಅವ್ರು forget ಮಾಡಿದ್ರೂ ನೀವು remind
ಮಾಡಿ!….

ಗಂಡ: Quite sol……. you see dear boy, there is a lady…

ನರಸಿಂಹಯ್ಯ: Yes! Yes! I know all about it… ಕ್ಷಮ್ಸು ಸುಬ್ಬು, ಈ ಇಂಗ್ಲಿಷ್‌ಗೆಲ್ಲ
ಬೆದ್ರೋನಲ್ಲ ನಾನು…. leave it to me… (turns to the lady) sister… ನೀನು remember
——————————————————

ಮಾಡ್ಕೋಬೇಕು that there is a gentleman and a real man in this room; ಅಲ್ದೆ ಆ real
woman…. a sweet consoler, confident and companion will be here in a minute with
or without your permission…. (turning to door, aloud, to Kamalu) ಬಾರೇವೊಳಗೇ…
ಎಷ್ಟೊತ್ತೆ ಅಲ್ಲಿ ನಿಂತಿರೋ ?

[Enter Narasimhayya’s wife-Kumulu]

ಕಮಲು: ಅಲ್ಲ… ನೀವು… ಹೇಳಿದ್ರೀಂತ… ?

ಆಮ್ಮಾವು: ನೋಡಿದ್ರಾ, ಕಮಲಾ? just like a brute! ಇನ್ನ ಅಲ್ಲೇ ನಿಂತಿದೂಂತ ಹೇಳ್ಳಿಟ್ಟು
ಯಾಕ್ನಿಂತೇ ಅಂತ ನಿನ್ನೇ ಬಯ್ಯುತ್ತೆ – just like a manಉ…. bruteoo…puts the blame on
the womanoo!!

ಗಂಡ: ನೋಡಿದ್ಯಾ dear boy….. I told you…!
ನರಸಿಂಹಯ್ಯ: Shut up! If you have not the right spirit. I have! (to ಅಮ್ಮಾವ್ರು)
ಏನ್‌ ನೀವು ಹೇಳಿದ್ದು?

ಅಮ್ಮಾವ್ರು: ಇದೊಂದು peculiarily ಕಮಲಾ…. ಗಂಡಸ್ರ brainಉ ಕಿವೀಲಿ ಬಿದ್ದದ್ದು
braingeಗೆ ಸೇರೋ ಆಷ್ಟ್ರಲ್ಲಿ ಮೂರ್ಸರ್ತಿಯಾದ್ರೂ ಕಿರಲ್ಬೇಕು. ಇದೇ man’s wonderful brainಉ
ಅನ್ನೋದು….manಉ! the Lord of Creationಉ!!

ಗಂಡ: ನೋಡಿದ್ಯಾ dear boy!… in cross-talkಉ….! she is terribleಉ….!

ನರಸಿಂಹಯ್ಯ: (With a wry face and hushed tone)
All right! All right! I shall see that everything is alright!…..

ಅಮ್ಮಾವ್ರು: Everything is alright!. everything ಅಲ್ಲ…. almost everythingಉ
there is one thing in this room that is not alright… and that is yourself!

ನರಸಿಂಹಯ್ಯ: ಹ್ಯಾಗೆ ನಾನು alright ಅಲ್ಲ? at least…. I don’t want to speak to
you… ಸುಬ್ಬು… I appeal to you….I…. what is wrong with me…?

ಗಂಡ: Wrong with you!…. ಏನೋಪ್ಪ! I mean… you see what I mean…!

ನರಸಿಂಹಯ್ಯ: I don’t see what you meanಉ….!

ಅಮಾವ್ರು: Mean….. | shall explain! ಇಲ್ನೋಡಿ! ಆ ದಿನ ತಗೊಂಬ್ಬನ್ನೀಂದ್ರೆ…

ಗಂಡ: Certainly dear! …
(ಹಾಗೆಯೇ ನಟಿಸುವನು)

ಆಮ್ಮಾವು: (ಕಮಲು ಮುಖವನ್ನು ಎತ್ತಿ ಹಿಡಿದು) ಈ ಪ್ರೇತದ ಮುಖ ನೋಡಿದ್ರಾ?….
ನನಗಿಂತ ಮೂರು ವರ್ಷ ಚಿಕ್ಕೋಳು… two classes highter’ಹೀಗಿದ್ದ ರತೀನ ಈ ಸ್ಥಿತೀಗೆ
ತಂದಿಟ್ಟೀದೀರಲ್ಲ ….!? 3೦ ವಯಸ್ಸು ಕೂಡ ಇಲ್ಲ… ಆಗ್ಗೆ ಏಳು ಮಳ್ಳ ತಾಯಿ…. ನಿಮ್ಮ ayah…
————————————————

ಕಸಾಗುಡ್ಸೋಳು… cookಉ … ಮೂರು ವರ್ಷದಿಂದ ಇದೇ ಸೀರೆ ಹರಕ್ಲು… ಸಂಬ್ಳಾನೆಲ್ಲ
ನುಂಗೋದು ನೀವು… ದುಡಿಯೋಕೆ ಅವ್ಳು…?

ನರಸಿಂಹಯ್ಯ: My God! This is too much!

ಗಂಡ: I told you my dear boy…!

ಕಮಲು: ಛೆ! ಸುಮ್ನಿರು ಸರೋಜ… ಏನ್ಹೇಳಿದ್ರೂ ಗಂಡಸ್ರು ಗಂಡಸ್ರೇ….

ಆಮ್ಮಾವ್ರು: Shutt up! ನಿನ್ನ ಗಂಡ ಹೇಳಿದ್ಹಾಗೆ… If you have not the right spirit.
I have ಎಷ್ಟು ದಿನಾಂತ ತಡ್ಕೊಂಡಿರೋದು ನೀನು ಈ tyrannyನ…. ?

ಕಮಲ: ಏನೋ ಸರೋಜ! ಕೈ ಹಿಡಿದ್ಮೇಲೆ ತಪ್ಪಿಸ್ಕೊಳ್ಳೋದೆಲ್ಲಿ…?

ಅಮಾವ್ರು: ಚೆನ್ನಾಗಿದೆ! ಕಸಬಾ ಕುರೀನ ಕೊಲ್ಲೋಕೆಳಕೊಂಡ್ಹೋಗಿದ್ದಾಗ, ಅದ್ರ ಕೈಲಿ
ಕತ್ತಿನ ಕೊಟ್ಟು, ಕುತ್ಗೇಗೆ ಕಟ್ಟಿರೋ ಹಗ್ಗಾನ ಕತ್ತರ್ ಸ್ಕೊಂಡು free ಆಗಿ ಓಡು ಅಂದ್ರೆ… “ಕಸಾಬನ
ಕೈ ಹಿಡ್ದಿದೇನೆ” ಅಂತಂತೆ. ಆ ಕುರೀಗೂ ನಿನ್ಗೂ ಏನು ವ್ಯತ್ಯಾಸ ?

ಕಮಲು: ಈಗೇನು ಅಂಥಾ ಕತ್ತಿ ಕೊಟ್ಟಿರೋದು ನೀನು ನನ್ನೈಲಿ?

ಆಮ್ಮಾವ್ರು: ಕೊಡ್ತೇನೆ! ನಾಳೆ ಮೀಟಿಂಗ್ attend ಮಾಡು. ಇದೇ questionಉ ನಮ್ಮ
associationನಲ್ಲಿ lecturerಉ: “How to convent husband tyrants into home
companions” subjectಉ ಬರ್ತೀಯಾ? (ಕಮಲು hesitates) ಇಲ್ಲ ಹೆದರ್ಕೊಂಡು
ಹಾಳಾಗ್ಹೋಗ್ತೀಯಾ? Remember. For the sake of your childreneಉ, ಆ bruleನ ಒಂದು
human being ಆಗಿ ಮಾಡಿ, ನಿನ್ನ ಮಕ್ಕಳಿಗೆ ಒಬ್ಬ fatherನ ಕೊಡೋದು ನಿನ್ನ duty…. duty…
ಬರ್ತೀಯಾ?

ನರಸಿಂಹಯ್ಯ: ನಿನ್‌ meeting…. I mean ನಿಮ್ meetingಉ…. I mean hang it…
your meetingಉ! She shall not attend any of your meetingsಉ. ಸತ್ರೂ,
ಬರೋದಿಲ್ಲಾ, ನಿಮ್ meetingಗೇ (to ಕಮಲು) ಏನೇ?

ಕಮಲು: ನೀವು ಹೇಳಿದ ಹಾಗೆ!

ಗಂಡ: There is your answer for you… what do you say Subbu?

ನರಸಿಂಹಯ್ಯ: I won’t say anything just yet. daar boy….

ಅಮ್ಮಾವ್ರು: But it is not her answerಉ … ಅವಳ್ನ brutalise ಮಾಡಿದ horrorನ
answerನ voice ಮಾಡೋ gramophone ನೇ ಹೊರ್ತು ಅವ್ಳು, ಅವಳೊಂದು free being
ಆಗಿ ಹೇಳಿದ answer ಅಲ್ಲ ಅದು… you horrible husbands ಎಲ್ಲಾ ಹೀಗೇ… wifeಉ ಅಂದ್ರೆ…
ನಿಮ್ಮ wifeಉ…. ನಿಮ್ಮ wife ಅಂತ ಬಡ್ಕೋತೀರೇ ಹೊರ್ತು, ನೀವು ಮದ್ವೆ ಮಾಡ್ಕೊಂಡ
body ಅಲ್ದೆ, ನೀವು ಮದ್ವೆ ಮಾಡ್ಕೊಳ್ಳದ ವೊಂದು… free beautiful independent soaring
soul… ನಿಮಗೆ ಹ್ಯಾಗೊಂದು soul ಇದೆಯೋ ಹಾಗೆ ಅವಳಿಗೂ ಇಧೆ ಅಂತ ನಿಮಗೆಲ್ಲಿ
ತೋಚುತ್ತೆ!
————————————————
ಕಮಲು: (Caressing and stroking Saroja’s hand)
ಅಯೋ! ಸುಮ್ನಿರು ಸರೋಜ….

ಅಮ್ಮಾವ್ರು: (Excited, pushing Kamalu away)
ಸುಮ್ನಿರು!? I won’t ಸುಮ್ನಿರು… ಆ brutನ…I mean… ನಿನ್ನ husbandನ…
continued brutal treatmentನಿಂದ mind slavish ಆದಾಕ್ಷಣವೇ, ನನ್ನ mindಊನೂ
ಹಾಗೇಂತ ತಿಳ್ಕೊಂಡ್ಯಾ?…. I shall speak out my mind to this…. this… what shall I call
it… this THINGಉ!….

ನರಸಿಂಹಯ್ಯ: Thingಊ?… ನಾನು thingಉ?… ಸುಬ್ಬೂ… what thingಉ does
she mean ಉ…?

ಗಂಡ: I can’t say dear boy, what thingಉ… but after all somethinಉ….
why? Any thingಉ is…is betterಉ… than…. Nothing ಉ!

ಅಮ್ಮಾವ್ರು : Nothingಉ? He is less than nothingಉ.

ನರಸಿಂಹಯ್ಯ: Less than nothingು! Subbu!?
(Waves his hands and arms helplessly towards Subbu.)

ಗಂಡ: (Dispassionately and stroking) I
admit it dear boy…. less than nothingಉ is really too badಉ.

ನರಸಿಂಹಯ್ಯ ; What does she meanಉ?

ಅಮ್ಮಾವ್ರು; ಅವರನ್ನೇನ್ಕೇಳ್ತೀರಾ…. ನನ್ನ ಕೇಳಿ…. I shall tell you What I meanಉ… you…
you…. ಮೊಸಳೆ.

ನರಸಿಂಹಯ್ಯ: ಮೊಸಳೆ… I… Subbu!
[Subbu drops his hands helplessly and tums away]

ಅಮ್ಮಾವು: Branನಲ್ಲಿ looksನಲ್ಲಿ heartನಲ್ಲಿ ನನಗಿಂತ worlds ahead ಆಗಿರೋ
ಇವಳ್ನ ‘ನೀವ್ ಹೇಳಿದ ಹಾಗೇ’ ಅಂತ ಅನ್ನೋ ಸ್ಥಿತ್ತೀಗೆ ತಂದಿಟ್ಟಿಧೀರಲ್ಲಾ! ನೀವು hurrian
beingಏ?… Pig…pig… you are a pig. Pig…ಪ್ಹಿಗೂ…

ನರಸಿಂಹಯ್ಯ: Pigಉ… …ನಾನು!….ನಾನು! dear boy… this is to much!…. Did you invite
me and my honoured wifeಉ , to this houseಉ. to be insulted like thisಉ ?

ಆಮಾವು: Invite you!….. ಇನ್ನು ಸುಳ್ಳು ಬೇರೆ… self-invitedಉ ಆಂತ ಮೊದಲೇ
ಹೇಳಿಧಾರೆ ನಿಮ್ಮನ್ನ!….

ಗಂಡ: ಅವಳು quite rightಉ… dear boy…. ನೀನೇ ಹೇಳ್ಳಿಲ್ವೇ, “I will drop in
at tea time” ಅಂತ… ಆಮೇಲೆ cocoa timeಅಂತ amend ಮಾಡ್ಲಿಲ್ವೆ?…. of course….
between you and me, to remind you of that is uncharitableಉ….
——————————————————
ನರಸಿಂಹಯ್ಯ: Granted…. granted…. granted; …. but is it charitableಉ to call
me a pigಉ? I understand you dear boy! Woman have no brainsಉ… no
sensceಉ…. ಬರೀ bundle of nerves ಉ:… for instanceಉ…. she calls me! … me!….
a gentleman!… a pigeಉ…. the idea !!!! Subbu, do I look like a pigಉ?

ಗಂಡ: (Running his eyes over Narasimhayya…. cap-a-pie) ನಾನೇ think ಮಾಡಿ
ಏನ್ ಪ್ರಯೋಜ್ನ?… dear boy… opinions always differಊ pig ಆದ್ರೆ ತಾನೇ
ಏನು…. ಮಹಾವಿಷ್ಣು ಕೂಡ…. ಬೇಡ … but I think…

ನರಸಿಂಹಯ್ಯ: It is nothing to me what you thinkಉ… but, I shall not have
my wife… my sweet wife… contaminating herself in your house!ಉ… ಇನ್ನೊಂದು
ಕ್ಷಣ ನನ್ನ wifeಉ ಈ ಮನೇಲಿದ್ರೆ, ಅವಳ್ಗೂ ಈ horrible independent spiritಉ
ಅಂಟ್ಕೊಂಡ್ ಬಿಟ್ಟಿತು!!..

ಅಮ್ಮಾವು: ಹುಂ! ಅದೇ ಹೆದರ್ಕೆ ನಿಮ್ಗೆಲ್ಲಾ… ಈ independent Spirit ಯಾವಾಗ,
ನಿಮ್ಮ enslaved wivesಗೆ ಬರುತ್ತೋ ಆವಾಗ, ನಿಮ್ಮ tyrannyಗೆ ತುಂಡು ಬೀಳುತ್ತೇಂತ ಗೊತ್ತು
ನಿಮ್ಮ… ಎಳಕೊಂಡ್ಹೋಗಿ!… I have done my best… ಅವ್ಳ will hopelessly weak ಆದ್ಮೇಲೆ
ನಾನೇನ್ಮಾಡೋಕಾಗುತ್ತೆ. ಆದ್ರೆ ವೊಂದ್ಮಾತ್ ಹೇಳ್ತೇನೆ…

ನರಸಿಂಹಯ್ಯ: ವೊಂದ್ಮಾತು! … dozenಗೆ ಇಪ್ಪತ್ತೆರಡು ಮಾತಾಡೋ ನಿಮ್ ಕೈಲಿ ವೊಂದು
ಮಾತಾಡೋಕಾಗೋದಿಲ್ಲ. ಇದೆಲ್ಲ ಕೇಳ್ಕೊಂಡಿರೋಕೆ, ನಂಗೆ ಬಿಡ್ವೂ ಇಲ್ಲ… ಕೇಳ್ಕೊಂಡಿರಬೇಕೂಂತ
ನನ್ನಣೇಲಿ ಬರೀಲೂ ಇಲ್ಲ… ಆದ್ರೆ ನೀವಾಡೋ ಮಾತುಗಳನ್ನೆಲ್ಲ… ಹಗ್ಲೂ ರಾತ್ರಿ ಕೇಳ್ತಾ…
manlinesನ ಮರೀತಾ, ನಿಮ್ ಕೈಲಿ ಸಿಕ್ಕಿದ drivelling fool ಒಬ್ಬನಿಧಾನಲ್ಲಾ… my poor
witless… gutless friendಉ… though God knows I love him…. ಅವನ್ಹತ್ರ finish
ಮಾಡ್ಕೊಳ್ಳಿ… ನಿಮ್ಮ lectureನ…,

ಅಮ್ಮಾವ್ರು : Shut up! Beast! ನೀವಿರೋ ಯೋಗ್ತೇಗೆ ಇವರ್ನ ಬೈಬೇಕೆ? He at least,
is human!…. whatever; he is or is not, he doesn’t spend all his honest earnings on
his own luxuries… all his time in his club…. leaving me… like you do your wifeಉ…
hopeless and helpless to play ayah to your seven children and food-supplierಉ to
that horrible ಬೊಜ್ಜೆ of yours!!

