ಎರಡು ದಿನಗಳ ಹಿಂದೆ ಜೀನ್ ವಾನನಿಗೆ ಯಾರೋ ಒಂದು ಕಾಗದವನ್ನು ತಂದುಕೊಟ್ಟಿದ್ದರು. ಅದನ್ನು ತಂದವರ ಹೆಸರು ಅವನಿಗೆ ತಿಳಿಯದು. ಅದರಲ್ಲಿ ‘ ಈ ಸ್ಥಳವನ್ನು ಬಿಟ್ಟು ಹೊರಡು,’ ಎಂದು ಮಾತ್ರ ಬರೆದಿತ್ತು. ಇದನ್ನು ಉದಾಸೀನ ಮಾಡಲು ಧೈರ್ಯವಿಲ್ಲದೆ, ಅವನು ಆ ಕೂಡಲೇ ಕೋಸೆಟ್ಟಳನ್ನೂ ಮನೆಯ ಪರಿಚಾರಿಣಿಯಳನ್ನೂ ಕರೆದುಕೊಂಡು ತನ್ನ ಮೂರನೆಯ ಮನೆಗೆ ಹೊರಟು ಹೋದನು, ನಾವು ಹಿಂದೆ ಓದಿದ ಪತ್ರವನ್ನು ಮೇರಿ ಯಸ್ಸನಿಗೆ ಗುಟ್ಟಾಗಿ ಒಬ್ಬ ಆಳಿನ ಮೂಲಕ ಕಳುಹಿಸಿಕೊಡು ವುದಕ್ಕೆ ಮಾತ್ರ) ಕೋಸೆಟ್ಟಳಿಗೆ ಅವಕಾಶ ದೊರಕಿತು.
– ಸೂಚಿತವಾಗಿದ್ದ ಅಪಾಯದಿಂದ ತಪ್ಪಿ, ತಾವು ಸುರಕ್ಷಿತ ರಾಗಿರುವೆವೆಂದು ಜೀನ್ ವಾಲ್ಜೀನನ ಮನಸ್ಸಿಗೆ ಶಾಂತಿ ಯುಂಟಾಗಿ ಅವನು ಆ ರಾತ್ರಿ ಸುಖವಾಗಿ ನಿದ್ರೆ ಮಾಡಿದನು. ಮೂರನೆಯ ದಿನ ಸಾಯಂಕಾಲದಲ್ಲಿ ಕೋಸೆಟ್ಟಳು ತನಗೆ ತಲೆ ನೋ ಯುತ್ತಿರುವುದೆಂದು ಹೇಳಿ ಹೊತ್ತಿಗೆ ಮುಂಚೆ ಮಲಗಿಕೊಂಡಳು. ಊಟಮಾಡುತ್ತಿರುವಾಗ ಪರಿಚಾರಿಣಿಯು, ‘ ಮಾನ್‌ಸಿಯುರ್, ಏನೋ ಗದ್ದಲವಾಗುತ್ತಿದೆ. ಪ್ಯಾರಿಸ್ ನಗರದಲ್ಲಿ ಯುದ್ದವು ನಡೆಯುತ್ತಿರುವುದು,’ ಎಂದಳು. ಆದರೆ ಅವಳು ಹೇಳಿದ ಮಾತನ್ನು ಅವನು ಅಷ್ಟಾಗಿ ಗಮನಿಸಲಿಲ್ಲ.
