ಓ ದೇವಿಯೆ
ಭರತ ಮಾತೆಯೆ
ನಿನ್ನ ಹೇಗೆ ಬಣ್ಣಿಸಲಿ ತಾಯೆ
ನಿನ್ನ ಬಣ್ಣಿಸಲಸದಳವು
ಮಾತೆಯೆ ಮಾತು ಸಾಲದಾಗಿದೆ
ನಿನ್ನ ನೋಡಲು ಯುಗಗಳೆ ಸಾಲದು
ನಿನ್ನ ಹೊಗಳಲು ಜನ್ಮಗಳೆ ಸಾಲದು
ಹಸಿರು ಸೀರೆಯನುಟ್ಟು
ಸಂಸ್ಕೃತಿಯೆ ಹಣೆಗೆ ಬೊಟ್ಟು
ಕಾವ್ಯಗಳೆ ನಿನ್ನಯ ಕೇಶರಾಶಿ
ಹಿಮಮಣಿಗಳೆ ನಿನಗೆ ಹಾರವು
ಹೊಂಬಣ್ಣದ ಹೂಗಳೆ ನಿನ್ನ ಓಲೆಗಳು
ಗಿರಿಶಿಖರಗಳೆ ನಿನ್ನಯ ಮುಕುಟವು
ಸತ್ಯ ಧರ್‍ಮಗಳ ತ್ರಿಶೂಲವಾಗಿಹವು
ನಿನ್ನ ಮಡಿಲ ಮಕ್ಕಳೆ ಹಣತೆಗಳಾಗಿರಲು
ಸ್ವರ್‍ಗದ ಹಿರಿಮೆಯೆ ಧರೆಗೆ ಇಳಿದಿರಲು
ನಿನ್ನ ಮಡಿಲಲ್ಲಿ ಹುಟ್ಟಿದ ನಾವು ಭಾಗ್ಯವಂತರು
ತಾಯೆ ಜನನಿಯೆ ನಾವೇ ಭಾಗ್ಯವಂತರು
*****