ಒಬ್ಬ ಶಿಷ್ಯ ತನ್ನ ಆಪ್ತ ಗುರುಗಳಲ್ಲಿ ಬಂದು ಹೇಳಿದ. “ಗುರುಗಳೆ! ಶೂನ್ಯವನ್ನು ನಾ ಗ್ರಹಿಸಿ ಹಿಡಿಯಲು ಕಲಿತು ಬಿಟ್ಟೆ”ಎಂದ.
“ಭಲೇ! ಅದು ಹೇಗೆ?” ಎಂದರು ಗುರುಗಳು?
“ಕೈಯ್ಯ ಬೊಗಸೆ ಮಾಡಿ ಮುಚ್ಚಿಹಿಡಿದಿರುವೆ ಶೂನ್ಯವನ್ನು” ಎಂದ.
“ಕೈಯಲ್ಲಿ ಎಲ್ಲಾ ಹಿಡುಸುತಿಲ್ಲವಲ್ಲ” ಎಂದರು ಗುರುಗಳು.
ಶಿಷ್ಯ ಕೇಳಿದ “ಹಾಗಾದರೆ ನೀವೇ ತೋರಿಸುವುವಿರಾ?”.
“ನನ್ನ ಕಣ್ಣಲ್ಲಿ ನಿನ್ನ ಕಣ್ಣಿಟ್ಟು ಈಗ ನೋಡು”- ಏನು ಕಾಣುತ್ತಿರುವೆ?
“ನಿಮ್ಮ ಕಣ್ಣು ಗುಡ್ಡೆಯಲ್ಲಿ ಶೂನ್ಯ ಕಾಣುತ್ತಿರುವೆ”.
“ಧನ್ಯಗುರುಗಳೆ, ನೀವು ಕಣ್ಣಿನಲ್ಲಿ ಹಿಡಿದಿಟ್ಟ ಶೂನ್ಯವನ್ನು ಇಂದು ನಾನು ಕಂಡೆ” ಎಂದ.
*****