ಸ್ವಲ್ಪ ಹೊತ್ತಿನ ಮೇಲೆ, ಅವನು ಕೊಠಡಿಯಲ್ಲಿ ಶತಪಥ ತಿರುಗುತ್ತಿರುವಾಗ, ಪಕ್ಕದ ಮೇಜಿನ ಮೇಲೆ ಬಾಗಿರುವ ನಿಲುವು ಕನ್ನಡಿಯಲ್ಲಿ ಈ ಮುಂದೆ ಬರೆದಿರುವಂತೆ ಮಾತುಗಳು ಅವನ ಕಣ್ಣಿಗೆ ಬಿದ್ದುವು. ‘ ಪ್ರಿಯಾ! ಓ! ನಮ್ಮ ತಂದೆಯು ಈಗಲೇ ಇಲ್ಲಿಂದ ಹೊರಡಬೇಕೆಂದು ನಿಶ್ಚಯಿಸಿರುವನು. ನಾವು ಈ ರಾತ್ರಿ ರೂ ಡಿ ಎಲ್’ಹೋಂ ಆರಂ ಬೀದಿಯ ೭ನೆ ನಂಬರು ಮನೆಗೆ ವಾಸಕ್ಕೆ ಹೋಗುವೆವು. ಒಂದು ವಾರದೊಳಗಾಗಿ ನಾವು ಇಂಗ್ಲೆಂಡನ್ನು ಸೇರುವೆವು. ಕೊಸೆಟ್, ಜೂನ್ ೪ನೆಯ ತಾರೀಖು.
ಮೊದಲು ಅವನಿಗೆ ಇದರ ಅರ್ಥವೇ ತಿಳಿಯಲಿಲ್ಲ. ಆನಂತರ, ಕೋಸೆಟ್ಟಳ ಬರೆವಣಿಗೆಯ ಒುವ ಕಾಗದವು ಕನ್ನಡಿಯ ಮುಂದೆ ತೆರೆದು ಬಿದ್ದಿದ್ದುದು ಅವನ ಕಣ್ಣಿಗೆ ಬಿತ್ತು. ಅವಳು ತಾನು ಬರೆದ ಕಾಗದವನ್ನು ಅದರಿಂದ ಒತ್ತಿದುದೂ ಆ ಬರೆವಣಿ ಗೆಯು ಕನ್ನಡಿಯಲ್ಲಿ ಪ್ರತಿಫಲಿಸಿದ್ದು ಪ್ರತ್ಯಕ್ಷವಾಗಿ ಕಂಡಿತು. ಅವನಿಗೆ ಮೇರಿಯಸ್ಸನ ಹೆಸರು ತಿಳಿದಿರಲಿಲ್ಲ ; ಕಳೆದ ಆರು ವಾರ ಗಳಿಂದಲೂ ಅವನಿಗೂ ಕೋಸೆಟ್ಟಳಿಗೂ ಪರಸ್ಪರ ಭೇಟಿಯಾಗು ತಿದ್ದುದನ್ನೂ ಅವನು ಅರಿಯನು ; ಆದರೆ ಆ ಕೂಡಲೇ ತನ್ನಲ್ಲಿ ತಾನು, ” ಓಹೋ ! ಅವನೇ ! ‘ ಎಂದುಕೊಂಡನು. ಆ ಅಪರಿಚಿತ ನಾದ ಯುವಕನ ವಿಷಯದಲ್ಲಿ ಇವನಿಗೆ ಒಂದು ಭಯಂಕರ ಮನೋವಿಕಾರವೇ ಉಂಟಾಯಿತು. ಅಂತರಂಗದಲ್ಲಿ ಅವನ ಮೇಲೆ ದ್ವೇಷವೇ ಉದಿಸಿತ್ತು.
