ಜನಶಕ್ತಿ

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು
ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು ||

ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ
ಹೊಟ್ಟೆಕಟ್ಟುವ ಜನರು ಸಾಮಾನ್ಯರು
ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ
ದೇಶಕಟ್ಟುವ ಶಕ್ತಿ ಸಾಮಾನ್ಯರು ||

ಗುಡಿಸಲಿನ ಗರಿಯಲ್ಲಿ ಗೂಡುಕಟ್ಟಿದ ಸಿಟ್ಟು
ದಣಿಗಳಿಗೆ ಎದುರಾಗಿ ಸೆಟೆದು ಕುಂತು
ಜಾತಿ ಮತ ಧರ್ಮಗಳು ಹಿಂದೆ ಸರಿಯಲಿ ಹೆದರಿ
ಮಾನವತೆ ಮೊಳಗಲಿ ಬಿಡುಗಡೆಗೆ ನಿಂತು ||

ಬಾಳು ಬಿತ್ತಿದ ಬೀಜ ಬೆಳಕಿನ ತೆನೆಯೊಡೆದು
ಕೂಡಿಕೊಳ್ಳಲಿ ನಾಡ ಮಿಡಿತವನ್ನು
ಬಡವರ ಒಡಲಿನ ಸುಡುಬೆಂಕಿ ಕರಕರಗಿ
ಅಪ್ಪಿಕೊಳ್ಳಲಿ ಬೇಗ ಸಮತೆಯನ್ನು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಗುವುದಾದರೆ ಹೋಗು
Next post ಪರಿಹಾರ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…