ಪ್ರೀತಿ ಮಧು ಹೀರಿದ ಮೇಲೆ
ಗೆಳತಿ ಇರಲಿ ಸನಿಹದಲಿ
ಮೇಲೆ ಬರಲಿ ಪ್ರಕೃತಿ ಚೆಲುವು
ಸೋಲೆ ಇಲ್ಲ ನನ್ನಲ್ಲಿ
ಉಕ್ಕಿ ಬರುವ ಸಾಗರದಲೆಯು
ಸರಿಯಬೇಕು ಹಿಂದಕ್ಕೆ
ಮೋಹನಾಸ್ತ್ರ ಹೂಡುವ ಮದನ
ಕೂಡ ಅದೇ ನೇರಕ್ಕೆ
ಇರುವಾಗ ಜೊತೆಗೆ ನಲ್ಲೆ
ಗೆಲುವಿಗೆಲ್ಲಿದೆ ಎಲ್ಲೆ
ಗೊತ್ತು ಅನೇಕರಿಗೆ ವಿರಹ-ಅದು
ಹುಣ್ಣಿಮೆ ಚಂದ್ರನ ಚೆಲ್ಲಾಟ
ಜೊತೆಗೆ ಸಮಾಜದ ವಿಧಿಯಾಟ
ನಿಸರ್ಗ ತುಡಿತಕೆ ವಿಷದೂಟ
ಇರದಾಗ ಜೊತೆಗೆ ನಲ್ಲೆ
ನನಗಿಲ್ಲ ಸೋಲು, ಬಲ್ಲೆ
*****