ತಾನು ಏನು ಮಾಡುತ್ತಿರುವೆನೆಂಬುದು ತನಗೇ ಗೋಚರ ವಿಲ್ಲದೆ ಅವನು ಹೊರಗಡೆಗೆ ಬಂದು, ಬಾಗಿಲ ಬಳಿಯಲ್ಲಿದ್ದ ಒಂದು ಕಲ್ಲಿನ ಮೇಲೆ ಕುಳಿತನು ಕೆಲವು ಗಂಟೆಗಳ ಮೇಲೆ ಯಾವನೋ ಪತ್ರವಾಹಕನು ಬಂದು, ಕೋಸೆಟ್ಟಳ ಹೆಸರಿಗೆ ಬರೆದಿದ್ದ ಒಂದು ಪತ್ರವನ್ನು ಇವನ ಕೈಗೆ ಕೊಟ್ಟನು. ಇದು ತಾನು ಕನ್ನಡಿಯಲ್ಲಿ ನೋಡಿ ಓದಿದ ಪತ್ರಕ್ಕೆ ಪ್ರತ್ಯುತ್ತರವಿರಬೇಕೆಂದು ಅವನಿಗೆ ತೋರಿ ಅನಂತರ ಅವನು ಮೊದಲನೆಯ ಸಲ ಆ ಪತ್ರವನ್ನು ಓದಿದಾಗ, ಮೇರಿಯಸ್ಸನು ಆಗಲೇ ಸತ್ತುಹೋಗಿರುವನು ಅಥವಾ ಕ್ಷಿಪ್ರದಲ್ಲಿ ಸಾಯುವನು, ಎಂಬ ಭಾವವರಿತು ಅವನಿಗೆ ಸಂತೋಷವೇ ಆಯಿತು. ಕೂಡಲೇ ಸ್ವಾಭಾವಿಕವಾದ ಅವನ ಉತ್ತಮ ಗುಣವು ಅವನಲ್ಲಿ ಉಕ್ಕಿ ಹೊರಹೊಮ್ಮಿತು. ಆಗ ಅವನು ಆಯುಧವನ್ನು ತೆಗೆದುಕೊಂಡು, ಗುಂಡಗಳು ಹಾರು ತಿದ್ದ ಸ್ಥಳವನ್ನು ಕುರಿತು ಹೊರಟನು. ರಕ್ಷಣಾರ್ಥವಾಗಿ ಹಾಕಿದ್ದ ಬ್ಯಾರಿಕೇಡ್ ಬಳಿಗೆ ಬಂದು, ಅವನು ತಳಪಾಯದಲ್ಲಿ ಕಟ್ಟಿರುವ ನೆಲಮಾಳಿಗೆಯ ಕೊಠಡಿ ಯೊಳಕ್ಕೆ ಹೋಗಿ ನೋಡಲು, ಅಲ್ಲಿ ಬೇವರ್ಟನನ್ನು ಒಂದು ಕಂಬಕ್ಕೆ ಕಟ್ಟಿದ್ದುದು ಇವನಿಗೆ ಗೋಚರವಾಯಿತು. ಜೇವರ್ಟನು ದುರಹಂಕಾರದಿಂದ ಕಣ್ಣುಗಳನ್ನು ಮುಚ್ಚಿ, ಸುಮ್ಮನೆ ‘ ಇದು ಸ್ವಭಾವವೇ !’ ಎಂದನು.
ಸ್ವಲ್ಪ ಹೊತ್ತಿನ ಮೇಲೆ ಜೀನ್ ವಾಲ್ಜೀನನು, ಆ ಬ್ಯಾರಿ ಕೇಡಿನ ಒಳಭಾಗದಲ್ಲಿ ಬೇಕಾಗಿದ್ದ ಒಂದು ಚರ್ಮದ ಮೆತ್ತೆ ಯನ್ನು ತರುವುದಕ್ಕೋಸ್ಕರವಾಗಿ, ಗುಂಡಿನ ಮಳೆಯೇ ಸುರಿಯು ತ ್ತಿದ್ದ ಬೀದಿಗೆ ನುಗ್ಗಿ ಬಹು ಸಾಹಸದಿಂದ ಅದನ್ನು ತಂದನು. ಅಲ್ಲಿಯ ಸೇನಾಧಿಕಾರಿಯು ಇದನ್ನು ನೋಡಿ ಇವನನ್ನು ಬಹಳ ವಾಗಿ ಗೌರವಿಸಿದನು ; ಆಗ ಜೀನ್ ವಾಲ್ಜೀನನ್ನು, “ಸ್ವಾಮಿ, ನಾನು ಬಹುಮಾನಾರ್ಹನೆಂದು ತಾವು ಎಣಿಸುವಿರಾ ? ‘ ಎಂದನು. ‘ನಿಜವಾಗಿಯೂ ಎಣಿಸುವೆನು.’ ( ಒಳ್ಳೆಯದು ! ಹಾಗಾದರೆ ನಾನೊಂದು ಬಹುಮಾನ ವನ್ನು ಕೇಳಿಕೊಳ್ಳುವೆನು.’ ‘ ಏನದು ? ‘ * ಆ ಜೇವರ್ಟನ ತಲೆಯನ್ನು ನಾನೇ ಹಾರಿಸಿಬಿಡಲು ಅಪ್ರಣೆಯಾಗಬೇಕು.’ ಜೇವರ್ಟನು ತಲೆಯನ್ನೆತ್ತಿ ಜೀನ್ ವಾಲ್ಜೀನನನ್ನು ನೋಡಿ, ಅವನಿಗೆ ಕಾಣದಂತೆ ಸ್ವಲ್ಪ ಅಲುಗಾಡಿ, “ ಅದೇ ತಕ್ಕುದು,’ ಎಂದನು.
