Home / ಕವನ / ಕವಿತೆ / ಕಮ್ನರ್‌ ದಿನ್ನೆಯಿಂದ

ಕಮ್ನರ್‌ ದಿನ್ನೆಯಿಂದ

(ಆಕ್ಸಫರ್ಡಿಗೆ ಸಮೀಪವಾಗಿದ್ದ ಹಳ್ಳಿಯ ಗುಡ್ಡ)

ಮಾಗಿಯು ಹಿಮ್ಮೆಟ್ಟುವ ಮುನ್ನ
ಮಾಗಿಯು ಹೊನ್ನಾಗಿಸಿದ ಹಸಿರೆಲೆಗಳನ್ನು
ಕುಳಿರು ಬಂದು ಮಣ್ಣುಗೂಡಿಸುವ ಮುನ್ನ
ಬೂದಿಬಣ್ಣದ ಮಂಜು ಬಂದು
ಬೀದಿಬೀದಿಗೆ ಬೀಳುವ ಮುನ್ನ,-
ಆಂಗ್ಲದೇವಿ!
ನೋಡಿದೆನು ನಿನ್ನ ಮಲೆನಾಡನು,
ಕಂಡೆನು ನಿನ್ನ ದೇಹಸೌಷ್ಠವವನು,
ನಿನ್ನ ಚೆಲುವಿಕೆ-ನಿಲುವಿಕೆಯನು,
ನಿಸರ್ಗಸಿದ್ಧ ಪ್ರಕೃತಿಸೌಂದರ್ಯವನು!

ಕಮ್ನರದ ಕಮ್ಮರಗಳನೆಲ್ಲ ನೋಡಿದೆ-
ಬಣ್ಣಬಣ್ಣದ ಹೂವನ್ನು ಕಣ್ಣು೦ಬ ನೋಡಿ ದಣಿದೆ:
ಸೇವಂತಿಗೆ, ಗುಲಾಬಿ, ಚಂಡುಹೂ, ದುಂಡುಹೂ,
ಮಂಜಿನಲ್ಲಿ ಮಾಟವಾಗಿ ಕೊರೆದಂಥ ಹೂ,-
ಗೊಂಚಲು ಗೊಂಚಲಾಗಿ ಹಣ್ಣು ವಿುಂಚುವ ಮರಗಳನ್ನು-
ಚಂಚುವಿಡುವ ಪಕ್ಷಿಯಂತೆ ಚಂಚಲನಾಗಿ ನೋಡಿದೆ!
ನೋಡಿದೆ ನಿನ್ನ ಭವ್ನದಿವ್ಯ ಬಯಲುಗಳನ್ನು
ಹಚ್ಚ ಹಸಿರನು ಮೆಚ್ಚುವಂತೆ ಹಾಸಿದ ತಗ್ಗುದಿನ್ನೆಗಳನ್ನು
ಹುಲುಸಾಗಿ ಬೆಳೆದ ಹುಲ್ಲನ್ನು,
ಚಿತ್ರವಿಚಿತ್ರವಾದ ಬೇಲಿಯನ್ನು.

ನಿನ್ನ ನಾಡಿದು ನಂದನವನವೆನ್ನುತಿದ್ದೆನು: ಆಂಗ್ಲದೇವಿ!
ಆದರೆ ನಿನ್ನ ಸೌಂದರ್ಯವು ಭಯಾನಕವಾಗಿಹುದೆನಗೆ!
ನೂರು ಕಮತನೂರುಗಳನು ಹಾಳುಮಾಡಿ
ಬೆಳೆದಿತು ನಿನ್ನ ಕಮನೂರ ಸಂಪತ್ತು:
ನೀನು ಆಂಗ್ಲ, ನಾನು ಭಾರತೀಯ,-
ಬಾರದಿಲ್ಲಿ ಹೃದಯದ ದಂಪತ್ತು!
ನೀನು ಸು೦ದರಳಹುದು: ಆದರೆ ನಿನ್ನ ಸೌಂದರ್‍ಯವ
ಗಮನಿಸಲಾರೆ: ಕ್ಷಮಿಸೆನ್ನನು, ಆಂಗ್ಲದೇವಿ!

ನಿನ್ನ ಮಕ್ಕಳು ಹಿಂಡಿ ಹಿಪ್ಪೆ ಮಾಡಿದ ಸಿಪ್ಪಿ ನಾನು,-
ನನ್ನ ಬಣ್ಣನೆ ನಿನಗೇಕೆ ಬೇಕು?
ನನ್ನ ತಾಯ್ನಾಡನ್ನು ಸುಲಿದು ಒಲಿದರು ನಿನ್ನೊಳು ತಂಯಿಯೆ೦ದು:
ಬಡವನ ನುಡಿಯ ತೊಡವೇಕೆ ನಿನಗೆ?
ನಿನ್ನ ಸ೦ದಿಗೊಂದಿಯನು ಮೂಲೆ-ಕೊಂಪಿಯನು ಸಹ
ಜಗಕೆತ್ತಿ ತೋರಿಸಿದರು ನಿನ್ನ ಕವಿಗಳು:
ನನ್ನ ನಾಡಿನ ಹಾಡಿಗೆಂದು ಮುಡಿಪಿರಲಿ ನನ್ನ ಜೀವ.

ಯುರೋಪಿನ ನಂದನವನಗಳಿರಾ!
ಹೊರವುಗಲಿ ನಿಮ್ಮ ನರುಗಂಪು, ಸುಳಿಯಲಿ ನಿಮ್ಮ ಸುಗಂಧ!
ಬರುತಿಹುದು ಕುಳಿರು ಹಿಂದೆ!
ನಡೆಯಲಿ ನಿಮ್ಮ ವಿಲಾಸ, ಚಿಗುರಲಿ ನಿಮ್ಮ ಮಂದಹಾಸ:
ಬರುತಿಹುದು ಕುಳಿರು ಹಿಂದೆ!
ಮಂಜೆಲ್ಲ ಬಂದು ಮುಸುಕಿ ನಂಜೇರಿ ನೀವು ಬಿದ್ದಾಗ-
ಹೂವಿಲ್ಲ, ಎಲೆಯಿಲ್ಲ, ಚಿಗುರಿಲ್ಲ. ಹೊಗರಿಲ್ಲ-
ನಾಸ್ತಿ! ನಾಸ್ತಿ! ನಾಸ್ತಿ!
ಶೂನ್ಯಮಿದಂ! ಶೂನ್ಯಮಿದಂ! ಶೂನ್ಯಮಿದಂ!
ಎಲೆಯಿಲ್ಲದ ಟೊಂಗೆಗಳು ಮೊರೆಯುಡುವವು ಮುಗಿಲಿನೆಡೆಗೆ:
ನೆಲೆಯಿಲ್ಲದ ಮಂಜಿನ ಮಳೆ,- ಬೀಳುವದಾಗ ಅವುಗಳ ಮೇಲೆ.
ಎತ್ತರವಾಗಿ ನಿಂತ ನಿರ್ಜೀವ ವೃಕ್ಷಗಳಿಗೆ
ಬಿತ್ತರಿಸಿ ಬೀಳುವ ಮಂಜೊಂದೇ ಉತ್ತರ: ಮಂಜೊಂದೇ ಉತ್ತರ!
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...