ನೀನು ಯಾರು?

ನೀನು ಯಾರು?
ಎಲ್ಲಿಂದ ಬಂದೆ ನೀನು?|
ನೀನು ಬಂದ ಕಾರ್ಯವೇನು?
ನಿನ್ನ ಕಾರಣಕರ್ತೃನು ಯಾರು?||

ನಾನು ಯಾರೆಂದು ತಿಳಿಯಲು
ಇಲ್ಲಿ ಬಂದಿಹುದು|
ನಾ ಎಲ್ಲಿಂದ ಬಂದೆ ಎನ್ನುವುದ
ಅರಿಯನು ಇಲ್ಲಿ ಬಂದಿಹುದು|
ನನ್ನ ಕೆಲಸ ಕಾರ್ಯಗಳ
ಮನನ ಮಾಡಲೆಂದೇ
ಇಲ್ಲಿ ಬಂದಿಹುದು|
ನನ್ನ ಕಾರಣ ಕರ್ತೃನ
ನೋಡಲೆಂದೇ ಇಲ್ಲಿಗೆ
ಬಂದಿರುವುದು||

ಈ ನಾನು ಮತ್ತು ನನ್ನದೆಂಬುದು
ಹೋದರೇನೇ ಎಲ್ಲಾ ತಿಳಿಯುವುದು|
ಆದರೆ ಒಂದು ಮಾತು ಮಾತ್ರ ಸತ್ಯ
ನಾನು ಯಾರೆಂದರೆ
ಒಂದರ್ಥದಲಿ ಕಾಲ ಕಸ||
ಈ ಕಾಲಚಕ್ರದಲಿ ಎಲ್ಲವೂ
ಅಳಿಯುವುದೇ ನಿತ್ಯ ಸತ್ಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವರಾತ್ರಿ ಜಾಗರಣೆ
Next post ಗುಣತ್ರಯ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…