ನರಸಿಂಹಯ್ಯ: (Puts his hand over his stomach)
ಬೊಜ್ಜೆ!

ಆಮ್ಮಾವು: ನನಗೇನು ಗೊತ್ತಿಲ್ಲಾಂತ ತಿಳ್ಕೊಂಡ್ರಾ ನಿಮ್ ಚರಿತ್ತೆ? ಹಾಳು 500 ರೂಪಾಯಿ
ಸಂಬ್ಳದಲ್ಲಿ ವಂದ್ಕಾಸೂ ಕೂಡ ಮನೆ ಖರ್ಚಿಗೆ ಕೊಡ್ದೆ… clubನಲ್ಲಿ ಕುಡ್ದು ಬಿಟ್ಟು…Wifeನ
brutalise ಮಾಡೋ ನಿಮ್ಮನ್ನೋಡಿ… ಕೇರಿ ಕೇರೀನೂ ಕಿರೀತಿಧೆ… ಹಲ್ಲು ಕಿರಿತಿಧೆ… ಈ ನಿಮ್ಮ
———————————————————————-
ಹಾಳು ಬೊಜ್ಜಿನ ಸಾಗ್ಸೋಕೆ carಉ! …… Victoria!…. ಇನ್ನಿವ್ಳು ಒಂದ್ಹೆಜ್ಜೆ ಹೊರಗ್ಹೋಬೇಕೂಂದ್ರೆ…
ಒಂದ್ಜಟ್ಕಾ ಕೂಡ ಇಲ್ಲ… ಹೂ! ಎಳ್ಕೊಂಡ್ಹೋಗಿ …. ಅವ್ಳು road ಉದ್ದಕ್ಕೂ ಈ ಹರಕ್ಲು ಸೀರೇನೂ
ಸುತ್ಕೊಂಡು ಬರೀ ಕಾಲ್ನಲ್ಲೆ ನಡಕೊಂಡ್ಹೋಗೋದ್ನ ಊರೆಲ್ಲ ನೋಡಿ, ಪಶ್ಚಾತ್ತಾಪ ಪಡ್ಲಿ…
ನಿಮ್ಮನ್ ನೋಡಿ… bruteಉ bruteಉ.. pigಉ ಅಂತ ಉಗೀಲಿ !!…

ನರಸಿಂಹಯ್ಯ: (Swallowing a host of sentences, chokingly)
Look at my positionಉ dear boy !!….

ಅಮ್ಮಾವ್ರು: Your position… ಹೂ! … your position is outside this houseಉ…
ನಿಮ್ಮ Wife ಬೆಣಚಕಲ್ ರೋಡ್ ಮೇಲೆ ಬರೀ ಕಾಲಲ್ಲಿ walk ಮಾಡಿ bleed ಆಗೋ
soleನ ನೋಡಿ. ಊರೆಲ್ಲ pity ಮಾಡುವಾಗ ನಿಮಗ್ಗೊತ್ತಾಗತ್ತೆ ನಿಮ್ಮ Possitionಉ!

ನರಸಿಂಹಯ್ಯ; ನನ್ wife ನಡ್ಯೋದಿಲ್ಲ… my car! my Victoria! If I only had them
here….ಒಂದೊಂದ್ರ ಮೇಲೆ ಒಂದೊಂದ್ಕಾಲಿಡ್ಸಿ ಕರ್ಕೊಂಡ್ಹೋಗ್ತಿದ್ದೆ… ನನ್ನ dear Wifeನ, ನಿಂ
ಕಣ್ಣೆದುರ್ಗೆ… If I only had them here!…… thank God! ನನ್ನ brainsಉ ನನ್ನ desert
ಮಾಡ್ಲಿಲ್ಲ …. a jutka!… Madam…. ನನ್ನ ಈ situationನಲ್ಲಿ, ನನ್ನ Wife ಮೇಲೆ ನನಗಿರೋ…
respectಉ loveಉ, ನಿಮ್ಮ ಕಣ್ಣೆದುರ್ಗೆ ತೋರ್ಸೋ…. conveniences ಈಗ ಇಲ್ದಿದ್ರೂನೂವೆ…
ರಾಣಿ…..like a queen… queen ಎನು? … Empress ಹಾಗೆ. ಅವಳ್ನ ಕರ್ಕೊಂಡ್ಹೋಗೋಕೆ
ರಥ…..I mean car… ಇಲ್ದಿದ್ರೂನೂವೆ… ಅವ್ಳ … sweet ಕಾಲು — her beautiful ಪಾದ
ಸಮದ್ಹೋಗ್ದ್ಹಾಗೆ ಒಂದು cheap|… common or garden ಜಟ್ಕಾದಲ್ಲಾದ್ರೂ ಕೂಡಸ್ಕೊಂಡ್ಹೋಗ್ತೇನೆ….!
shall fly for a jutka forthwith!…

ಅಮ್ಮಾವ್ರು: Fly ! ಹು!… ಆ ಮುಂಭಾರಾನಿಟ್ಕೊಂಡು walk ಮಾಡೋದ್ಕೂಡ impossible
ಆಗಿರೋ ಆ impediment ಇರೋವರ್ಗೂ fly…. ಅಂತೆ… fly!… ಇಲ್ಲಿಂದ ವಂದೂವರೆ ಮೈಲಿ
ಜಟ್ಕಾ standಗೆ… ಅಲ್ಲೀಗೋಡ್ಹೋಗೋದ್ರಲ್ಲಿ ಕರಗ್ಹೋಗ್ಬಿಟ್ಟೀತು… arrangementಉ….

ನರಸಿಂಹಯ್ಯ ; Arrangement!… I… an arrangement!… Subbu!!….

ಗಂಡ: Arrangement is a good wordಉ dear boy!

ಅಮ್ಮಾವ್ರು: Brain-Wave ಅಂದ್ರಲ್ಲಾ, : ನನ್ನ brain-Wave ಸ್ವಲ್ಪ ಕೇಳಿ…. ನಮ್ಮನೆ ಮುಂದೆ
road ಮೇಲೆ ಮಲಕ್ಕೊಂಡು roll ಮಾಡಿ… one and a half revolutionsಉ ನಿಮ್ಮನ್ನ
ಉರುಳಿಸೊಂಡ್ಹೋಗಿ ಬಿಟ್‌ಬಿಡತ್ತೆ… jutka standಗೆ… Circumference ಏನಾಯ್ತು ?….
mathematics ನಿನ್ನ speciality ಅಲ್ವೆ ಕಮಲೂ? … Nothing is useless in this world
ಅಂತಾರಲ್ಲ ಹಾಗೆ ನಿಮ್ಮ fattened battened ಬೊಜ್ಜೇನೂ justify ಮಾಡ್ಕೊಂಡು ಅದಕ್ಕೂ
ಸ್ವಲ್ಪ ಉಪಯೋಗವಿದೆ ಆಂಬೊದ್ನ ತೋರ್ಸಿ…..!
[ಕಮಲುವಿನ ಕೈ ಹಿಡಿದು ಒಳಗೆ ಹೋಗುವಳು]

ನರಸಿಂಹಯ್ಯ: Good God! man! Is she personal do you think?… ಬೊಜ್ಜೆ or no
ಬೊಜ್ಜೆ…. I shall run for a julka.
———————————————————–
ಗಂಡ: Quile so! dear boy! ಆದ್ರೆ Tigerಉ ?

ನರಸಿಂಹಯ್ಯ , What do you mean tigerಉ?… you mean tigressosಉ. … ಕ್ಷಮ್ಸು….
dear boy, ನಾನು ಈ tigressನ…. I mean ಈಕೇನ…. ತಪ್ಪಿಸ್ಕೊಂಡ್ಹೋಗೋ ದಾರೀನ
ಹುಡುಕ್ತಿರೋವಾಗ, what do you mean tigerಉ ?

ಗಂಡ: Just what I said dear boy!

ನರಸಿಂಹಯ್ಯ: (ಬೆದರಿ) What do you mean ‘what I said’? ಏನು tiger ಅದು?
ನಿಮ್ಮ ಮನೇಲಿ?

ಗಂಡ: ಬೆದರಬೇಡ! Dear boy! Tigeroo is just the name of a dogoo!: but. a
bulldogoo, which can easily kill a tigeroo!

ನರಸಿಂಹಯ್ಯ: Why is mere dogoo called… tigeroo?!

ಗಂಡ: Obviously because this dogoo behaves like a tigeroo! Seven feet jump
ಮಾಡುತ್ತೆ…. at any body’s throat! Logic ನಲ್ಲಿ ನೀನು failoo ನಿನ್ನ F.A. ಜ್ಞಾಪಕವೇ?
ಇರ್ಲ್ಲಿ! But coming back to tiger…!

ನರಸಿಂಹಯ್ಯ: (alarmed again) Good God! ತಿರಿಗಿ tigeroo!?

ಗಂಡ: ಛೆ! ಛೆ! I told you.. . ಹೇಳಿದ್ನರಲ್ಲಾ ನಮ್‌ ನಾಯಿ … Bull-dog- double
“B”. both capitalsಉ- ಅದರ್ಹೆಸ್ರು “Terror of cocks town’ಅಂತ- cocks-town’ is only
a misnomer you know… ಆದ್ರೆ ಒಂದು ಕೋಳೀನೂ ಬಾಕಿ ಇಲ್ಲ ಈ ಕೇರೀಲಿ- It is free
in the ouinpound!

ನರಸಿಂಹಯ್ಯ: Why? Is he dangerous?… oh! dogs and cats don’t frighten me
you know…I am not afraid of him

ಗಂಡ: Perhaps not you of him. dear boy… ಆದ್ರೆ ನನಗಿರೋ frightoo. for you…

ನರಸಿಂಹಯ್ಯ: ಯಾಕೇ? Is he dangerous to man?

ಗಂಡ: No! No! He is warmly attached to humanity…!

ನರಸಿಂಹಯ್ಯ: Good! Good!

ಗಂಡ: Good of course… but unfortunately on the instalment planoo!

ನರಸಿಂಹಯ್ಯ: What do you mean ‘Instalment plan’?

ಗಂಡ: ಕ್ಷಮ್ಸು? dear boy! you see he has got a warm regard for humanity in
generalಉ… in particularಉ…. only to that piece of humanity which is nearest
to his jawsಉ…. Terrible jaws dear boy… double ‘T’…. both capitalsಉ!….

ನರಸಿಂಹಯ್ಯ: What am I to do between tigers and tigressesoo!

ಗಂಡ: ಕ್ಷಮ್ಸು! dear boy! of course there is my dog-cart…
—————————————————————————-
ನರಸಿಂಹಯ್ಯ: Good God! ತಿರ್ಗೂ .dogಊ…!

ಗಂಡ: Dog ಅಲ್ಲ… dog-cartoo…horse and carriage…you know… what you
sircar-walas. I mean.car-walas, would call a two seaterಉ… on single horse-
powersಉ… nol a developing but a tiring engine as you go along… Two seaterಅಂದ್ರೆ,
ನೀನಾಯ್ತು ನನ್ನ worthy sister ಆಯ್ತು… can you manage to negotiate ribbons?

ನರಸಿಂಹಯ್ಯ: who is ribbons? ಇದೊಂದು ನಾಯೇ?

ಗಂಡ: : No! No! reins! ಲಗಾಮು you know…I mean, can you drive?

ನರಸಿಂಹಯ್ಯ: Of course, I can… ಅನ್ನು!

ಗಂಡ: ಹಾಗಾದ್ರೆ, ಒಂದೇ ನಿಮಿಷ್ದಲ್ಲಿ harness ಮಾಡ್ಕೊಂಡು ತಂದ್‌ಬಿಡ್ತೇನೆ… but what
about Tigersಉ?

ನರಸಿಂಹಯ್ಯ: What do you mean tiger again?
(running behind Subbu)
ಆ ಬಾಕ್ಲು ಹಾಕಿದ್ದೀಯಾ, ಸುಬ್ಬು?
(ಧೈರ್ಯವಾಗಿ ಮೊದಲಿದ್ದ ಜಾಗಕ್ಕೆ ಬರುತ್ತ)
yes, I Know …. ನಾನೇ ಬರೋವಾಗ ಹಾಕ್ದೆ…. what do you mean tiger again !?

ಗಂಡ: ಕ್ಷಮ್ಸು! dear boy! to make a short story longಉ, ಈ brutesಗ್ಳಲ್ಲಿ ಕೂಡ….
there is a sort of freemasonry… free ಏನು… brutesಗೆ… bound-masonry… ನಮ್ಮನೇಲಿ
four brutes ಇಧಾರೆ…four ಏ?… three and half or three and a quarter… I can’t tell
the proportion because, the littlest… bad grammar… dear boy, ಆದ್ರೆ best wordsಉ
Occasion ಗೆ (approaching the cradle) littlest of the four brutes, is getting bigger
everyday… ನಾನು , Tigerಉ, horseಉ… ಈ bruteletಉ …let ಏ ? Though I beat
you in our B.A… Narasim.. you went on your M.A…. naturally of course… ಕ್ಷಮ್ಸು
dear boy! You know I love you… ನಿನ್ನ English ಏ ಎಷ್ಟೇ ಆಗ್ಲಿ betterಉ – ನನಗೇನೋಪ್ಪ!
Adolfuss taught us better English than Denham did or Weir tried to do!… but
coming back… brute dimunitive ಏನು ? brute-let ಏ…. brute-kin ಏ? what
is it ?

ನರಸಿಂಹಯ್ಯ : ಹಯ್ಯೋ! Hang the brutekin… talk about Tigeroo!….

ಅಮಾವು: (ಒಳಗಿನಿಂದಲೇ ಥಟ್ಟನೆ )
Hang! what do you mean hang the brute-kin? ಯಾರನ್ನಂದದ್ದು ? Brute-kin ಅಂತ
ನನ್ನ baby! ಈ ಮಾತ್ಗಾನ Tiger ಕಿವೀಲಿ ಬೀಳ್ಬೇಕಂತೆ ಕಿತ್‌ ಹಾಕ್ಬಿಡತ್ತೆ ನಿಮ್ಮನ್ನ!…. ಛೂ
ಬಿಡೀಂದ್ರೆ… ಮೈ ಉರ್ಯುತ್ತೆ!!
—————————————————————

ನರಸಿಂಹಯ್ಯ : My God! ! ಕ್ಷಮ್ಸಿ! I meant that beautiful sweet scion of your
wonderful family! ಕ್ಷಮ್ಸು! ಸುಬ್ಬು ! But come back to Tigeroo….!