ಆ ಅಧಿಕಾರಿಯಾದರೋ, ತನ್ನ ಕೈತುಪಾಕಿಗೆ ಮತ್ತೆ ಮದ್ದು ಗುಂಡನ್ನು ಹಾಕಲಾರಂಭಿಸಿದನು ; ಸುತ್ತಲೂ ನೋಡಿ ಆತನು, ‘ ಆಗಬಹುದು ; ಅದಕ್ಕೆ ಆತಂಕವೇನೂ ಇಲ್ಲ,’ ಎಂದು ಹೇಳಿ, ಜೀನ್ ವಾಲ್ಜೀನನ ಕಡೆಗೆ ತಿರುಗಿ, ‘ ಈ ಗೂಢಚಾರ ನನ್ನೆಳೆದುಕೊಂಡು ಹೋಗು,’ ಎಂದನು. ಜೀನ್ ವಾಲ್ಜೀನನು ಮೇಜಿನ ತುದಿಯಲ್ಲಿ ಕುಳಿತು ನಿಜ ವಾಗಿಯ ಜೇವರ್ಟನನ್ನು ತನ್ನ ವಶಕ್ಕೆ ತೆಗೆದುಕೊಂಡನು. ಅವನು ಕೈತುಪಾಕಿಯನ್ನು ಹಿಡಿದುಕೊಂಡ ಮೇಲೆ ಅದರಿಂದ ಉಂಟಾದ ಸ್ವಲ್ಪ ಶಬ್ದದಿಂದ ಅವನು ಅದರ ಕುದುರೆಯನ್ನು ಮೀಟಿದನೆಂಬುದೂ ತೋರಿತು.
ಸುಮಾರು ಇದೇ ಸಮಯಕ್ಕೆ ಸರಿಯಾಗಿ ತುತ್ತೂರಿಗಳ ಶಬ್ದವು ಇವರಿಗೆ ಕೇಳಿಸಿತು.
ಬ್ಯಾರಿಕೇಡಿನ ಮೇಲಡೆಯಿಂದ, ‘ಬನ್ನಿ ಬನ್ನಿ,’ ಎಂದು ಮೇರಿಯಸ್ಸನು ಕೂಗುತ್ತಿದ್ದನು.
ಜೇವರ್ಟನು ನಿಸರ್ಗವಾದ ಮಂದಹಾಸದಿಂದ ನಕ್ಕು, ಆ ರಾಜದ್ರೋಹಿಗಳ ಕಡೆಗೆ ನೋಡಿ, ‘ನೀವು ನನಗಿಂತಲೂ ಹೆಚ್ಚು ಕಾಲ ಬದುಕಿರಲಾರಿರಿ,’ ಎಂದನು.
‘ ಎಲ್ಲರೂ ಹೊರಗೆ ಹೊರಡಿ’ ಎಂದು ಮಾನ್ಸಿಯಾರ್ ಎಸ್ ಜೊಲ್ರಾಸ್ ಎಂಬುವನು ಕೂಗಿದನು.
