ಬರಗಾಲ ಬಂದೈತೆ
ಭೂ ತಾಯಿ ಒಡಲು ಸುಡುತೈತೆ||
ರೈತನ ಭವಣೆಗೆ ಕೊನೆಯಿಲ್ಲಾ
ಜನ ಜಾನುವಾರುಗಳಿಗೆ ನೀರು ನೆರಳಿಲ್ಲ|
ಉಣಲು ಬಣವಿಯಲಿ ಹುಲ್ಲಿಲ್ಲ
ಮನೆಯಲಿ ಬೇಳೆ ಕಾಳುಗಳಿಲ್ಲ||
ಹಸುಗೂಸಿಗೆ ಅನ್ನ ಹಾಲದಿಲ್ಲ
ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ|
ಮರಗಿಡಗಳಲಿ ಎಲೆಗಳೊಂದಿಲ್ಲ
ಹಕ್ಕಿ ಚಿಲಿಪಿಯ ದನಿಯಿಲಿ ಕಂಪಿಲ್ಲ
ದುಂಬಿ ಝೇಂಕಾರವಿಲ್ಲ ಸದ್ದಿಲ್ಲ||
ಬಾ ಮಳೆರಾಯ ಬಾ|
ಬತ್ತಿದೆದೆಯ ಬರಡಾದ ನೆಲಕೆ
ಜೀವಸಂಜೀವಿನಿಯಾಗಿ ನೀ ಬಾ|
ಮೂರುಪಾಲ ನೀರು ಭೂಮಿಯಲಿದ್ದರೇನು
ಮಳೆ ನೀರುಣಿಸದ ಭೂಮಿ
ಬೆಳೆಯುವುದೇ ಧಾನ್ಯ ಸಂಪತ್ತು|
ನೀ ಬಾರದಿರೆ ಭೂಮಿಗೇ ಆಪತ್ತು||
*****