ಗುಡ್ಡದ ಮೇಲೆ ಹಿಮ ಮಳೆಯಂತೆ ಸುರಿಯುತ್ತಿದ್ದರೆ,
ಆ ಕೋಣೆಯಲ್ಲಿ ದನದ ಮಾಂಸ, ರೆಡ್‌ವೈನ್ ಬ್ಯಾರೆಲ್‌ಗಟ್ಟಲೆ ತಯಾರಾಗುತ್ತಿತ್ತು.
ಪ್ರೇಮಿಗಳಾಗಬಯಸುವ ಅದೆಷ್ಟೋ ಜೋಡಿಗಳು
ಶ್ವೇತವರ್ಣದ ಮರದ ಹಿಂದೆ ಅವಿತುಕೊಂಡು,
ಕೆಂಪು ಪರದೆಯೊಳಕ್ಕೆ ನುಗ್ಗಲು ಹಂಬಲಿಸುತ್ತಿದ್ದವು.
ಕ್ರಿಸ್‌ಮಸ್ ಮರದಲ್ಲಿ ಬಣ್ಣಬಣ್ಣದ ನಕ್ಷತ್ರಗಳು ಸ್ತಬ್ಧಹಕ್ಕಿಗಳಂತೆ ಕಾಣಿಸಿಕೊಂಡು, ಕತ್ತಲಿಳಿಯುವವರೆಗೂ
ಪ್ರಜ್ವಲಿಸುತ್ತಿದ್ದವು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಸುತ್ತ ವಿಷದ ಹಾವುಗಳು
ಹೇರಳವಾಗಿ ಬೀಡುಬಿಟ್ಟಿದ್ದರಿಂದ,
ಕ್ರಿಸ್‌ಮಸ್ ಹಬ್ಬಕ್ಕಾಗಿಯೇ ಕಾಯುತ್ತಿದ್ದ ಅವರಿಗೆ (ನಮಗೆ),
ಆ ರಾತ್ರೆ ಕ್ಷಣಾರ್ಧದಲ್ಲಿ ಕೈ ಮೀರಿ ಹೋಗುತ್ತಿತ್ತು.
ಏಸುಕ್ರಿಸ್ತನ ಹೃದಯದಲಿ ಆ (ನಾವು) ಬಡಮಕ್ಕಳು
ಹಳದಿ ಹೂಗಳನ್ನು ಕೀಳುತ್ತಿದ್ದರೆ,
ಮಂಜಿನ ಹಬೆ ಅವರ ಕೈಕಾಲುಗಳ ಬೆರಳುಗಳನ್ನು ಸುಟ್ಟು ಹಾಕುತ್ತಿತ್ತು.
ನಾವು ಆ ತಿಂಗಳನ್ನು ಕಳೆಯುತ್ತಿದ್ದದ್ದು ಹೀಗೆ.
*****