Home / ಕವನ / ಕವಿತೆ

ಕವಿತೆ

ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು ಕಣ್ಣು ಕಿವಿ ಮೂಗು ಎಲ್ಲಾ ಮುಚ್ಚಿದ ...

ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು ಹಾವು ಕಂಡಿರೇನಮ್ಮಯ್ಯಾ ||ಪ|| ಹಾವು ಕಂಡರ ಎನ್ನ ಜೀವವು ಕು೦ದಿತು ತನ್ನ ಮಂಡಲಗಟ್ಟಿ ಮಾಯವಾದಿತು ಗುಂಡೇಲಿಂಗನ ಗುಡಿಯ ಮುಂದ || ಆ. ಪ. || ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ ಬಂಡಿಗೆಬ್ಬಿಸಿತು ಮನವು ಪಿ೦ಡದೇ...

ಹಾವು ತುಳಿದೆನೇ ಮಾನಿನಿ ಹಾವು ತುಳಿದೆನೇ ||ಪ|| ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತು ಗೆಳತಿ ದೇಹತ್ರಯದ ಸ್ಮೃತಿಯು ತಪ್ಪಿ ದೇವಾ ನೀನೆ ಗತಿಯು ಎಂದು ||೧|| ಹರಿಗೆ ಹಾಸಿಗೆಯಾದ ಹಾವು ಹರನ ತೋಳಿನೊಳಿರುವ ಹಾವು ಧರೆಯ ಹೊತ್ತು ಮೆರೆವ ಹಾವಿನ...

ನೋಡಿದ್ಯಾ ಕಪ್ಪಿ ನೋಡಿದ್ಯಾ ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ವದು ||ಪ|| ಗುಳಿ ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ ಇಳಿ ಜನರಿಗೆ ಭಯಪಡಿಸುವ ಕಪ್ಪಿ ಹೊಳೆಯು ಶರಧಿ ಸಣ್ಣಹಳ್ಳಕೊಳ್ಳದೊಳಗಿರು ಮಳಿಗಾಲ ತರಸುವ ಮೋಜಿನ ಕಪ್ಪಿ ||೧|| ಶಿವನ ತೊಡಿಯ ಕ...

ಎಷ್ಟು ಕಾಡುವವು ಕಬ್ಬಕ್ಕಿ ಹೊಲದೊಳಿರುವನು ಒಬ್ಬಾ || ಪ|| ಆಕಡಿಯಿಂದ ಬಂದಾವು ಮೂರಹಕ್ಕಿ ಅವನ್ನ ಕಾದು ಕಾದು ನನಗೆ ಬೇಸರಕಿ ||೧|| ಕಬ್ಬಕ್ಕಿ ಬರತಾವ ಸರಬೆರಕಿ ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨|| ಆರು ಮೂರು ಒಂಭತ್ತು ಹಕ್ಕಿ ಬಹಳ ಬೆರ್ಕಿ...

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ “ನಾನು ಕಾಣೆಯಾಗಿದ್ದೇನೆ ಓ ನಾನೇ ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ ಬೇಗನೇ ಬಾ” ನಾನು ಸಿಗಲಿಲ್ಲ ಮನೆಯಲ್ಲಷ್...

ಪ್ರೀತಿಯೇ.. ನಮ್ಮುಸಿರು ಒಲವೇ… ಹಸಿರು… ಸಂಗಾತಿ… ಸಾಂಗತ್ಯದ ಪ್ರೀತಿಯಲೇ ಗೆಲುವು ನಿತ್ಯನೂತನ… ಜಗದಿ ನಿರ್ಮಲ… ಪ್ರೀತಿ ಅನುದಿನ ಅಮರ.. ಸ್ನೇಹ ಶಾಂತಿಯ ಪ್ರೇಮ… ಮಧುರ… ಮನುಕುಲದ ಶಾಂತಿ…...

ಪಾರಿವಾಳದ ಆಟ ಛಂದಾ ಅದು ಹಾರುತ ಬಂದರೆ ಮನಸಿಗಾನಂದ ||ಪ|| ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಚ್ಚದ ಗರಿಗಳ್ಯಾವತ್ತು ಸಂದಿ ಸಂದಿಗೆ ಶುಭವಿತ್ತು ಆದು ಕಂದಿ ಕುಂದದಾಂಗ ಸಲುಹಲು ಗೊತ್ತು ||೧|| ಮ್ಯಾಲಕ್ಕ ಹೊಡಿ ಮೂರು ಲಾಗಾ ಸಾಲು ತೇಲುವ ...

ಕೋಳಿಯೇ ನೀನು ಕೋಳಿಯೇ ಹೀಂಗ ಹಾಳುಮಾಡುದು ಕಂಡು ತಾಳಲಾರದು ಮನ  |ಪ| ಅಚ್ಚ ಹಸರು ಕೆಂಪುಪುಚ್ಚದ ಕೋಳಿ ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ              |೧| ಬಲ್ಲಿದ ಯಜ್ಞಕ್...

ಬಿಸಿಲುರಿಯ ಸೂರ್ಯನಿಗೆ ಬೆಳ್ಳನೆಯ ಬೆಳಕಿಗೆ ನೀನು ‘ಗುಡ್-ನೈಟ್’ ಎಂದಿದ್ದು ನನಗೆ ಕೇಳಿರಲಿಲ್ಲ ಪ್ರತಿ ಹಗಲಿಗೊಂದು ಇರುಳು ನಂತರ ನರಳಿ ಮರಳುವ ಹಗಲು ಹೀಗೊಂದು ಕತೆ ಉಂಟೆಂದು ನನಗೆ ತಿಳಿದಿರಲಿಲ್ಲ ಆಕಾಶದಿಂದ ಇಳೆಗೆ ಆಗಿ೦ದ ಈಗ ಬೀಜದಿಂದ ಬೆಳೆಗೆ ಬ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....