ಗಂಡ: ನೋಡು ನರಸಿಂಹ್ ! Between us brutesoo… meaning. ನಾನು Tigerಉ,
ನಮ್ಮ horseಉ and this bruteletಉ: … ನಾನು horseನ ನೋಡ್ಕೊಂಡ್ರೆ… tigerಉ
bruteletನ … ಇಲ್ಲ ನನ್ನ wifeಉ, dog-cartನ drive ಮಾಡ್ಕೊಂಡ್ಹೋದ್ರೆ… tiger
horseನ… ನಾನು bruteletನ;…. ಹೀಗೆ… a sort of brutal understanding between us:…..

ನರಸಿಂಹಯ್ಯ : ಈಗ…I want to go home… take my wife home. !

ಗಂಡ: Certainly. dear boy! that is the pointಉ… ನಾನು horseನ cartಗೆ hitch
ಮಾಡೋವಾಗ, Tigerಉ bruteletನ ನೋಡ್ಕೊಪಳ್ಳೋಕೆ. ವಳಕ್ ಬಂದ್ಬಿಡಕ್ಕೆ.. and you not
being also a bruteಊ… ಈ…hate at first sight ಅಂತ ಕೇಳಿಧೀಯಾ?… it is stranger
than love at first sight… ಆ holocaustoo ವೊದಗೀತು ನಿನಗೇಂತ..!

ನರಸಿಂಹಯ್ಯ : Is this the way you show your hospitality?

ಗಂಡ: No! No! hospitalityಗೆ?…. Cocoa is ready! but in showing you my
hospitality… I don’t want to convert my house into a hospitaloo!…. you see my fear…
ಇನ್ನು Ido-formoo… Carbolicoo… sticking-plasterಉ… lintಉ…. nuisance
you know… ಮುಂದಕ್ಕೆ trip to cool and salubrious coonoorಉ etc…

ನರಸಿಂಹಯ್ಯ: Good God!

ಗಂಡ: ಹೆದರ್ಬೇಡ dear boy ! ಇದಕ್ಕೆಲ್ಲ ಒಂದೇ ದಾರಿ… Now! where shall I put
you away?…ಎಲ್ಲಿ ಬಚ್ಚಿಡೋದು ನಿನ್ನ… ಆಂ !? Narasim, in your college days you were
a good bat in cricket ಅಲ್ಲೇ ?!

ನರಸಿಂಹಯ್ಯ: Yes! yes! I know I was a good bat… why, even now I am a
good bat… but what has that got to do with this?

ಗಂಡ: ಏನೂ ಇಲ್ಲ… ಹ್ಯಾಗಿದ್ರೂ good bat ನೀನು… if you can only manage to
hang by that roof like a good bat… ಅದಕ್ಕೆ ಏಣಿ ಬೇಕಾದ್ರೆ ತರ್ತೇನೆ … you see my
pointಉ… ನಮ್ಮ Tiger ಕೂಡ ಅಷ್ಟೆತ್ರ ಹಾರ್‌ಲ್ಲಾರ್ದು…

ನರಸಿಂಹಯ್ಯ : Me! Hang!! By that roof!!! Are you mad?

ಅಮ್ಮಾವ್ರು (ಅಲ್ಲಿಗೆ ಒಳಗಿನಿಂದ ಬಂದು) What not? ನೀವೇ ಹೇಳಿದ್ರಲ್ಲ… ‘I shall
fly’ಅಂತ… ಯಾಕಾಕ್ಕೂಡ್ದು?… Fly up to the roof: only don’t bring the roof down
on my baby’s cradle…

ನರಸಿಂಹಯ್ಯ : (ಕಿರಿಚುತ್ತ) Woman!! you will drive me mad!!!

—————————————————————————–

ಆಮ್ಯಾವು: ಆಯೋ!! ನಾಯಿ ಜೋಪಾನಾಂದ್ರೆ.. ಇವರ್ನ ಕಚ್‌ಬಿಟ್ಟು ಅದಕ್ಕೂ ಹುಚ್
ಹಿಡಿದ್ಬಿಟ್ಟೀತು !…

ಕಮಲು: I Think you are all mad! Let me speak! Bruin wavesoo ಅಂದ್ರಲ್ಲ!
ನಿಮ್ಮ ಮನೇಲಿ collar chainoo ಇಲ್ವೆ ಸರೋಜ ನಿಮ್ ನಾಯೀಗೆ ?

ಗಂಡ: Good Heavens! The very thing!… Fancy forgetting! (as he is rushing
out) Narasim! dear boy! Now that you are on the throneಉ will you… rule the
worldoo for a few minutesoo!!?

ನರಸಿಂಹಯ್ಯ: ಸುಬ್ಬೂ! close the door after you…. dont forget… Tiger… Before
any thing else. chain ಮಾಡೂ ಅದ್ನಾ… (Sottovoce) ಈ cursed dogsನ ಯಾಕೆ create
ಮಾಡಿದ್ನೋ ದೇವ್ರು….!?

ಅಮಾವು: ಯಾತಕ್ಕೆಹೇಳ್ಲೇ ?… to protect peopleಉ … ನಿಮ್ಗೂ Tigerಗೂ ಇರೋ
difference ಇಷ್ಟೆ… Tigeroo ನಮ್ಮನೆ out-siders ಗೆಲ್ಲ terroroo… ನೀವು ನಿಮ್ಮನೆ
insidersಗೆಲ್ಲ terroroo… that’s all the difference ಊ…!?

ನರಸಿಂಹಯ್ಯ : (Hysterically)
Go on! Go on!! what with you and your horrible husbandoo and Tigeroo…
ಕವೆಗೋಲಿನ್ಮಧ್ಯೆ ಸಿಕ್ಕೊಂಡು ಕಣ್‌ ಕಣ್‌ ಬಿಡ್ತಿರೋ ನನ್ನ… go On! go on!!…. ಲೇ! ನೀನೂ
go On ಏ! ಲೇ ನೀನೂ go on ಏ!!… ಊಂ! ಆಕೆ ಕಡೇಗೆ ಸೇರ್ಕೊಂಡೂ, ನೀನೂ go
on ಏ!.. Subboo! Have you chained that demon yet?!

ಗಂಡ: (ನೇಪಥ್ಯೆ) certainly dear boy!

ನರಸಿಂಹಯ್ಯ : I shall not stop in this room for a minute.. ನೀನ್ ಬೇಕಾದ್ರೆ
ಇದ್ಕೋ….

ಕಮಲು: ಹಯ್ಯೋ , ನಾನೇನೂ ಹೇಳ್ಲಿಲ್ಲಾಂದ್ರೆ ….

ನರಸಿಂಹಯ: ಗೊತ್ತೆ! ಗೊತ್ತೇ !! worst educating womenoo… No respect for
men at all!… This is no place, for me… a man…

(Rushes out)

ಅಮಾವ್ರು: ಓಹೋ ! Man, ಕೇಳಿದ್ಯಾ ಕಮಲೂ! worst of education ಅಂತೆ far
Womenoo… proverb ಜ್ಞಾಪಕ್ವಿಲ್ವೆ? ‘ignorance is bliss where it is folly to be wise’
ಅಂತ? ನಾವು ignoranceನಲ್ಲಿ ಮುಳ್ಗಿರೋದು ಆ brutesಗೆ blissoo… ನಾವು wise ಆಗೋ
ಹಾಗೆ ನಮ್ಮನ್ನ educate ಮಾಡೋಕೆ chance ಕೊಡೋದು, ಅವರ folly ಅಂತೇ… ಕೇಳಿದ್ಯಾ?

ಕಮಲು : ಕೇಳಿದೆ….

ಅಮ್ಮಾವ್ರು: Serious ಆಗಿ ಕೇಳ್ತೇನೆ, ಕಮಲಾ ಇನ್ನೆಷ್ಟು ದಿನಾಂತ ಹೀಗೆ suffer
ಮಾಡ್ತಿರೋದು?

——————————————————————————————

ಕಮಲು; ಹ್ಯಾಗೆ suffer ಮಾಡ್ತಿರೋದು ?

ಅಮ್ಮಾವ್ರು: ನಿನ್ good looksಓ goneಊ ! ನಿನ್ನ hairಓ unkeptoo! ಇದೇನು ಈ
ಹರಕ್ಲು ಸೀರೆ?!

ಕಮಲು: ಪಯೋ! ಸರೋಜ! ಇದೆಲ್ಲ ಗಮನಿಸೋಕೆ ಬಿಡ್ವೆಲ್ಲಿದೆ ನನ್ಗೆ? ನನ್ಗೆ ತಾನೆ?
ಆಗ್ಲೀ…ಯಾವ motherಗೆ ತಾನೇ ಆಗ್ಲೀ, ಗಮನಿಸೋಕೆ, ಮನೇಲಿ ಮಕ್ಕಳಿರೋವಾಗ, ಸೀರೇನೂ
ಜಡೆನೂ ಗಮನಿಸೋಕೆ ಬಿಡ್ವೆಲ್ಲಿದೆಮ್ಮಾ?

ಅಮ್ಮಾವ್ರು: ಹಾಗಾದ್ರೆ ನಿನ್ನ ಏಳು ಮಕ್ಕಳ್ನ ಗಮನಿಸೊದೇನೆ ನಿನ್ನ lile’s
workoo…enjoymentoo?… ಇದೇನೇ ನಿನ್ನ ambitionoo!?

ಕಮಲ: ಹೌದು ಸರೋಜ…. ನನ್ನ ಮತ್ತು ಮಕ್ಕಳೂ , ಮುಂದಕ್ಕೆ three of them
fathersoo, four of them motchersoo worldನಲ್ಲಿ ಆಗ್ಬೇಕೂಂಬೋದನ್ನ ಮರೀದೆ, ಹಗ್ಲೂ ರಾತ್ರಿ
ಅದಕ್ಕವರನ್ನ ತಯಾರ್ಮಾಡೋದೇ ನನ್ನ life’s ambitionoo!! ಈ ಗಲಾಟೇಲಿ, … ಈ ನನ್ನ
ವಯಸ್ಸಲ್ಲಿ, ನನ್ ಸೀರೆ ಹರಕ್ಲೋ ಹೊಸ್ದೋ, ನನ್ನ ಬೈತಲೆ ನೆಟ್ಟಗೋ ಸೊಟ್ಟಕ್ಕೋ ಇದೆಲ್ಲ
ಗಮನಿಸೋಕೆ ಬಿಡ್ವೆಲ್ಲಿಧೆಯಮ್ಮಾ? ಯಾಕೇ ? ನಿನ್ನ ambition ಏನೂ ? ನಿನ್ನ life’s workoo
ನಿನ್ನ enjoymentoo ಏನೂ ??

ಅಮ್ಮಾವ್ರು: ಏನು? ನನ್ನ life’s workಉ ! ನನ್ನ enjoymentಉ! ನನ್ನ ambitionಉ !!
ಹೀಗೆ ಹೇಳಿದ್ರೆ ಏನು ಹೇಳೋದು ಕಮಲಾ?!

ಕಮಲು: ಏನೂ ಹೇಳೊದಕ್ಕಾಗೊದಿಲ್ಲ ನಿನ್ ಕೈಲಿ ಗೊತ್ತು… ನಾನ್ಹೇಳ್ಳೆ?

ಅಮ್ಮಾವ್ರು: ಹೇಳು! ಹೇಳು !

ಕಮಲು: ಈಗ್ನೋಡು ಸರೋಜ ನಾವಿಬ್ರೂ collegeನಲ್ಲಿ friends ಆಗಿದ್ದು, ಇಬ್ರೂ
ಮದ್ವೆ ಮಾಡ್ಕೊಂಡು ಬೇರ್ಬೇರೆ ಆಗ್ಹೋದಾಕ್ಷಣ್ವೇ…. ನಿನ್ನಲ್ಲಿ ನನಗಿರೋ loveಊ… interestoo
ಕಮ್ಮೀ ಆಗ್ತ ಬಂತೂಂತ ತಿಳ್ಕೊಂಡ್ಯಾ … ನಿನ್ನ Careerನೆಲ್ಲ college daysನಲ್ಲಿ ನನ್ನ little baby
sister ನ್ಹಾಗೆ, ಹ್ಯಾಗೆ ಗಮನಿಸ್ಕೊಳ್ತಿದ್ನೋ, ಹಾಗೆ ಈಗ್ಲೂನೂ ಗಮನಿಸ್ತಾಸಲೇ ಇದೇನೆ… ನಿನ್ನ
meetitigsoo… ನಿನ್ನ lectureoo…..ನಿನ್ನ articlesoo Paperನಲ್ಲಿ ಒಂದ್ಬಿಡ್ದೆ ಓದ್ತಾಲೂ ಇದ್ದೇನೆ…
ಈಗ್ನೋಡು! … ಆಕೆ ಯಾರು ?

ಅಮ್ಮಾವ್ರು: ಯಾವಾಕೆ ?

ಕಮಲು: ನಿಮ್ಮ associationನಿಂದ resign ಮಾಡಿಸ್ದ್ಯೆಲ್ಲ ಆಕೆ… ಆಕೆ brother ಕೂಡ
ಎಲ್ಲೋ ಕೆಲಸ್ದಲ್ಲೂ ಇಧಾನೆ… small peculiar manಉ ..

ಅಮ್ಮಾವ್ರು: Peculiarಉ? ಹ್ಯಾಗೆ peculiarಉ?

ಕಮಲು: ಹ್ಯಾಗೆ? ನಮ್ಮ ರಾಮು ಇಧಾನೆ ನೋಡು – ನನ್ನ first boyಇ… ಅವ್ನು
ಓದೊದು fourth formಉ… ಓದೋದೇನು-Strictly ಓದ್ದೇ ಇರೋದು – fourth formಉ… ಅವ್ನಿಗೆ
booksoo ಅಂದ್ರೆ ಆಗೋದಿಲ್ಲ… ಅವ್ನ life’s ambitionoo ಊರ್ನಲ್ಲಿರೋ Cinemaಲಿ ಒಂದು
—————————————————————————-

filmoo ಬಿಡ್ದೇ ನೋಡೋದು… ಅದ್ರಲ್ಲಿ ಯಾವಾದ್ರೂ ಅವನ್ಮನಸ್ಸಿಗೊಪ್ತೋ, ನನ್ನ ಎಳಕೊಂಡ್ಹೋಗಿ
ಅದನ್ನ ತೋರ್ಸೋವರ್ಗೂ ಅವನ್ಮಸ್ಸಿಗೆ ಶಾಂತಿ ಇಲ್ಲ… ಅವನ film divinity… ದೊಡ್ಡ Specks
ಹಾಕ್ಕೊಂಡಿರೋ comedian ಒಬ್ಬ…. ಹೆಸ್ರೇನೂ?! Harold Lloyd!!

ಆಮ್ಮಾವ್ರು: Harold Lloydoo! ಅವನಲ್ಲಿ ಬಂದ ಇಲ್ಲೀ?

ಕಮಲು: ಎಲ್ಲಿ ಬಂದ್ನೇನೂ?… ಈ peculiar man ಇಧಾನಲ್ಲಾ ಅವನ್ನೋಡಿದ್ರೆ .. ಅವನ
ಜ್ಞಾಪ್ಕ ಬರುತ್ತೆ-ಆತನ Sisterನೇ ನೀವೆಲ್ಲ ವದ್ದು ಓಡ್ಸಿದ್ದು ನಿಮ್ಮ associationನಿಂದ…. ಯಾಕೇಂತ
ಕೇಳೇದು ನಾನು… ಅವಳ್ನ resign ಮಾಡ್ಸಿದ್ದು?

