Home / ಕವನ / ಕವಿತೆ / ಮಕ್ಕಳು

ಮಕ್ಕಳು

ಹಸುಮಳ್ಕಳಾಡಿದರ, ಹಸನವ್ವ ಅಂಗಳ
ದೆಸಿಮುಖದ ಜೆಲುವ ಮಗರಾಮ | ಆಡಿದರ
ಹಸನ ಹಡದವ ಅರಮನೆ ||

ಹಚ್ಚನ್ನ ಮೈಯಾವ, ಹವಳದ ತುಟಿಯಾವ
ಎಲ್ಲಿಗ್ಹೋಗಿದ್ದಿ ಗಿಳಿರಾಮ | ತವರೂರ
ಉತ್ತತ್ತಿ ವನಕ ಉಲುವಿಲ್ಲ ||

ದೇಶದೇಶದ ಮಂದಿ, ಕಾಸಿಗೆ ಹೋಗತಾರ
ಕೂಸು ಕಂದವ್ವ ಒಳಹೊರಗ | ಆಡಿದರ
ಕಾಸಿ ಪರವೂತ ನನಗಾದೆ ||

ಆಗರದನ್ನ ಗಿಣಿಯೆ, ಮೂಗು ಸಂಪಿಗಿ ತೆನಿಯೆ
ಯಾರನ್ನ ಹೋತಿಯೆ ನನ ಕಂದ | ಇನಿಯರ
ರೂವುಚ್ಚಿ ನನ್ನ ಉಡಿಯಾಗ ||

ಸಡಗರ ಸಂಪತ್ತು, ಯಾರಿಂದ ಹಡದವ್ವ
ಕಡೆವ ಹಾಕೀರು ಮಗನಿಂದ | ಹೊಸ್ತಿಲ
ದಾಟೇರಿ ಬರುವ ಸೊಸಿಯಿಂದ ||

ಕಂದವ್ವ ಕಾಡಿದರ, ಸುಂದವ್ವ ಮನೆದಗದ
ರಿಮ್ಮರಿಮ್ಮನ್ನು ಹಲಗಿ | ತೊಟ್ಟಿಲದಾಗ
ಕಂದವ್ಚ ಕಾಡಿ ಮಲಗ್ಯಾನ ||

ಗಂಡು ಮಗನೆ ಬಾರೊ, ಬೆಂಡು ಬೆತ್ತಸ ಬಾರೊ
ದುಂಡ ಮುತ್ತಿನ ಸರ ಬಾರೊ | ಕಂದವ್ವ
ಬಂಗಾರ ಬಾರೊ ಬೈಲಿಗೆ ||

ಬಡತನ ಬಂದರ, ಬಡಿಬ್ಯಾಡ್ರಿ ಮಕ್ಕಳನ
ಆಡ್ಯಾಡಿ ಬಂದು ತೊಡಿಮ್ಯಾಗ | ಕೂತರ
ಬಂದ ಬಡತನ ಬಯಲಾಗಿ ||
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...