ಜೀವನವೆಂದರೆ ಬರೀ

ಜೀವನವೆಂದರೆ ಬರೀ
ದುಡ್ಡಿನ ದುಡಿಮೆಯದಲ್ಲಾ|
ಜೀವನವೆಂದರೆ ಬರೀ
ಸದಾ ಸಮಯದ ಹಿಂದೆ ಓಡುವುದಲ್ಲಾ||

ಜೀವನವೆಂದರೆ ಬರೀ
ಇತರರಿಗೆ ನ್ಯಾಯ ಹೇಳುವದಲ್ಲ
ಜೀವನವೆಂದರೆ ಬರೀ
ಓದು ಬರೆಯುವುದಲ್ಲಾ|
ಜೀವನವೆಂದರೆ ಬರೀ
ನೀತಿಯ ಪಾಠವ ಬೋದಿಸುವುದಲ್ಲ
ಜೀವನವೆಂದರೆ ಬರೀ
ನಿಯಮಾವಳಿಯ ಮಾಡುವುದಲ್ಲ||

ಜೀವನವೆಂದರೆ ಬರೀ
ಪುಸ್ತಕ ಬದನೆಯ ತಿಳಿಯುವದಲ್ಲ
ಜೀವನವೆಂದರೆ ಬರೀ
ಹಾಡನು ಹಾಡುವುದಲ್ಲಾ|
ಜೀವನವೆಂದರೆ ಬರೀ
ಇತರರಿಗೆ ಬೆರಳುಮಾಡಿ ತೋರುವುದಲ್ಲ
ಜೀವನವೆಂದರೆ ಬರೀ
ಒಬ್ಬನೇ ಬದುಕಿ ಸಾದಿಸಿ ಹಿಗ್ಗುವುದಲ್ಲ||

ಜೀವನವೆಂದರೆ ಸುಖ ಅಸುಖಗಳನುಭವಿಸಿ
ಜೀವನ ಮೌಲ್ಯಗಳ ಸಾದಿಸಿ ಸಂಪಾದಿಸಿ
ಆದರ್‍ಶಮಾರ್‍ಗದಿ ನಡೆದು ತೋರಿಸುವುದು|
ಧರ್ಮ ಎತ್ತಿಹಿಡಿದು ಬೆಳಗಿಸಿ
ಸತ್ಯಪಾರದರ್ಶಕತೆಯಲಿ ನಡೆದು
ನೀತಿ ಪ್ರೀತಿ ಸೌಹಾರ್‍ದತೆಯಲಿ
ಒಂದಾಗಿ ಬಾಳಿ ಬದುಕುವುದೆಂದರ್‍ಥ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂದಮನೆ
Next post ಚೆಲುವು-ಒಲವು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…