ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ
ನನ್ನ ಹೃದಯದಲಿ ಸಂತರ ಮನ ನೀಡು
ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ
ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು
ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ
ಒಲಿಸಿ ಕೊಂಡಳು ತಾನು ನಿತ್ಯ ಧ್ಯಾನಿಸಿ
ಗೋರಾ ಕುಂಬಾರ ಮಾಯೆ ಮರೆತು
ಪಾಂಡುರಂಗ ಸಾಕ್ಷತ ಕರಿಸಿಕೊಂಡ ಭಕ್ತಿಸಿ
ಲೋಕವೆ ದೂರಾಗಿಸಿದರೂ ಜ್ಞಾನ ದೇವನು
ವಿಶಾಲ ಸಾಧನೆಯಲಿ ದೇವ ನೊಲಿಸಿಕೊಂಡ
ಕಿರಿವಯಸಿನಲಿ ಜ್ಞಾನೇಶ್ವರಿ ಗ್ರಂಥ ರಚಿಸಿ
ಲೋಕವೆ ತನ್ನ ದೈವತದಿ ಸೆಳೆದುಕೊಂಡ
ಹರಿಯೇ ಎನ್ನಲ್ಲೂ ನಿನ್ನ ಧ್ಯಾನ ತುಂಬಲಿ
ಎನ್ನ ಮನವಾಗಲಿ ನಿನಗೆ ಮೀಸಲು
ನಿತ್ಯ ನಿತ್ಯವೂ ನಿನ್ನ ನೆನಪು ಕಾಡಲಿ
ಮಾಣಿಕ್ಯ ವಿಠಲನಿಗೆ ನೀದಯೆ ಬೀಸಲು
*****