ಆ ರಾಜವಿರೋಧಿಗಳು ಗದ್ದಲಮಾಡುತ್ತಾ ಮುಂದಕ್ಕೆ ನುಗ್ಗಿ, ಹೊರಕ್ಕೆ ಹೋಗುತ್ತಿರುವಾಗ, ಜೇವರ್ಟನು, ‘ ನಮಸ್ಕಾರ, ಒಂದು ಕ್ಷಣ, ಹೋಗಿ ಬನ್ನಿ,’ ಎಂದ ಮಾತು ಹಿಂದಿನಿಂದ ಕೇಳಿಸಿತು.
ಜೇವರ್ಟನ ಬಳಿಯಲ್ಲಿ ಜೀನ್ ವಾಲ್ಜೀನನೊಬ್ಬನೇ ನಿಂತನು. ಒಂದಿಯ ಸೊಂಟಕ್ಕೆ ಬಿಗಿದು ಮೇಜಿನ ಕೆಳ ಭಾಗಕ್ಕೆ ಕಟ್ಟಿದ್ದ ಹಗ್ಗದ ಗಂಟನ್ನು ಬಿಚ್ಚಿ, ಇವನು ಅವನನ್ನು ಮೇಲಕ್ಕೆ ಎಳೆಂದು ಹೇಳಿದ ಮೇರೆಗೆ ಬೇವರ್ಟನು ಎದ್ದು ನಿಂತನು.
ಭಾರವನ್ನು ಹೊತ್ತಿರುವ ಪಶುಪ್ರಾಣಿಗೆ ಹಗ್ಗವನ್ನು ಹಾಕಿ ಕರೆದುಕೊಂಡು ಹೋಗುವಂತೆ ಜೀನ್ ವಾಲ್ಜೀನನು ಅವನನ್ನು ತನ್ನ ಹಿಂದೆ ಎಳೆದುಕೊಂಡು ಆ ಮದ್ಯದ ಅಂಗಡಿಯಿಂದ ಹೊರಕ್ಕೆ ಹೊರಟನು, ಬೇಡಿಗಳಿಂದ ಬಂಧಿತನಾಗಿದ್ದ ಜೇ ವರ್ಟನು ಹತ್ತಿರ ಹತ್ತಿರವಾಗಿ ಮಾತ್ರವೇ ಹೆಜ್ಜೆಗಳನ್ನು ಹಾಕಲು ಸಾಧ್ಯವಾಗಿದ್ದುದರಿಂದ ಅವರು ನಿದಾನವಾಗಿ ಹೋಗಬೇಕಾಯಿತು. ಜೀನ್ ವಾಲಜೀನನ ಕೈಯಲ್ಲಿ ತುಪಾಕಿಯಿತ್ತು. ಇವ ರಿಬ್ಬರೂ ಆ ಅಡ್ಡಗೋಡೆಯ ಒಳಭಾಗವನ್ನು ದಾಟಿ ಹೊರಗೆ ಬಂದರು.
ರಾಜವಿರೋಧ ಪಕ್ಷದವರು, ಕೂಡಲೇ ಪ್ರತಿಪಕ್ಷದವರ ಮೇಲೆ ಬೀಳುವ ಉದ್ದೇಶದಿಂದ, ಬೇರೆ ಕಡೆಗೆ ನೋಡುತ್ತಿದ್ದರು. ಮೇರಿಯಸ್ಸನು ಮಾತ್ರ ಇವರನ್ನು ನೋಡಿದನು.
ಜೀನ್ ವಾಲ್ಜೀನನು ಜೇವರ್ಟನನ್ನು ಮಾತ್ರ ಬಿಡದೆ, ಶ್ರಮ ಪಟ್ಟು, ಆ ರೂ ಮಾನ್’ಡಿಟರ್ ಬೀದಿಯ ಕಡೆಯ ಕಂದಕದ ಮೇಲ್ಗಡೆಗೆ ಬಂಧಿತನಾದ ಜೇವರ್ಟನನ್ನೂ ಹತ್ತಿಸಿ ತಾನೂ ಹತ್ತಿದನು.
