ಗಿಳಿಯೇ
ನನ್ನಂತರಂಗದ ಗಿಳಿಯೆ
ಮನ ಬಿಚ್ಚಿ ಮಾತನಾಡು
ಮೌನವಾಗಿಯೆ ಏಕೆ? |
ನಿನ್ನ ಮಧುರತೆಯ ಕಂಪಬೀರು
ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು||
ಮುಂಜಾನೆಯ ಮಂಜಂತೆ
ಕಾದು ಕುಳಿತೆಹೆ ಕರಗಿನೀರಾಗಲು
ನಿನ್ನದೊಂದು ಮಧುರ ಸಿಹಿ ಮಾತಿಗೆ|
ಬೇಯ್ಯುತ್ತಿರುವೆ ನಿನ್ನ ಮೌನದಾ ಬೇಗುದಿಗೆ
ಕರುಣೆ ಬಾರದೆತಕೊ ನಿನಗೆ
ಬೇಡವೆಂದೆನಿಸಿದನೆ ನಾ ನಿನಗೆ||
ಏಕೆ ಪರೀಕ್ಷಿಸುತ್ತಿರುವೆ ನನ್ನ ಪ್ರೀತಿಯ
ಅಮರ ಗಂಗಾಜಲ ಅದುವೆ|
ಮುನಿದರು ಮನ್ನಿಸದಿದ್ದರು ನೀನು
ನಾಳೆ ನಿನ್ನೊಂದಿಗೇ ಮದುವೆ||
ಕಲ್ಲು ವೀಣೆಯಂತಾದೇತಕೆ ಗಿಳಿಯೆ
ಶೃತಿಸಿ ನುಡಿಸಲೇ ಬಳಿಬಂದು
ಸ್ಪರ್ಶಿಸಿ ನಿನ್ನಂದಚೆಂದವನು ಚೆಲುವೆ||
*****