ತೋಟಾ ತೋಟಾ ತಿರಗಿ ನಾನು
ಮೂರ ದುಂಡ ಮಲಿಗೀ ಹೂವ ತಂದೇ ||೧||
ದುಂಡ ಮಲಗೀ ಹೂವ ಮುಡಿಯೇ ಜಾಣೇ
ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨||
ಈಟೀ ತಿರ್‌ಗಿ ತಿರುಗಿ ನಾನು
ಮೂರ ಈಟಿಯ ದಾರೂವ ತಂದೇ ||೩||
ಈಟಿಯ ದಾರ್‌ದೂವ ಮುಡಿಯೇ ಜಾಣೇ
ಈಟರಿ ಪಾರಾಗಿ ಹೋದೇ ||೪||
ಕೇರೀ ಕೇರೀ ತಿರ್‌ಗಿ ನಾನು
ಮುರು ಕ್ವಾದಿಗೀರ ಹೂವ ತಂದೇ ||೫||
ಕ್ವಾದೀಗೀರ್ ಹೂವ ಮುಡಿಯೇ ಜಾಣೇ
ಕ್ಯಾದಗೀ ಪಾರಾಗಿ ಹೋದೇ ||೬||
*****
ಹೇಳಿದವರು: ಗಣಪ ಸುಬ್ಬಗೌಡ, ಮೊಳೇಸಾಲು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.