ನಾನು ಬಡವನಾದರೇನು
ಪ್ರೀತಿಯಲಿ ಶ್ರೀಮಂತನೇ|
ನನ್ನ ಹೃದಯ ವಿಶಾಲದರಮನೆಯಲ್ಲಿ
ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ
ಧಾರೆ ಎರೆಯುವೆ||
ಒಲಿದ ಪ್ರೀತಿಗಿಲ್ಲ ಎಂದೂ ಬಡತನ
ಮಧುರ ಸುಮಧುರ ಮಾತೇ ಸಿರಿತನ|
ನನಗೊಲಿದ ನಿನ್ನ ಮನದಲೊಂದಾಗಿ
ಸದಾ ನಗೆಯಲೇ ತೇಲಿಸುವೆ ಅನುದಿನ||
ನನ್ನ ಪೀತಿಯೇ ನಿನಗೆ ಸಿಂಧೂರ ತಿಲಕ
ನನ್ನ ಪ್ರೇಮವೇ ನಿನ್ನಗೆ ಕಾಲಂದುಗೆ ಗೆಜ್ಜೆ|
ನನ್ನೊಲವ ಪೀತಾಂಭರವ ಉಡುಸಿ
ನಿನ್ನೆಲ್ಲಾ ಕೋರಿಕೆಯ ಪೂರೈಸುವೆ ಪ್ರತೀದಿನ|
ನಿನ್ನ ಪ್ರೇಮ ಮೂರುತಿಯಾಗಿರಿಸಿ
ನಾ ದೇವರ ಮುಂದಿನ ದೀಪದಂತೆ
ಬೆಳಗುವೆ ನಿನ್ನೊಲವ ಪ್ರತೀ ಕ್ಷಣ||
*****