ಫಕ್ಕನೆ ಪುಕ್ಕ ಬಿಚ್ಚುತ್ತೆ; ಕೊಕ್ಕು ಕಚ್ಚುತ್ತೆ; ಕಚ್ಚಿದ ಜಾಗದಲ್ಲಿ ಚಿಮ್ಮಿದ ಕೆಚ್ಚು ನಿರಿನಿರಿ ಹೊಳೆಯುವ ಗರಿಗರಿಯಲ್ಲಿ ಹುಚ್ಚು ಹೊಳೆಯಾಗಿ ಹೋಗುತ್ತೆ. ಅವ್ಯಕ್ತ ನೋವು ರಸಪುರಿ ಮಾವಾಗಿ ಮಾಗಲು ತುಡಿಯುತ್ತೆ. ಆಕಾಶದಗಲ ರೆಕ್ಕೆಯಲ್ಲಿ ಅದರ ತೆ...

ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹ...

ವಿಶ್ವಂಭರನೆ ವಿಶ್ವೇಶ್ವರನೆ | ವಿಚಿತ್ರ ನಿನ್ನಯಲೀಲೆ ತಂದೇ || ಪ || ವಿಶ್ವ ವಿಶ್ವಗಳ ತಿರುಗಿಸುತಿರುವೆ | ಎಲ್ಲಿಯೊ ಇರುವುದು ಸೂತ್ರ ವಿಶ್ವದ ಕಣಕಣದಲ್ಲಿಯು ಕೂಡ | ಹೊಳೆವುದು ನಿನ್ನಯ ಚಿತ್ರ || ೧ || ಅದೃಶ್ಯವೆಂಬರು ನಿನ್ನಯ ರೂಪ | ಕೋಟಿ ರೂಪ...

ಮುಲ್ಲನ ಗಡ್ಡ ಹುಚ್ಚ ಮುಲ್ಲನ ಹೊಗಳೋಣ ಉಳಿದವರೆಲ್ಲರ… ಮುಲ್ಲನ ಗಡ್ಡ ಹಿಡಿದಷ್ಟೂ ದೊಡ್ಡ ಬೆಳೆಯಿತು ಉದ್ದ ಬೆಳೆಯಿತು ಅಡ್ಡ ಗುಡ್ಡವ ಹತ್ತಿತು ಗುಡ್ಡವ ಇಳಿಯಿತು ಊರ ಕೋಟೆಗೆ ಲಗ್ಗೆ ಹಾಕಿತು ಸಣ್ಣ ಕಿರಣಗಳ ಬಣ್ಣ ಹೆಕ್ಕಿತು ಇಬ್ಬನಿ ಕುಡಿದೇ ...

ಯಾವ ಹೆಣ್ಣು ಬರುವಳೊ ಇಲ್ಲವೊ ಮದ್ಯದ ಮಂದಿರಕೆ ನೀನಂತೂ ನನಗಾಗಿಯೆ ಬಂದೆ ಕರುಣೆಯ ಕಡಲಾಕೆ-ನೀ ಕರುಣೆಯ ಕಡಲಾಕೆ //ಪ// ಕೈಯಲ್ಲಿಹುದು ಬಟ್ಟಲು ಸುತ್ತಲು ಎಲ್ಲೂ ಕತ್ತಲು ನನಗೆ ಮಾತ್ರ ನೀ ಗೋಚರ ಉಳಿದೆಲ್ಲರಿಗೂ ಅಗೋಚರ ದೇವರು ಎಲ್ಲೆಡೆ ಇರಬಹುದೇನೊ ನ...

ಬಿಸಿಯಾದ ಕಾಫ಼ಿ ಅಥವ ಚಹಾದ ಬಟ್ಟಲಿಗೆ ನೊಣಗಳು ಬಿದ್ದು ಸಾಯುವುದು ಸ್ವಾಭಾವಿಕ. ಕಾಫ಼ಿ ಚಹಾಗಳ ಉಷ್ಣತಾಮಾನವೋ, ವಾಸನೆಯೋ ಈ ಕೀಟಗಳನ್ನು ಆಕರ್ಷಿಸುತ್ತವೆ. ಬಿಸಿಯಾದ ದ್ರಾವಣದಲ್ಲಿ ಅವು ಬದುಕಲಾರದ್ದರಿಂದ ಎರಡೆರಡು ಬಾರಿ ಎದ್ದು ಪಾರಾಗಲು ಯತ್ನಿಸಿ ...

1234...12

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...