ಅವರಿಬ್ಬರೂ ಕಂದಕದ ಗೋಡೆಯನ್ನು ಹತ್ತಿ ಒಂದು ಚಿಕ್ಕ ಬೀದಿಗೆ ಬಂದರು. ಅಲ್ಲಿ ಇವರಲ್ಲದೆ ಮತ್ತೆ ಯಾರೂ ಇರಲಿಲ್ಲವಾದ ಕಾರಣ ಇವರು ಯಾರ ದೃಷ್ಟಿಗೂ ಬೀಳಲಿಲ್ಲ. ಅಲ್ಲಿ ಒಂದು ಮನೆಯ ಕಡೆಯ ಮೂಲೆಯಲ್ಲಿ, ಇವರು ಆ ರಾಜವಿರೋಧಪಕ್ಷದವರಿಗೆ ಕಾಣದಂತೆ ಮರೆಯಾಗಿದ್ದರು. ಸ್ವಲ್ಪ ದೂರದಲ್ಲಿಯೇ, ಬಾರಿಕೇಡ್ ಗೋಡೆಗಳ ಕಡೆಯಿಂದ ತಂದು ಹಾಕಿದ್ದ ಹೆಣಗಳು ಭಯಂಕರವಾದ ದೊಡ್ಡ ರಾಶಿಯಾಗಿ ಬಿದ್ದಿದ್ದುವು.
. ಕೈತುಪಾಕಿಯನ್ನು ಕಂಕುಳಲ್ಲಿಟ್ಟು ಜೀನ್ ವಾಲ್ಜೀನನು ಜೇವರ್ಟನನ್ನೇ ದೃಷ್ಟಿಸಿ ನೋಡಿದುದರಲ್ಲಿ, ‘ ಅಯ್ಯಾ! ಜೀವರ್ಟ್, ಇದೋ ನೋಡು, ನಾನು ಜೀನ್ ವಾಲ್ಜೀನ್,’ ಎಂದು ಅವನು ಬಾಯಿಂದ ಹೊಸದಾಗಿ ಹೇಳಬೇಕಾಗಿರಲಿಲ್ಲ.
ಅದಕ್ಕೆ ಜೇವರ್ಟನು, ‘ ನಿನ್ನ ಸೇಡನ್ನು ತೀರಿಸಿಕೊ,’ ಎಂದು ಉತ್ತರ ಕೊಟ್ಟನು, ಜೀನ್ ವಾಲ್ಜೀನನು ತನ್ನ ಜೇಬಿ ನಿಂದ ಒಂದು ಚೂರಿಯನ್ನು ತೆಗೆದು ಮಡಿಸಿದ್ದ ಅಲಗನ್ನು ಎತ್ತಿ ಹಿಡಿದುಕೊಂಡನು. ಜೇವರ್ಟನು, ‘ಏನು ! ಚೂರಿಯೇ ! ಸರಿ, ನ್ಯಾಯ, ಅದೇ ನಿನಗೆ ತಕ್ಕದ್ದು,’ ಎಂದನು.
ಜೀನ್ ವಾಲ್ಜೀನನು, ಜೇವರ್ಟನ ಕುತ್ತಿಗೆಗೆ ಕಟ್ಟಿದ ಹಗ್ಗ ವನ್ನು ಮೊದಲು ಕೊಯ್ಯು, ಅನಂತರ ಅವನ ಕೈಗಳನ್ನು ಬಂಧಿಸಿದ್ದ ಕಟ್ಟುಗಳನ್ನು ಕತ್ತರಿಸಿ, ಕೆಳಗೆ ಬಾಗಿ, ಕಾಲುಗಳಿಗೆ ಕಟ್ಟಿದ್ದ ಹಗ್ಗವನ್ನೂ ಕೊಯ್ದು ಹಾಕಿ, ಮೇಲಕ್ಕೆ ಎದ್ದು, ಹೋಗು, ನಿನ್ನನು ಸ್ವತಂತ್ರವಾಗಿ ಬಿಟ್ಟಿರುವೆನು,’ ಎಂದನು. ಜೇವರ್ಟನಿಗೆ ದಿಕ್ಕೇ ತೋರಲಿಲ್ಲ. ಅವನು ಸಂಪೂರ್ಣ ಸ್ವತಂತ್ರನಾಗಿದ್ದರೂ ಅವನಿಗೆ ಮನಸ್ಸಿನಲ್ಲಿ ಉಂಟಾದ ಏನೋ ಅನಿರ್ವಾಚವಾದ ಭ್ರಾಂತಿಯಿಂದ ಸ್ತಬ್ಬನಾಗಿ ಹಾಗೆಯೇ ನಿಂತುಬಿಟ್ಟನು.
