ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ?
ಕಡಲೀಯಾ ಹೊಲದಾಗ ಇತ್ತ ನಮ್ಮ ನವಲು || ೧ ||
ನವಲ ಕಂಡೀರ್‍ಯಾ ನಮ್ಮ ನವಲ ಕಂಡೀರ್‍ಯಾ?
ಗೋದಿಯಾ ಹೊಲದಾಗ ಇತ್ತ ನಮ್ಮ ನವಲು
ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ ? || ೨ ||
ರಾಗೀಯ ಹೊಲದಾಗ ಇತ್ತ ನಮ್ಮ ನವಲು
ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ || ೩ ||
ಜೋಳಾದ ಹೊಲದಾಗ ಇತ್ತ ನಮ್ಮ ನವಲ
ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ ? || ೪ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.