ಯಾರು ನಿನಗೆ ಸಮಯದಿ
ಸಹಾಯ ಮಾಡುವರೋ
ಅವರ ಸ್ನೇಹ ಮಾಡಿಕೊ|
ಯಾರು ನಿನ್ನ ಹಿತವ ಕೋರುವರೋ
ಅವರನೇ ಬಂಧು ಎಂದುಕೊ|
ಎಲ್ಲೇ ಇರಲಿ ಹೇಗೇ ಇರಲಿ
ಒಳ್ಳೆಯತನವ ಬೆಳೆಸಿಕೊ||
ನಿನ್ನ ಬಾಲ್ಯ ಗೆಳೆಯ ನಿನಗೆ
ಸಮಯದಿ ಸಿಗದಿರಬಹುದು|
ನಿನ್ನ ಆತ್ಮೀಯ ಬಂಧುಗಳು
ತಟ್ಟನೆ ಕಷ್ಟಕಾಗದಿರಲೂ ಬಹುದು|
ಸಮಯಗೊದಗಿದವರೇ ನಿನ್ನ ಸ್ನೇಹಿತರು
ಹತ್ತಿರವಿದ್ದವರೇ ನಿನ್ನ ಬಂಧುಗಳೆಂದುಕೊ||
ನೀನೂ ನಿನ್ನ ಸ್ನೇಹಿತನಿಗೆ
ಸಮಯಕಾಗದಿರಬಹುದು!
ಎಂದಮಾತ್ರಕೆ ನೀ ಅವನ
ಆಪ್ತವಿತ್ರನಲ್ಲವೇನು?|
ಅಷ್ಟೂ ದಿನದ ನಿನ್ನ ಸ್ನೇಹವನು
ಮರೆಯಲು ಸಾಧ್ಯವೇನು?
ಬಂಧುಗಳು ಸದಾ ಜೊತೆಗೆ
ಇಲ್ಲದಲೇಇರಬಹುದು
ಅಂದಮಾತ್ರಕೆ ಬಂಧುಗಳೇ
ಅಲ್ಲವೇನು?||
ಯಾರದೆಷ್ಟು ಪುಣ್ಯ ಇರುವುದೋ
ಅಷ್ಟೇ ಭಾಗ್ಯ ಸಿಗುವುದು|
ಯಾರಲಿ ನಿನ್ನ ಋಣವಿರುವುದೋ
ಅದುವೇ ಮಾತ್ರ ನಿನಗೆ ಲಭಿಸುವುದು|
ಸಂಬಂಧಗಳ ಬಂಧ ಅತೀ ಸೂಕ್ಷ್ಮ
ಒರೆಗಚ್ಚುವುದು ಅನುಮಾನಿಸುವುದು ತರವೇ|
ಗಾಜಿನಮನೆಯಲ್ಲಿದ್ದುಕೊಂಡು
ಬೇರೆಯವರ ಗಾಜಿನಮನೆಗೆ
ಕಲ್ಲು ತೂರುವುದು ನ್ಯಾಯವೇ?||
*****