ದಿನೆ ದಿನೆ ಬಾಳನ್ನು ಹಸನಗೊಳಿಸು
ಭಕ್ತಿಯೆಂಬ ಮಕರಂದದಲಿ ಮುಳುಗು
ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು
ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು.
ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ
ಹಾಗೆಂದರೆ ಅವನೆಂಥ ಕ್ಷುಲಕ ವಸ್ತು
ಕವಿ ಸ್ಯಾಮುವೆಲ್ ಡ್ಯಾನಿಯಲ್ ಕೇಳುತ್ತಾನೆ
ದೇವರೆನ್ನುತ್ತಾನೆ ನಿ ಯೋಚಿಸಿದಂತೆ ಅಸ್ತು
ಭಕ್ತ ಭಕ್ತರ ಹೃದಯ ಬೆಳಗಿದರು ಅವರು
ಅವರೆ ನಮ್ಮ ರಾಮಕೃಷ್ಣ ಪರಮಹಂಸರು
ದೇವರ ಬಿಟ್ಟು ಉಳಿದೆಲ್ಲವೂ ಅಶಾಶ್ವತವು
ಎಂದರು ನಮ್ಮ ಗುರು ದಾರ್ಶನಿಕರು
ಯಾವ ಪುಣ್ಯದ ಫಲವೊ ನಾವೀಗ ಮನುಜರು
ಇದು ಎಷ್ಟು ಹೊತ್ತಿನ ಕಣ್ಣು ಮುಚ್ಚಾಲೆ ಆಟವೊ
ಬೆಳಕಿನಲಿ ಕಳೆದುದೆಲ್ಲವೂ ನೀನು ಗಳಿಸಿಕೊ
ಕತ್ತಲು ನಿನಗೆ ಹೊಂಚು ಹಾಕುತ್ತಿದೆ ತಿಳಿದುಕೊ
ಮಾತಿನಲ್ಲಿ ನಡೆಯಲಿ ಭಕ್ತಿ ರಸ ಚಿಮ್ಮಿಸು
ಎಷ್ಟು ವೇಳೆಯವರೆಗೆ ದೇವರನ್ನು ವಂಚಿಸವೆಯಾ
ಜಗತ್ತನು ಬೇಕಾದರೆ ಮೋಸ ಗೊಳಿಸಬಹುದು
ಮಾಣಿಕ್ಯ ವಿಠಲನಿಗೆ ವಂಚಿಸಲಾರೆಯ
*****