ಮನ್ಸರ್ ಮಾತು

ಯೋಳಾದ್ ಏನ್ರ ಯೋಳಾದ್ ಇದ್ರೆ,
ಝಟ್ ಪಟ್ನ್ ಏಳ್ ಮುಗೀಸು.
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು. ೧

ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕ್ಯೋಳಾಕ್ ಬಲ್ ಪಜೀತಿ.
ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್‍ಗೆ ಪ್ರೀತಿ? ೨

ಕುಂಬಾರ್‍ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗು
ಸುತ್ಕೊಂಡ್ ಸುತ್ಕೊಂಡ್ ಓಗೋದ್ ಸಾಜ!
ಅದ್ಯಾಕ್ ನನ್ಗು ನಿನ್ಗು? ೩

ಕ್ಯೋಳೋವ್ರ್ ಇನ್ನಾ ಕ್ಯೋಳ್ಬೇಕೂಂತ
ಕುಂತ್ಕೊಂಡ್ ಇದ್ದಂಗೇನೆ
ಯೋಳೋದ್ನ್ ಎಸ್ಟೋ ಅಸ್ಟ್ರಲ್ ಏಳಿ
ಮನೆಗ್ ಓಗೋಗೆ ಮೇನೆ! ೪

ಮಾತ್ ಇರಬೇಕು ಮಿಂಚ್ ಒಳದಂಗೆ!
ಕೇಳ್ದೋರ್ ‘ಹ್ಙಾ’ ಅನಬೇಕು!
ಸೋನೆ ಯಿಡದ್ರೆ ಉಗದ್ ಅಂದಾರು:
‘ಮುಚ್ಕ್ಂಡ್ ಓಗೋ ಸಾಕು!’ ೫

ಮನ್ಸನ್ ಮಾತ್ ಅಂದ್ರ್ ಎಂಗ್ ಇರಬೇಕು-
ಕವಣೆ ಗುರಿ ಇದ್ದಂಗೆ!
ಕೇಳ್ದೋರ್ ಮನಸೀಗ್ ಲಗತ್ತ್ ಆಗಬೇಕ್
ಮಕ್ಕಳ್ ಮುತ್ತ್ ಇದ್ದಂಗೆ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೨.೩ ಕಾಗದದ ಪ್ರಮಿತಿ
Next post ಬರಗಾಲ ಬಂದೈತೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…