ನೀ ಸ್ವರವಾದೆ

ಗಂಡು: ನೀ ಸ್ವರವಾದೆ | ಸ್ವರವಾದೆ ಪದವಾದೆ
ಪದವಾಗಿರೆ ಬದುಕು | ಮಾತು ಸಂಗೀತ ಪಲುಕು /ಪ//

ಹೆಣ್ಣು: ಕಡಲು ಉಕ್ಕಿ ಸಿಡಿಲು ಸೊಕ್ಕಿ
ಬಂದರೆ ಏನು?
ಬಿರಿಯಲಿ ಭೂಮಿ ಬೀಳಲಿ ಗಗನ
ಹೆದರಿಕೆ ಏನು?
ನಿನ್ನ ತೋಳಲಿ ನಾನಿರೆ
ನಿನ್ನ ಎದೆಗೆ ಮುಖವಿರೆ
ಸ್ವರ್ಗ ಕೂಡ . . . . ಇಲ್ಲಿಯೇ

ಗಂಡು: ನಿನ್ನ ಪ್ರೀತಿಯೇ ನನ್ನ ಬಲ
ನಿನ್ನ ಮಾತೇ ನನ್ನ ಛಲ
ನಿನ್ನ ಉಸಿರೇ . . . . ಹಸಿರು
ಯಾವುದೇ ವಾದಕೂ ಫುಲ್‌ಸ್ಟಾಪ್ ಇಲ್ಲ ||೧||

ಗಂಡು: ನಡೆದಿಹ ಬದುಕು ನಡೆವುದು ಮುಂದೆ
ಖಚಿತ ಈ ಹಾದಿ
ಜನುಮ ಜನುಮದ ಈ ನಂಟು
ಯಾರೂ ಬಿಡಿಸದ ಈ ನಂಟು
ಇದು ಹಾಡುಗಳ . . . . ಹಾಡು ||೨||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ರಾಮ!
Next post ಹಬ್ಬ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…