ಇಷ್ಟವಿಲ್ಲದಿದ್ದರುನೂ
ನಮ್ಮ ಮಕ್ಕಳನ್ನು
ಇಂಗ್ಲೀಷ್ ಶಾಲೆಗಳಿಗೆ
ಸೇರಿಸುತ್ತಿದ್ದೇವೆ |
ಹೆಂಡತಿಯ ಒತ್ತಾಯಕ್ಕೋ,
ನೆರೆಮನೆಯವರ ಅಹಿತಕರ
ಜೀವನ ಸ್ಪರ್ಧೆಗೋ ಅಥವಾ ನಾವು
ಹೆಚ್ಚೆಂದು ತೊರಿಸಿಕೊಳ್ಳಲೋ||
ವಾಸ್ತವದಲಿ ಕಠಿಣವೆನಿಸಿದರೂ
ಕೈಯಲ್ಲಿ ಕಾಸಿಲ್ಲದಿದ್ದರೂ
ಹೇಗೋ ಹೆಣಗಾಡಿ ಜೀವತೇಯ್ದು
ಮಕ್ಕಳಿಗೆ ಶಿಕ್ಷಣಕೊಡಿಸಲು
ಇಡೀ ಜೀವಮಾನ ಮುಡಿಪಾಗಿಡುತ್ತೇವೆ|
ಇನ್ನು ಇದೆಲ್ಲದರ ಜೊತೆಗೆ
ವಸತಿಯುಕ್ತ ಅಂತರಾಷ್ಟ್ರೀಯ ಶಾಲೆಯ
ಅಂಧ ವ್ಯಾಮೋಹ
ಅಲ್ಲಿಗೆ ಸೇರಿಸಲು ದುಂಬಾಲು|
ಇದರ ಪರಿಣಾಮ ಮಕ್ಕಳಿಗೆ ಪೋಷಕರ
ಪ್ರೀತಿ ವಾತ್ಸಲ್ಯ ಕೊರತೆ, ಒಂಟಿತನ||
ವಿದ್ಯೆಯ ಮೂಲ ಉದ್ದೇಶವಾದರೂ ಏನು?
ಜ್ಞಾನ, ವಿಜ್ಞಾನ, ಸುಶಿಕ್ಷಣ,
ಸಂಸ್ಕಾರ, ಇತಿಹಾಸ ಹಾಗೂ
ನಮ್ಮ ದೇಶ ಭಾಷೆಯ ಶ್ರೀಮಂತಿಕೆ ಅಧ್ಯಯನ|
ಆದರೆ ಅದು ಆಗುತ್ತಿದೆಯೇ?
ಆದರೂನು ಅದು ಅನ್ಯ ಭಾಷೆಯಲ್ಲಿ
ಕಲಿಸಿದರೆ ಅದೆಷ್ಟು ಪರಿಪೂರ್ಣ?
ಇದನ್ನೇ ಮಾತೃ ಭಾಷೆಯಲ್ಲಿ ಸುಲಲಿತವಾಗಿ
ಮಕ್ಕಳಿಗೆ ಹೊರೆಯಾಗದಂತೆ|
ಕಡಿಮೆ ಕರ್ಚಿನಲ್ಲಿ ಎಲ್ಲರಿಗೂ
ಕೈಗೆಟುಕುವ ಬೆಲೆಯಲ್ಲಿ
ಮಾಡಿದರೆಷ್ಟು ಚೆನ್ನ|
ಇದಲ್ಲವೇ ಕನ್ನಡ ಉಳಿಸಿ ಬೆಳೆಸಿ
ಶ್ರೀಮಂತಗೊಳಿಸುವ ಮಾರ್ಗ||
ಅಂತಿಮವಾಗಿ ಹೊಟ್ಟೆಹೊರೆಯಲು
ಎಷ್ಟು ವಿದ್ಯೆ ಬೇಕು? ಪ್ರಪಂಚದ ಎಲ್ಲಾ
ವಿದ್ಯೆಯನ್ನು ಒಬ್ಬರೇ ಕಲಿತು,
ಒಬ್ಬನೇ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವೇ?|
ಎಲ್ಲರು ಅವರವರ ಯೋಗ್ಯತಾನುಸಾರ
ಕೈಲಾಗುವದನ್ನು ಮಾಡಿದರೆ
ಲೋಕಕಲ್ಯಾಣ ಸಾಧ್ಯ|
ರಾಷ್ಟ್ರಮಟ್ಟದಲಿ ಅತೀ ಹೆಚ್ಚು
ಹೆಸರು ಮಾಡಿರುವವರೆಲ್ಲರೂ
ಮಾತೃ ಭಾಷೆಯಲ್ಲಿ ಹಾಗೂ
ಸರ್ಕಾರಿ ಶಾಲೆಯಲ್ಲಿ ಕಲಿತವರೇ||
*****