ತೋಳ

ತೋಳ ಬಂದಿತು ತೋಳ ಹುಲಿಯ ಚರ್‍ಮವ ಹೊದ್ದು,
ಸುಭಗಾಕೃತಿಯ ಮಾನಿಸನ ರೂಪವನು ತಳೆದು
ಶೀಲ ಸಭ್ಯತೆಗಳಲಿ ಉಚಿತವಾಗಿಯೇ ಬೆಳೆದು,
ತೋಳ ಬಂದಿತು ತೋಳ ಮನುಜಾಕೃತಿಯ ಕದ್ದು!
ಅತಿಥಿಸತ್ಕಾರದಿಂದಾದರಿಸಿದೆನು ಎದ್ದು,
ನಯವಿನಯದಿಂದದರ ವಾದದ್ವಯವನು ತೊಳೆದು.
ನನ್ನೆದೆಯಲಂಕರಿಸೆ ಭಯದಂಕುರವು ಮೊಳೆದು,-
ತೋಳ ಬಂದಿತು ತೋಳ ಹುಲಿಯ ಚರ್‍ಮವ ಹೊದ್ದು.

ತೋಳದುಸಿರಿಗೆ ನಂದಿತೆನ್ನ ನಂದಾದೀಪ
ಅದರ ನೋಟಕೆ ಕಮರಿತೆನ್ನ ಮನೆಹೂಬಳ್ಳಿ
ಬಾಳ್ವುದೆನಲೀ ವೃಕೋದರನ ಸೋಲಿಸಿ, ತಳ್ಳಿ,-
ಮೆಲಕಾಡಿಸಿತ್ತದುವೆ ಸಾಕುಮೊಲವನು ಮೆದ್ದು.
ದೂರದಲಿ ಮಾನಿಸನು; ತೋಳ ಬರಲು ಸಮೀಪ!
ತೋಳ ಬಂದಿತು ತೋಳ, ಮನುಜಾಕೃತಿಯ ಕದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವ ಜಂಗಮ ದೀಪ ಬೆಳಗಬೇಕು
Next post ಕಾಡುತಾವ ನೆನಪುಗಳು – ೨೮

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…