ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ

ಕನ್ನಡ ಕಲಿಯಿರಿ,
ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ|
ಕನ್ನಡ ದೇವಿಗೆ ಕನ್ನಡ ದೀಪವ
ಹಚ್ಚುತ ಬಾಳನು ಬೆಳಗಿರಿ|
ಕನ್ನಡದಿಂದಲೇ ಎಲ್ಲವ ಕಾಣುತ
ಕನ್ನಡ ದೀವಿಗೆ ಹಚ್ಚಿರಿ|
ಕನ್ನಡ ಬಾವುಟ ಹಾರಿಸಿ
ಕನ್ನಡ ಡಿಂಡಿಮ ಬಾರಿಸಿ||

ಕನ್ನಡವಲ್ಲವೇ ನಮ್ಮೆಲ್ಲರಿಗೂ ಕಾಮಧೇನು
ಕನ್ನಡವಲ್ಲವೇ ನಮ್ಮೆಲ್ಲರಿಗೂ ಕಲ್ಪತರು|
ಕನ್ನಡವಲ್ಲವೇ ನಮ್ಮೆಲ್ಲರ ತಾಯಿಬೇರು
ಎಳೆಯೋಣ ಬನ್ನಿ ಎಲ್ಲರು ಸೇರಿ ಕನ್ನಡ ತೇರು||

ಕನ್ನಡವೇ ನಮ್ಮೆಲ್ಲರ ಉಸಿರಾಗಲಿ
ಕನ್ನಡತನವು ನಮ್ಮಲ್ಲಿ ಸ್ಥಿರವಾಗಲಿ|
ಕನ್ನಡ ಬಳಸದ ಕನ್ನಡಿಗರೇ ಆತ್ಮಾವಲೋಕಿಸಿ
ಕನ್ನಡ ಬೆಳೆಸದ ಕನ್ನಡಿಗರೆ
ಕನ್ನಡವ ಉಪೇಕ್ಷಿಸದಿರಿ|
ಕನ್ನಡ ಜನ ಕನ್ನಡತನವನು
ಅಪಮಾನಿದವರಿಗೆ ಧಿಕ್ಕಾರವಿರಲಿ
ಕನ್ನಡ ಆಡಳಿತಭಾಷೆಯ ನಿಂದಿಸುವರಿಗೆ
ನಮ್ಮಯ ಧಿಕ್ಕಾರವಿರಲಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂತಿ ರಹಿತ ಟೆಲಿಫೋನಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೨

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…