ಅಮ್ಮಾವ್ರು: Harold Lloyd ! ದೊಡ್ಡ spectacles! ಓ! I know the creature now!
ಆದೇ? ಇಲ್ಬಂದಿತ್ತು ನಿನ್ನೆ on behalf of his sisteroo: ಅಬ್ಬ್ಹ! ಅದೂ ಒಂದು ಗಂಡ್ಸೇ !…
spineless wormಉ … ಬೆನ್ಮುರಿದ ಬಸವನ್ಹುಳು.. ಆತನ Sisterನೇ ? ಹೂಂ! ಅವ್ಳ attitude
ಊ Home ಬಿಟ್ಟು ಓಡ್ಹೋಗೀ… woman’s responsibilities of wife-hood and mother-
hoodನ ತಪ್ಪಸ್ಕೊಂಡು ಕುಣಿದಾಡೊಕೆ! ಆದಲ್ಲಿ ಸರಿಹೋಗುತ್ತೆ ನಮ್ಮ associationನಲ್ಲಿ?…
ನಾವು ಈಗ fight ಮಾಡ್ತಿರೋದು ಮನೇಲಿದ್ಕೊಂಡು equal rights with husbandsನೂ
assert ಮಾಡ್ಕೊಂಡು, woman’s responsibilities of wife-hood and mother-hoodನ
Shirk ಮಾಡ್ಡೆ ವಹಿಸ್ಕೊಳ್ಳೋಕೆ!….

ಕಮಲ: ವಹಿಸ್ಕೊಳ್ಳೋಕೊ ನಡ್ಸೋಕೋ ? ಕೋಪಸ್ಕೋಬೇಡ… ನೀನು ನಿನ್ನ homeನಲ್ಲಿ
ಇದ್ಕೊಂಡಿರೋದೇನೂ ಒಪ್ಕೊಂಡೆ, equal nightsನ asset ಮಾಡ್ತಿರೋದ್ನ, more than
ಒಪ್ಕೊಂಡೆ: … ಆದ್ರೆ Wifehold and motherhood responsibilities ಅಂದ್ಯೆಲ್ಲಾ… ಆ
motherhoodನ ಜವಾಬ್ದಾರಿ ಏನೀಗ ವಹಿಸ್ತಿರೋದು ನೀನು.. practical ಆಗಿ…?

ಆಮ್ಮಾವ್ರು: ವಹಿಸ್ದೆ ಏನಿರೊದು ಈಗ? ಅಡಿಗೆ ನಾನೊಂದ್ಸರ್ತಿ ಇವ್ರೊಂದ್ಸರ್ತಿ… household
Workಉ ನಾನೊಂದು Workoo ಇವ್ರೊಂದು workoo… ಮಿಕ್ಕದ್ದೆಲ್ಲ ಹೀಗೇ!

ಕಮಲು: (interrupting) ನಾನ್ಹೇಳಿದ್ದು motherhood ಅಂದ್ಯಲ್ಲಾ…. ಆ ಜವಾಬ್ದಾರಿ…
ಅದಕ್ಕೆ equal rights ಎಲ್ಲಿಂದ ಬಂತು?…. rightsoo, qualificationsoo ನಿನಗಿರೋ ಹಾಗೆ
ನಿನ್ನ husbandಗೆ ಎಲ್ಲಿಧೇ?

ಅಮ್ಮಾವ್ರು: (perplexed} motherhood! ಅಯ್ಯೋ ! “ಇದೇನು quibbling- ಕಮಲೂ ?…
after all motherhoodನ responsibility ಏನು?… ಮಗು halthy ಆಗಿರೋದ್ನ ನೋಡ್ಕೋಬೇಕು…
ಅದರ feedingಉ ಅದರ restoo…ಅದರ growthoo! fourಓ fiveಓ, six yearsಓ,
ನೋಡೋದು … ಆ ಮೇಲಿದ್ದೇ ಇದೆ… ಗಂಡ್ಸಾದ್ರೆ ಅವ್ನಾಯ್ತು ಅವ್ನ master ಆಯ್ತೂ… ಅವನ
ಸ್ಕೂಲು, ಅವನ collegeಉ, careerಉ, ಒಂದು suitable marriageಉ, suitable
appointmentಉ… ತೀರ್ತು!… ಹೆಣ್ಣಾದ್ರೆ, two more years at home… ಆಮೇಲೆ ಅವಳ
ಸ್ಕೂಲು;… ಮದ್ವೆ: ಗಂಡ Senisible ಆಗಿದ್ರೇ ಮುಂದಿನ education 2-3 ವರ್ಷ… ಇಲ್ಲಾ,
———————————————–

ಅವನು orthodox fool ಆಗಿದ್ರೆ, ಅದೂ ಇಲ್ಲ. ಇದ್ರ ಮೇಲೆ ಏನು responsibility
motherhoodಗೇ ? Practical ಆಗಿ ಏನ್ನಡಸ್ತೀಯಾಂತ ನನ್ಕೇಳ್ತೀಯಲ್ಲಾ; ನನಗಿರೋದು ಒಂದು
baby… ಇನ್ನೂ ಅಮ್ಮಾ, ಅಮ್ಮಾ’ ಅಂತಾನೆ…. ಅದಕ್ಮೇಲೆ ಒಂದ್ಮಾತೂ ಇಲ್ಲ… ಇನ್ನವನು
ಕಿರ್ಲಿದಾಗ ಹಾಲು ಕೊಡೋಕೆ… ಅವ್ನು ಆತ್ತಾಗ ಬೊಂಬೆ ಆಡ್ಸೋಕೆ ತೊಟ್ಲು ತೂಗೊಕೆ, ಆಯಾ
ಒಬ್ಳಿದಾಳೆ, ಹಗ್ಲೂ ರಾತ್ರಿ… ಇನ್ನವನ amusementsಗೆ ಇವ್ರು, Tigerಉ… ಇದ್ಕೇಳು ಕಮಲೂ!
ಬಂದೋರ್ಕಾಲು ಕಚ್ಚೋಕೇಂತ ಬಾಯ್ಬಿಡೋ Tigerನ ಬಾಯಲ್ಲಿ ಕೈಯಿಡೋದೇ ಅವನಿಗಾನಂದ,…
ಅದಕ್ಸರ್ಯಾಗಿ ಆ brule ಓ ಮೊಣಕೈನವರ್ಗೂ baby ಕೈನ ಬಾಯ್ಲಿಟ್ಕೊಂಡು ಕಣ್ ಕಣ್ ಬಿಡ್ತಾ
ನಿಂತಿರೋದೆ. ಇದಕ್ಕಾನಂದ… ಈ ಮಧ್ಯದಲ್ಲಿ… ನನ್ನ public activitieನಲ್ಲೇ ನಾನು absorb
ಆಗಿರೋವಾಗ, ಅದಕ್ಕೆ ಹಾಲ್ಕೊಡೋದು, ಅದ್ರ ತೊಟ್ಟ್‌ಲಾಡ್ಸೋದು, ಅದನ್ನ ಆಡಸ್ಕೊಳ್ಳೋದು …
ಇದು ನಾನು ಮಾಡಿದ್ರೇನು… ಆಯಾ ಮಾಡಿದ್ರೇನು… ಯಾರು ಮಾಡಿದ್ರೇನು ? ಈಗ ತಾನೇ
ಏನು, ಇನ್ನು six years ತಾನೇ ಏನು?… ಆಮೇಲೆ ಅವನಾಯ್ತು… ಆವನ teacherಉ…
schoolಉ… etc… ಆಗೋಯ್ತೆ ನಿನ್ನ motherhoodoo?: ಸದ್ಯಕ್ಕೆ at least…?

ಕಮಲು : ನೀನು ಏನು woman ಆಗಿ ಬೆಳದ್ರೂನು ಅಬ್ಬ! how big and beautiful you
are !! ಆದ್ರೂನೂ you are the same old baby… ನಾನು nurse ಮಾಡೀ kiss ಮಾಡೀ…
ನಿನ್ನ home workನೆಲ್ಲ ನಿನ್ಕೈಲಿ ಮಾಡಿಸ್ತಿದ್ದ same old baby!… ನಿನ್ನ public activitiesoo!!
ಇಷ್ಟು lecture ಕೊಡೋ ನೀನು ಹೇಳೋ ಹಾಗೆ motherhoodನ, responsibilitiesoo
ಅಂದ್ರೆ… ಮಗೂನ್ ಹೆರೋದು..ಅದು ಕಿರ್ಲೋವಾಗ ಹಾಲು ಕೊಡೋದು… ಅದನ್ನಾಡ್ಸೋಕೊಬ್ಳು
ಆಯಾ… ನಗ್ಸೋಕೊಂದು ನಾಯಿ…ಬೆಳದ್ಮೇಲೆ… ಬೆತ್ತ ವಂದ್ಕೈಲಿ book ಇನ್ನೊಂದ್ಕೈಲಿ
ಇಟ್ಕೊಂಡು…. ಸಂಬ್ಳಕ್ಕೇಂತ ಪಾಠ ಹೇಳ್ಕೊಡೋ ಮೇಷ್ಟ್ರು ಒಬ್ಬ… ಮುಂದಕ್ಕಾ ಮಗೂನ ಹಣೇ
ಬರಹ ಅದ್ರ ಕೈಲೇ !; …ಅವನು thief ಆಗ್ತಾನೋ Saint ಆಗ್ತಾನೋ, ಇವೆಲ್ಲ ನಿನ್ನ ಜವಾಬ್ದಾರಿ
ಅಲ್ಲ ಅಲ್ವೆ! Brute ಆಗ್ತಾನೋ… ಇಲ್ಲ beautiful husbandoo… patient parentoo…. decent
citizenoo ಆಗ್ತಾನೋ, ಇದೆಲ್ಲ ನಿನ್ನ ಜವಾಬ್ದಾರಿ ಅಲ್ಲ ಅಲ್ವೇ!? ಹಯ್ಯೋ! ಸರಜಾ! ‘ಅಮ್ಮಾ,
ಅಮ್ಮಾ ಅನ್ನತ್ತೆ ನನ್ನ baby’ ಅಂದ್ಯಲ್ಲಾ… ದಿವಸದ ಇಪ್ಪತ್ನಾಲಕ್ಕು ಘಂಟೇಲಿ ಹತ್ತು ಗಂಟೆ ಹೊತ್ತು
ನಿದ್ದೆ ಮಾಡುತ್ತೋ ಏನೋ; ಮಿಕ್ಕ ಹದ್ನಾಲಕ್ಕು ಗಂಟೆ ಕಾಲ್ದಲ್ಲಿ, ನಿನ್ನ ಮಖಾನ ಅರ್ಧ ಗಂಟೆ
ಹೊತ್ತು ಕೂಡ ನೋಡೋದಿಲ್ಲ ಅದು!… ಅದಕ್ಕೆ “ಅಮ್ಮಾ, ಅಮ್ಮಾ” ಅಂತ ಹೇಳ್ಕೊಡೋಳು
ನಿನ್ನ ಆಯಾ … ಅದಕ್ಕೆ ಹಸಿವಾದಾಗ Bengers food ಓ… Mellin’s foodಓ… Glaxoನೋ
ಕೊಟ್ಟು ಹಸಿವೆ ತೀರ್ಸೋಳು ನಿನ್ನ ಆಯಾ! ಅದಕ್ಕೆ ಗೊಂಬೆ ತೋರ್ಸಿ ತೊಟ್ಲು ತೂಗಿ, ಮಲಗ್ಸೋಳು
ನಿನ್ನ ಆಯ!… ಹೀಗಿರೋವಾಗ ಆ ಮಗು “ಅಮ್ಮ ಅಮ್ಮಾ” ಅನ್ನೋವಾಗ್ಲೆಲ್ಲಾ ಆ ಆಯಾನ
ಮುಖವೋ ಇಲ್ಲ ನಿನ್ಮುಖವೋ ಅವನ ಚಿಕ್ಕ mindನಲ್ಲಿ ಹೊಳೆಯೋದು ? … ಆವನ baby
mindನಲ್ಲಿ ನೀನು mother ಓ… ಇಲ್ಲಾ… ಆ ಸಂಬ್ಳಕ್ಕಿರೋ ಆ servant womanoo
motherಓ… ಆಂತ ಕೇಳಿದ್ರೆ, ಆ little man in the making ಏನ್ಹೇಳೀತು.., ಇನ್ನಾರು
ವರ್ಷದ್ವರ್ಗೂ ಹೀಗೆ ಆಯಾ ಕೈಲಿ ಅಂದ್ಯಲ್ಲಾ ಆ ಮಗೂನ:? .. ಏನು Whole of Indiaನೇ
ಮಹಾತ್ಮ Gandhi’s non-violence policyನ ಹೊಗಳಿದ್ರೂನೂವೆ, ಯಾವ ಮಹಾ ತಾಯೀನೋ
… ಆತ ಮಗು ಆಗಿದ್ದಾಗ “ಚೀಮೆಗಳನ್ನ ಕೊಲ್ಲಬಾರ್ದು”… ನೊಣಗ್ಳನ್ನ ಹೊಡೀಬಾರ್ದು”….

——————————————————————-

“ನಾಯಿ ಬೆಕ್ಕಗಳನ್ನ ಒದೀಬಾರ್ದು”…. “ಜವಾನನ್ನ ಬೈಬಾರ್ದು” ಅಂಬೊದ್ನೆಲ್ಲ,
ವೊದ್ದೋ-ಮುದ್ದಿಟ್ಟೋ ಹೊಡ್ದೋ-ಬಡ್ದೋ…ಬೈದೋ ಇಲ್ಲಾ ಬಾಚಿ ತಬ್ಕೊಂಡೋ… ಹ್ಯಾಗೋ,
ಆ ಮಗೂ ಮನಸ್ನಲ್ಲಿ ಇಳಿಸ್ಬಿಟ್ಳೊ… ಈಗ Mother Indiaಗೆ freedom ಬರೋಕೆ ದಾರಿ
ಒಂದೇವೊಂದು “ಅಹಿಂಸಾ ಪರಮೋ ಧರ್ಮಃ” ಅಂತ ಆತ proclaim ಮಾಡ್ತಿಧಾನೆ
ಪ್ರಪಂಚಕ್ಕೆಲ್ಲಾ…, ಆತನ policy ಆತನ ಮಹಾತ್ಮೇ ಅಂತ ಎಲ್ರೂ ಹೇಳಿದ್ರೂನ… ನಮಗ್ಗೊತ್ತು…
womenಗೆ… early childhoodನಲ್ಲಿದ್ದ mother’s influenceಎ later manhoodನಲ್ಲಿ
man’s characteroo… destiny ಅಂತ… ಇಲ್ನೋಡು ಸರೋಜ! God gave you that child!
ಮುಂದಕ್ಕವನು ಏನಾಗ್ತಾನೋ… good manಓ… bruteಓ… scoundrelಓ saintಓ self-
centered pigಓ self-sacrificing patriotಓ.. ಯಾವುದಾಗ್ತಾನೋ ಅದೆಲ್ಲ ನಿನ್ನ ಕೈಲೇ
ಇಧೆ… ಅಮ್ಮಾ ಅಮ್ಮಾ ಅನ್ನೋದ್ನ ಈಗ್ನಿಂದ ಆ master ಕೈಲಿ educate ಮಾಡೋಕೆ ಕಳ್ಸೋ
ಈ ಆರೇಳು ವರ್ಷವಲ್ಲಿ ಇದಾಗ್ಲಿ ಇಲ್ಲಾ ಅದಾಗ್ಲಿ decide ಮಾಡೋ ಜವಾಬ್ದಾರಿ ಎಲ್ಲಾ
ನಿನ್ನ ಕೈಲೇ ಇಧೆ…!!

ಅಮ್ಮಾವ್ರು: {suddenly looking up ಎಲ್ಲ ನನ್ನ ಕೈಲೇ ? ಹಾಗಾದ್ರೆ schooIsoo,
colligesoo, “ನಾವು ಮಾಡ್ಥೇವೆ ಮಾಢ್ತೇವೆ” ಅಂಬೋ educationನ ಅರ್ಥವೇನು? What are
schools and colleges for. but to educate children?… ಬೇರೆ ಏನು function ಅವುಗಳ್‌ಗೆ?

ಕಮಲು: To educate pupils of course…!

ಅಮ್ಮಾವ್ರು: (interrupting) ಮತ್ತಿರ್ಗಿ ನೋಡು ನಿನ್ನ quibblingoo!?

