ಸತ್ಯಶರಣರ ದಾರಿ ಕಂಡು ಕೊಂಡೆ

ಓ ತಂದೆ ಶಿವತಂದೆ ಯುಗಯುಗದ ಗುರುತಂದೆ
ನಿನ್ನಿಂದಲೇ ಬೆಳಕು ಬೆಳದಿಂಗಳು
ಹಾಲು ಸಾಗರ ನೀನೆ ಪ್ರೇಮ ಸಾಗರ ನೀನೆ
ನೀನಿಲ್ಲದೀಭುವನ ಬರಿ ತಂಗಳು

ಶಾಂತಿ ಸಾಗರ ನೀನು ಪ್ರೀತಿ ಸಾಗರ ನೀನು
ನೀ ಸತ್ಯ ಶ್ರೀ ಶಿಖರ ಶ್ರೀಶೈಲವು
ಜ್ಞಾನ ಸಾಗರ ನೀನು ಕರುಣ ಸಾಗರ ನೀನು
ನೀ ಬಂದ ಈ ಭುವನ ಕೈಲಾಸವು

ನಾವೆ ಪಾರ್‍ವತಿ ನಿನಗೆ ದೇವಶಂಕರ ಗೆಲುಗೆ
ಪಂಚತತ್ತ್ವದ ಭೂಮಿ ಹೂವಾಗಲಿ
ನಿತ್ಯ ಹೊಸಮಳೆ ಬರಲಿ ಕಣ್ತುಂಬ ಬೆಳೆಬರಲಿ
ಬೆಳೆ ತುಂಬ ನೀನಕ್ಕು ತುಂಬಿಬರಲಿ

ನುಡಿಗಲಿತೆ ನಿನ್ನಿಂದ ನಡೆಗಲಿತೆ ನಿನ್ನಿಂದ
ಉಡಗಲಿತೆ ಉಣಗಲಿತೆ ಪ್ರೇಮತಂದೆ
ನಿನ್ನೊಳಗ ಉಳಕೊಂಡೆ ನಿನ್ನೊಳಗ ಪಡಕೊಂಡೆ
ಸತ್ಯ ಶರಣರ ದಾರಿ ಕಂಡುಕೊಂಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ
Next post ಗೃಹಸ್ಥ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…