ಶುದ್ಧವಾಗಲಿ ಅಂತರಂಗ

ಸಾಕು ನಿಲ್ಲಿಸು ನಿನ್ನಾಟ
ಬಹಿರಂಗದಲಿ ಮೆರೆಯಬೇಡ
ಎತ್ತೆತ್ತ ನೀನು ನಲಿದರೂ
ಮತ್ತೆ ಸೊನ್ನೆದತ್ತ ನಿ ನೋಡ

ಅಂತರಂಗದಲ್ಲಿ ಬೆಳಕಿಲ್ಲದೆ
ಯಾವುದಕ್ಕೆ ನಿನ್ನ ಕಾರ್ಯಭಾರ
ಎಲ್ಲಿಂದಲೊ ಬಂದು ನೆಲೆಸಿ
ನಿನ್ನದೆನ್ನುವುದು ಹುಚ್ಚು ಬಡಿವಾರ

ನಾಳೆ ನಿನ್ನದಲ್ಲ ಗೆಳೆಯ
ಪೋಲು ಮಾಡದಿರು ಈ ಕಾಲ
ಹರಿಗೆ ನೀನು ಮಿಸಲಾಗು
ಮಾಡಬೇಡ ಕರ್ಮವೆಂಬ ಸಾಲ

ಶುದ್ಧವಾಗಲಿ ನಿನ್ನ ಅಂತರಂಗ
ಅತ್ತು ಬಿಡು ನಿತ್ಯವು ನೀನು
ಕಂಗಳಲ್ಲಿ ಹರಿಯಲಿ ಕಂಬನಿ
ಮಾಣಿಕ್ಯ ವಿಠಲನ ಮುಕ್ತಿ ಜೇನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತಲಿ ಮಮತೆ ತುಂಬಿರಬೇಕು
Next post ಭಗತಸಿಂಗ ಮತ್ತು ಸಾವು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…