ಜೀವನದ ಅಂಗಳದಲಿ ಬಂತು
ಮಂಗಳ ಮೂರ್ತಿ ಗಣೇಶ ಪರ್ವ
ಎತ್ತೆತ್ತ ನೋಡಲು ಸಡಗರ ಸಂಭ್ರಮ
ಎಲ್ಲೆಲ್ಲೂ ಮಂಗಳದ ನಿನಾದ ಸರ್ವ
ವಿದ್ಯೆಯ ಆದಿಪತಿ ಗಜಾನನ ದೇವ
ಮನೆ ಮಠಗಳಲಿ ಅವನದೆ ಶೃಂಗಾರ
ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ
ಜನಮನಗಳಲಿ ಅವನ ನೆನಪೇ ಬಂಗಾರ
ಅಕ್ಕರಗಳ ಶುಭಾರಂಭಕ್ಕೆ ಮತ್ತೆಲ್ಲದಕ್ಕು
ಮಂಗಲ ಕಾರ್‍ಯಗಳಲ್ಲಿ ವಿಘ್ನೇಶ್ವರ
ಆದರೆ ಜನರು ಅಪಾರ್ಥ ಮಾಡುತ್ತ
ದೇಣಿಗೆ ಬೇಡಿ ಆಗಿಹರು ವಿಘ್ನದಾಗರ
ಹಬ್ಬ ಆಚರಣೆ ಮುಂಚೆ ಬಾಳು ಕಲಿಯಲಿ
ಪೂಜೆಯೆಂಬುದು ತನುಮನ ಭಾವ ಇರಲಿ
ಬಿದ್ದವರನ್ನು ಎತ್ತಿಕೊಳ್ಳುವ ಧರ್ಮವಾಗಲಿ
ಮಾಣಿಕ್ಯ ವಿಠಲನಾಗುವುದೇ ಕರ್ಮವಾಗಲಿ
*****