ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ
ನಡೆಸುವವನು ನುಡಿಸು ನೀನು
ಬೆರಸಿ ನಿನ್ನ ತನು ಮನವನು||
ಕಲಿಸಿ ಎಲ್ಲಾನಡೆಸುತಿರಲವನು
ಭಯವದೇಕೆ ಬದುಕುವುದಕೆ?||

ನಾಳೆಯ ಚಿಂತೆಯ ಬಿಟ್ಟುನೀನು
ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ|
ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು|
ನಾಳೆಗಾಗಿ ಕೊರಗಿ ನೀನು ಕೆಡಲುಬೇಡ
ಇಂದಿನ ಸುಂದರ ಅಮೃತಘಳಿಗೆಯನು||

ಆಗಿಹೋದ ಮಿಂಚಿಮಾಸಿದ
ಕಹಿಯನೆನೆದು ಕೊರಗಲು ಫಲವದಿಲ್ಲ|
ಹಳೆಯದನುಭವದಿ ಹೊಸಾ ಚಿಗುರಬೆಳಸಿ
ತಳಿರುಕಾಂತಿಯ ತುಂಬು ನೀನು|
ಫಲಾಫಲವ ಬಯಸದಲೇ
ಪಾಪಕರ್ಮವೆಸಗದೆ ಬಾಳಸಾಗಿಸು ನೀನು
ತಂದ ಕರ್ಮತೀರಿಸುತಲಿ
ಮುಂದೆ ಮುಂದೆ ಸಾಗು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವಲಗಾರ ಕಂಭ
Next post ಭಕ್ತಿ ತರಂಗಗಳು

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…