ಗೃಹಸ್ಥ

ಕನಸಿನಲ್ಲಿ ಕಂಡಿದ್ದೆನೊಮ್ಮೆ ಚಲುವತಿಯನ್ನು,
ಅವಳೊಂದು ಮೃದುಹಾಸ ನನ್ನ ಮನವನು ಸೇರಿ
ಅನುದಿನವು ಸಂಚರಿಸುತಿತ್ತು ಹೆಣ್ಣನು ಸಾರಿ
ಆ ನಗೆಯು ಅರಳುವುದ ನೋಡಬೇಕೆಂದೆನ್ನ
ಕಣ್ಣುಗಳು ಬಯಸಿದುವು. ಓರ್‍ವ ಬಾಲಕಿಯನ್ನ
ಆ ನಗೆಯಲಂಕರಿಸಿಹುದ ನೋಡಿ ಕಳೆಯೇರಿ
ನನ್ನ ತನು-ಮನ-ಧನವನಾಗಮಾಡುತ ಸೂರಿ-
ಮದುವೆಯಾದೆನು ಅಯ್ಯೋ ! ಮುಂದೆ ಕಂಡವು . ಹೊನ್ನ

ತೊಡಕುಗಳು, ಹೆಣ್ಣೆದೆಯ ಅಳುಕುಗಳು, ಹುಟ್ಟಿದಣು-
ಗರ ದೀರ್‍ಘರೋದನವು. ಎಲ್ಲಿ ಮರೆಯಾಯ್ತೇನೊ
ಆ ನಗೆಯು! ಈಗದರ ಸುಳಿವಿಲ್ಲ.! ಮೃಗಜಲವ
ಬೆನ್ನಟ್ಟಿ ಕಾಡುಮಿಗಗಳಿಗೆ ಉಣಿಸಾಯ್ತೊ ತನು?
ಈಗ ಬಿಸುಸುಯ್ಯುವೆನು. ಬಾಳಿಹುದೆ ಇಂತೇನೋ!
ತೊಗಟಿಯಲಿ ಜೇನು, ತಿರುಳಿನಲಿ ಹಾಲಾಹಲವೊ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯಶರಣರ ದಾರಿ ಕಂಡು ಕೊಂಡೆ
Next post ಸಾವಿರದ ಮೇಲೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…