ಕಮಲು: ಸ್ವಲ್ಪಿರು… quibblingಊ: ಇಲ್ಲ, ಏನೂ ಇಲ್ಲ… educate ಅಂದ್ರೇನು?-dictionary
ಇಧೆರ್ಯ? derivation ನೋಡೋಣ- ಹುಂ… ಇಲ್ನೋಡು … ‘E’ out… ‘Duco’….. to lead
to Iead out…. ಪೂರ್ವಜನ್ಮದ ಪ್ರಭಾವದಿಂದ್ಲೋ ಗೊತ್ರದಿಂದ್ಲೋ … ರಕ್ತದಿಂದ್ಲೋ…. ಇಲ್ಲಾ..
ಅಮ್ಮಾ ಅಮ್ಮಾ ಅಂತ ಬಾಯ್ಬಿಟ್ಟಾಗ್ನಿಂದ ಸ್ಕೂಲಿಗ್ಬಂದ್ಸೇರೋವರ್ಗೂ, ನಾನ್ಹೇಳಿದ್ಹಾಗೆ “ಸುಳ್ಳು
ಹೇಳಬಾರ್ದು”… “ಸುತ್ಮುತ್ಲೂ ಇರೋರ್ನ ಹಿಂಸಿಸಬಾರ್ದು”.. “ಎಲ್ಲರಿಗೂ ಉಪಯೋಗವಾಗಿರಬೇಕು”
ಅಂತ, ಹೀಗೆಲ್ಲ ತಾಯಿ ಆದವಳು ವಳಗಿಳಿಸಿರೋ ಗುಣಗಳ್ನ, ಸ್ಕೂಲುಗ್ಳು ಕಾಲೇಜುಗ್ಳು,
ಹೊರಕ್ಕೆಳ್ದು. ಸ್ಕೂಲಿಗೆ ಬಂದ್ಮಕ್ಳು colleg¢ ಬಿಟ್ಟು ಹೊರಗ್ಹೋರ್ಡೋವಾಗ, ಮನೆಗೂ,
ಸಮಾಜಕ್ಕೂ ದೇಶಕ್ಕೂ ಉಪಯೋಗಿಗ್ಳಾಗಿರೋ ಹಾಗೆ ಮಾಡೋದೇ educationಉ !..
childhoodನಲ್ಲಿ neglect ಮಾಡಿ spoil ಮಾಡಿ… bundles of seltīshness ಆದ ಮಕ್ಕಳ್ನ
ಸ್ಕೂಲ್ಸಿಗೆ ಕಳ್ಸಿದ್ರೆ, … ಆ schoolsoo ಎಂಥ perfect system of cducationನ adopt ಮಾಡಿದ್ರೆ,
ತಾನೇ ಏನೂ? ಒಂದು ಚೆಂಬೂನೂ, ಒಂದು ಬಿಂದ್ಗೇನೂ ಬೀಳದ ಭಾವೀಲಿ ಎಂಥಾ ಪಾತಾಳ
ಗರ್ಡೀನ ಹಾಕಿ ಎಳದ್ರೂನೂ ಹ್ಯಾಗೆ ಒಂದ್ಪಾತ್ರೇನೂ ಹೊರಬೀಳೋದಿಲ್ವೋ ಹಾಗೆ ಮನೇಲಿ
spoilt ಆದ ಈ ಮಕ್ಕಳ selfishness ಹೊರಬಿದ್ದೀತೇ ಹೊರ್ತು… ಇಲ್ಲದ ಗುಣಾನ ಎಲ್ಲಿಂದ
ತಂದು ಹೊರಗ್ಹಾಕ್ಯಾರು,.. mastersoo… Professorsoo ?! ವೊಟ್ನಲ್ಲಿ ಹೇಳ್ತೇನ್ಕೇಳು,
ಸರೋಜ! … ನಮ್ಮ womenನ function ಏನು… ಹೆಂಗ್ಸಾಗ್ಹುಟ್ಟಿದ್ದಕ್ಕೆ? ನಮ್ಮ instinct
ಹೇಳತ್ತೆ. ಇಲ್ಲಿ (touching her heart)… mothers ಆಗೋಕೆ ಅಂತ. therefore essentially
———————————————————————–

Wivesoo…. ನಿನ್ನ people ಎಲ್ಲಾ. intellectualoo… richoo… aristo-craticoo… ನಿನ್ನ
motheroo ನಿನ್ನ schoolಗೆ ಕಳ್ಸಿದ್ದು brilliant careerಗೆ… accomplishmentsಗೆ ಅಲ್ವೇ ?… ನನ್ನ
mother ನನ್ನ scholಗೆ ಕಳ್ಸೋವಾಗ ಕೇಳ್ದೆ… “ನೀನು ಕಲಿಯದ ವಿದ್ಯಾ ನಾನು schoolನಲ್ಲಿ
ಕಲ್ತು ನಿನಗಿಂತ ನಾನೇನು ಹೆಚ್ಚಾಗಾಗ್ಬೇಕಮ್ಮಾ”ಂತ ಕೇಳಿದ್ದಕ್ಕೆ, ನಮ್ಮಮ್ಮ… “ಕಮಲೂ ನನಗಿಂತ
ನೀನು ಹೆಚ್ಚಾಗಾಗ್ಲೇ ಆಗ್ತೀಯ, ನಾನೋ ಪೆದ್ದು… ನನಗಿಂತ್ಲೂ ಪೆದ್ದಾಗಿದ್ದ ನಮ್ಮಮ್ಮ, ನಿನ್ನ
ಇಷ್ಠರಮಟ್ಟಿಗೆ ಬೆಳ್ಸೋ ಹಾಗೆ ನನ್ನ ಮಾಡಿದ್ಮೇಲೆ, ನೀನು ವಿದ್ಯಾವಂತಳಾದ್ರೆ, ನಾನು ನಿನ್ನ
ಬೆಳೆಸಿದ್ದಕ್ಕಿಂತ ಚೆನ್ನಾಗಿ ನೀನು ನಿನ್ಮಕ್ಕಳ್ನ ಬೆಳ್ಸೋ ಜಾಣ್ತನ ನಿನ್ ಗೆ ಬರುತ್ತೆ: ಇನ್ಮುಂದಕ್ಕೆ ನೀನು
ನಿನ್ಮಕ್ಕಳ್ನ ವಿದ್ಯೆಗೆ ಹಾಕಿದ್ರೆ ಅವ್ರು ಅವ್ರ ಮಕ್ಕಳ್ನ ನಿನಗಿಂತ್ಲೂ ಚೆನ್ನಾಗಿ ಸಾಕಿ ಬೆಳಸ್ತಾರೆ ಅನ್ನೋ
ಧೈರ್ಯದ ಮೇಲೆ ನೀನು ಸ್ಕೂಲಿಗೆ ಹೋಗ್ಲೇಬೇಕೂಂತ ಕಳಿಸ್ತಿರೋದು ನಿನ್ನ” ಅಂತ ನಮ್ಮಮ್ಮ
ನನ್ನ schoolಗೆ ಕಳ್ಸಿದ್ದು. ಆದ್ರಿಂದ್ಲೇ ಸರೋಜ! ನಾನು schoolನಲ್ಲಿ ಹೆಜ್ಜೆ ಇಟ್ಟಾಗ್ನಿಂದ, “I shall
be a better mother to my children than my mother, who never went to school,
was to me” ಅಂಬೋ idea ಮೊದ್ಲೇ ನನಗಿತ್ತೋ, woman’s educationನ purpose
homeಗೆ supplement ಮಾಡೋಕೇ ಹೊರ್ತು, homeನಿಂದ alienate ಮಾಡೋಕಲ್ಲ,
ಅಂಬೋ ಅಭಿಪ್ರಾಯದ ಮೇಲೇ ನಾನು ನನ್ನ educationನ ಅಷ್ಟು ಆಸೆಯಿಂದ complete
ಮಾಡಿದ್ದು.

ಅಮ್ಮಾವ್ರು: ಹಾಗಾದ್ರೆ … out-side the home, function ಇಲ್ವೆ womanಗೆ educated
womanಗೆ?… service to the world ಏನೂ ಇಲ್ವೆ ?

ಕಮಲು: ಇಧೆ.! ಇಲ್ದೆ ಏನು !… ಆದ್ರೆ brutal father ಆಗಿಯೂ careless and frivolous
mother ಆಗಿಯೂ ಆಗಿ, ಮುಂದೆ ಬರೋ ಅಪಾಯಕ್ಕೆ ಮನೆ ಮಕ್ಕಳನ್ನು ಗುರಿಮಾಡಿಟ್ಟು, worldಗೆ
ಮಾಡೋ serviceoo service ಅಲ್ಲಾ, disserviceಉ! ಹೊರಗೆ ನೀನು ನಿನ್ನ meetingsನಲ್ಲಿ
“ನಾನು educated Womanoo…. ನನ್ಮಾತು ಕೇಳಿ … ನೀವೆಲ್ಲ ನನ್ನ ಹಾಗೆ educated
ಆಗ್ಬೇಕು-ಮನೇಲಿ ಇದ್ಕೊಂಡು -wifehood and motherhood responsibilitiesನ shirk
ಮಾಡ್ದೆ ವಹಿಸ್ಕೊಂಡು…dutiful wife ಆಗಿಯೂ, kind and wise mother ಆಗ್ಯೂ ಇರ್ಬೇಕು…
ಇದ್ನೆಲ್ಲ ತಪ್ಪಿಸ್ಕೊಂಡು-ಈಗ್ನೀನು dismiss ಮಾಡಿದ್ಯಲ್ಲ ಆ ಮೆಂಬರಿನ್ಹಾಗೆ-ಕುಣಿದಾಡ್ಬಾರ್ದು ಅಂತ
ಸಾರ್ತಿರೋದು, ಊರಲ್ಲೆಲ್ಲಾ ನೀನು ನಿನ್ನ meetingನಲ್ಲಿ… ಇಲ್ಲಿ ಮಕ್ಕಳು ಅಮ್ಮಾ ಅಮ್ಮಾ …ಅಮ್ಮಾಂದ್ರೆ
ಆಯಾ … ಆಡ್ಸೋದು …tigeroo…. ಆಣ್ಣಾ ಅಣ್ಣಾಂದ್ರೆ… ನಿನ್ನಾಯೀನ ನೋಡ್ಕೊಳ್ಳೋ ಹುಡ್ಗ…
ಹೀಗೆ ಬೆಳ್ದು petted, selfish. spoilt childಆಗಿ… schoolನಲ್ಲಿ snoboo prigಆಗಿ, brutal
husbandloo.careless fatheroo….. dishonest citizenooಆಗಿ ಬೆಳೀತಿರೋದು ಇವನು! ಇನ್ನು
ಮುಂದಕ್ಕೆ ನಿನ್ನ ಮುಪ್ಪಿನಲ್ಲಿ, ನೀನು ಈಗ ನಿನ್ಮಗೂಗೆ ತೋರಿಸ್ತಿರೋ Crirminal neglectನ
ಅವ್ನು ತೋರ್ಸಿ ನಿನ್ನ ಒಂದ್ಮೂಲೇಲಿ ಕುಕ್ಕರ್ಸೋವಾಗ ಈಗ ಕುಣಿದಾರ್ತಿರೋ meetingsನ
memory ಒಂದೇ consolationoo ನಿಂಗೆ… ಸರೋಜ! ನಾನ್ಹೇಳೋದ್ಕೇಳು… ಆ horrible
ಆಯಾನ ವದ್ದೋಡ್ಸು ಮೊದ್ಲು… ಅವ್ನು ‘ಅಮ್ಮಾ ಅಮ್ಮಾ’ ಂತ ಕಿರ್ಲೋವಾಗ್ಲೆಲ್ಲ ಮುಖಾನ್ತೋರ್ಸು…
ಅವನು ಅತ್ತಾಗ ನೀನು ಹಾಲ್ಕೊಡು … ಹೊರಗ್ಹೋಗುವಾಗ ಅವನ baby eyeನ daze
ಮಾಡೋ blue sky… golden sun… green trees ಇವುಗಳ್ನೆಲ್ಲಾ ನೀನು ತೋರ್ಸು !!
———————————————————————–

ಅಮ್ಮಾವ್ರು: ಸಾಕು ಕಮಲೂ! ಸಾಕು!

ಕಮಲು: (putting her arm round Saroja) ನಮ್ಮನೇಗ್ಬಾ ನಾಳೆ… babyನೂ
ಕರ್ಕೊಂಡ್ಬಾ… ಬಿಸಿಲ್ನಲ್ಲಿ ಬೇಡ…ಸಾಯಂಕಾಲದ್ಹೊತ್ತು … Tigerನೂ ಕರ್ಕೊಂಡ್ಬಾ ನಮ್ಮ
ರಘೂಗೆ animals ಅಂದ್ರೆ ಅಂಜಿಕೆ.. ನಿನ್ನ baby ಆ terror ಜೊತೇಲಿ ಆಡೋದನ್ನೋಡಿದ್ರೆ ಅವ್ನ
fearoo ಹೋದೀತು… ಬರ್ತೀಯಾ?

ಅಮ್ಮಾವ್ರು: (Without looking up)
ಬರ್ತೇನೆ ಕಮಲೂ.

ಕಮಲು: ಹೌದು!? ನಾಳೇನೇ ಅಲ್ವೆ ಸಾಯಂಕಾಲ ನಿನ್ನ meetingoo?

ಅಮ್ಮಾವ್ರು: ಅಯ್ಯೋ ನನ್ನ meeting ಹಾಳಾಗ್ಹೋಗ್ಲಿ ಬರ್ತೇನೆ!; babyನೂ ಕರ್ಕೊಂಡು!…

ಕಮಲು: (draws Saroja’s face to her breast and kissing her on the fore-head)
ಆಂ!! ಈಗ ನೀನು womanಉ…!

ನರಸಿಂಹಯ್ಯ: (Entering precipitately)
ಲೇ!!

(ಕಮಲು stands up)

ಅಮ್ಮಾವ್ರು: ಲೇ!! ಯಾರನ್ನಂದದ್ದು… ? I shall have no woman… no lady who is
my friend and guest. Spoken to as… ಲೇ! ನಾವೇನು hens ಅಂತ ತಿಳ್ಕೊಂಡ್ರಾ?… Ladliesನ
ಹ್ಯಾಗೆ adress ಮಾಡ್ಬೇಕೂಂಬೋದನ್ನ, ಮೊದ್ಲು ಹೊರಗ್ಹೋಗೆ ಕಲ್ಕ್ತೊಂಡು ಆಮೇಲೆ ವಳಕ್ಬಂದು
ಮಾತಾಡಿ… Till then… lay your bad manners elsewhere… “ಲೇ”ಂತೆ… “ಲೇ “!

ನರಸಿಂಹಯ್ಯ: ಅದಕ್ಕೆಲ್ಲ time ಇಲ್ಲ… Madam! (sottovoce) never in my mortal
life…. ನನ್ನ mortal lifeನಲ್ಲಿ ಒಂದು ಕ್ಷಣಕೂಡ ಒಬ್ಬ ಹೆಂಗ್ಸಿಗೆ ಹೆದರ್ಕೊಂಡಿರ್ತೇನೆ ನನ್ನ
ಸ್ವಪ್ನದಲ್ಲಿಯೂ expect ಮಾಡ್ಲಿಲ್ಲ… ಆದ್ರೆ! necessityಗೆ ನೀತೀನೂ ಇಲ್ಲ ನ್ಯಾಯಾನೂ ಇಲ್ಲ!
It is only fear for my lifeಉ… ನನ್ನ ಪ್ರಾಣಕ್ಬಂದಿರೋ ಹಾನಿ: ಈಗ ಒಬ್ಬ ಹೆಂಗ್ಸಿನ ಕಾಲಿಗೆ
ಬೀಳೋ ಸ್ಥಿತಿಗೆ ತಂದಿಟ್ಟಿಧೆ… ಆದ್ರಿಂದ ಪ್ರಾರ್ಥಿಸ್ಕೋತೇನೆ…in the meanwhile… God bless
you madam!; but you know what I mean!! ನಿಮ್ಮ tigeroo…

ಕಮಲು: ಅಯ್ಯಯ್ಯೋ! ನಾಯಿ ಕಿತ್ಕೊಂಡ್ ಬಿಡ್ತೇ ?!

