ನನ್ನ ಕೆಲಸ

ನನ್ನ ಕೆಲಸ
ನಾ ಮಾಡಿದೆನೆಂದರೆ
ಮುಂದಿನ ಕೆಲಸ
ಯಾರು ನೋಡುವರು?
ಕಾರ್ಯ ಸಂಪೂರ್ಣವಾದರೇನೇ
ನಿನ್ನ ಕೆಲಸಕೆ ಬೆಲೆಯು ದೊರೆಯುವುದು||

ನಿನ್ನ ಕೆಲಸ ಮಾಡುವುದು ನಿನ್ನ ಕರ್ತವ್ಯ
ಅದಕೆ ಸರಿ ಪ್ರತಿಫಲವ ನೀ ಪಡೆಯುವೆ|
ಆದರೆ ಎಲ್ಲರೂ ನಿನ್ನಹಾಗೆ ಅವರವರ
ಕೆಲಸಮಾಡುವುದ ಕಲಿಯುವವರೆಗೆ
ನೀ ಸ್ವಲ್ಪ ಮುಂದಾಳತ್ವವಹಿಸಬೇಕು||

ಕೆಲಸ ಸಿಗುವುದು ದುರ್ಲಭ
ಸಿಕ್ಕವರು ಪಡೆದದರ ಲಾಭ
ಉಳಿದವರಿಗೂ ಮಾರ್ಗದರ್ಶನ
ನೀಡಬೇಕು|
ಬರೀ ಬುದ್ಧಿವಂತರಾದರೆ ಸಾಲದು
ಮತಿವಂತರಾಗುವುದು ಉತ್ತಮ|
ನೀ ಕಲಿತರೆ ದೇಶ ಕಲಿವುದು
ನೀ ಬೆಳೆದು ಇತರರ ಬೆಳೆಸಿದರೇನೇ
ದೇಶ ಬೆಳೆವುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವು ಬಡವರು
Next post ಹೂಮಾಲೆ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…