ಕುಳಬಾನವ್ವಾ ನಾನು ಕುಳಬಾನ

ಕುಳಬಾನವ್ವಾ ನಾನು ಕುಳಬಾನ ||ಪ||

ಆ ಕುಳ್ಳು ಈ ಕುಳ್ಳು ಕಾಕುಳ್ಳು ಬೀಕುಳ್ಳು
ಕಾಡೆಮ್ಮೆ ಕಾಡೆತ್ತು ಕುಳಬಾನ
ತುಂತುಂ ತಂದಾರ ಕುಳ್ರೊಟ್ಟಿ ತಟ್ಟ್ಯಾರ
ಒಣಗಾಕಿ ಒಟ್ಟ್ಯಾರ ಕುಳಬಾನ

ಹರೆಯದ ಬಾಲ್ಯಾರು ಪುಟಚಂಡು ಚಲುವೇರು
ಉಟಸೆರಗು ಕಚ್ಹ್ಯಾಕಿ ಕಟ್ಟ್ಯಾರ
ಹವಳದ ಕಣ್ಣಿಂದ ಡಾಳಿಂಬ್ರ ಕೈಯಿಂದ
ಎದಿಪುಟಿಸಿ ಮೈಪುಟಿಸಿ ಒಟ್ಟ್ಯಾರ

ಕೆಮ್ಮಣ್ಣು ಸಾರ್‍ಸ್ಯಾರ ಬಿಳಿಸುಣ್ಣಾ ಸುರವ್ಯಾರ
ಕುಳ್ಳಾಗ ಮಾಲಿಂಗ ಮಾಡ್ಯಾರ
ಹಿತ್ಲಾಗ ಕತ್ಲಾಗ ಕಂಟೀಯ ಕಳ್ಳ್ಯಾಗ
ಗುಳ್ಳೆತ್ತು ಹಕ್ಕಲಕ ಕಟ್ಟ್ಯಾರ

ಛೀ ನಾಯಿ ಬಂದಾವು ಛೂಮೂಗು ಮೂಸ್ಯಾವು
ಹೆಗ್ಣವ್ವ ಹೆಗ್ಣಪ್ಪ ಹೊಕ್ಕಾರ
ಇಲಿಮಾವ ಇಣಿಕ್ಯಾನು ಬೆಕ್ಕಪ್ಪ ತಿಣಿಕ್ಯಾನು
ಕರಿಚೋಲು ಕೆಂಚೋಳು ಕಾಡ್ಯಾವ

ಕಾಮಣ್ಣ ಹಬ್ಬಕ್ಕ ಹುಡುಗಾರು ಬಂದಾರು
ರಾತ್ರ್‍ಯಾಗ ಕುಳಬಾನ ಕದ್ದಾರೋ
ಕಾಮನ್ನ ಬೆಂಕ್ಯಾಗ ಕುಳಬಾನ ಹಾಕ್ಯಾರೊ
ಭೋ ಶಿವಗ ಭೋರೆಂದು ಸುಟ್ಟಾರೋ


ಕುಳಬಾನ = ಕುಳ್ಳಿನ ಬಣಿವೆ
ಕಾಕುಳ್ಳು = ಅಡವಿ ಕುಳ್ಳು
ಬೀಕುಳ್ಳು = ಪುಡಿಕುಳ್ಳು, ಬೀಕಲಾ

Previous post ನಗಣ್ಯ
Next post ಬೆಳ್ಳಕ್ಕಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…