Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ಅದು ಶುಕ್ರವಾರ, ಜೂನ ೧೨, ನಾನು ಬೆಳಿಗ್ಗೆ ಆರಕ್ಕೆಲ್ಲಾ ಎದ್ದೆ. ಅಂದು ನನ್ನ ಹುಟ್ಟಿದ ದಿನ. ಆದರೆ ನಾನು ಅಷ್ಟು ಬೇಗನೇ ಏಳುವಂತಿರಲಿಲ್ಲ. ನನ್ನ ಆತುರವನ್ನು ಆರು ಮುಕ್ಕಾಲು ಗಂಟೆಯವರೆಗೂ ಅದು ಹೇಗೋ ತಡೆದುಕೊಳ್ಳಬೇಕಿತ್ತು. ಆನಂತರ ಎದ್ದು ಡೈನಿಂಗ್ ಕೋಣೆಗೆ ಹೋದೆ. ಅಲ್ಲಿ ನಮ್ಮ ಬೆಕ್ಕು ಮೂರ್ಜೆ ನನ್ನನ್ನು ಪ್ರೀತಿಯಿಂದ ಇದಿರುಗೊಂಡಿತು.
ಏಳು ಹೊಡೆಯುತ್ತಿದ್ದಂತೆ ಅಪ್ಪ ಅಮ್ಮನಿದ್ದಲ್ಲಿಗೆ ಹೋದೆ. ನಂತರ ಹೊರ ಜಗಲಿಯ ಮೇಲೆ ಬಂದು ನನಗೆ ಬಂದ ಕಾಣಿಕೆಗಳನ್ನು ಬಿಚ್ಚತೊಡಗಿದೆ. ಅದರಲ್ಲಿ ಮೊದಲ ಶುಭಾಶಯ ನಿನ್ನದಾಗಿತ್ತು. ಅದೇ ಎಲ್ಲಕ್ಕಿಂತಲೂ ಚೆಂದದ್ದಾಗಿತ್ತು. ಮೇಜಿನ ಮೇಲೆ ಹೂ ಗೊಂಚಲು, ಒಂದು ಸಸಿ, ಹಾಗೂ ಪಿಯೋನಿ ಗಿಡಗಳು [ಒಂದೇ ಸಲಕ್ಕೆ ಎರಡು ಹೂ ಬಿಡುವ ದೊಡ್ಡ ಸಸ್ಯ.] ಹಾಗೂ ಇನ್ನಿತರ ಅನೇಕ ವಸ್ತುಗಳಿದ್ದವು.

ಅಪ್ಪ ಅಮ್ಮ ನನಗೆ ಎಷ್ಟೊಂದು ವಸ್ತುಗಳನ್ನು ತಂದಿದ್ದರು. ಆ ದಿನ ಗೆಳೆಯರೆಲ್ಲ ನನ್ನನ್ನು ಸಾಕಷ್ಟು ಸತಾಯಿಸಿದರು. ಉಳಿದೆಲ್ಲ ವಸ್ತುಗಳ ಜೊತೆ ಜೊತೆಗೆ ನನಗೊಂದು ಒಬ್ಸ್ಕುರಾ ಕ್ಯಾಮರಾ, ಒಂದು ಪಾರ್ಟಿ ಗೇಮ್, ಸಾಕಷ್ಟು ಸಿಹಿತಿನಿಸುಗಳು, ಚಾಕಲೇಟುಗಳು, ಜೋಸೆಫ್ ಕೋಹೆನ್‌ನ “Tales and Legends of the Netherland”, “Daisy’s Mountain Holiday” ಮತ್ತು ಸ್ವಲ್ಪ ಹಣವೂ ಕಾಣಿಕೆ ರೂಪದಲ್ಲಿ ಸಿಕ್ಕಿತು. ಅದರಿಂದ “The Myths of Greece and Rome-Grand” ಖರೀದಿಸಬಹುದು.

ಅಷ್ಟೊತ್ತಿಗೆ ಲೀಸ್ ನನ್ನನ್ನು ಕರೆಯಲು ಬಂದಳು ಮತ್ತು ನಾವು ಶಾಲೆಗೆ ಹೋದೆವು. ವಿರಾಮದ ವೇಳೆಯಲ್ಲಿ ಎಲ್ಲರಿಗೂ ಸಿಹಿ ಬಿಸ್ಕೀಟುಗಳನ್ನು ನೀಡಿದೆ. ನಂತರ ನಾವು ಪಾಠಗಳಗೆ ಹಿಂದಿರುಗಬೇಕಿತ್ತು.

ಇವತ್ತು ಇಲ್ಲಿಗೆ ಸಾಕು- ಬೈ ಬೈ – ನಾವೀಗ ಒಳ್ಳೆಯ ಸ್ನೇಹಿತರಾಗುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...