ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು
ಅವೇ ರಜ ತಮ ಮತ್ತು ಸತ್ವಗಳು
ಒಂದೊಂದು ತನ್ನ ಇತಿಹಾಸ ಬಿತ್ತುವವು
ಈ ಮೂರು ಜೀವನ ಬಂಧನಕ್ಕೆ ಕಾರಣಗಳು
ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು
ತಮಗುಣವೆಂಬ ಕಾಣದ ಜಾತ ಶತ್ರು
ದೇಹ ಸುಖವೆ ಇದರ ಗುರಿಯಾಗಿಹುದು
ಜೀವನ ವಿನಾಶಕ್ಕೆ ಇದಾಗಿದೆ ಕತೃ
ತೃಸ್ಣೆಯ ಜಾಲವ ರಜೋ ಬೀಸುವುದು
ಕಾಮದ ಸನ್ನಿವೇಶಕ್ಕೆ ನಾಂದಿ ಹಾಡುವುದು
ಕರ್ಮಸಂಗದಿ ಈ ಆತ್ಮಕ್ಕೆ ಕಟ್ಟಿ ಹಾಕುವುದು
ಪಾಪದ ಹೊಂಡಗಳ ಆಳಕ್ಕೆ ತೋಡುವುದು
ಸತ್ವಗುಣ ಜ್ಞಾನದ ಸಲಾಕೆಯಾಗುವುದು
ದೇವರನ್ನು ತೋರುವ ಮಾರ್ಗನಿರ್ಮಿಸುವುದು
ಜ್ಞಾನ ಸಂಗದಿಂದ ಆತ್ಮ ಬಂಧಿಸುವುದು
ಮಾಣಿಕ್ಯ ವಿಠಲನಾದರೆ ಹರಿಯ ದರ್ಶಿಸುವುದು
*****