ಜಾತ್ರೆ ಜಾತ್ರೆ ಜಾತ್ರೆ
ಜೀವನದೀ ತಾಣವೇ ಜಾತ್ರೆ
ಇಲ್ಲಿ ಬಂದು ನೀನು ನಿನ್ನ ಮರೆತು
ಹಿಡಿದಿರುವೆ ನಿನಗಾಗಿ ಸ್ವಾರ್‍ಥ ಪಾತ್ರೆ
ಇವರು ನಿನ್ನ ತಾಯಿ ತಂದೆಯರೇ
ಇವರು ನಿನ್ನ ಬಾಳುರಂಗಿಸುವರೇ
ನಿನ್ನ ಮೂಲದ ಪಾಲಕರ ಮರೆತರೆ
ನಿನ್ನ ಮಾತ್ರ ಬಿಡದೆ ಹಂಗಿಸುವರೆ
ನಾನು ನನ್ನದೆಂಬ ಮಮಕಾರ
ನಿನ್ನ ಕಣ್ಣಿನ ಮುಂದಿನ ಕಾಡಿಗೆ
ದೇವರನ್ನು ಮರೆಸುವ ಮಾಯೆ
ನಿತ್ಯ ಕಾಡುತ್ತಿದೆ ನಿನ್ನ ಪಾಡಿಗೆ
ನಿನ್ನ ಬಾಳು ಶರೀರಗಳನ್ನೆಲ್ಲ
ಕಾಪಾಡುವವ ಆ ಒಡೆಯನಾಗೆ
ಒಮ್ಮೆಯಾದರೂ ಸ್ಮರಣಿ ಬಾರದೆ
ಕೃತಘ್ನ ಎನ್ನುವೆ ಹೀಗೆ ನಡೆಯುವನಿಗೆ
ಒಮ್ಮೆ ನಿನ್ನ ಯೊಚ್ನೆಗಳಿಗೆ ತಟ್ಟಿ ಸಾಗು
ಗಂಭೀರ ಮೌನದಿ ಅಂತರ ಮುಖಿ
ಆಗ ನೀನು ಚಂಚಲತೆಗಳಿಂದ ಕರಗಿ
ಮಾಣಿಕ್ಯ ವಿಠಲನಾಗಿ ಸದಾ ಸುಖಿ
*****