ರಾಮಾ, ಮನದಲಿ ಹರಿದು ಬರಲಿ
ನೆನೆಯುವೆ ನಿತ್ಯ ನಿನ್ನ ನಾಮಾ
ನಿನ್ನೊಂದು ನೆನಪೆ ನನಗೀಗ
ಪಾವನವಾಗಿದೆ ನಾಮಾ
ಬದುಕು ಬವಣೆಗಳ ಮಧ್ಯ
ಸ್ವಾರ್ಥಗಳನು ಸಾಕಿ ಸಲುಹಿದೆ
ನನ್ನವರ ಬಾಳಿಸಲು ನಿತ್ಯವೂ
ಏನೆಲ್ಲ ಗಳಿಕೆಗೆ ತಿರುಗಿದೆ
ಯಾವ ಕ್ಷಣಕ್ಕೂ ಬರಲಿಲ್ಲ
ಆ ನಿನ್ನ ನೆನಪು ಧ್ಯಾನ
ನಶ್ವರದ ಬಾಳಿಗೆ ನಾ ನಂಬಿದೆ
ಮರೆತು ಸತ್ಯದ ಜ್ಞಾನ
ಎಲ್ಲೊ ಹುಟ್ಟು ಎಲ್ಲೊ ಮರಣವೊ
ಅಂಗೈ ರೇಖೆಯಲಿ ಚಿತ್ರಿಸಿದೆ
ಹಣೆಬರಹಗಳ ತಿದ್ದಿ ಕೊಳ್ಳುತ್ತನಾ
ಬದುಕಿನಾಳಕ್ಕೂ ನನ್ನನ್ನೆ ಮುದ್ರಿಸಿದೆ
ಈಗ ಮನದಲ್ಲಿಲ್ಲ ಆಸೆ ಸ್ನೇಹ
ಮತ್ತೆ ಬಾಳಲಿಲ್ಲ ಭವದ ಲಾಲಸೆ
ರಾಮ ಎನ್ನನ್ನು ಭವದಿ ಕಾಪಾಡು
ಮಾಣಿಕ್ಯ ವಿಠಲನಾಗಿ ಭರವಸೆ
*****