ಹೋಗುವುದಾದರೆ ಹೋಗು
ನಿನ್ನ ತವರಿಗೆ,
ನಿನ್ನ ಸಂತೋಷ ವಿನೋದಕೆ|
ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ
ನೀನು ತವರಿಗೆ ಕಳುಹಿಸಿ ನಾನು
ಖುಷಿಪಡುವೆ ಒಳಗೊಳಗೆ||
ಅಲ್ಲಿ ನಿನ್ನ ಅಮ್ಮ ನಿನಗೆ
ಕೈ ತುತ್ತ ಬಡಿಸಿದರೆ…
ಇಲ್ಲಿ ಬ್ರಹ್ಮಚಾರಿಯಾಗಿ ನಾನು
ಸುತ್ತುವೆ ಊರ ಗರಗರನೆ|
ಎಲ್ಲಾ ಸ್ನೇಹಿತರ ಕರೆಸಿ
ಮನೆಯಲೇ ಪಾರ್ಟಿಮಾಡುವೆ||
ಬೇಕಾದರೆ ಒಂದೆರಡು ದಿನ, ವಾರ
ತಡವಾಗಿಯೇ ಬಾ|
ನಿನ್ನ ಹಳೆಯ ಗೆಳತಿಯರನೆಲ್ಲಾ ಸಂದಿಸಿ
ಕುಶಲೋಪರಿಯ ವಿಚಾರಿಸಿ ಬಾ|
ರಜದ ಮಜವನೆಲ್ಲಾ ಪಡೆವೆ ನಾನಿಲ್ಲಿ
ಕಳೆದುಹೋದ ನನ್ನ ಸ್ವಾತಂತ್ರವ
ಮತ್ತೆ ಮತ್ತೆ ನೆನಪಿಸಿಕೊಳ್ಳುವೆ ನಾನಿಲ್ಲಿ|
ಹಾಗೆನಾದರೂ ಬೇಕೆನಿಸಿದಲ್ಲಿ
ನಾನೇ ಕರೆಸಿಕೊಳ್ಳುವೆ ನಿನ್ನನಿಲ್ಲಿ||
ಆದರೆ ಒಂದೇ ಒಂದು ವಿನಂತಿ!
ಮರಳಿ ಬರುವಾಗ ಮುಂಚೆ ಹೇಳಿ ಬಾ|
ಮನೆಯನೆಲ್ಲಾ ಶುಚಿಮಾಡಿಡುವೆ|
ಮತ್ತೆ ನಿನ್ನ ಕೂಡಿ ಸಂಸಾರ
ಮಾಡೆ ರೆಡಿಯಾಗುವೆ|
ಆಗಾಗ ಬೇಕು ಇಂಥಹ ಬ್ರೇಕು
ನಾನು ನೀನು ನೂರುಕಾಲ
ಸುಖವಾಗಿ ಬಾಳಬೇಕು||
*****