ನರಸಿಂಹಯ್ಯ: ಇನ್ನೂ ಇಲ್ಲಾ!… ಆದ್ರೆ… ಆ Hamletನ ಹಾಗೆ ‘To ಕಿತ್ತೊಳ್ಳು or not
to ಕಿತ್ಕೊಳ್ಳು’ ಅಂತ ಎಗರಾಡ್ತಿಧೆ… ಆ horrible ನಾಯಿ…!

ಅಮ್ಮಾವ್ರು: ಆಗಬೇಕು… ನನ್ನ babyನ brutlet ಅಂತ ಅಂದೋರ್ಗೆ… ಆಗ್ಬೇಕು…
ಚನ್ನಾಗಾಗ್ಬೇಕು… ನಿಮ್ಮ tiger questionಗೆ ಇಲ್ಲ್ಯಾರೂ answer ಕೊಡೋ ಹಾಗಿಲ್ಲ.
——————————————————————

ನರಸಿಂಹಯ್ಯ: Madam…. ಅದಕ್ಕೆ answer ಕೇಳೋಕೆ ಬರ್ಲಿಲ್ಲ ನಾನು…. ಇನ್ನೊಂದು
question ಕೇಳೋಕೆ ಬಂದೆ… ಆ ನಾಯಿ ಕುತ್ಗೇಗೆ ಕಟ್ಟಿರೋ ಆ ಸರಪಣಿ strengthoo ಅದರ
ಕತ್ತಿನ ಶಕ್ತಿಗೆ commensurate ಆಗಿಧೆಯೇ, ಅಂತ ಕೇಳೋಕ್ಬಂದೆ… ಲೇ…. ಕ್ಷಮಿಸಿ… ಡಿ…ಲೇಡಿ !
… you another madam: !! … ನೀನಾದ್ರೂ ಕೇಳೇ… ಆ ಸರಪಣಿ ಭದ್ರವಾಗಿದೆಯೇಂತ?…
ಅವನೋ…!

ಅಮ್ಮಾವು: Whom do you mean ಅವನೋ ?

ನರಸಿಂಹಯ್ಯ: I mean my beloved friendoo!- your unfortunate husbandಉ-
poor Subbu the gutless, though God knows I love him!

ಅಮ್ಮಾವ್ರು: How dare you address my husband like that?…. He is a man…
you are a worm… a bloated worm… !!

ನರಸಿಂಹಯ್ಯ: ವೊಪ್ಕೊಂಡೆ madam…..apologiesಊ ! ನನಗೋ, ಈ roomನಲ್ಲಿ ತಮ್ಮ
ಸನ್ನಿಧಾನ ಇರೋವರ್ಗೂ ಕಾಲಿಡೋಕೆ ಇಷ್ಟವಿಲ್ಲಾ… ತಮ್ಮ್‌ ಯಜಮಾನ್ರೋ ಆ ಕುದ್ರೇನ dog-cartಗೆ
hitch ಮಾಡ್ತಿಧಾರೆ… ಆ Tigerಓ ಎಗರಾಡ್ತಿಧೆ !… ಸರಪ್ಣಿಯೋ ಈಗ್ಲೋ ಆಗ್ಲೋ
ಕಿತ್ತೊಳ್ಳೋಹಾಗಿಧೆ…..!

ಕಮಲು: ಆ ನಾಯಿ ಹೆದರ್ಕೆ ಏನೂ ಇಲ್ಲಾಂತ ಹೇಳೇ !… ಎಷ್ಟು ದೂರ ನಿನ್ joke
ಊ!?

ಅಮ್ಮಾವ್ರು: ನಾಯಿ, ಕಿತ್ಕೊಳೋದಿಲ್ಲ… ಒಂದ್ವೇಳೆ ಕಿತ್ಕೊಂಡ್ರೂನೂವೆ… it does not
like pork… ಅದಕ್ಕೆ ಹಂದೀ ಮಾಂಸ ಅಂದ್ರೆ ಹೇಸ್ಗೆ… ನೀವೇನು ಹೆದರ್ಬೇಡಿ… you, man,
frightened of a dog!
[ Exit C ]

ನರಸಿಂಹಯ್ಯ: ನಗೇ ! ನಗೇ !! ಮುದ್ದಿಟ್ಕೋ ಅವಳ್ನ… ನಗು ನನ್ನ ಸ್ಥಿತೀನ್ನೋಡಿ !…
ಕಲತ್ಕೋ ಅವ್ಳ ವಿದ್ಯೆಗಳ್‌ನೆಲ್ಲ! … ruin ಮಾಡು ನನ್ನ happy little homeನ !… ಲೇ!……..

ಅಮ್ಮಾವ್ರು: (Entering) What did you say…ಲೇ! to a lady!… Say that again!….

ನರಸಿಂಹಯ್ಯ: ಕ್ಷಮ್ಸಿ! Madam: ‘ಲೇ’ಂತ ಹೇಳೀ’ಡಿ’ಂತ ಹೇಳೋ ಅಷ್ಟ್ರಲ್ಲಿ ತಾವು
ಧುಮಿಕ್ಬಿಟ್ರೆ… ಕ್ಷಮ್ಸಿ… ಲೇಡಿ!… ನಿಮ್ಮ dog Safe ಅಂತಾ ಹೇಳಿದ್ರಲ್ಲಾ… ಅಷ್ಟು ಸಾಕು ನನಗೆ…
I shall efface myself… ನಾನೂ ನನ್ನ wifeಊ ಮುಂದಿನ ವಿಷ್ಯಗಳ್ನ ನಾವಿಬ್ರೂ alone
ಆಗಿರೋವಾಗ ವಿಚಾರ ಮಾಡ್ಕೋತೇವೆ.
[Exit L]

ಅಮ್ಮಾವ್ರು: ಎನೋ ಕಮಲೂ ! ನೀನೇನ್ಹೇಳಿದ್ರೂ, he is a horrible brute to you!
ಕಮಲು: ಇವರೇ! ಪಾಪ! ಇವರು baby – ಸರೋಜಾ !
————————————————————————

ಅಮ್ಮಾವ್ರು: Baby! husband !! baby!!!

ಕಮಲ: ಹೌದು: ನಮ್ಮ ನಮ್ಮ husbandನ ನಾವು understand ಮಾಡ್ಕೊಂಡ್ವೋ,
ಅವರು ನಮಗೆ babies ಅಲ್ದೆ ಬೇರೇನೂ ಅಲ್ಲ… understand ಮಟ್ಗೆ ಮಾಡ್ಕೊಳ್ದೆ ಹೋದ್ವೋ
ನಮ್ಮನ್ನ babies ಅಂತ ಬೆದರಸ್ತಾರೆ…. ಇವರನ್ನು brute ಅಂತೀಯಲ್ಲ ನೀನು… ನಮ್ಮನೇಲಿರೋ
real bruteಉ ನನ್ನ ಕೊನೇಮಗ… ಹುಟ್ಟಿ ವಂಭತ್ತಿಂಗ್ಳು ಕೂಡ ಇಲ್ಲ. ಆ brutlet ಓ
brutekinಓ, ಇಲ್ಲ ಆ little bruteಓ!… “ಎಲಾ! ಇಷ್ಟು ದೊಡ್ಡೋರು ದಿನವೆಲ್ಲ ದುಡ್ದು. ದಣ್ದು,
ವಿಶ್ರಾಂತೀಗೇ ಅಂತ ಮಲಕ್ಕೊಂಡು ನಿದ್ರೆಮಾಡ್ತಿಧಾರಲ್ಲ… ಮತ್ತಿರಿಗಿ ಬೆಳಕ್ಹರಿಯುತ್ಲೂನೂವೆ
ದುಡ್ಯೋದಕ್ಕೆ ಏಳ್ಬೇಕಲ್ಲ… ಇವರ್ನ disurub ಮಾಡ್ಬಾರ್ದು” ಅಂತ ತೋಚತ್ತೇ ಅವನಿಗೆ? ಮೂರು
ಘಂಟೆ ರಾತ್ರಿಗೆ ಸರ್ಯಾಗಿ ‘ಕಿಟಾರ್’ ಅಂತ ಒಂದೇ ಕೀರ್ಲು ಕಿರರ್ತಾನೆ… ಥಟ್ನೆದ್ದು… ಅವನ್ಹೊಟ್ಟೇಗೆ
ಹಾಲು ಹುಯ್ದು… ಅವ್ನಗೊಂಬೇನ ಅವನೆದುರ್ಗೆ ಆಡಿಸ್ತಾ ತೂಗಿದ್ರೇನೆ ಪುನ: ನಿದ್ದೆ ಹೋಗೋದು
ಅವ್ನು… ನಮ್ಮ ಯಜ್ಮಾನ್ರು ಅವನ larger editionoo, ಆಷ್ಟೇ!… ಇವರಿಗೆ ಬೇಕಾದ
ಉಪಚಾರಾನ ವದಗೋವರ್ಗೂ ಕಿರರ್ತಾರೆ… ವದಗ್ಸುತ್ಲೂ… ಶಾಂತಿ!… ಹಯ್ಯೋ! ಸರೋಜ!
married lifeಏ ಹೀಗೆ… ಗಂಡ ಹೆಂಡ್ತೀಲಿ… ಇಬ್ರಲ್ಲಿ ಯಾರಿಗಾದ್ರೂ ಒಬ್ಬರಿಗೆ ಮತ್ತೊಬ್ರು
babyನೆ…! ನಮ್ಮನೇಲಿ ನಮ್ಮ ಯಜಮಾನ್ರು ನನಗೊಂದು baby. ನಿಮ್ಮನೇಲಿ ನಿಮ್ಮ
ಯಜಮಾನ್ರಿಗೆ ನೀನೊಂದು baby!!

ಅಮ್ಮಾವ್ರು: ನಾನು ! baby!! ನಮ್ಮ ಯಜ್ಮಾನ್ರಿಗೆ!!! baby !!!! The Idea! ನಮ್ಮ ಮನೇಲಿ
equal rightsoo…. ನನಗೂ ಇವರಿಗೂ !

ಕಮಲು: ಏನು equal rightsoo? ನಿಂಗೂ ನಿಮ್ಮ ಯಜ್ಮಾನ್ರಿಗೂ ?… ನನ್ನ little boy
ಅತ್ತಾಗ ಅದಕ್ಕೆ ಹಾಲು… ನಮ್ಮನೆ ದೊಡ್ಡ baby ಕಿರ್ಲಿದಾಗ್ಲೆಲ್ಲಾ ಅದಕ್ಕೆ ಕಾಫಿ, ತಿಂಡಿ, ಊಟ….
ಹೀಗೆ ಈ babies ಕಿರ್ಲೋದಕ್ಕೆ ಸಮಾಧಾನ ಮಾಡ್ತಾ ಈ ಹರಕಲ್‌ ಸೀರೆ, ಕೆದರಿದ ಕೂದ್ಲು
ಇಟ್ಕೊಂಡು ನನ್ನ ಸಂಸಾರಾನ ನಾನು ಹೇಗೆ ಜರುಗಿಸ್ತಿಧೇನೆಯೋ, ಹಾಗೇ ನಿಮ್ಮನೇ ಚಿಕ್ಕ baby
ಕಿರ್ಲಿದಾಗ್ಲೆಲ್ಲಾ ತೊಟ್ಲು ತೂಗ್ತಾ, Tiger ಆಡಿಸ್ತಾ, ನಿಮ್ಮನೆ ದೊಡ್ಡ baby ಕಿರ್ಲಿದಾಗೆಲ್ಲ ಅದಕ್ಕೆ
cocoa ಕಾಸ್ತಾ… ಆದರ meetingಗೂ. ಗಾಳಿ ಸವಾರೀಗೂ dog-cartನ ಓಡಿಸ್ತಾ… ಅದರ dressಗೆ
ಬೇಕಾದ silk sarees, broches, wristwatch ಇದೆಲ್ಲ ಕೊಳ್ಳೋದಕ್ಕೆ ಬೇಕಾದ ದುಡ್ನ ದಿನಾ
ದುಡ್ಡೂ ದುಡ್ಡೂ ಒದಗಿಸ್ತಾ, ಹರಕಲಂಗಿ, ಕೆದರಿದ ಕೂದ್ಲು ಇಟ್ಕಕೊಂಡು ಆತನ ಸಂಸಾರ ಆತ
ಜರುಗಿಸ್ತಿಧಾರೆ…

ಅಮ್ಮಾವ್ರು: (bowed down… siniks cun Kamalu’s shoulder)
ಈ ಕಥೆ ಎಲ್ಲ answer ಅಲ್ಲ ನನ್ನ questionಗೆ;… ನಾನು ಹೇಳಿದ್ದು, ನಿನ್ನ brute of
a busbardoo… ನಿನ್ನ beautiful loving natureನ appreciate ಮಾಡೋದಿಲ್ವಲ್ಲಾಂತ…!

ಕಮಲು: ಅದಕ್ಕೇನು ಮಾಡೋದು… ನಿಮ್ಮ ಯಜಮಾನ್ರ… beautiful loving natureನ
his wonderful of a wifeಉ appreciate ಮಾಡ್ತಿಧಾಳೆಯೇ?… ಕೋಪಿಸ್ಕೋಬೇಡ baby! ಇನ್ಮೇಲೆ
appreciate ಮಾಡ್ತಾಳೆ ಅಲ್ವೆ? (lifting up Sureja’s face by the chin) ನಿಮ್ಮ ಯಜ್ಮಾನ್ರು,

———————————————————-
strong, snow-clad mountain of patienceಉ… ಆದ್ರೆ ಎಂದ್ಗೂ ಮರೀಬೇಡ… ಆ mountain
ವಳ್ಗೆ burning Volcano of love ವೊಂದಿಧೇ ಅಂತ … ಈ ಹಾಳು meetings ಬಿಡು… ಆ
horrible ayahನ ವದ್ದೋಡ್ಸು… ದಿನಾ babyನೂ tigerನೂ ಕರ್ಕೊಂಡು ನಮ್ಮನೇಗ್ಬಾ….
ನಿಮ್ಮೋರ್ನೂ ಕರ್ಕೊಂಡ್ಬಾ… ಹುಂ?…. ಹುಂ!…

ಅಮ್ಮಾವ್ರು: ಆಗ್ಲಿ ಕಮಲ… ಆದ್ರೆ ನಾನು ನಿಮ್ಮ ಯಜಮಾನ್ರನ್ ಏನೇನೋ ಅಂದದ್ದನ್ನೆಲ್ಲಾ…?

ಕಮಲು: ಅನ್ನು good for him… ಇನ್ನೂ ಚೆನ್ನಾಗಿ ಅನ್ನು… ಒಳ್ಳೇದು: ಅರ್ಧ reason
ನಿನ್ನ ನಮ್ಮನೆಗೆ ಕರದದ್ದು ಅದಕ್ಕೆ … ಇವ್ರು ಬರ್ತಾಬರ್ತಾ ಮಿತಿಮೀರ್ತಿಧಾರೆ… somebody must
stop him for me… ಮನೆ ಹುಡುಗ್ರು ಮಿತಿಮೀರಿ ಬೆತ್ತ ತಗೊಂಡು ಬಾರ್ಸಿ ಅಡಗಸ್ಬೇಕು
ಅವರ್ನ… ಹೆತ್ತೋರ್ಗೋ ಮನಸ್ಬಾರ್ದ್ದು… ಬಾಯಿ ಬರ್ದು … ಕೈಬರ್ದು… ಅದಕ್ಕೆ ಹ್ಯಾಗೊಬ್ಬ, teacherನ
ಇಟ್ಟು ನಮ್ಮಿಂದಾಗದ ಕೆಲ್ಸಾನ ಅವನ ಬಾಯಿಂದ್ಲೂ ಕೈಯಿಂದ್ಲೂ ಹ್ಯಾಗೆ ಮಾಡಿಸ್ತೇವೋ…. ಹಾಗೇ,
ನಮ್ಮನೇಲಿ ಇವರ್ನ ನನ್ನ ಬಾಯಿಂದ ತರೋಕೆ ಆಗದ ದಾರೀಗೆ ನಿನ್ನ ಬಾಯಿಂದ್ಲಾದ್ರೂ ತರಿಸಿದ್ರೇನೇ
ನಮ್ಮನೇಗೆ peaceಉ !.. ಅದಕ್ಕೇ. ನೀನೇನೂ spare ಮಾಡ್ಬೇಡ ಇವರ್ನ…

ಆಮ್ಮಾವ್ರು: (after a long Pause} ಅಬ್ಬ! ಏನು foolಏ ನಾನು… ಕಮಲು?

