ವಿಜ್ಞಾನ ಅವಿಷ್ಕಾರಗೊಂಡಂತೆ ನಿರುಪಯುಕ್ತ ವಸ್ತುಗಳಿಂದಲೂ ಕೂಡ ಹೊಸವಸ್ತುವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಲಿದೆ. ನಿರುಪಯುಕ್ತ ವಸ್ತುಗಳಾದ ಕಸ, ಕಡ್ಡಿ ಎಲೆ, ಸಿಪ್ಪೆಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತವೆ. ಇದರಂತೆ ವಿಜ್ಞಾನಿಗಳು ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿ ಅಮೂಲ್ಯ ವೈವಿಧ್ಯ ವಸ್ತು- ಗಳನ್ನು, ಉಪಯೋಗಗಳನ್ನು ಕಂಡು ಹಿಡಿದಿದ್ದಾರೆ. ಈ ಭತ್ತದ ಬೂದಿಯಿಂದ ಉತ್ಕೃಷ್ಠಗುಣಮಟ್ಟದ ಸಿಮೆಂಟ್ ತಯಾರಿಸಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಇಂತಹ ಭತ್ತದ ಸಿಪ್ಪೆಯ ಬೂದಿ ಆಧಾರಿತ ಸಿಮೆಂಟ್ ಸಾಧಾರಣ ಸಿಮೆಂಟಿಗಿಂತಲೂ ಶ್ರೇಷ್ಠಮಟ್ಟದ್ದೆಂದು ತಿಳಿದು ಬರಿದಿದೆ. ಭತ್ತದ ಸಿಪ್ಪೆಯ ಬೂದಿಯು ಕಾಂಕ್ರಿಟ್ ತಂತ್ರಜ್ಞಾನದಲ್ಲಿಯೇ ಹೊಸಶಾಖೆಯೊಂದನ್ನು ತೆರೆದಿದೆ ಮಾತ್ರವಲ್ಲ “ಬಹುಪಯೋಗಿ” ಎಂದು ಖಚಿತವಾಗುತ್ತಲಿದೆ. ಸಿಮೆಂಟಿನಂತಹ ಪುಡಿರೂಪದ ವಸ್ತು ಅಷ್ಟೇ ಅಲ್ಲದೇ ಹೊಸ ನಮೂನೆಯ ಇಟ್ಟಗೆಗಳ ತಯಾರಿಕೆಯಲ್ಲಿಯೂ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಲಾಗುತ್ತದೆ. ಕಾಂಕ್ರೀಟ್ ರಸ್ತೆನಿರ್ಮಾಣ ಕಾರ್ಯ- ದಲ್ಲಿಯೂ ಇಂತಹ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿಕೊಳ್ಳಬಹುದೆಂದು ಪ್ರಯೋಗಗಳಿಂದ ಕಂಡುಹಿಡಿಯ- ಲಾಗಿದೆ. ದಿನನಿತ್ಯ ಮನೆ ಮತ್ತು ಹೋಟೆಲ್‌ಗಳಲ್ಲಿ ಭತ್ತವನ್ನು ಸುಟ್ಟು ಬೂದಿಯಾದ ನಂತರ ನಿರುಪಯುಕ್ತವೆಂದು ಬಿಸಾಕುತ್ತಾರೆ. ಬಹುತೇಕ ಭತ್ತಕುಟ್ಟುವ ಯಂತ್ರಗಳು ಉಗುಳಿದ ಹೊಟ್ಟನ ರಾಶಿಯನ್ನು ತಿಪ್ಪೆಗೆಸೆಯುತ್ತಾರೆ. ಅಥವಾ ಬಿಸಾಕುತ್ತಾರೆ. ಅತ್ಯಂತ ಉಪಯುಕ್ತವಾಗುವ ಈ ಭತ್ತದ ಹೊಟ್ಟನಿಂದಾಗುವ ಉಪಯೋಗಗಳನ್ನು ತಿಳಿದು ಸದುಪಯೋಗಪಡಿಸಿಕೊಳ್ಳಬೇಕಿದೆ. ಅಥವಾ ಇಂತಹ ತಂತ್ರಜ್ಞಾನ ಇರುವಲ್ಲಿಗೆ ಭತ್ತದ ಹೊಟ್ಟನ ಲೋಡುಗಳನ್ನು ಸಾಗಾಣಿಕೆ ಮಾಡಿ ಅದರಿಂದಲೂ ಹಣಗಳಿಸಬಹುದು.
*****
Related Post
ಸಣ್ಣ ಕತೆ
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…