ಜೀನ್ ವಾಲ್ಜೀನನು ಹಾಗೆಯೇ ಮಾತನ್ನು ಮುಂದುವರಿಸಿ, ‘ ಅಯ್ಯಾ! ನಾನು ಈ ಸ್ಥಳದಿಂದ ಪಾಣಸಹಿತನಾಗಿ ಹೋಗುವೆ ನೆಂಬ ನಂಬಿಕೆಯು ನನಗಿಲ್ಲ. ಒಂದು ವೇಳೆ ಆಕಸ್ಮಿಕ ಸಂಭವ ದಿಂದ ಹಾಗೆ ಏನಾದರೂ ನಾನು ಜೀವದಿಂದಿದ್ದರೆ, ಫಾಚೆಲ್ ವೆಂಟ್ ಎಂದು ಕರೆದುಕೊಂಡು, ರೂ ಡಿ ಎಲ್ ‘ಹೊ೦ ಆರಂ, ನಂ. ೭ನೆಯ ಮನೆಯಲ್ಲಿರುವೆನು,’ ಎಂದನು. ಜೇವರ್ಟನ್ನು, ‘ ಎಚ್ಚರಿಕೆಯಿಂದಿರು,’ ಎನ್ನಲು, ಜೀನ್ ವಾಲ್ಜೀನನು, ಇನ್ನು ಹೊರಡು,’ ಎಂದನು.
ಮತ್ತೆ ಜೀವರ್ಟನು, ” ಏನೆಂದು ಹೇಳಿದೆ ! ಘಾಚೆಲ್ವೆಂಟ್, ರೂ ಡಿ ಎಲ್ ‘ಹೊ೦ ಆರಂ, ಅಲ್ಲವೇ ? ‘ ಎಂದನು.
‘ಅಹುದು, ೭ನೆಯ ನಂಬರಿನ ಮನೆ.’
ಜೇವರ್ಟನು ಸಣ್ಣ ಧ್ವನಿಯಿಂದ ಅದನ್ನೇ ಮತ್ತೆ ‘ಏಳನೆಯ ನಂಬರು,’ ಎಂದು ಉಚ್ಚರಿಸಿದನು. ಅನಂತರ ಅವನು ತನ್ನ ಅಂಗಿಯ ಗುಂಡಿಗಳನ್ನು ಹಾಕಿಕೊಂಡು, ಮೊದಲಿನಂತೆ ತನ್ನ ಸೈನಿಕತ್ವಕ್ಕೆ ಸ್ವಭಾವವಾದ ಬಿಗಿಯಿಂದ ಭುಜಗಳನ್ನು ಎತ್ತರಿಸಿ ತಿರುಗಿ ತೋಳುಗಳನ್ನು ತಟ್ಟಿ, ಒಂದು ಕೈಯಿಂದ ಗಡ್ಡವನ್ನು ಹಿಡಿದುಕೊಂಡು ಅಂಗಡಿಯ ಬೀದಿಯ ಕಡೆಗೆ ಹೊರಟು ಹೋದನು.
ಅವನು ಹೊರಟು ಹೋದ ಮೇಲೆ, ಜೇನ್ ವಾಲ್ಜೀನನು ತುಪಾಕಿಯನ್ನು ಆಕಾಶದ ಕಡೆಗೆ ಹಾರಿಸಿದನು.
ಅನಂತರ ಬ್ಯಾರಿಕೇಡಿನೊಳಕ್ಕೆ ಹೋಗಿ, ‘ ಆಯಿತು, ಕೆಲ ಸವು ಪೂರೈಯಿಸಿತು,’ ಎಂದು ಹೇಳಿದನು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