ಕಮಲು: Foolಏ ? Not at all! ಜ್ಞಾನ ಬರೋವರ್ಗೂ babiesoo foolsಏ!….
ಬೆಳೆದ್ಮೇಲೆ wise mothers and fathersoo… ಈಗ ತಾನೆ ಆಗ್ಲಿ ಯಾವಾಗತಾನೇ ಆಗ್ಲಿ.. ನೀನು
ನನಗಿಂತ ಎರಡ್ರಷ್ಟು ಬೆಳದ್ರೆ ತಾನೇ ಆಗ್ಲಿ ನನ್ನ baby …. ನನಗಿಂತ ಎರಡು class ಕೆಳಗೆ ಸೇರಿದಾಗ
ನಿನ್ನ ತಪ್ಪನ್ನೆಲ್ಲ ತಿದ್ದಿ ನಿನ್ನ ಆ home-Workನ ಹೇಗೆ ಮಾಡಿಸ್ತಿದ್ನೋ, ಹಾಗೇ, ಈಗ್ಲೂ ನಿನ್ನ ತಪ್ಪನ್ನೆಲ್ಲ
ತಿದ್ದಿ (sweeping her arm gracefully round the room) ಈ home-workನ ಮಾಡ್ಸೋ,
ನನಗೆ, baby ನೇ! ಆದ್ರೆ ಬೆಳೆದ big baby!

[Kanalu puts her arm round Saroja]

ನರಸಿಂಹಯ್ಯ: (Entering)
go on! Go on!!! ಮುದ್ದಾಡಿ !!!
[Kamalu and Saroja separate]

ಅಮ್ಮಾವ್ರು: Hateful… ನೀವಿರೋ roomನ airನ breath ಮಾಡೋದು ಕೂಡ
hateful…!

[Walking towards kitchen door C…. Sweeping her arm]

ಆ beautiful angelನ appreciate ಮಾಡೋಕೆ brain ಎಲ್ಲಿಧೆ?… heart ಎಲ್ಲಿದೆ?…
ಮಂಗನ್ಹಾಗಿರೋ ನಿಮ್ಮ ಕೈಲಿ, ದೇವ್ರು, ಜ್ಞಾನಾತಪ್ಪಿದಾಗ ಕೊಟ್ಟ ಆ ಮಾಣಿಕ್ಯಾನ…
appreciate ಮಾಡೋಕೆ ಯೋಗ್ಯತೆ ಇಲ್ದಿದ್ರೂನೂವೆ… brutalise ಮಾಡಿ… Beast!!!!
[Exit]
———————————————————-
ನರಸಿಂಹಯ್ಯ: ಕೇಲ್ದ್ಯೇನೆ…

ಕಮಲು: ಕೇಳ್ದೆ.

ನರಸಿಂಹಯ್ಯ: ಮತ್ತಿನ್ನೂ ಬದ್ಕಿಧೀಯಲ್ಲೇ?… ಲೇ ನಿನ್ನ appreciate ಮಾಡೋದಿಲ್ವೇನೇ
ನಾನೂ?…

ಕಮಲು: ಮಾಡ್ದೆ ಏನು ?

ನರಸಿಂಹಯ್ಯ: (Strutting up to her and gesticulating wildly) ಲೇ! ನಾನು
ಮಂಗ್ನೇನೆ? …

ಕಮಲು: ಅಯ್ಯೋ! ಅಲ್ಲವಲ್ಲಾಂದ್ರೆ !?

ನರಸಿಂಹಯ್ಯ: ಮಂಗನ್ಹಾಗಿದೆಯೇನೇ ನನ್ನ ಮೂತಿ!?

ಕಮಲು: ಇಲ್ಲವಲ್ಲಾ!!

ನರಸಿಂಹಯ್ಯ: ಮತ್ತೆ ಹೇಳ್ತಾಳಲ್ಲೇ ಅವ್ಳು! ನೀನೂ ಕೇಳ್ತಾ ನಿಂತಿಧೀಯಲ್ಲೇ …. ! ಲೇ!
(Putting his hands over her shoulders and shaking her well)
ನಿನ್ನ brutalise ಮಾಡ್ತೇನೇನೆ ನಾನು ?

ಕಮಲ: ಅಯ್ಯೋ! ಇಲ್ಲವಲ್ಲಾ!

ನರಸಿಂಹಯ್ಯ: ಇನ್ನು ಕೇರಿಕೇರಿಯೆಲ್ಲ ಕಿರಲ್ತಿಧೆಯಂತಲ್ಲೇ ? ಯಾಕೆ ಈ ಸ್ಥಿತಿಗೆ ತಂದಿಟ್ಟಿದ್ದು
ನನ್ನ?…. ಈ ಹರಕಲ್ ಸೀರೆ ಸದ್ಯ ಯಾಕೆ ಉಟ್ಕೋತೀಯಾ ?

ಕಮಲು: ಬೇರೆ ಸೀರೆ ಸದ್ಯ ಇಲ್ಲ ಅಂದರೆ!

ನರಸಿಂಹಯ್ಯ: ಯಾಕಿಲ್ಲ? ತಿಂಗ್ಳಿಗೆ 75 ರೂಪಾಯಿ ಕೊಟ್ಟಿದ್ದರಲ್ಲಿ ತಿಂಗ್ಳಿಗೆ ಒಂದೊಂದು
ರೂಪಾಯನಂತೆ ಎರಡು ವರ್ಷದಲ್ಲಿ ಮುವ್ವತ್ತು ರೂಪಾಯಿ ಮಿಗ್ಸಿಧೇನೆ ಅಂತ ಹೇಳಿದ್ಯಲ್ಲ…
ಏನ್ಮಾಡ್ದೆ ಅದನ್ನ?

ಕಮಲ: ಕೆಂಚೂಗೊಂದು ಕಿರಿಗೆ ಕೊಂಡ್ಕೊಟ್ಟೆ…

ನರಸಿಂಹಯ್ಯ: ಅದನ್ನಿಲ್ಲಿ ಬೊಗಳಿ ಏನೇ ಪ್ರಯೋಜ್ನಾ?… ಈ ಹರಕಲ್ ಸೀರೆ ಕಟ್ಕೊಂಡು
ಇಲ್ಲಿ ಬಂದು ಈ ಪಿಶಾಚಿ ಬಾಯಲ್ಲಿ ಬಿದ್ದು ಪೇಚಾಡೋ ಸ್ಥಿತಿ ನನ್ನ ಇಟ್‌ಬಿಟ್ಟು,
ಮುದ್ದಾಡ್ತಿಧೀಯಲ್ಲೇ ?!… ಗಂಡನ್ನ ಬೈತಾಳಲ್ಲ ಅಂದ ರೋಷ ಕೂಡ ಇಲ್ದೆ ಮುದ್ದಾಡ್ತಿಧೀಯಲ್ಲೇ !…
ಆದಿರ್ಲಿ! ನನ್ನ ಸಂಬ್ಳಾನೆಲ್ಲ ನಾನು clubಗೆ ತಗೊಂಡ್ಹೋಗಿ… ಏನೇಳಿದ್ಲು ಅವ್ಳು? … ಹೇಳು…
ಹೇಳು… ನಿಜಾನ… ಹೇಳ್ತಿಯೋ ಇಲ್ವೋ?

ಕಮಲ: ನಿಜಾನೇ? ಕುಡಿದು ಕುಣಿದಾಡ್ತೀರಾಂತನೋ ಹೇಳಿದ್ಲು.

ನರಸಿಂಹಯ್ಯ: ಕುಡ್ದು ಕುಣ್ದಾಡೋದು !… ಅಲ್ವೆ! ಅವ್ಳಂತೂ ನಾಚ್ಕೆ-ಹೇಸ್ಗೆ ಇಲ್ದೆ ಬೊಗ್ಳಿದ್ರೆ…
ಮರ್ಯಾದೆ ಇಲ್ದೆ ಅದನ್ನೇ ತಿರ್ಗಿ ಬೊಗುಳ್ತೀಯಲ್ಲೆ ನನ್ನತ್ರ?… ಇನ್ನು ನನ್ನ Wifeಏ ಹೀಗೆ start
ಮಾಡ್ಬಿಟ್ರೇ horrideಓ ………. h o r r i d o o ನನ್ನ positionoo! ….ಅದಿರ್ಲಿ! ಈ ಬಾಬತ್ನ
ಯಾರೇ ಅವ್ಳಿಗೆ ಹೇಳಿದ್ದು? ನಿನ್ತಾನೇ?

————————————————————–
ಕಮಲು: ಅಯ್ಯೋ! ನೀವೇ ಹೇಳಿದ್ರಲ್ಲ! ನಿಮಗೆ ಬರೋ ಸಂಬ್ಳದಲ್ಲಿ 425 ರೂಪಾಯಿ
ನೀವೇ ಇಟ್ಕೊಂಡು ಮಿಕ್ಕ 75 ರೂಪಾಯಿನಲ್ಲಿ ನನ್ನ ಸಂಸಾರಾನ ಕಮಲು ಜಾಣ್ತನವಾಗಿ
ಜರಗಿಸ್ಕೋತೇನೆ ಅಂತ, ಅವಳ ಯಜ್ಮಾನ್ರ ಹತ್ರ… ನೀವೇ ಹೇಳ್ದೆ ಅಂತ, ಹೇಳಿದ್ರಲ್ಲಾಂದ್ರೆ!?

ನರಸಿಂಹಯ್ಯ: ಗೊತ್ತೂ! ಗೊತ್ತೂ! That gutless wormoo-though God knows I
love himoo- ಅವನು ಬೊಗ್ಳಿರ್ಬೇಕು! ಈಗ್ನೋಡು! ನನ್ನ ಈ ಪಿಶಾಚಿ ಆಗ್ಲಿ! ಈ ಊರ್ನಲ್ಲಿರೋ
ಯಾವ ಪಿಶಾಚಿ ಆಗ್ಲಿ… ಊರು ಬಾಯಿಂದೆಲ್ಲ ಉಳಿಸ್ಕೊಳ್ಳೋ ಸ್ಥಿತೀನೇ ನೋಡ್ತಾ ಆನಂದ
ಪಡ್ತಿರ್ತೀಯಾ ? ಇಲ್ಲಾ… ಈ ಪ್ರಾಣಿ ನಿನ್ನ ಗಂಡ ಅಂಬೋದ್ನ ಜ್ಞಾಪಿಸ್ಕೊಂಡು, ಈ ಆವಸ್ಥೆಯಿಂದ
relieve ಮಾಡೋಕೆ ಸಹಾಯನೇನಾದ್ರೂ ಮಾಡ್ತೀಯಾ… ಇಲ್ಲಾ, ನೇಣ್ಹಾಕ್ಕೊಂಡೋ, ಆ
Tigerನ ಬಾಯ್ಲಿ ನನ್ನ ಕುತ್ಗೆ ಕೊಟ್ಟೋ … ನಿನ್ನ ಕಣ್ಣೆದುರ್ಗೆ ನನ್ನ ಪ್ರಾಣಗ್ಳು ಬಿಡ್ಲಾ?
(striking an attitude)
Think of your ತಾಳೀಯೇ! You horror! think of your ತಿರುಮಾಂಗಲ್ಯ! ನಿನ್ನ
ನಂಬೀ, ಮದ್ವೇಲ್ಲಿ ನಿನ್ನ ಕುತ್ಗೇಗೆ ಕಟ್ಟಿದ್ನೆಲ್ಲಾ, ಅದನ್ನ ಮರೀದೇ… ಕೊಡು answerನ….!

ಕಮಲ: ಹಯ್ಯಯ್ಯೋ ! ಇದೇನಿದು…? … ಏನಾಗ್ಬೇಕೂಂದ್ರೆ… ನೀವು ಏನು ಹೇಳಿದ್ರೂ
ಮಾಡ್ತೇನೆ!…. ಏನಾಗ್ಬೇಕು….?

ನರಸಿಂಹಯ್ಯ: ಏನೂ ಇಲ್ಲ. ಮೆರೀಬೇಕು ….. ಈ ಪಿಶಾಚಿಗಳೆದುರ್ಗೆ ನಮ್ಮನೇ
ಮಹಾರಾಣೀ ಹಾಗೆ… ಮೆರೀಬೇಕು. ನನ್ನ car ಇನ್ಮೇಲೆ ನಿಂದೆ… ನನ್ನ victoriaನೂ ನಿಂದೆ…
೫೦೦ ರುಪಾಯಿನ ಪೀತಾಂಬ್ರ ಕಟ್ಕೊಂಡೂ… ಸ್ನಾನಮಾಡು… carನಲ್ಲೊಂದು ಕಾಲು Victoria
ನಲ್ಲೊಂದು ಕಾಲು ಇಟ್ಕೊಂಡು ನಿನ್ನ horrible battalion of babiesನ ಎರಡ್ಬಂಡೀಲೂ
ತುಂಬ್‌ಕೊಂಡು ಬೀದಿ ಬೀದಿ ಉದ್ದಕ್ಕೂ ಪೀತಾಂಬರ ಹಾಸ್ಬಿಟ್ಟು… ಅದರ್ಮೇಲೆ ಮೆರೀಬೇಕು
ನೀನು!…, ಹಗ್ಲೂ ರಾತ್ರಿ … ನನ್ನ ಸಂಬ್ಳಾನೆಲ್ಲ ನೀನೇ ಇಟ್ಕೋ… ಇಟ್ಕೊಂಡು ಒಂದ್ಕಾಸಿಲ್ದೆ
ಖರ್ಚು ಮಾಡಿ… ರತಿಹಾಗಿದ್ದ ಮುಖಾನ ಪ್ರೇತದ್ಹಾಗೆ ನಾನು ಮಾಡಿಧೇನೆ ಅಂತ ಬೊಗಳ್ತಾಳಲ್ಲೆ
ಈ ಪಿಶಾಚೀ… ತಿಂದೂ ತಿಂದೂ… ಕೊಬ್ಬೀ ಕೊಬ್ಬೀ… double ರತೀ ಹಾಗ್ಮಾಡ್ಕೊಂಡು
ನಿನ್ಮುಖಾನ ಅವ್ಳಿಗೆ ತೋರ್ಸಿ… ನಿನ್ಮೂಗಿನ್ನ ಅವ್ಳಮೂಗಿಗೆ ತಾಕ್ಸಿ… ‘ಈಗೇನು ಹೇಳ್ತೀಯಾ’ಂತ
ಅವಳ್ನ ನಾನು ಕೇಳೋಸ್ಥಿತೀಗೆ ತಂದಿಡ್ಬೇಕು ನನ್ನ… ಇದು ನನ್ನ departmentoo! ನಂದೋ (ticking
off with his fingers) thingoo!ಉ ಮೊಸಳೆ! pigoo! ಬೊಜ್ಜೆ… ಬೊಜ್ಜೆ… ಏನು
personalಏ ಆ ಪಿಶಾಚಿ!… ಅಂದ್ಲಲ್ಲಾ? ವೊಂದು ಗಾಡಿನೂ ಹತ್ತದೇ… ನಿನ್ನ… Carನ ಮುಖಾನೂ
ನೋಡ್ದ… officeಗೂ ಮನೆಗೂ ಓಡ್ಯಾಡಾದ್ರೂನೂ ನನ್ನ ಬೊಜ್ಜೇನ ಕರಗಿಸ್ಕೊಂಡು ಪೈಲ್ವಾನ್‌
ಹಾಗೆ ಅವಳೆದುರ್ಗೆ ನಿಲ್ದಿದ್ರೆ ನನ್ಹೆಸ್ರು ‘ಹುಲಿಯೂರು ನರಸಿಂಹಯ್ನೇ’ ಅಲ್ಲ!…. ಇದೆಲ್ಲ
ಮಾಡ್ತಿಯೇನೇ ? …

ಕಮಲು: ನಿಮ್ಮಿಷ್ಟ ಹ್ಯಾಗೋ ಹಾಗೆ… ಅಂದ್ರೆ!

