ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ...