ಅದು ಈಗಲೂ ಸರಾಗವಾಗಿ ಚಲಿಸುತ್ತದೆ
ಜಲ್ಲಿ ಕಲ್ಲುಗಳ ಉಬ್ಬುತಗ್ಗಿನ ರಸ್ತೆಗಳ ಮೇಲೆ.

ಅವನು ಓಡಾಡಿಸಿದ ಜಾಡನ್ನು ಹಿಡಿಯುವಾಗ
ಅದು ದುಃಖಿಸುವುದನ್ನು ನೀವು ನೋಡಬೇಕು;
ಒಂದು ಗಳಿಗೆ ನೀವೂ ನಕ್ಕು ಅಳದೆ ಇರಲಾರಿರಿ.

ಕಣ್ಣಿಲ್ಲದ ಹೆಳವನೊಬ್ಬ ಮುಗ್ಗರಿಸಿ ಬಿದ್ದಂತೆ
ಗುಂಡಿಗೇ ಹೋಗಿ ಬೀಳುತ್ತದೆ.

ಅವನ ಗೆಳೆಯರು
ಬ್ರಾಂಡಿ, ಗೇರುಹಣ್ಣು, ಸಪೋಟ ಹಣ್ಣಿನ ವಾಸನೆ
ಹೊಡೆಯುವ ಅವೇ ಉಡುಪುಗಳಲ್ಲಿ ದುಡಿಯುತ್ತಿರುವುದನ್ನು
ಕ್ಷಣ ನಿಂತು ನೋಡುತ್ತದೆ.

ತಾನೀಗ ಸಂಪೂರ್ಣ ಬೆತ್ತಲೆ, ಅನಾಥನೆನಿಸಿಕೊಂಡೇನೊ
ಮೂಲೆಗೆ ವಾಲಿಕೊಂಡು ಹಳೆ ಘಟನಾವಳಿಗಳನ್ನು
ತನ್ನ ಮೈಮೇಲೆ ಎಳೆದುಕೊಳ್ಳುತ್ತಿರುತ್ತದೆ ಸಾಯದ ಮುದುಕನಂತೆ.
*****