ಅನ್ನ ಬ್ರಹ್ಮ ಅನ್ನ ಬ್ರಹ್ಮ|
ನಿನ್ನಿಂದಲೇ ನಮ್ಮ ಜನ್ಮ|
ಒಡಲ ಅಗ್ನಿಯೊಡನೆ ನೀನು
ಸುಡಲು ಚೈತನ್ಯ ಜನ್ಯ||
ನಿನ್ನ ಪ್ರಸಾದವೇ
ಪರಮ ಶಕ್ತಿ|
ನಿನ್ನಿಂದಲೇ
ಬೆಳೆಯುವುದು ಯುಕ್ತಿ|
ನಿತ್ಯ ನಿನ್ನ ಸ್ಮರಿಸಿ
ಸ್ವೀಕರಿಸುವುದೇ ಸೂಕ್ತಿ||
ಬ್ರಹ್ಮ ನಿನ್ನ ಸೃಷ್ಠಿಯಲಿ
ಅನ್ನವೊಂದು ಅದ್ಭುತಸೃಷ್ಠಿ|
ಹಸಿದವನಿಗೆ ಗೊತ್ತು
ಅನ್ನದಗುಳಿನ ಬೆಲೆಯು|
ಹಸಿದು ಉಂಡವನಿಗೆ ಗೊತ್ತು
ತುತ್ತು ಅನ್ನದ ರುಚಿ,
ಅನುಭವ, ಸಂತೃಪ್ತಿ||
ಅನ್ನದ ಹಿರಿಮೆ ಅಪಾರ
ಅನ್ನದ ಮಹಿಮೆ ಗರಿಮೆ ಅಪಾರ|
ಹಸಿದವರಿಗನ್ನ ನೀಡುವುದೇ
ಮಹದುಪಕಾರ|
ಇದರ ಮುಂದೆ ಬೇರಾವುದೂ
ನೀಡದಿಷ್ಟು ತೃಪ್ತಿಕರ||
*****