ಕಟುಕನಾನಲ್ಲೆ
ನಲ್ಲೆ
ನೋಟಕೆ ಹಾಗೆ ಕಂಡು ಬಂದರೂ…
ನಾನು
ನಿನ್ನ ಉತ್ಕಟ ಪ್ರೇಮಿ ಅಷ್ಟೆ.
ನನ್ನ ಆಟ
ನಿನಗೆ ಪ್ರಾಣ ಸಂಕಟ
ಆದರೂ…
ಕ್ಷಮಿಸು! ಎಂಬುದು ಔಪಚಾರಿಕ.
ಏನು ಮಾಡಲಿ?
ನಾನು ಹತ್ತಿಕ್ಕಿ ಕೊಳ್ಳಲಾರೆ!
ಎಷ್ಟಾದರೂ…
ನನಗೆ ಅದರಲ್ಲಿ ಮುದವಿದೆ.
ಆದರೆ…
ನಿನ್ನನ್ನು ಕೊಂದು ಕೊಂಡಾದರೂ
ಸಹಕರಿಸು
ಎನ್ನಲು ಪ್ರಜ್ಞೆ ಒಪ್ಪದು.
ಹೀಗೆ
ನಿನ್ನ ನೋವಿನ ಪರಿಕಲ್ಪನೆ
ನನ್ನ ಆಸೆಯ ಅಗಾಧತೆ
ಇವೆರಡನ್ನೂ ಸರಿದೂಗಿಸಲಾಗದ
ನನ್ನ ಅಸಹಾಯಕತೆ
ಚಿಟ್ಟು ಹಿಡಿಸಿದೆ.
*****