ನರಸಿಂಹಯ್ಯ: God bless you… ನಿನ್ನ co-operationಗೆ God bless you!

ಗಂಡ: (Entering)
———————————————————
Narasim! dear boy!
(Drawing back)
ಕ್ಷಮ್ಸು! intrude ಮಾಡ್ತೇನೇಂತ ಗೊತ್ತಿರ್ಲಿಲ್ಲ!….
ನರಸಿಂಹಯ್ಯ: Come in!.. Is everything for our escape from this house of
ಪಿಶಾಚೀಸ್‌, ready…?

ಗಂಡ: ಕ್ಷಮ್ಸು, dear boy! ನಮ್ಮನೆ ಹೆಸ್ರು, home of ಪಿಶಾಚೀಸ್‌ ಅಲ್ಲ… ‘Home
of peaceಉ’… ‘ಶಾಂತಿ ನಿವಾಸ’…!

ನರಸಿಂಹಯ್ಯ: You mean, home of piecesco?…. you, a man gone to pieces…
your child, a piece of a buteಉ … and your worst-halfoo a picce of a … a…. ಉಂ!
ಬ್ಯಾಡಾ! dash your ‘ಶಾಂತಿ ನಿವಾಸ’ …we want to go home!

ಗಂಡ: Certainly dear boy! ಮನೇಗ್ಹೋಗು… but don’t dash my ‘ಶಾಂತಿ ನಿವಾಸ’
before my worthy sisteroo…!

ನರಸಿಂಹಯ್ಯ: Oh! dash it all… I mean bless you… the whole lot of you…
but you know what I mean…. ಈ ಮನೇಲಿ ನೀವೆಲ್ರೂ ಸಂತೋಷವಾಗಿ ಹಾಳಾಗ್ಹೋಗಿ…
I mean ಸಂತೋಷವಾಗಿರಿ ಯಾವ ಶನಿ ಮುಚ್ಕೊಂಡಿತ್ತೋ … ನಿನ್ನೆ ನನ್ನ meet ಮಾಡ್ದೆ…
ಹಾದೀಲಿ ಹಾಳಾಗಿ ಹೋದೋನು ಮತಿಗೆಟ್ಟು ಮಾರೀಮನೇಗೆ ಹೊಕ್ಹಾಗೆ… ಇಲ್ಬಂದು…
ನನ್ನ sweet wifeನೂ ಕರ್ಕೊಂಡು ಬಂದು ನಮ್ಮನೇ presiding ಪಿಶಾಚಿ ಬಾಯ್ಲಿ ಬೈಸ್ಕೊಂಡು…
ನಿಮ್ಮ Tigerಗೆ ಬೆದರ್ಕೊಂಡು, ಯಾಕೆ ಬಂದ್ನೋ ಕಾಣೆ… ಕ್ಷಮ್ಸು dear boy! you know I
love you!… ನೀನೋ… ನಿಮ್ಮನೆ bruiteಓ… ನಿನ್ನ bruteletಓ! ಇನ್ನಾ ಮಹಾತಾಯಿ,
ಆ ಮಾರಮ್ಮ- to describe her at her mildest… ಆಕೇನೋ… ನಿನ್ನ Cocoa timeಓ…
ನೀವೆಲ್ರೂ ಹಾಳಾಗ್ಹೋಗಿ… (to Kamalu) ಬಾರೇ: … ನನ್ ರಾಣೀ!…. ಬಾ! …. (suddenly
cooling) ಹೌದು . dear boy! what about the dog-cart?… and the Tiger chained up.
I suppose?…

ಗಂಡ: Certainly Narasim!…. one moment! ( walking up to back door C) ನಮ್ಮ
Wortly visitorsoo depart ಮಾಡ್ತಿಧಾರೆ!… dear….!

ಅಮ್ಮಾವ್ರು: (From within) ಇದೋ ಬಂದೆ…. (entering) ಇದೇನು ?

ನರಸಿಂಹಯ್ಯ: ಏನೇನು?

ಅಮ್ಮಾವ್ರು: ಅಲ್ಲಾ! ಕೈಹಿಡಿದ ಕುರೀನ ಕುತ್ಗೇಗೆ ಹಗ್ಗಾ ಹಾಕಿ ಎಳ್ಕೊಂಡ್ಹೋಗೋದು
ಬಿಟ್ಬಿಟ್ಟು… ಭುಜದ್ಮೇಲೆ arm ಹಾಕ್ಕೊಂಡು lead ಮಾಡ್ತಾ ಹೋಗ್ತಿಧೀರಾ?… ಇದೇನ್ಬಂತು
suden spasm of affectionoo?!
————————————————————
ನರಸಿಂಹಯ್ಯ: Sudden spasm of affection ಅಲ್ಲಾ madam! Longstanding, deep,
deep. sincere, fervent, soul-stirring ocean of abysmal! loveಉ… sudden spasm of
affection ಅಂತೆ? ಏನೇ?

ಕಮಲು: ನೀವು ಹೇಳಿದ್ದೇ !!…

ನರಸಿಂಹಯ್ಯ: ಕೇಳಿದ್ರಾ Madam! ನಾನು ಹೇಳಿದ್ದು!…. ಏನೋ ನನ್ನ Iifeಉ…. ನನ್ನ
studiesoo…. ನನ್ನ public activitiesoo… ನನ್ನ service to my country… ಇನ್ನು ಅವ್ಳ
houschold worriesoo… the care of her childrenoo…I should say our childrenoo…
our little angels- bruteletsಅಲ್ಲ – Madam. angeletsoo… ಇವುಗ್ಳ ಗಲಭೇಲಿ ನಮ್ಮ ಪರಸ್ಪರ
ಪ್ರೇಮದ ಮಧ್ಯೆ ಮಂಜು ಬಿದ್ಹಾಗೆ ಇದ್ರೂನೂವೆ… ಇವತ್ತು ಗ್ರಹಚಾರವಶಾತ್… ನಿಮ್ಮೀ ಶನಿ
ಕೊಂಪೇಗೆ accidental ಆಗಿ ಬಂದು… ನಿಮ್ಮ heartless treatment of your husbandನೂ,
ಅವನ gutless submission to your ಪಿಶಾಚಿ selfನೂ- though God knows I love him-
ಬಂದೋರ ಬಾಯಿಮುಚ್ಸೋ ಹಾಲಾಹಲದ್ಹಾಗಿರೋ ನಿಮ್ಮ ಈ ಮಹಿಮೇನೂ ಗಮನಿಸಿದ್ದರ
ಮೇಲೆ… ಆ ಮಂಜು ಎದ್ಹೋಗಿ ನನಗೆ ನನ್ನೀ ರಾಣೀ ಮೇಲೆ… ಅಲ್ಲ! … ನನ್ನ ರಾಣೀಗೆ
ನನ್ನ ಮೇಲೆ… (drawing Kamalu to himself)… I am not ashamed to admit it!

ಕಮಲ: ಅಯ್ಯೋ! ಇದೆನೂಂದ್ರೆ ಆಭಾಸಾ…?

ನರಸಿಂಹಯ್ಯ: Your ಆಭಾಸಾ be dashed!! ಪ್ರಪಂಜ ಎಲ್ಲಾ ನೋಡ್ಲಿ… ಕೇಳ್ಲಿ … ನನಗೆ
ನನ್ನೀ ರಾಣಿ…. ರಾಣಿ be dashed… ಈ ಚಕ್ರವರ್ತಿನಿ…. be dashed…. goddess….
no! ದೇವಿ… that is right… ದೇವಿ ಮೇಲೆ, ಮದುವೆ ಆವಾಗ್ಲೆ ಇದ್ದ ಮಮತೆ… Ioveಉ
madam… real loveಉ… ಮೇಲೆ ಹೇಳಿದ aforesaid ಮಂಜು ಎದ್ಹೋಗಿ ಆಕಾಶ್ದಲ್ಲಿ
ಪ್ರಕಾಶಿಸ್ತಿರೊ ಸೂರ್ಯನ್ಹಾಗೆ ಧಗ ಧಗ ಧಗಾಂತ ಉರೀತಿದೆ madam! ನಮ್ಮಿಬ್ರ ಹೃದಯಗ್ಳಲ್ಲೂ…
ಉರೀತಿಧೆ!… ಏನೇ?…

ಕಮಲ: ಇವು ಹೇಳಿದ್ದೇ…!

ನರಸಿ೦ಹಯ್ಯ: ನಮ್ಮ ಸಂತೋಷ್ದಲ್ಲಿ bad bloodಯಾಕೆ, ನಮ್ಗೂ ನಿಮ್ಗೂ ಜಗ್ಳ ಯಾಕೆ…
ನೀವು ನಿಮ್ಮಿಬ್ರಿಗೂ ಮಾಡಿದ ಅಪ್ಮಾನಾನ ನಾವು ಮನ್ನಿಸಿಧೇವೆ ಅಂಬೋದ್ನ ಸೂಚಿಸೋಕೂ…
ಮತ್ತೂ ನಮ್ಮಿಬ್ರ |oving parlner-ship Study ಮಾಡ್ಯಾದ್ರೂ, ನನ್ನ dear friendoo ತಾವೂ…
ನಿಮ್ಮ connubial relationaನ 1mprove ಮಾಡ್ಕೊಳ್ಳೋಕೂ… ನಾನು, on behalf of my
wifeಉ… ದೇವಿ… ನಾಳೆ teatimeಗೆ invite ಮಾಡ್ತೇನೆ… ಅಲ್ಲ… ಮಾಡ್ತೇವೆ.. ತಮ್ಮನ್ನೂ
ನನ್ನ poor beloved but gutless brotherನೂ! ನಮಸ್ಕಾರ, ಆಶೀರ್ವಾದ… ಹೇಗೋಕಾದ್ರೂ
ಇಟ್ಗೊಳ್ಳಿ… ನಾವು ಬರ್ತೇವೆ…!

ಕಮಲು: (Over Narasimhayya’s shouklets whispering)
ನಾನ್ಹೇಳ್ಳಿಲ್ವೇ! baby ! Big baby! (aloud) ನಾಳೆ ಬಾ ನಿನ್ನ babyನ ಎತ್ಕೊಂಡು… ನಿನ್ನ
big babyನೂ Tigerನೂ ಕರ್ಕೊಂಡು… ಬಾ …
———————————————————–
ಅಮ್ಮಾವ್ರು: (Nods)

ಗಂಡ: ಕ್ಷಮ್ಸು! Dear boy! Co Coa !

ನರಸಿಂಹಯ್ಯ: Oh! dash your Coca! We want to go home! ಅಲ್ವೇನೇ?

ಕಮಲ: ನೀವು ಹೇಳಿದ್ಹಾಗೆ!

ಗಂಡ: Certainly dear hay! Do go home !: but after drinking this Cocoa!

[ನರಸಿಂಹಯ್ಯನ ಕೈಗೆ ಕೊ ಕೋ ಕಪ್ಪನ್ನು ಕೊಡುವನು. ಅವನು ಅದನ್ನು ಕುಡಿದು, ತಕ್ಷಣ
ಬಾರೇ! ನನ್ನ ರಾಣಿ! ಬಾ’ ಎಂದು ಕಮಲವ ಕೈ ಹಿಡಿದು ಎಳೆದುಕೊಂಡು ಹೋಗುವನು]

ಗಂಡ: (ಅಮ್ಮಾವ್ರಿಗೆ) Visitorsನ ಕಳಿಸಿಬಿಟ್ಟು ಬರ್ತೇನೆ, dear!

ಅಮ್ಮಾವು: Certainly : ಬೇಗ ಬನ್ನಿ! ಅಷ್ಟರಲ್ಲಿ ಮಗು ಎದ್ದರೆ ನಾನು ನೋಡಿಕೋತೇನೆ,

[ಗಂಡನ ಕಣ್ಣುಗಳಲ್ಲಿ ಅಲ್ಪ ವಿಸ್ಮಯದ ಹೊಳಪು ಕಾಣುವುದು)
[ಗಂಡ Exit]

[ಅಮ್ಮಾವ್ರು, Rocking Chairನಲ್ಲಿ ಸುಮ್ಮನೆ ಕುಳಿತು ಮೊದಲನೆಯ ದೃಶ್ಯದಲ್ಲಿ ಓದುತ್ತಿದ್ದ
ಪುಸ್ತಕವನ್ನು ಮತ್ತೆ-ಆದರೆ ಅರೆಮನಸ್ಸಿನಿಂದ-ಒದುತ್ತ, ಸ್ವಲ್ಪ ಶಬ್ದವು ಕೇಳಿ ಬಂದಾಗೆಲ್ಲ, ಮಗು
ಮಲಗಿರುವ ತೊಟ್ಟಿಲ ಕಡೆ ನೋಡುತ್ತಾ, ಪುನ: ಓದುತ್ತಾ ಇರುವಳು,

ಎರಡು ನಿಮಿಷಗಳಾದ ಅನಂತರ ಮಗು ಏಳುವುದು ಅಮ್ಮಾವ್ರು ಥಟ್ಟನೆ ಪುಸ್ತಕವನ್ನು
ತೆಗೆದಿಟ್ಟು, ತೊಟ್ಟಿಲನ್ನು ಸಮೀಪಿಸಿ, ‘ಮಲಕ್ಕೊ-ಮಗು’ ‘ಮಲಕ್ಕೋ’, ಎಂದು ಮೆಲ್ಲನೆ ಹೇಳುತ್ತ,
ಮಗುವನ್ನು ತಟ್ಟಿ ನಿಧಾನವಾಗಿ ತೂಗುವಳು. ಅಷ್ಟ್ಹೊತ್ತಿಗೆ ಸರಿಯಾಗಿ ಗಂಡನ
ಪ್ರವೇಶ-ಮರೆಯಲ್ಲಿ -ಇದನ್ನು ನೋಡಿ ವಿಸ್ಮಯಗೊಂಡು ನಿಲ್ಲುವನು.

ಅಮ್ಮಾವ್ರು ತೊಟ್ಟಲಿಗೂ Rocking Chairಗೂ ಮೊದಲು ‘ಗಂಡನು’ ಕಟ್ಟಿದ್ದ ಹಗ್ಗವನ್ನು,
ಪುನಃ ತಾನೇ Rocking Chairಗೆ ಕಟ್ಟಿ, ಮೊದಲಿನಂತೆ ಪ್ರಸ್ತಕವನ್ನು ಹಿಡಿದು Rocking Chairನಲ್ಲಿ
ಕುಳತು, ಎಚ್ಚರಿಕೆಯಿಂದ, rock ಮಾಡುವುದರ ಮೂಲಕ ತೊಟ್ಟಿಲನ್ನೂ ತೂಗುತ್ತ,
ಓದಲಾರಂಭಿಸುವಳು.

ಗಂಡನ ಒಳಗೆ door Cಗೆ ಹೋಗುವ ಮೊದಲ ತೊಟ್ಟಿನ ಹತ್ತಿರ ಮೆಲ್ಲನೆ ಬಂದು
‘ಅಮ್ಮಾವ್ರ’ಲ್ಲಿ ಆಗಿರುವ ಬದಲಾವಣೆಯನ್ನು ಗ್ರಹಿಸಿ, ನಿಟ್ಟುಸಿರಿಟ್ಟು, ಮುಗುಳುನಗೆಯ
ಮೊಗದಿಂದ-ತೊಟ್ಟಿಲು-ಅಮ್ಮಾವ್ರು- ಕಡೆಗೆ ನೋಡುತ್ತ ನಿಲ್ಲುವನು.]

[ಪ ರ ದೆ ಯು ಮೆ ಲ್ಲ ನೆ ಜಾ ರು ವು ದು]
==================================================================

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಲಿ
Next post ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…