ಪ್ರೀತಿ ಮುಗಿದು ಬಹುಕಾಲವಾದ ಮೇಲೆ :
ಕೆಲವು ಬಾರಿ ಬೀದಿಯಲ್ಲಿ ಎದುರಾಗುತ್ತಾರೆ
ಕೆಲವು ಬಾರಿ ಕನಸಿನಲ್ಲಿ.
ಬೀದಿಯಲ್ಲಿ ಕಂಡಾಗ ಕನಸಿನಂತೆ ಇರುತ್ತದೆ.
ಕನಸಿನಲ್ಲಿ ಕಂಡಾಗ ಬೀದಿಯಂತೆ ಇರುತ್ತಾರೆ,
ಅರ್ಧಕ್ಕರ್ಧ ಮನೆಗಳು ಖಾಲಿ ಇರುವ ಬೀದಿಗಳು
ಕತ್ತಲಲ್ಲಿ ಕಿಟಕಿ ಹಿಂದೆ ಇರುವ ಮುಖ ಯಾವುದೆಂದು ಮರೆತಿರುವ
ಮನೆಗಳಿರುವ ಬೀದಿಗಳು.
*****
ಮೂಲ: ಹೆನ್ರಿಕ್ ನೋರ್ಡ್ ಬ್ರಾಂಟ್