ಎಲೆಗಳು ಉದುರಿ ಅಂಗಳದ
ತುಂಬೆಲ್ಲಾ ಹರಡಿ ಹಾಸಿ
ಮಳೆ ನೆನೆದ ರಾತ್ರಿ
ಎದೆಯ ನದಿಯ ತುಂಬ ನೀರು ಅಲೆಗಳು
ಮರಿಹಕ್ಕಿಗಳಂತೆ ಮುದುರಿದ
ನೆನಪುಗಳು ಆಕಾಶದಲ್ಲಿ
ಕಳಚಿಬಿದ್ದ ತಾರೆಗಳು
ಕವಳದ ಎಚ್ಚರದ ತುಂಬ ಕನಸುಗಳು
ಅಚ್ಚ ಅಳಿಯದೇ ಉಳಿದುಹೋದ
ಗಾಯದ ಕಲೆಯ ಕೆರೆತ
ಮೆಲುಕುಹಾಕಿದರೆ ಬಹಳ ಪ್ರಳಯ
ಚಳಿಗೆ ಥರಗುಟ್ಟಿದ ಮನಸ್ಸು
ಅಂಗಳದಲಿ ತೇಲಿ ಜೀಕಿದ ಉಯ್ಯಾಲೆ
ಕಂಬಗಳ ಕೌನೆರಳು ಹರಡಿ
ಬಿಸಿ ಹಾಯ್ದ ರಾತ್ರಿ ಬಂಧನ
ಸೆಳೆತದ ಮನೆ ಹನಿಗಳ ಸ್ನಾನ
ರಾತ್ರಿ ಎಚ್ಚರದಲಿ ವಿರಹದ ನೋವು
ಮತ್ತೆ ಕಂಬಳಿಯೊಳಗೆ ಹುದುಗಿದ ಮಾತು
ಮೋಡಗಳು ಸುರಿದ ಖಾಲಿಯಾದ ಆಕಾಶ
ನಿಂತರೂ ಕುಳಿತರೂ ತೊಟ್ಟಿಕ್ಕುವ ಧೂಮಕೇತು.
*****